Puttakkana Makkalu:ಸಹನಾ ಶವದ ಮುಂದೆ ಹೆತ್ತ ಕರುಳಿನ ಸಂಕಟ: ಪುಟ್ಟಕ್ಕನ ಗೋಳು ಕೇಳೋರ್‍ಯಾರು?
ಪುಟ್ಟಕ್ಕನಿಗೆ ಬಹಳ ದೊಡ್ಡ ಆಘಾತ ಆಗಿದೆ. ಸಹನಾ ಬೆಂಗಳೂರಿನ ಬಸ್ ಹತ್ತಿ ಹೊರಟಿದ್ದಾಳೆ ಎಂದು ಎಲ್ಲರೂ ಅಂದುಕೊಂಡಿರುತ್ತಾರೆ. ಹಾಗೆಯೇ ಆಕೆಗೋಸ್ಕರ ಎಲ್ಲೆಡೆ ಹುಡುಕಾಟ ಶುರು ಆಗುತ್ತದೆ. ಆದರೆ, ಸಹನಾ ಎಲ್ಲಿದ್ದಾಳೆ ಎನ್ನುವ ಸುಳಿವು ಯಾರಿಗೂ ಸಿಗುವುದಿಲ್ಲ. ಯಾಕೆಂದರೆ, ಅಷ್ಟರ ಮಟ್ಟಿಗೆ ಸಹನಾಳನ್ನು ಹುಡುಕಾಡಿದ್ದರು. ಸಹನಾ ಎಲ್ಲಿದ್ದಾಳೆ? ಏನು ಮಾಡುತ್ತಿದ್ದಾಳೆ? ಎಂದು ಮನೆ ಮಂದಿ ಆತಂಕಕ್ಕೆ ಒಳಗಾಗಿದ್ದರು.
ಸಹನಾ ಯಾವತ್ತೂ ಯಾರಿಗೂ ಕೂಡ ಅನ್ಯಾಯ ಮಾಡಿದವಳಲ್ಲ. ಆಕೆ ಅನ್ಯಾಯ ಮಾಡಿದವರ ವಿರುದ್ಧ ಸೆಟೆದು ನಿಂತಿದ್ದೆ ಇದೀಗ ದೊಡ್ಡ ಅಪರಾಧವಾಗಿ ಬಿಟ್ಟಿದೆ. ಎಲ್ಲವೂ ಸರಿ ಆಯಿತು ಎನ್ನುವಷ್ಟರಲ್ಲಿ ಸಹನಾ ಡೆಡ್ ಬಾಡಿ ಪೊಲೀಸರ ಕೈಗೆ ಸಿಕ್ಕಿದೆ. ಸಹನಾ ಥರ ಉಡುಪು ಹಾಕಿ ಮುಖ ಸಂಪೂರ್ಣ ಜಜ್ಜಿ ಹೋಗಿರುತ್ತದೆ. ಹಾಗೆಯೇ ಆಕೆಯ ಆಧಾರ್ ಕಾರ್ಡ್ ಪೊಲೀಸರಿಗೆ ಸಿಗುತ್ತದೆ. ಪೊಲೀಸರು ಇದು ಸಹನಾ ಅವರ ದೇಹವೆಂದು ಗುರುತು ಮಾಡುತ್ತಾರೆ. ಕಂಠಿ, ಸ್ನೇಹಾ ಎಲ್ಲರೂ ಕೂಡ ಸಹನಾನನ್ನು ಹೇಗಾದರೂ ಮಾಡಿ ಹುಡುಕಾಡಬೇಕು. ಆಕೆಯನ್ನು ಮನೆಗೆ ಕರೆದುಕೊಂಡು ಬರಬೇಕು ಎಂದು ಬಹಳಷ್ಟು ಕಷ್ಟ ಪಟ್ಟಿರುತ್ತಾರೆ.

ಇದೇ ವೇಳೆ ಪುಟ್ಟಕ್ಕನ ಮನೆಗೆ ಪೊಲೀಸರು ಬರುತ್ತಾರೆ. ಆ ಕೂಡಲೇ ಪುಟ್ಟಕ್ಕ ಮನೆಯಿಂದ ಹೊರಗೆ ಓಡೋಡಿ ಬರುತ್ತಾರೆ. ಪೊಲೀಸ್ ಸಾಹೇಬ್ರೆ ನನ್ನ ಮಗಳು ಸಿಕ್ಕಿ ಬಿಟ್ಟಳಾ? ಎಲ್ಲಿದ್ದಳು ಆಕೆ? ನಾನು ಆಕೆಯನ್ನು ನೋಡಬೇಕಿತ್ತು ಎಂದಾಗ ಪೊಲೀಸರು ಹೇಳುತ್ತಾರೆ. ಪುಟ್ಟಕ್ಕ "ನಿಮ್ಮ ಮಗಳು ಸಿಕ್ಕಿದ್ದಾರೆ. ನೀವು ಆಕೆಯನ್ನು ನೋಡಲು ನಾನು ಕರೆದುಕೊಂಡು ಹೋಗುತ್ತೇನೆ. ದಯವಿಟ್ಟು ನೀವು ಏನು ಟೆನ್ಶನ್ ತೆಗೆದುಕೊಳ್ಳಬೇಡಿ" ಎಂದು ಹೇಳುತ್ತಾರೆ. ಪುಟ್ಟಕ್ಕ ಬಹಳ ಖುಷಿ ಪಡುತ್ತಾಳೆ. ಇನ್ನೂ ಸುಮಾ, ಅಕ್ಕ ಭಾವನಿಗೆ ವಿಚಾರ ತಿಳಿಸುತ್ತಾಳೆ. "ಅಕ್ಕ ಸಹನಾ ಅಕ್ಕ ಸಿಕ್ಕಿದ್ದಾಳೆ ನೀವು ಆದಷ್ಟು ಬೇಗ ಇಲ್ಲಿಗೆ ಬನ್ನಿ ಎಂದು ಖುಷಿಯಲ್ಲಿ" ಹೇಳುತ್ತಾಳೆ.
ಪೊಲೀಸರ ಜೊತೆ ತೆರಳಿದ ಪುಟ್ಟಕ್ಕ
ಆಸ್ಪತ್ರೆಯ ಶವಾಗಾರದ ಬಳಿ ಹೋದ ಪುಟ್ಟಕ್ಕಗೆ ನನ್ನ ಮಗಳು ಇಲ್ಲಿಗೆ ಯಾಕೆ ಬಂದಿದ್ದಾಳೆ? ಪೊಲೀಸರು ನಮ್ಮನ್ನು ಯಾಕೆ ಇಲ್ಲಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ಏನಾಗುತ್ತಿದೆ ಇಲ್ಲಿ ಎಂದು ಅರ್ಥ ಆಗದೆ ಕೇಳುತ್ತಿರುತ್ತಾರೆ. ಇನ್ನೂ ಪೊಲೀಸರು "ಯಾರಾದರೂ ಒಬ್ಬರು ನಮ್ಮ ಜೊತೆ ಬರಬೇಕು" ಎಂದು ಹೇಳುತ್ತಾರೆ. ಅದಕ್ಕೆ ಪುಟ್ಟಕ್ಕ "ನಾನು ನಿಮ್ಮ ಜೊತೆ ಬರುತ್ತೇನೆ" ಎಂದು ಹೇಳಿ ಪೊಲೀಸರ ಹಿಂದೆ ಹೋಗುತ್ತಾರೆ. ಪೊಲೀಸರು ಸಹನಾ ಬಾಡಿ ಬಳಿ ಕರೆದುಕೊಂಡು ಹೋದಾಗ ಪುಟ್ಟಕ್ಕಗೆ ಭಯ ಹೆಚ್ಚಾಗುತ್ತದೆ.

ಶವದ ಮುಸುಕು ತೆಗೆದ ಪೊಲೀಸರು
ಪೊಲೀಸರು ಶವದ ಮುಸುಕು ತೆಗೆಯಲು ಹೇಳುತ್ತಾರೆ. ಆ ವೇಳೆ ಪುಟ್ಟಕ್ಕ ಸಂಪೂರ್ಣವಾಗಿ ಕುಸಿದು ಹೋಗುತ್ತಾಳೆ. ಸಹನಾ ಎಂದು ಬಹಳ ಗೋಳಾಡುತ್ತಾಳೆ. ತನ್ನ ಮಗಳನ್ನು ಕಳೆದುಕೊಂಡ ಪುಟ್ಟಕ್ಕನ ಆಕ್ರಂದನ ಮುಗಿಲು ಮುಟ್ಟಿದೆ. "ಇಂತಹ ತಪ್ಪು ಮಾಡಿ ಬಿಟ್ಟೆಯಲ್ಲ ನೀನು. ಯಾಕೆ ಹೀಗೆ ಮಾಡಿದೆ. ಇದು ಸರಿಯಾದ ನಿರ್ಧಾರವಲ್ಲ. ಬಾಳಿ ಬದುಕಬೇಕಾಗಿರುವ ನೀನು ಸಾಯುವ ಮಟ್ಟಕ್ಕೆ ನಿನಗೆ ಜಿಗುಪ್ಸೆ ಬಂದು ಹೋಯಿತಾ. ನಿನಗೆ ನಾವು ಯಾರು ಕಾಣದೆ ಆದೆವಾ?" ಎಂದು ಬಹಳ ನೊಂದುಕೊಂಡು ಅಳುತ್ತಾಳೆ.
ಪುಟ್ಟಕ್ಕನ ಮನೆಯಲ್ಲಿ ಸೂತಕದ ವಾತಾವರಣ
ಪುಟ್ಟಕ್ಕ ತನ್ನ ಮನೆಯವರಿಗೆ ಏನು ಹೇಳದ ಪರಿಸ್ಥಿತಿಯಲ್ಲಿ ಇರುತ್ತಾಳೆ. ಸಹನಾ ತಂಗಿಯಂದಿರು ತನ್ನ ಅಕ್ಕನನ್ನು ಕಳೆದುಕೊಂಡು ಬಹಳ ನೋವಲ್ಲಿದ್ದಾರೆ. ಮುರಳಿಗೆ ತಾನು ಮಾಡಿದ ತಪ್ಪಿನಿಂದಾಗಿ ತನ್ನ ಹೆಂಡತಿ ಸಾಯುವ ಪರಿಸ್ಥಿತಿ ಬಂದು ಹೋಯಿತಲ್ಲಾ. ಇದಕ್ಕೆಲ್ಲ ನಾನೇ ಕಾರಣ ಮನದಲ್ಲಿಯೇ ತನಗೆ ತಾನೇ ಹಿಡಿ ಶಾಪ ಹಾಕಿಕೊಳ್ಳುತ್ತಾನೆ.


Click it and Unblock the Notifications











