Puttakkana Makkalu:ಪುಟ್ಟಕ್ಕನ ಮನೆಯಲ್ಲಿ ಸೂತಕದ ವಾತಾವರಣ: ಸಹನಾ ಬಗ್ಗೆ ಏನಿದು ಟ್ವಿಸ್ಟ್?

By ಪೂರ್ವ

ಸಹನಾ ಸತ್ತು ಹೋದಳು ನಾವು ಇನ್ನೂ ಯಾರನ್ನು ಸಹನಾ ಎಂದು ಕರೆಯಲಿ ಎಂದು ಆಳುತ್ತಿರುವ ಪುಟ್ಟಕ್ಕನನ್ನು ಸಂತೈಸಲು ಆಗದೆ ಅಲ್ಲಿರುವವರು ಕುಸಿದು ಹೋಗಿ ಬಿಟ್ಟಿದ್ದಾರೆ. ಸಹನಾ ಯಾವತ್ತೂ ಇಂತಹ ಕೆಲಸ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಆದರೂ, ಮುರಳಿಗೆ ತನ್ನ ಹೆಂಡತಿ ನನ್ನ ಒಬ್ಬಂಟಿ ಮಾಡಿ ಹೊರಟು ಹೋದಳಲ್ಲಾ ಎಂದು ಬಹಳ ಬೇಸರ. ಏನು ಮಾಡಬೇಕು ಎಂದು ತಿಳಿಯದೇ ಪುಟ್ಟಕ್ಕ ಮಾತ್ರ ಕಂಗಾಲಾಗಿದ್ದಾರೆ.

ನನಗೆ ನನ್ನ ಮಗಳು ಬೇಕು ಎಂದು ಗೊಳಾಡುತ್ತಿದ್ದಾಳೆ. ಸಹನಾ ಎಂದುಕೊಂಡು ಬೇರೆ ಹೆಂಗಸಿನ ಚಿತೆಗೆ ಬೆಂಕಿ ಕೊಡುತ್ತಾನೆ ಮುರಳಿ. ಬಂಗಾರಮ್ಮ ಪುಟ್ಟಕ್ಕನಿಗೆ ಅದೆಷ್ಟೇ ಸಮಾಧಾನ ಹೇಳಿದರೂ ಪುಟ್ಟಕ್ಕ ಮಾತ್ರ ತನ್ನ ಅಳು ನಿಲ್ಲಿಸುತ್ತಿಲ್ಲ. ತನ್ನ ಮಗಳು ನಾನು ಕಷ್ಟದಲ್ಲಿ ಇರಬೇಕಾದರೆ ಹೆಗಲಿಗೆ ಹೆಗಲು ಕೊಟ್ಟಿದ್ದಳು. ಆದರೆ, ಇದೀಗ ಏನಾಗುತ್ತಿದೆ, ನನ್ನ ಮಗಳನ್ನು ಆ ದೇವರು ಕರೆದುಕೊಂಡು ಬಿಟ್ಟನಲ್ವ ಎಂದು ಹೇಳುತ್ತಾಳೆ. ಇನ್ನೂ ಪುಟ್ಟಕ್ಕನ ಮನೆಯಲ್ಲಿ ಶೋಕ ಮಡುಗಟ್ಟಿದೆ.

Puttakkana Makkalu serial May 7th episode update

ಸಹನಾ ಇನ್ನಿಲ್ಲ ಎನ್ನುವ ನೋವು ಮುಗಿಲು ಮುಟ್ಟಿದೆ. ಸ್ನೇಹಾ ಹಾಗೂ ಸುಮಾ ತನ್ನ ಅಕ್ಕನ ನೆನಪಲ್ಲಿ ಕೊರಗುತ್ತಾರೆ. ಮುರಳಿಗೆ ತನ್ನ ಹೆಂಡತಿ ಮದುವೆ ಆದ ಬಳಿಕ ಅದೆಷ್ಟು ಕಷ್ಟ ಪಟ್ಟಳು. ಆದರೆ, ನಾನೇ ಆಕೆಯನ್ನು ಅರ್ಥ ಮಾಡಿಕೊಳ್ಳಲಿಲ್ಲ. ಇದೀಗ ನನ್ನನ್ನು ಬಿಟ್ಟು ದೂರ ಹೋಗಿ ಬಿಟ್ಟಳು. ಯಾವತ್ತೂ ನನ್ನ ಕೈಗೆ ಆಕೆ ಸಿಗಲಾರದಷ್ಟು ದೂರ ಹೋಗಿದ್ದಾಳೆ ಎಂದು ಅಳುತ್ತಾರೆ. ಸಹನಾ ರಾತ್ರಿ ಹೊತ್ತಲ್ಲಿ ದೇವಾಲಯದ ಬಳಿ ಆಶ್ರಯ ಪಡೆಯುತ್ತಾಳೆ.

ದೇವಸ್ಥಾನದಲ್ಲಿ ಆಶ್ರಯ ಪಡೆದ ಸಹನಾ ಇರುವುದು ಇಲ್ಲ. ಮರುದಿನ ಬೆಳಗ್ಗೆ ದೇವಾಲಯದ ಅರ್ಚಕರು ದೇವರ ಪೂಜೆ ಮಾಡಿ ಆರತಿ ಕೊಡುವಾಗ ಸಹನಾನನ್ನು ಕೊಂಚ ಹೊತ್ತು ನೋಡಿ ಅಲ್ಲಿಂದ ಹೋಗುತ್ತಾರೆ. ದೇವಾಲಯದ ಸುತ್ತು ಬರಬೇಕಾದರೆ ಸಹನಾಗೆ ತಲೆ ಚಕ್ಕರ್ ಬಂದ ಹಾಗೆ ಆಗುತ್ತದೆ. ಆಕೆ ತಲೆ ತಿರುಗಿ ಬೀಳುತ್ತಾಳೆ.

Puttakkana Makkalu serial May 7th episode update

ದೇವಾಲಯದಲ್ಲಿ ತಲೆ ಸುತ್ತಿ ಬಿದ್ದ ಸಹನಾ

ಸಹನಾ ಬೀಳುತ್ತಿರುವುದನ್ನು ನೋಡಿದ ಅಲ್ಲಿದ್ದ ಅಕ್ಕ ಪಕ್ಕದ ಹೆಂಗಸರು ಆಕೆಯ ಬಳಿ ಓಡಿ ಬರುತ್ತಾರೆ. ಏನಾಯಿತಮ್ಮ ಯಾಕೆ ಹೀಗೆಲ್ಲ ಆಯಿತು ಎಂದು ಕುಡಿಯಲು ನೀರು ಕೊಟ್ಟರು. ಆ ಬಳಿಕ ಮೆಟ್ಟಿಲ ಬಳಿಗೆ ಕರೆದುಕೊಂಡು ಬಂದು ಕುಳ್ಳಿರಿಸುತ್ತಾರೆ. ಆಗ ಅಲ್ಲಿಗೆ ಅರ್ಚಕರು ಬಂದು ಏನಾಯಿತು ಎಂದಾಗ ಸಹನಾ ತಲೆ ತಿರುಗಿ ಬಿದ್ದ ವಿಚಾರವನ್ನು ಹೆಂಗಸರು ಅವರ ಬಳಿ ಹೇಳುತ್ತಾರೆ. ಅರ್ಚಕರಿಗೆ ಏನು ಹೇಳಬೇಕು ತಿಳಿಯದೇ ಹೆಂಗಸರ ಬಳಿ ಹೇಳುತ್ತಾರೆ. ಆಕೆಗೆ ತಿನ್ನಲು ಪ್ರಸಾದ ತನ್ನಿ ಎಂದು ಹೇಳಿ ಅಲ್ಲಿಂದ ಕಳುಹಿಸುತ್ತಾನೆ.

ಸಹನಾ ಬಳಿ ಪ್ರಶ್ನೆ ಮಾಡಿದ ಅರ್ಚಕರು

ಆ ಬಳಿಕ ಅರ್ಚಕರು "ಯಾರಮ್ಮ ನೀನು. ಯಾಕೆ ಇಲ್ಲಿಗೆ ಬಂದಿದ್ದೀಯಾ? ನಿನ್ನೆ ರಾತ್ರಿ ದೇವಾಲಯದಲ್ಲಿ ಇದ್ದೆ ಎಂದು ಗೊತ್ತಾಯಿತು ಎಂದಾಗ ಸಹನಾಗೆ ಏನು ಹೇಳಬೇಕು ತಿಳಿಯದಾಗುತ್ತದೆ.

More from Filmibeat

English summary
Puttakkana Makkalu serial May 7th episode update
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X