Puttakkana Makkalu:ತನ್ನ ಮಗಳು ಸಹನಾ ಸಾವಿಗೆ ಸ್ನೇಹಾ ಕಾರಣ ಎಂದ ಪುಟ್ಟಕ್ಕ!
ಪುಟ್ಟಕ್ಕಗೆ ತನ್ನ ಮಗಳದ್ದೆ ಯೋಚನೆ. ಯಾಕೆ ಹೀಗಾಯಿತು. ಸಹನಾ ನಿನ್ನ ತಾಯಿಯನ್ನು ಬಿಟ್ಟು ಹೋಗಲು ನಿನಗೆ ಹೇಗೆ ಮನಸ್ಸಾಯಿತು ಎಂದು ಪುಟ್ಟಕ್ಕ ಗೋಳಾಡುತ್ತಾಳೆ . ಮನೆ ಮಂದಿಯೆಲ್ಲ ಜೋರಾಗಿ ಅಳುತ್ತಾರೆ. ಒಂದು ಕಡೆ ಪುಟ್ಟಕ್ಕನಿಗೆ ಸಮಾಧಾನ ಮಾಡಲು ಆಗದೆ ಎಲ್ಲರ ಮನಸ್ಸು ಒಡೆದು ಹೋಗಿದೆ.
ಇತ್ತ ಸಹನಾ ಮನೆ ಮಂದಿಯನ್ನು ಬಿಟ್ಟು ಬಂದು ಒಬ್ಬೊಂಟಿಯಾಗಿ ಜೀವನ ನಡೆಸುತ್ತಿದ್ದಾರೆ. ತನ್ನ ಮನೆಯವರ ನೋವೇ ನನಗೆ ಮೆಟ್ಟಿಲು ಆಗುತ್ತಿದೆ. ಅಮ್ಮ ನಾನು ನಿನ್ನನ್ನು ಹೇಳದೆ ಕೇಳದೇ ಬಿಟ್ಟು ಬಂದೆ. ಆದರೆ ನನಗೆ ನಿನ್ನ ಬಿಟ್ಟು ಇರಲು ಆಗುವುದು ಇಲ್ಲ ಎಂದು ಸಹನ ಕೊರಗುತ್ತಿದ್ದಾಳೆ.

"ಆದರೂ, ಕೂಡ ನೀನು ಇಲ್ಲದ ದಿನಗಳಲ್ಲಿ ನಾನು ಬದುಕಲು ಕಲಿಯುತ್ತಿದ್ದೇನೆ. ದಯವಿಟ್ಟು ನನ್ನನ್ನು ಕ್ಷಮಿಸಮ್ಮ" ಎಂದು ಜೋರಾಗಿ ಅಳುತ್ತಾಳೆ. ಸಹನಾ ಬಸ್‌ನಿಂದ ಇಳಿಯುವ ವೇಳೆ ಆಕೆಯ ಜೊತೆ ಇದ್ದ ಲಗೇಜ್‌ಗಳು ಕಳ್ಳತನ ಆಗಿ ಬಿಡುತ್ತದೆ. ಏನು ಮಾಡಬೇಕು ಎಂದು ತಿಳಿಯದೇ ಕಂಗಾಲಾಗಿ ಹೋಗುತ್ತಾಳೆ. ಸಹನಾಗೆ ತನ್ನ ಜೊತೆ ಇದ್ದ ಹಣ ಒಡವೆಗಳು ಹೋಯಿತಲ್ಲ. ನನಗೆ ಇನ್ನೂ ನೆಲೆ ಯಾವುದು ಎಂದು ಗೊಳಾಡುತ್ತಿರುತ್ತಾಳೆ. ಆಕೆಗೆ ಶ್ರೀ ರಾಮ್ ದೇಸಾಯಿ ಅವರ ಅಡ್ರೆಸ್ ಹಿಡಿದುಕೊಂಡು ಎಲ್ಲರ ಜೊತೆ ಅವರ ಅಡ್ರೆಸ್ ಕೇಳುತ್ತಾಳೆ.
ಆದರೆ ಯಾರಿಂದಲೂ ಏನೂ ತಿಳಿಯುವುದಿಲ್ಲ. ಆಕೆಗೆ ತಾನು ತೆಗೆದುಕೊಂಡು ಬಂದಿದ್ದ ಹಣ ಬಟ್ಟೆಗಳು ಯಾವುದು ಇಲ್ಲವಾಗಿದೆ. ಜೊತೆಗೆ ನಾನು ಏನೇ ಆದರೂ ಒಬ್ಬೊಂಟಿಯಾಗಿ ಜೀವನ ನಡೆಸಲೇಬೇಕು. ಇಲ್ಲವಾದರೆ ಬಹಳ ಕಷ್ಟದ ದಿನಗಳನ್ನು ನಾನು ನೋಡಬೇಕಾಗಿ ಬರಬಹುದು ಎಂದು ಆಲೋಚನೆ ಮಾಡುತ್ತಾಳೆ. ಆದಷ್ಟು ಸಮಯ ದೇವಾಲಯದಲ್ಲಿ ಕಳೆಯುತ್ತಾಳೆ. ಇತ್ತ ಪುಟ್ಟಕ್ಕ, ಸಹನಾ ಇಲ್ಲದೆ ತಾನು ಹೇಗೆ ಇರುವುದು. ನಾನು ಹೇಗೆ ಜೀವನ ಸಾಗಿಸುವುದು. ನನಗೆ ಸಹನಾ ಬೇಕು ಎಂದು ರೋಧಿಸುತ್ತಿರುತ್ತಾರೆ ಇದನ್ನೆಲ್ಲ ನೋಡಿದ ಸ್ನೇಹಾ ಹಾಗೂ ಸುಮಾ ತನ್ನ ತಾಯಿ ಬಳಿ ಹೇಳುತ್ತಾರೆ.

ಅಮ್ಮನನ್ನು ಸಮಾಧಾನ ಮಾಡಲು ಯತ್ನಿಸಿದ ಸ್ನೇಹಾ
"ಯಾಕೆ ನೀನು ಹೀಗೆಲ್ಲಾ ಅಂದುಕೊಂಡಿದ್ದೀಯಾ? ಇಂತಹ ಮಾತುಗಳನ್ನು ಯಾಕೆ ಆಡುತ್ತಿದ್ದಿಯಾ?" ಎಂದೆಲ್ಲ ಹೇಳಿದಾಗ ಪುಟ್ಟಕ್ಕಗೆ ಸಿಟ್ಟು ಬರುತ್ತದೆ. "ನನಗೆ ಇಂತಹ ದು:ಸ್ಥಿತಿ ಬರಲು ನೀನೇ ಕಾರಣ ಸ್ನೇಹಾ. ಆವತ್ತು ನಾನು ಅಷ್ಟು ಹೇಳಿದೆ ದೂರು ಕೊಡುವ ತನಕ ಹೋಗುವುದು ಬೇಡ. ನಾವು ಇದನ್ನು ಮಾತುಕತೆಯಿಂದ ಬಗೆಹರಿಸಬಹುದು ಎಂದು ಗಿಣಿಗೆ ಹೇಳಿದ ಹಾಗೆ ಹೇಳಿದೆ. ಆದರೆ, ಯಾರಿಗೂ ನನ್ನ ಮಾತನ್ನು ಕೇಳುವ ದೊಡ್ಡ ಮನ:ಸ್ಥಿತಿ ಇಲ್ಲ" ಎಂದು ಬಹಳ ನೋವಿನಿಂದ ಹೇಳುತ್ತಾಳೆ.
ಸಹನಾ ನೆನೆದು ಬಿಕ್ಕಳಿಸುತ್ತಿರುವ ಪುಟ್ಟಕ್ಕ
ಹಾಗೆ ಮಾತು ಮುಂದುವರೆಸಿದ ಪುಟ್ಟಕ್ಕ ಹೇಳುತ್ತಾರೆ. "ನಾನು ನಿನಗೆ ಸ್ವಲ್ಪ ಜ್ಞಾನ ಇದೆ ಅಂದುಕೊಂಡಿದ್ದೆ. ನೀನು ಓದೀದ್ದಿಯಾ? ಸಹನಾ, ನೀವಿಬ್ಬರು ಓದುವ ಸಲುವಾಗಿ ಆಕೆ ನನಗೆ ಹೆಗಲು ಕೊಟ್ಟು ನಿಂತಿದ್ದಳು. ಆದರೆ, ಈಗ ಏನಾಯಿತು. ನಿನ್ನಿಂದಾಗಿ ಆಕೆಯನ್ನು ಕಳೆದುಕೊಂಡು ಬಿಟ್ಟೆ ಎಂದು ಬಹಳ ಬೇಸರ ಮಾಡಿಕೊಳ್ಳುತ್ತಾರೆ. ಆದರೆ, ಸ್ನೇಹಾಗೆ ಪುಟ್ಟಕ್ಕ ಹೇಳಿದ ಮಾತು ಬಹಳ ನೋವಾಗುತ್ತದೆ.
ಅಮ್ಮನ ಮಾತು ಸ್ನೇಹಾ ಮನಸ್ಸಿಗೆ ತಾಕಿದೆ
ತಾನು ಯಾವತ್ತೂ ಸಹನಾಗೆ ನೋವಾಗುವ ರೀತಿ ನಡೆದುಕೊಂಡಿಲ್ಲ. ಆಕೆಗೆ ಸಹಾಯ ಆಗಲಿ, ಆಕೆ ತೊಂದರೆಯಿಂದ ಪಾರಾಗುತ್ತಾರೆ ಎನ್ನುವ ಕಾರಣದಿಂದಾಗಿ ನಾನು ರೀತಿ ಮಾಡಿದೆ. ಹೊರತು ಆಕೆಗೆ ಕೆಡುಕಾಗಲಿ ಎಂದು ಅಲ್ಲ ಎಂದು ಅಳುತ್ತಾ ಹೇಳುತ್ತಾಳೆ.


Click it and Unblock the Notifications











