Puttakkana Makkalu:ಅಮ್ಮನ ಮಾತು ಕೇಳಿ ನೊಂದುಕೊಂಡ ಸ್ನೇಹಾ; ಪುಟ್ಟಕ್ಕನ ಸುಧಾರಿಸೋದು ಯಾರು?
ಸ್ನೇಹಾನನ್ನು ಹೇಗಾದರೂ ಮಾಡಿ ಮನೆಯಿಂದ ದೂರ ಮಾಡಲೇಬೇಕು ಆಕೆಯ ಸ್ಥಾನವನ್ನು ನಾನೇ ಪಡೆದುಕೊಳ್ಳಬೇಕು ಎನ್ನುವ ತವಕದಲ್ಲಿ ರಾಧಾ ಇದ್ದಾಳೆ. ರಾಧಾಗೆ ಕಂಠಿ ಅಂದರೆ ಬಹಳ ಪ್ರೀತಿ. ಆದರೆ, ಕಂಠಿಗೆ ಸ್ನೇಹಾ ಎಂದರೆ ಪ್ರೀತಿ. ಆದ ಕಾರಣ ಸ್ನೇಹಳನ್ನು ಕಂಡರೆ ರಾಧಾಗೆ ಆಗುವುದೇ ಇಲ್ಲ. ರಾಧಾ ತನ್ನ ಅತ್ತೆಯ ಜೊತೆ ಇಲ್ಲ ಸಲ್ಲದ್ದನ್ನು ಹೇಳಿ ಫಿಟ್ಟಿಂಗ್ ಇಟ್ಟು ಸ್ನೇಹಾನನ್ನು ಕಂಠಿಯಿಂದ ದೂರ ಮಾಡುತ್ತಾಳೆ. ಅಕ್ಕನ ಸಾವಿನ ನೋವಿನಲ್ಲಿ ಇದ್ದ ಸ್ನೇಹಾಳ ವಿರುದ್ಧ ಇದೀಗ ಪುಟ್ಟಕ್ಕ ಕೂಡ ಆರೋಪ ಮಾಡಿದ್ದಾಳೆ .
ನಿನ್ನಿಂದಾಗಿ ಸಹನಾಗೆ ಈ ಗತಿ ಬಂದಿರುವುದು. ಸಹನಾ ಯಾವತ್ತೂ ನನ್ನ ಇಷ್ಟದ ವಿರುದ್ಧವಾಗಿ ನಿಂತಿಲ್ಲ. ಆಕೆಗೆ ಅವ್ವನ ಮಾತಿನ ಮೇಲೆ ನಂಬಿಕೆ ಬಹಳಷ್ಟು ಇತ್ತು. ಆದರೆ, ನೀನು ಆಕೆಯ ತಲೆ ಕೆಡಿಸಿ ಎಲ್ಲಾ ಹಾಳು ಮಾಡಿಬಿಟ್ಟೆ. ನೀನು ಮಾಡಿದ್ದು ಸ್ವಲ್ಪ ಕೂಡ ಸರಿಯಿಲ್ಲ. ಯಾಕೆ ಹೀಗೆ ಮಾಡಿದೆ ಎಂದು ಪ್ರಶ್ನೆ ಮಾಡಿದಾಗ, ಸ್ನೇಹಾಗೆ ಏನು ಹೇಳಬೇಕು ಎಂದು ತಿಳಿಯದಾಗುತ್ತದೆ.

ಅಕ್ಕ ಅದೆಷ್ಟೋ ಕಷ್ಟಗಳನ್ನು ನುಂಗಿಕೊಂಡು ಜೀವನ ಸಾಗಿಸುತ್ತಾ ಇದ್ದಳು. ಆದರೆ, ಆಕೆಗೆ ಆಗಿರುವ ಶಿಕ್ಷೆಗೆ ಅವರ ಮನೆಯವರು ಕೂಡ ಶಿಕ್ಷೆ ಅನುಭವಿಸಬೇಕು ಎಂದು ಅಂದುಕೊಂಡೆ. ಆದರೆ, ಏನು ಮಾಡುವುದು ಅಕ್ಕ ಇಂತಹ ನಿರ್ಧಾರ ತೆಗೆದುಕೊಂಡಳು ಎಂದು ಬಿಕ್ಕಳಿಸುತ್ತ ಇರುತ್ತಾಳೆ.
ತವರು ಮನೆಯಿಂದ ಗಂಡನ ಮನೆಯತ್ತ ಹೊರಟ ಸ್ನೇಹಾ
"ಸುಮಾ ನಾವಿನ್ನೂ ಹೊರಡುತ್ತೇವೆ. ಅವ್ವನಿಗೆ ನನ್ನನ್ನು ನೋಡಿದ ಬಳಿಕ ಇನ್ನಷ್ಟು ಕೋಪ ಹೆಚ್ಚಾಗುತ್ತಿದೆ. ನೀನು ಅವ್ವನ ಜೊತೆಗೆ ಇರು. ಹಾಗೆಯೇ ಆಕೆಯ ಜೊತೆ ಆಗಾಗ ಮಾತನಾಡುತ್ತಿರು. ಅವ್ವ ನನ್ನ ಜೊತೆ ಇದೀಗ ಬಹಳ ಕೋಪ ಮಾಡಿಕೊಂಡು ಇದ್ದಾಳೆ. ಆಕೆಯ ಎದುರು ನಾನು ಇದ್ದರೆ, ಇನ್ನಷ್ಟು ಕೋಪ ಹೆಚ್ಚಾಗಬಹುದು" ಎಂದು ಹೇಳಿ ಅಲ್ಲಿಂದ ಗಂಡನ ಮನೆಯತ್ತ ಬಹಳ ಭಾರವಾದ ಹೆಜ್ಜೆಯಿಡುತ್ತ ಹೋಗುತ್ತಾಳೆ.
ಅಕ್ಕ ಹೋಗುವುದನ್ನೇ ನೋಡುತ್ತಾ ನಿಂತ ಸುಮಾ
ಇನ್ನೂ ಸುಮಾ ಮಾತ್ರ ಅಕ್ಕ ಹೋಗುವುದನ್ನೇ ನೋಡುತ್ತಿರುತ್ತಾಳೆ. ಆಕೆಗೆ ಸ್ನೇಹಾ ಕೂಡ ಗಂಡನ ಮನೆಗೆ ಹೋದಳು. ಇನ್ನೂ ಅಮ್ಮನಿಗೆ ನಾನು ಹೇಗೆ ಸಮಾಧಾನ ಹೇಳಲಿ ಎಂದು ಬಹಳ ನೊಂದುಕೊಳ್ಳುತ್ತಾರೆ. ಸಹನಾ ಅಕ್ಕ ಇಲ್ಲದ ಮನೆ ಬಿಕೋ ಆಗಿದೆ. ಅಮ್ಮನ ಗೋಳು ಕೇಳುವವರೇ ಇಲ್ಲದಾಗಿದೆ. ಆದರೆ, ಇದೀಗ ನಾನೇನು ಮಾಡಲಿ ಎನ್ನುವುದೇ ಸುಮಾಗೆ ಬಹಳ ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ. ಇದೀಗ ಸಹನಾ ದೇವಾಲಯದಲ್ಲಿ ಆಶ್ರಯ ಪಡೆದಿದ್ದಾರೆ.

ಸಹನಾ ದುಃಖಕ್ಕೆ ಕೊನೆ ಇಲ್ಲವೇ?
ಸಹನಾ ದೇವಾಲಯದಲ್ಲಿ ವಾಸವಿದ್ದಾಳೆ. ಆದರೆ, ಆಕೆಗೆ ಸಿಗುತ್ತಿದ್ದು ಮಾತ್ರ ಒಂದು ಹೊತ್ತಿನ ಊಟ ಮಾತ್ರ ಅದು ಸರಿಯಾಗಿ ಇಲ್ಲ. ಆ ಊಟ ಮಾಡುವಾಗ ಕೂಡ ಅಮ್ಮನನ್ನು ನೆನಪಿಸಿಕೊಂಡು ಜೋರಾಗಿ ಸಹನಾ ಅಳುತ್ತಾಳೆ. ಅವ್ವ ನೀನು ಸರಿಯಾಗಿ ಊಟ ಮಾಡಲು ಸಾಧ್ಯ ಇಲ್ಲ. ಅದು ನನಗೆ ತಿಳಿದಿದೆ. ಆದರೆ, ಏನು ಮಾಡುವುದು ನಾನು ಈಗ ಊಟ ಮಾಡಲಿಲ್ಲ ಎಂದಾದರೆ ಖಾಲಿ ಹೊಟ್ಟೆಯಲ್ಲಿ ಮಲಗಬೇಕಾದ ಅನಿವಾರ್ಯ ಪರಿಸ್ಥಿತಿ ಬರುತ್ತದೆ ಎಂದು ಅಮ್ಮನನ್ನು ನೆನೆದು ಕಂಬನಿ ಇಡುತ್ತಾಳೆ.
ಗಂಡನ ಮನೆಯಲ್ಲಿ ಚುಚ್ಚು ಮಾತುಗಳಿಂದ ನೊಂದ ರಾಧಾ
ನಾನು ಒಬ್ಬಂಟಿಯಾಗಿ ಜೀವನ ಮಾಡಲೇಬೇಕು ಎಂದು ಸಹನಾ ಆಲೋಚನೆ ಮಾಡಿ ಮನೆ ಬಿಟ್ಟು ಇರುತ್ತಾಳೆ. ಪುಟ್ಟಕ್ಕ ಹೇಗೆ ಮಗಳ ಯೋಚನೆಯಲ್ಲಿ ಕಾಲ ಕಳೆಯುತ್ತಾ ಇದ್ದಾಳೆ. ಹಾಗೆಯೇ ಸಹನಾ ಕೂಡ ಅಮ್ಮನನ್ನು ಬಿಟ್ಟು ಬದುಕಲು ಬಹಳ ಕಷ್ಟ ಪಡುತ್ತಿದ್ದಾರೆ. ಅಮ್ಮನ ಮನೆಯಿಂದ ಗಂಡನ ಮನೆಗೆ ಹೊರಟ ಸ್ನೇಹಾಗೆ ಗಂಡನ ಮನೆಯಲ್ಲಿ ಕೂಡ ಚುಚ್ಚು ಮಾತುಗಳೇ. ಸ್ನೇಹಾ ಬರುವುದನ್ನೇ ಕಾಯುತ್ತಿದ್ದ ರಾಧಾ, ಸ್ನೇಹಾನನ್ನು ನೋಡಿದ ಕೂಡಲೇ ಚುಚ್ಚು ಮಾತು ಆಡುತ್ತಾಳೆ. ಅಕ್ಕನ ಜೀವನ ಹಾಳು ಮಾಡಿದ್ದಾಯಿತು ಎಂದಾಗ ಕಂಠಿಗೆ ಬಹಳ ಸಿಟ್ಟು ಬರುತ್ತದೆ. ರಾಧಾಗೆ ಖಡಕ್ ಮಾತುಗಳನ್ನಾಡಿ. ಸ್ನೇಹಾಗೆ ಸಾಂತ್ವನ ಹೇಳಿ ಅಲ್ಲಿಂದ ಕರೆದುಕೊಂಡು ಹೋಗುತ್ತಾನೆ.


Click it and Unblock the Notifications











