Puttakkana Makkalu:ಸಿಂಗಾರಮ್ಮನ ಬಂಡವಾಳ ಬಯಲಾಯ್ತು; ಅತ್ತೆಯ ಹುಡುಕಾಟದಲ್ಲಿ ಗೆಲ್ತಾಳಾ ಸ್ನೇಹಾ?

By ಪೂರ್ವ

ಸ್ನೇಹಾಗೆ ಇದೀಗ ಮನೆಯಲ್ಲಿರುವುದು ಸಿಂಗಾರಮ್ಮ ಎಂಬ ವಿಚಾರ ಇದೀಗ ತಿಳಿಯಿತು. ಸಿಂಗಾರಮ್ಮನೇ ಬಂಗಾರಮ್ಮ ಎಂದು ಹೇಳಿಕೊಂಡು ಯಾಕೆ ಮನೆಗೆ ಬಂದಿದ್ದಾರೆ ಎನ್ನುವುದೇ ಸ್ನೇಹಾ ಪ್ರಶ್ನೆಯಾಗಿದೆ. ಸ್ನೇಹಾ, ಸಿಂಗಾರಮ್ಮನ ಬಳಿ ಮಾತನಾಡಲು ಶುರುಮಾಡುತ್ತಾಳೆ. ಮೊದಲು ಅತ್ತೆಯೆಂದು ಶುರು ಮಾಡಿದ ಸ್ನೇಹಾ, ಅದಾದ ಬಳಿಕ ಸಿಂಗಾರಮ್ಮ ಎಂದೇ ಕರೆಯುತ್ತಾಳೆ. ಆಕೆಗೆ ತನ್ನ ಜೊತೆ ಇರುವುದು ಸಿಂಗಾರಮ್ಮ. ಹಾಗಾದರೆ ಅತ್ತೆ ಎಲ್ಲಿದ್ದಾರೆ? ಎನ್ನುವುದು ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ. ಈಗ ಅತ್ತೆಯ ಹುಡುಕಾಟದಲ್ಲಿ ಸ್ನೇಹಾ ಇದ್ದಾಳೆ.

ಸಿಂಗಾರಮ್ಮನ ಬಳಿ ಬಹಳಷ್ಟು ಬಾರಿ ತನ್ನ ಅತ್ತೆ ಎಲ್ಲಿ ಅಂತ ಪ್ರಶ್ನೆ ಮಾಡಿರುತ್ತಾಳೆ. ಆದರೆ, ಸಿಂಗಾರಮ್ಮ ಅದು ಯಾವುದಕ್ಕೂ ಉತ್ತರ ಕೊಡುವುದಿಲ್ಲ. ಒಂದು ವೇಳೆ ನಾನು ನಿಮ್ಮ ಅತ್ತೆಯಲ್ಲ ಸಿಂಗಾರಮ್ಮ ಎಂದು ಎಲ್ಲರಿಗೂ ತಿಳಿದರೆ ಖಂಡಿತವಾಗಿಯೂ ನಾನು ಬಂಗಾರಮ್ಮನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಸಿಂಗಾರಮ್ಮ ಬೆದರಿಕೆಯನ್ನು ಕೂಡ ಹಾಕಿರುತ್ತಾಳೆ. ಇದರಿಂದಾಗಿ ಸ್ನೇಹಾ ಯಾರ ಬಳಿ ಕೂಡ ಏನು ಹೇಳಲಾಗದೆ ಸುಮ್ಮನಿದ್ದು ಬಿಡುತ್ತಾಳೆ. ತಾಯಿ ಎಂದು ತಿಳಿದು ಸಿಂಗಾರಮ್ಮನ ಬಳಿಯೇ ಅವ್ವ ನಿನ್ನ ಬಗ್ಗೆ ತುಚ್ಚವಾಗಿ ಮಾತನಾಡಿದವರನ್ನು ನಾನು ಕರೆದುಕೊಂಡು ಬಂದಿದ್ದೇನೆ. ನಿನ್ನ ಕಾಲಿಗೆ ಬಿದ್ದು ಇವರು ಕ್ಷಮೆ ಕೇಳಬೇಕು ಎಂದು ಹೇಳಿ ಬಂಗಾರಮ್ಮನ ಬಗ್ಗೆ ತುಚ್ಚವಾಗಿ ಮಾತನಾಡಿದವರನ್ನು ಆಕೆಯ ಕಾಲು ಮುಟ್ಟಿ ನಮಸ್ಕಾರ ಮಾಡುವವರೆಗೂ ಬಿಟ್ಟಿರಲಿಲ್ಲ.

Puttakkana Makkalu serial October 10th episode update

ಆದರೆ ತನ್ನ ಮನೆಯಲ್ಲಿ ಇರುವವರು ತನ್ನ ತಾಯಿಯ ಅಲ್ಲ. ಆಕೆ ಸಿಂಗಾರಮ್ಮ ಎಂದು ತಿಳಿದರೆ ಕಂಠಿಗೆ ಮಾತ್ರ ದುಃಖ ಆಗುವುದು ಖಚಿತ. ಅದೆಲ್ಲವನ್ನು ತಿಳಿದುಕೊಳ್ಳದ ಕಂಠಿ ಅವ್ವ ಎಂದೇ ಅಂದುಕೊಂಡಿದ್ದಾನೆ. ಹಾಗೆಯೇ ಆತನಿಗೆ ತನ್ನ ತಾಯಿ ಹೇಳಿದ್ದನ್ನು ಚಾಚೂ ತಪ್ಪದೆ ಕೇಳುತ್ತಾನೆ. ಅದೇ ಪ್ರೀತಿ ಸಿಂಗಾರಮ್ಮನನ್ನು ಕೂಡ ತನ್ನ ತಾಯಿ ಎಂದು ಅಂದುಕೊಂಡು ಆಕೆ ಹೇಳಿದ್ದಾನೆ ಚಾಚೂ ತಪ್ಪದೆ ಕೇಳುತ್ತಾನೆ. ಹಾಗೆಯೇ ಜನ ಅವರ ಬಗ್ಗೆ ಯಾರು ಏನೇ ಹೇಳಿದರೂ ಕೂಡ ಆತ ಖಂಡಿತವಾಗಿಯೂ ಸುಮ್ಮನಿರುವುದಿಲ್ಲ ಎನ್ನುವುದು ಎಲ್ಲರಿಗೂ ಕೂಡ ತಿಳಿದಿದೆ.

ಕಂಠಿಗೆ ಏನೂ ಹೇಳದ ಸ್ನೇಹಾ

ಸ್ನೇಹಾ ಕಂಠಿಯ ಜೊತೆಗೆ ಸಿಂಗಾರಮ್ಮನ ಬಗ್ಗೆ ಒಂದು ಮಾತನ್ನು ಕೂಡ ಹೇಳುವುದಿಲ್ಲ. ಯಾಕೆಂದರೆ ಆತನಿಗೆ ಸಿಂಗಾರಮ್ಮ ಬಂಗಾರಮ್ಮಗೆ ಏನಾದರು ತೊಂದರೆ ಮಾಡಿ ಬಿಟ್ಟರೆ ಎನ್ನುವ ಭಯದಲ್ಲಿ ಸ್ನೇಹಾ ಇರುತ್ತಾಳೆ. ತನ್ನ ಅತ್ತೆಯೆಂದರೆ ಬಹಳ ಪ್ರೀತಿ ಇರುತ್ತದೆ. ತನ್ನ ಅತ್ತೆಗೆ ಏನು ಆಗಬಾರದು. ಆಕೆ ಸೇಫ್ ಆಗಿ ಮನೆಗೆ ಬರಬೇಕು ಎನ್ನುವ ಯೋಚನೆ ಇರುತ್ತದೆ. ಇನ್ನು ಸ್ನೇಹಾ ತನ್ನ ಅತ್ತೆಗಾಗಿ ಬಹಳ ಹುಡುಕಾಟ ನಡೆಸುತ್ತಾಳೆ. ತನ್ನ ಅತ್ತೆಯನ್ನು ಹುಡುಕದ ಜಾಗಗಳೇ ಇರದು. ಕೊನೆಗೆ ಸಿಂಗಾರಮ್ಮನ ಫೋನನ್ನು ಸ್ನೇಹಾ ಟ್ರಾಪ್ ಮಾಡಿಸುತ್ತಾಳೆ. ಹಾಗೆಯೇ ಯಾರಿಗೆ ಯಾವಾಗ ಎಷ್ಟೊತ್ತಿಗೆ ಫೋನ್ ಹೋಗಿದೆ ಎನ್ನುವುದನ್ನು ಕೂಡ ತೆಗೆದುಕೊಂಡು ಆ ಪ್ರಕಾರವಾಗಿ ಸ್ನೇಹಾ ತನ್ನ ಅತ್ತೆಯ ಹುಡುಕಾಡಲು ಶುರು ಮಾಡುತ್ತಾರೆ.

Puttakkana Makkalu serial October 10th episode update

ಬಂಗಾರಮ್ಮನ ಸುಳಿವು ಸಿಗುತ್ತಾ?

ಇನ್ನು ಸ್ನೇಹಾಗೆ ಅತ್ತೆಯನ್ನು ಹೇಗಾದರೂ ಮಾಡಿ ಹುಡುಕಲೇಬೇಕು ಎನ್ನುವ ಯೋಚನೆ ಇರುತ್ತದೆ. ಹಾಗೆ ಅತ್ತೆಯ ಜೀವಕ್ಕೆ ಯಾವುದೇ ರೀತಿಯ ತೊಂದರೆ ಆಗಬಾರದು ಎಂದು ಕೂಡ ಅಂದುಕೊಂಡಿರುತ್ತಾಳೆ. ಸಿಂಗಾರಮ್ಮನ ಬಹಳ ನಿಗೂಢವಾದ ಪ್ರದೇಶದಲ್ಲಿ ಅಡಗಿಸಿಟ್ಟುರುತ್ತಾಳೆ. ಬಂಗಾರಮ್ಮನ ಹೆಸರು ಹೇಳಿಕೊಂಡು ಸಿಂಗಾರಮ್ಮ ಇಲ್ಲ ಸಲ್ಲದ ಕೆಟ್ಟ ಕೆಲಸಗಳನ್ನು ಮಾಡುತ್ತಿರುತ್ತಾಳೆ. ಇದೀಗ ಸ್ನೇಹಾ ತನ್ನ ಅತ್ತೆಯ ಹುಡುಕಾಟದಲ್ಲಿದ್ದಾಳೆ. ಆಕೆಗೆ ಬಂಗಾರಮ್ಮ ಖಂಡಿತವಾಗಿ ಸಿಕ್ಕೇ ಸಿಗುತ್ತಾರೆ ಎನ್ನುವುದು ವೀಕ್ಷಕರ ಅಭಿಪ್ರಾಯ.

More from Filmibeat

English summary
Puttakkana Makkalu serial October 10th episode update:
Read more about: serial poorva filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X