Puttakkana Makkalu:ಸಿಂಗಾರಮ್ಮನ ಬಗ್ಗೆ ಸ್ನೇಹಾಗೆ ತಿಳಿಯಿತು? ತಕ್ಕ ಪಾಠ ಕಲಿಸುತ್ತಾಳಾ ಸ್ನೇಹಾ?
ಸಿಂಗಾರಮ್ಮ ಏನೇ ಮಾಡಿದರೂ ಕೂಡಾ ಅದು ಸರಿ ಎಂದು ಎಲ್ಲರೂ ಅಂದುಕೊಂಡಿದ್ದರು. ಯಾಕೆಂದರೆ, ಆಕೆಯನ್ನು ಯಾರು ಸಿಂಗಾರಮ್ಮ ಎಂದುಕೊಂಡಿರಲಿಲ್ಲ. ಆಕೆಯನ್ನು ಎಲ್ಲರೂ ಬಂಗಾರಮ್ಮ ಎಂದೇ ಅಂದುಕೊಂಡು ಇದ್ದರೂ, ಮನೆಯಲ್ಲಿಯೇ ದುಷ್ಟರನ್ನು ಇಟ್ಟುಕೊಂಡಿರುವ ಕಂಠಿಗೆ ತನ್ನ ಬಗ್ಗೆ ಯಾರು ಸಂಚು ರೂಪಿಸಿದ್ದಾರೆ ಎನ್ನುವುದು ಮಾತ್ರ ತಿಳಿಯಬೇಕಾಗಿದೆ. ಸಿಂಗಾರಮ್ಮ ತಾನು ಏನೇ ಮಾಡಿದರು ಕೂಡ ಅದನ್ನು ಯಾರು ಪ್ರಶ್ನೆ ಮಾಡಲ್ಲ ಎನ್ನುವ ಭರವಸೆ. ಆದರೂ ಕೂಡಾ ಮನದಲ್ಲಿ ಭಯ ಕಾಡುತ್ತಿದೆ.
ಇನ್ನು ಮೈಸೂರಿನಿಂದ ಬಂದ ಇಬ್ಬರು ತಂದೆ ಮಗಳು ಬಹಳ ದೊಡ್ಡ ಆಪತ್ತಿನಿಂದ ದೂರವಾಗಿದ್ದಾರೆ. ಇದಕ್ಕೆಲ್ಲ ಪುಟ್ಟಕ್ಕನೇ ಕಾರಣ. ಸಿಂಗಾರಮ್ಮ ಸಂಚು ಮಾಡಿ ಆ ಅಪ್ಪ ಮಗಳನ್ನು ರೌಡಿಯ ಕೈಗೆ ಒಪ್ಪಿಸಲು ಕರೆದುಕೊಂಡು ಹೋಗುತ್ತಿದ್ದರೆ, ಇತ್ತ ಸ್ನೇಹಾ "ಅವ್ವ ನಮ್ಮ ಮನೆಯಲ್ಲಿ ಬಂದಿರುವಂತಹ ಅಪ್ಪ, ಮಗಳನ್ನ ಬಹಳ ಜಾಗೃತೆಯಿಂದ ನೀನು ನೋಡಿಕೋ. ಯಾಕೆಂದರೆ ಅವರ ಹಿಂದೆ ಬಹಳ ದೊಡ್ಡ ಕಥೆ ಇದೆ. ಅದನ್ನು ನಿನಗೆ ನಾನು ಮನೆಗೆ ಬಂದು ಹೇಳುತ್ತೇನೆ. ಆದರೆ ಇದೀಗ ನೀನು ನನ್ನ ಮಾತನ್ನು ಕೇಳು ಅವರಿಬ್ಬರನ್ನು ತುಂಬಾ ಚೆನ್ನಾಗಿ ನೋಡಿಕೋ" ಎಂದು ಹೇಳುತ್ತಾಳೆ.

ಆ ಕೂಡಲೇ ಪುಟ್ಟಕ್ಕಗೆ ಸಿಂಗಾರಮ್ಮ ಅವರಿಬ್ಬರನ್ನು ಕರೆದುಕೊಂಡು ಹೋಗಲು ಬಂದಿರುವ ವಿಚಾರ ತಿಳಿಯುತ್ತದೆ. ಹಾಗೆಯೆ ಸ್ನೇಹಾ ಹೇಳಿದ ಮಾತನ್ನು ಕೂಡ ಆಕೆ ಕೇಳಬೇಕಾಗುತ್ತದೆ. ಆ ಕೂಡಲೇ ಪುಟ್ಟಕ್ಕ, ಸಿಂಗಾರಮ್ಮನ ಜೊತೆ ಅಪ್ಪ ಮಗಳನ್ನು ಕಳುಹಿಸಿ ಕೊಡಲು ಹಿಂದೇಟು ಹಾಕುತ್ತಾಳೆ ಪುಟ್ಟಕ್ಕ. ಇದನ್ನು ನೋಡಿದ ಬಂಗಾರಮ್ಮನ ರೂಪದಲ್ಲಿರುವ ಸಿಂಗಾರಮ್ಮಗೆ ಬಹಳ ಶಾಕ್ ಆಗುತ್ತದೆ. ಏನು ಮಾಡಬೇಕು ತಿಳಿಯದೇ ಕಂಗಾಲಾಗಿ ಹೋಗುತ್ತಾಳೆ.
ಅಪ್ಪ, ಮಗಳನ್ನು ಕಾಪಾಡಿದ ಸ್ನೇಹಾ
ಅಪ್ಪ, ಮಗಳನ್ನು ಅವರಿಬ್ಬರನ್ನು ಪುಟ್ಟಕ್ಕ ಬಳಿ ಬಿಟ್ಟು ಹೋಗುತ್ತಾಳೆ. ಹಾಗೆಯೇ ಅಪ್ಪ ಮಗಳಿಗೆ ನಿರಾಳವಾಗುತ್ತದೆ. ನಾವು ಸರಿಯಾದ ಜಾಗದಲ್ಲಿ ಇದ್ದೇವೆ ಎನ್ನುವ ವಿಚಾರ ಅವರಿಬ್ಬರಿಗೂ ತಿಳಿಯುತ್ತದೆ. ಇನ್ನು ಸ್ನೇಹಾಗೆ ಒಬ್ಬ ಕಾನ್‌ಸ್ಟೇಬಲ್ ಕರೆ ಮಾಡಿ "ಮೇಡಂ ನಿಮ್ಮ ಮನೆಯಲ್ಲಿ ಇರುವುದು ಸಿಂಗಾರಮ್ಮ. ಅದಕ್ಕೆ ಇರುವ ಪ್ರೂಫ್ ನನ್ನ ಬಳಿ ಇದೆ" ಎಂದು ಹೇಳುತ್ತಾನೆ. ಇದನ್ನು ಕೇಳಿದ ಸ್ನೇಹಾಗೆ ಶಾಕ್ ಆಗುತ್ತದೆ.

ಸ್ನೇಹಾಗೆ ಸಿಂಗಾರಮ್ಮನ ಮೇಲೆ ಮೂಡಿದೆ ಅನುಮಾನ
ಸ್ನೇಹಾಗೆ ಏನು ಮಾಡಬೇಕು ಎಂದು ತಿಳಿಯದೇ ಬಹಳ ಗೊಂದಲದಲ್ಲಿ ಸಿಲುಕಿಕೊಳ್ಳುತ್ತಾಳೆ. ಕೊನೆಗೆ ಆ ಕಾನ್‌ಸ್ಟೇಬಲ್ ಅನ್ನು ಮೀಟ್ ಆಗುತ್ತಾಳೆ. ಆತನ ಬಳಿ ಎಲ್ಲಾ ವಿಚಾರಗಳನ್ನು ಕಲೆಕ್ಟ್ ಮಾಡಿಕೊಳ್ಳುತ್ತಾಳೆ. ಹಾಗೆ ಸಹನಾ ಹೇಳಿದ ಪ್ರಕಾರ ಆ ಕಾನ್‌ಸ್ಟೇಬಲ್ ನಡೆದುಕೊಳ್ಳುತ್ತಾರೆ. ಇನ್ನು ಸ್ನೇಹಾಗೆ ಎಲ್ಲಾ ವಿಚಾರವನ್ನು ಹೇಳುತ್ತಾರೆ. ಹಾಗೆಯೇ ಸಿಂಗಾರಮ್ಮನ ಫೋಟೋ ತೋರಿಸಿ ಇವರೇ ಸಿಂಗಾರಮ್ಮ ಎಂದು ಹೇಳುತ್ತಾರೆ. ಇನ್ನೂ ಸ್ನೇಹಾಗೆ ಸಿಂಗಾರಮ್ಮ ಹಾಗೂ ಬಂಗಾರಮ್ಮ ಒಂದೇ ರೀತಿ ಇರುವುದಾದರೂ ಹೇಗೆ? ಸಿಂಗಾರಮ್ಮ ಯಾಕೆ ನಮ್ಮ ಮನೆಗೆ ಎಂಟ್ರಿ ನೀಡಿದ್ದಾರೆ ಎಂದೆಲ್ಲ ಸ್ನೇಹಾಗೆ ಪ್ರಶ್ನೆ ಮೂಡಿದೆ.


Click it and Unblock the Notifications











