ಸುಳ್ಳು ಹೇಳಿದ ಕಂಠಿ, ಸ್ನೇಹಾಳ ಪ್ರೀತಿ ಕಂಠಿಗೆ ತರುತ್ತಾ ಕಂಟಕ?

By ಪೂರ್ವ

ಸ್ನೇಹಾಳ ಪ್ರೀತಿಗಾಗಿ ಕಂಠಿ ಏನು ಮಾಡಲು ಬೇಕಾದರು ತಯಾರಿದ್ದಾನೆ, ಆದರೆ ಇದೀಗ ಕಂಠಿ ಮಾತ್ರ ಸುಳ್ಳಿನ ಮೇಲೊಂದು ಸುಳ್ಳು ಹೇಳುತ್ತಾ ಬರುತ್ತಿದ್ದಾನೆ. ಇದೊಂದು ದಿನ ಕಂಠಿಗೆ ಮಾರಕವಾಗುವುದಂತು ಸತ್ಯ. ಇನ್ನು ಸ್ನೇಹ ಶ್ರೀ ಎಂದು ನಂಬಿರುವಾತನೇ ಕಂಠಿ ಎಂದು ತಿಳಿದರಂತು ಸ್ನೇಹಾ ಏನು ಮಾಡುತ್ತಾಳೆ ಎಂಬುವುದನ್ನು ಕಾದು ನೋಡಬೇಕಿದೆ.

ಕಂಠಿ ಮಾರ್ಕೇಟ್‌ನಲ್ಲಿ ಇದ್ದಾನೆ ಎಂದು ಸ್ನೇಹಾಗೆ ದೊರೆ ಮೇಸೆಜ್ ಮಾಡುವ ಮೂಲಕ ಮಾಹಿತಿಯನ್ನು ನೀಡುತ್ತಾನೆ, ಕಂಠಿ ಮಾರ್ಕೇಟ್‌ನಲ್ಲಿ ಇದ್ದಾನೆ ಎಂದು ಪೊಲೀಸರಿಗೆ ಮಾಹಿತಿ ನೀಡುತ್ತಾಳೆ ಸ್ನೇಹ.

ಮಾರ್ಕೇಟ್‌ಗೆ ತಾನು ಹೋಗುತ್ತಿದ್ದೇನೆ ಎಂದು ಹೇಳಿದಾಗ ಮಾರ್ಕೇಟ್‌ಗೆ ಹೋದ ಬಳಿಕ ಪೋನ್ ಮಾಡುವಂತೆ ಪೊಲೀಸಪ್ಪ ಹೇಳುತ್ತಾರೆ. ಸ್ನೇಹ, ಕಂಠಿಯನ್ನು ಹುಡುಕಿಕೊಂಡು ಮಾರ್ಕೇಟ್‌ಗೆ ಬರುತ್ತಾಳೆ. ದೊರೆ ಯಾವತ್ತು ನನಗೆ ಮೋಸ ಮಾಡಲ್ಲ, ಎಂದು ಆಕೆ ನಂಬಿಕೆ ಇಟ್ಟುಕೊಂಡು ಅಲ್ಲಿಗೆ ಬರಬೇಕಾದರೆ ಕಂಠಿ ಹಾಗೂ ಅವನ ಗೆಳೆಯರಿಬ್ಬರು ಅಲ್ಲಿ ಕೆಲಸ ಮಾಡುತ್ತಿರುತ್ತಾರೆ. ಸ್ನೇಹಾಳನ್ನು ನೋಡಿದ ಕಂಠಿ ಸುಮ್ಮನೆ ಏನೋ ಕೆಲಸದಲ್ಲಿ ನಿರತನಾಗಿರುವಂತೆ ನಟಿಸುತ್ತಾನೆ, ಆಕೆ ಶ್ರೀ ನಿನೇನು ಇಲ್ಲಿ ಎಂದು ಅಶ್ಚರ್ಯದಿಂದ ಕೇಳುತ್ತಾಳೆ, ಅವಳನ್ನು ನೋಡಿದ ಕಂಠಿ ಆಶ್ಚರ್ಯ ಆದವನಂತೆ ನಟಿಸುತ್ತಾನೆ. ಇನ್ನು ಸ್ನೇಹಾ ಬಂದ ಕಾರಣವನ್ನು ಕಂಠಿ ಕೇಳುತ್ತಾನೆ, ಅದಕ್ಕೆ ಸ್ನೇಹಾ ಕಂಠಿ ಮಾರ್ಕೇಟ್‌ನಲ್ಲಿ ಇದ್ದಾನೆ ಎಂದು ತಿಳಿಯಿತು ಅದಿಕ್ಕೆ ಬಂದಿದ್ದೇನೆ ಈಗೇನು ಕೆಲವೇ ನಿಮಿಷದಲ್ಲಿ ಪೊಲೀಸರು ಬರುತ್ತಾರೆ ಎಂದು ಹೇಳುತ್ತಾಳೆ.

ನಕಲಿ ಕಂಠಿಯನ್ನು ಕರೆತಂದ ಕಂಠಿ

ನಕಲಿ ಕಂಠಿಯನ್ನು ಕರೆತಂದ ಕಂಠಿ

ಕಂಠಿ ಇದಕ್ಕಿಂತ ಮುಂಚೆ ಹಣ ಕೊಟ್ಟು ಕಂಠಿಯ ಹಾಗೆ ನಟಿಸುವಾತನನ್ನು ಕರೆತರುವಂತೆ ಇಬ್ಬರು ಗೆಳೆಯರ ಬಳಿ ಹೇಳಿರುತ್ತಾನೆ. ಆ ಪ್ರಕಾರವಾಗಿ ಉತ್ತಮ ಆಕ್ಟಿಂಗ್ ಮಾಡುವವನನ್ನು ಸೆಲೆಕ್ಟ್ ಮಾಡುತ್ತಾರೆ. ಆತನಿಗೆ ಹೇಗಿರಬೇಕು ಹೇಗೆ ಮಾತನಾಡಬೇಕು ಎಂಬುದನ್ನೆಲ್ಲ ಕಂಠಿ ಪ್ರೆಂಡ್ಸ್ ಟ್ರೈನ್ ಮಾಡಿ ಇರುತ್ತಾರೆ. ಇನ್ನೂ ಕಂಠಿ ಯಾರು ಶ್ರೀ ಎಂದು ಸ್ನೇಹ ಕೇಳಿದಾಗ ಆತ ಡ್ಯೂಬ್ಲಿಕೇಟ್ ಕಂಠಿಯನ್ನು ತೋರಿಸುತ್ತಾನೆ. ಆತನೇ ಕಂಠಿ ಎಂದು ಸುಳ್ಳು ಹೇಳುತ್ತಾನೆ.

ನಿಜ ಕಂಠಿ v/s ಡ್ಯೂಪ್ಲಿಕೇಟ್ ಕಂಠಿ

ನಿಜ ಕಂಠಿ v/s ಡ್ಯೂಪ್ಲಿಕೇಟ್ ಕಂಠಿ

ಆಕೆ ಆತನ ಬಳಿ ಬಂದು ನೀನಾ ಕಂಠಿ ಇಲ್ಲಿ ಇರುವ ಜನರಿಗೆ ತೊಂದರೆ ಕೊಡುತ್ತಾ ಬಡ್ಡಿ ವ್ಯವಹಾರವನ್ನು ಮಾಡುತ್ತಿರುವವನು ಎಂದೆಲ್ಲ ಕೇಳಿದಾಗ ಯಾಕೆ ನಾನೇ ಕಂಠಿ, ನಿನ್ಯಾಕೆ ಅವೆಲ್ಲ ಸುಮ್ಮನೇ ಹೋಗ್ತಾ ಇರೊ ಎಂದು ಸ್ನೇಹಾ ಮುಂದೇ ಬಂದಾಗ ನಿಜವಾದ ಕಂಠಿ ಅಡ್ಡ ಬರುತ್ತಾನೆ, ಆದರೆ ಡ್ಯೂಪ್ಲಿಕೇಟ್ ಕಂಠಿ ಆತನನ್ನು ಪಕ್ಕಕ್ಕೆ ತಳ್ಳುತ್ತಾನೆ ಇದನ್ನು ಕಂಡ ಸ್ನೇಹಾ, ಶ್ರೀ ಎಂದು ಕಿರುಚುತ್ತಾಳೆ. ಶ್ರೀ ನಿನಗೇನು ಆಗಿಲ್ಲ ಅಲ್ವಾ ಎಂದಾಗ ಅಲ್ಲಿಗೆ ಪೊಲೀಸರು ಬರುತ್ತಾರೆ.

ಪೊಲೀಸರ ಆಗಮನ ನಿಟ್ಟುಸಿರು ಬಿಟ್ಟ ಸ್ನೇಹಾ

ಪೊಲೀಸರ ಆಗಮನ ನಿಟ್ಟುಸಿರು ಬಿಟ್ಟ ಸ್ನೇಹಾ

ಪೊಲೀಸರು ಬಂದೊಡನೆ ಡ್ಯೂಪ್ಲಿಕೇಟ್ ಕಂಠಿ ಸಂಗಡಿಗರು ಓಟಕ್ಕೀಳುತ್ತಾರೆ. ಆದರೆ ನಕಲಿ ಕಂಠಿ ಪೊಲೀಸರ ಎದುರು ಕೂಡ ತಾನೆ ಕಂಠಿ ಎಂದು ಬಿಂಬಿಸಿಕೊಳ್ಳುತ್ತಾನೆ, ಎಸೈ ಬಳಿ ಮೊನ್ನೆ ಕೊಟ್ಟಿದ್ದು ಸಾಕಾಗಿಲ್ವ ಅಂತ ಹೇಳುತ್ತಾನೆ. ಇದನ್ನೆಲ್ಲ ನೋಡಿ ಕೋಪಗೊಂಡ ಪೊಲೀಸ್ ಆತನನ್ನು ದರದರ ಎಳೆದುಕೊಂಡು ಹೋಗುತ್ತಾರೆ. ಇದನ್ನು ನೋಡಿದ ಕಂಠಿ ಆತನ ಗೆಳೆಯರಿಗೆ ಆತನಿಗೆ ಹಣ ಕೊಡುವಂತೆ ಸನ್ನೆ ಮಾಡುತ್ತಾನೆ. ಇನ್ನೂ ಮಾರ್ಕೇಟ್ ಮಂದಿ ಆಶ್ಚರ್ಯ ಚಕಿತರಾದರು. ಕಂಠಿ ಎಂದು ಯಾರನ್ನೋ ಎಳೆದುಕೊಂಡು ಹೋಗುತ್ತಿರುವುದು ಕಂಡು ಆಶ್ಚರ್ಯದಿಂದ ಜನ ನೋಡುತ್ತಿದ್ದರು. ಇತ್ತ ಸ್ನೇಹಾ ಮಾತ್ರ ಇನ್ನಾದರೂ ನೀವು ನಿರಾಳವಾಗಿ ಇರೀ , ಆದಷ್ಟೂ ಬೇಗ ದುಡ್ಡು ತೆಗೆದುಕೊಂಡಿರೋರೆಲ್ಲ ಕೊಟ್ಟುಬಿಡಿ ಎಂದು ಹೇಳಿ ಹೋಗುತ್ತಾಳೆ.

ಇತ್ತ ಪುಟ್ಟಕ್ಕ ಏನ್ಮಾಡ್ತಿದ್ದಾಳೆ

ಇತ್ತ ಪುಟ್ಟಕ್ಕ ಏನ್ಮಾಡ್ತಿದ್ದಾಳೆ

ಇತ್ತ ಪುಟ್ಟಕ್ಕ ಶಾಂತಮ್ಮನ ಬಳಿ ಮಾತನಾಡುತ್ತಿರುತ್ತಾಳೆ, ಹೇಗಿದ್ದೀಯಾ ಶಾಂತವ್ವ, ಗಂಡ ಹೇಗಿದ್ದಾರೆ ಎಂದು ಕ್ಷೇಮ ಸಮಾಚಾರ ಮಾತನಾಡುತ್ತಾ ಬಳಿಕ ನಿರಾಳತೆಯಿಂದ ಪೋನ್ ಇಡುತ್ತಾಳೆ. ಈ ವೇಳೆ ಮಂಜಮ್ಮ ಹೇಗಿದ್ದಾರೆ ಪುಟ್ಟಕ್ಕ, ಶಾಂತವ್ವ ಗಂಡ ಎಂದಾಗ ಹುಷಾರುಗುತ್ತಿದ್ದಾರಂತೆ ಮಂಜಮ್ಮ ಎಂದು ಊಟ ಬಡಿಸಲು ತೆರಳುತ್ತಾರೆ, ಇತ್ತ ಮುರಳಿ ಮೇಸ್ಟ್ರು ಮನೆಯೆಲ್ಲ ತುಂಬಾ ಗಲೀಜಾಗಿರುತ್ತೆ ಅವರೇ ತಮ್ಮ ರೂಮನ್ನು ಸ್ವಚ್ಚಗೊಳಿಸಿ ಶುಭ್ರವಾಗಿ ಕಾಣಿಸುವ ರೀತಿ ಮಾಡುತ್ತಾರೆ.

English summary
Zee kannada Puttakkana Makkalu Serial May 30th Episode Written Update. Here is the more detail about episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X