Puttakkana Makkalu: ಮಗಳ ಮುಂದೆ ಪುಟ್ಟಕ್ಕನ ಸಂಕಟ; ಉಮಾಶ್ರೀ ನಟನೆಗೆ ಕರಗಿದ ವೀಕ್ಷಕರು
ಪುಟ್ಟಕ್ಕಗೆ ಇದೀಗ ಸಹನಾ ಮರಳಿ ಬಂದಿರುವುದು ಬಹಳ ಕೋಪ ತರಿಸಿದೆ. ತನ್ನ ಮಗಳನ್ನು ಅದೆಷ್ಟು ಹುಡುಕಿದ್ದೆ. ಆದರೆ ಆಕೆಗೆ ನನ್ನ ನೋಡಬೇಕು ಎಂದು ಒಂದು ಸಲವೂ ಅನ್ನಿಸಲಿಲ್ಲ. ಆಕೆಗೆ ತಾನು ಬೇಡವಾಗಿ ಬಿಟ್ಟೆನಲ್ಲ ಎಂದು ಬಹಳ ಜೋರಾಗಿ ಅಳುತ್ತಾರೆ. ಸ್ನೇಹಾ ಸಾವಿನ ಬಳಿಕ ಸಹನಾ ಬದುಕಿದ್ದಾಳೆ ಎನ್ನುವ ನಿಜಾಂಶ ಎಲ್ಲರಿಗೂ ತಿಳಿಯಿತು . ತನ್ನ ತಂಗಿ, ತಾಯಿಯ ಹುಟ್ಟುಹಬ್ಬಕ್ಕೆ ನನ್ನನ್ನು ಕರೆದುಕೊಂಡು ಹೋಗಿ ಅವ್ವನಿಗೆ ಸರ್ಪ್ರೈಸ್ ನೀಡುತ್ತಾಳೆ ಅಂದುಕೊಂಡಿದ್ದ ಸಹನಾಗೆ ಸ್ನೇಹಾ ಸಾವಿನ ಸುದ್ದಿ ಅರಗಿಸಿಕೊಳ್ಳಲು ಆಗುತ್ತಿಲ್ಲ.
ಪುಟ್ಟಕ್ಕ ಅದೆಷ್ಟೋ ಬಾರಿ "ಸಹನಾ ನೀನು ಯಾಕೆ ಹೀಗೆ ಮಾಡಿದೆ? ನಾನು ಅಂತಹ ತಪ್ಪು ಏನು ಮಾಡಿದ್ದೆ. ನೀನು ಈಗ ಯಾಕೆ ಬಂದೆ. ನೀನು ಹೋಗು" ಎಂದು ಬಹಳ ಕಠೋರವಾದ ಮಾತುಗಳನ್ನು ಹೇಳುತ್ತಾಳೆ. ಇದನ್ನು ಕೇಳಿದ ಸಹನಾ ತನ್ನ ತಾಯಿಗೆ ಆದಷ್ಟು ಸಮಾಧಾನ ಮಾಡುತ್ತಾಳೆ. "ಸಹನಾ ನಾನು ನಿನ್ನನ್ನು ಬೆಂಗಳೂರಿಗೆ ಹುಡುಕಿಕೊಂಡು ಬಂದಿದ್ದು, ಇದೆಲ್ಲ ನಿನಗೆ ಗೊತ್ತಿದೆ ಅಲ್ವಾ. ಆದರೂ ನೀನು ನನ್ನನ್ನು ನೋಡಬೇಕು ಮಾತನಾಡಿಸಬೇಕು ಎಂದು ಅನ್ನಿಸಲಿಲ್ಲ. ಸಹನಾ ಯಾಕೆ ಹೀಗೆ ಮಾಡಿದೆ" ಎಂದು ಜೋರಾಗಿಯೇ ಕಣ್ಣೀರು ಹಾಕುತ್ತಾರೆ.

ಸಹನಾ ತನ್ನ ತಾಯಿಯ ಮಾತಿಗೆ ಏನು ಮಾತನಾಡಲು ಆಗದೆ ಕಣ್ಣೀರು ಹಾಕುತ್ತಾಳೆ. ಸಹನಾ ತನ್ನ ತಾಯಿಯನ್ನು ಅಪ್ಪಿ ಹಿಡಿದುಕೊಂಡು ಹೇಳುತ್ತಾಳೆ. "ಅವ್ವ ನಾನು ಬೆಂಗಳೂರಿಗೆ ಹೋಗುವ ವೇಳೆ ನನ್ನ ಎಲ್ಲಾ ಹಣ, ಹಾಗೆಯೇ ಬ್ಯಾಗ್ ಅನ್ನು ಯಾರೋ ಹೆಂಗಸು ಕದ್ದುಕೊಂಡು ಹೋಗಿದ್ದರು. ಆಕೆ ಎಲ್ಲೊ ಸತ್ತಿದ್ದಳು. ಅದನ್ನು ನಾನು ಎಂದು ಎಲ್ಲರೂ ಅಂದುಕೊಂಡರು. ಇನ್ನೂ ಬೆಂಗಳೂರಿನಲ್ಲಿ ನಾನು ಜೀವನ ಕಟ್ಟಿಕೊಳ್ಳಬೇಕು ಅಂದುಕೊಂಡಿದ್ದೆ. ಅದೇ ರೀತಿ ಅಲ್ಲಿ ಒಂದು ಮೆಸ್ ನಡೆಸಿ ಜೀವನ ಸಾಗಿಸುತ್ತಿದ್ದೇನೆ" ಎನ್ನುತ್ತಾಳೆ.
ಸಹನಾ ನಾನು ದೊಡ್ಡ ಹೆಸರು ಮಾಡಿದ ಬಳಿಕ ದೇವಿಪುರಕ್ಕೆ ಬರಬೇಕು ಎಂದುಕೊಂಡು ಇದ್ದೆ ಎಂದಾಗ ಪುಟ್ಟಕ್ಕ ಜೋರಾಗಿ ಅಳುತ್ತಾರೆ. ಇತ್ತ ಮುರಳಿ ಸಹನಾ ಬದುಕಿರುವ ವಿಚಾರ ಗೊತ್ತಾಗಿ ಆತ ಆಕೆಯನ್ನು ಹುಡುಕಿಕೊಂಡು ಬರುತ್ತಾನೆ. ಮುರಳಿ ಸಹನಾ ಬಳಿ ಮಾತನಾಡಲು ಶುರು ಮಾಡುತ್ತಾನೆ. ನಾನು ಒಂದು ಸಲ ನಿನ್ನನ್ನು ನಂಬಲಿಲ್ಲ ಎನ್ನುವ ಕಾರಣಕ್ಕೆ ನೀನು ಈ ರೀತಿ ಮಾಡುವುದು ಸರಿಯಲ್ಲ. ನಾನು ನಿನ್ನನ್ನು ತುಂಬಾ ಪ್ರೀತಿ ಮಾಡುತ್ತಿದ್ದೇನೆ. ಆದರೆ ನೀನು ಮಾಡಿದ್ದು ನನಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಹೇಳುತ್ತಾರೆ.

ಆಗ ಸಹನಾ "ನಾನು ಒಂದು ಸಲ ನಿಮ್ಮ ಮೇಲಿದ್ದ ನಂಬಿಕೆಯನ್ನು ಕೆಳೆದುಕೊಂಡಿದ್ದೇನೆ. ಅದಾದ ಬಳಿಕ ನನಗೆ ನಿಮ್ಮ ಮೇಲಿನ ಪ್ರೀತಿ ಸತ್ತು ಹೋಗಿತ್ತು. ನೀವು ಇಬ್ಬರು ಮದುವೆ ಮಾಡಿಕೊಂಡಿದ್ದು ನನಗೆ ಗೊತ್ತಿದೆ" ಎಂದು ಹೇಳಿದಾಗ ಮುರಳಿಗೆ ಬಹಳ ಬೇಸರ ಆಗುತ್ತೆ. ಸಹನಾ ಬಳಿ ಏನು ಮಾತನಾಡಬೇಕು ಎಂದು ತಿಳಿಯದೇ ಸುಮ್ಮನೆ ಇರುತ್ತಾನೆ. ಕೊನೆಗೆ ಮನೆಯ ಹೊರಗೆ ಬಂದ ಮುರಳಿ, ಕಾಳಿ ಬಳಿ "ನಿನಗೆ ಸಹನಾ ಬದುಕಿರುವ ವಿಚಾರ ಗೊತ್ತಿತ್ತಾ" ಎಂದಾಗ ಕಾಳಿ ಹೌದು ಎಂದು ಹೇಳುತ್ತಾನೆ. ಇದನ್ನು ಕೇಳಿದ ವಿನುತಾ ಕೂಡ "ನನಗೂ ಸಹನಾ ಬದುಕಿರುವ ವಿಚಾರ ಗೊತ್ತಿತ್ತು" ಎಂದು ಹೇಳುತ್ತಾರೆ. ಆಗ ಮುರಳಿಗೆ ಸಿಕ್ಕಾಪಟ್ಟೆ ಬೇಸರ ಆಗುತ್ತೆ. ತನ್ನ ಜೀವನದಲ್ಲಿ ಏನು ನಡೆಯುತ್ತಿದೆ ಎನ್ನುವುದು ಅರ್ಥವಾಗದೆ ಸುಮ್ಮನೆ ಇರುತ್ತಾರೆ.
ಕಂಠಿ ತನ್ನ ಪ್ರೀತಿಯ ಮಡದಿಯನ್ನು ಕಳೆದುಕೊಂಡಿದ್ದಾನೆ. ಆದರೆ ಮುರಳಿ ತಾನು ಪ್ರೀತಿಸಿದ ಮಡದಿ ಇದ್ದರೂ ಆಕೆಯನ್ನು ಕಳೆದುಕೊಂಡು ಎಲ್ಲರ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ಸೋತಿದ್ದಾನೆ. ತಾನು ಎಲ್ಲಾ ಇದ್ದೂ ಒಬ್ಬಂಟಿ ಆಗಿ ಬಿಟ್ಟೆನಲ್ಲ. ನನ್ನ ಜೀವನ ಸಹನಾಗಾಗಿ ಮೀಸಲಾಗಿ ಇಟ್ಟಿದ್ದೆ. ಆದರೆ ಇದೀಗ ಸಹನಾ ಮಾಡಿದ ಕೆಲಸಕ್ಕೆ ಮುರಳಿ ಕಂಗಾಲಾಗಿದ್ದಾನೆ.


Click it and Unblock the Notifications










