Puttakkana Makkalu:ಅತ್ತೆಯನ್ನು ತರಾಟೆಗೆ ತೆಗೆದುಕೊಂಡ ಸ್ನೇಹಾ; ಸಿಂಗಾರಮ್ಮನಿಂದಾ ಅಪಾಯ ಕಾದಿದ್ಯಾ?

By ಪೂರ್ವ

ಪುಟ್ಟಕ್ಕ ಬಹಳ ಕಷ್ಟ ಪಟ್ಟು ತನ್ನ ಮಕ್ಕಳನ್ನು ಸಾಕಿ ಸಲಹಿ ಮಕ್ಕಳನ್ನು ಉತ್ತಮ ಸ್ಥಾನಕ್ಕೆ ಕರೆದುಕೊಂಡು ಬಂದಿದ್ದಾಳೆ. "ಪುಟ್ಟಕ್ಕನ ಮನೆಗೆ ಕೂಡ ಬಹಳ ದೊಡ್ಡ ಆಪತ್ತು ಕಾದಿದೆ. ಹೀಗಂತ ಪುಟ್ಟಕ್ಕಗೆ ಜೋಗಿತಿಯವ್ವ ಹೇಳಿದ್ದಾರೆ. ಪುಟ್ಟಕ್ಕನ ಮನೆಯೊಳಗೆ ಹುಲಿ ರೂಪದ ಹಸು ಸೇರಿಕೊಂಡಿದೆ. ನೀನು ಬಹಳ ಎಚ್ಚರದಿಂದ ಇರಬೇಕು. ಇಲ್ಲವಾದರೆ ನಿನ್ನ ಸಂಸಾರಕ್ಕೆ ಏನಾದರೂ ತೊಂದರೆ ಆಗುವ ಎಲ್ಲ ಲಕ್ಷಣ ಕಾಣಿಸುತ್ತಿದೆ" ಎಂದೆಲ್ಲ ಹೇಳಿದಾಗ ಪುಟ್ಟಕ್ಕಗೆ ಆತಂಕ ಆಗುತ್ತದೆ. ಇತ್ತ ಗೋಪಾಲ ಜೋಗಿತಿಯವ್ವಗೆ ತಂಪು ಪಾನಿಯ ಕೊಡಲು ಹೋಗುತ್ತಾನೆ.

ಆದರೆ, ಜೋಗಿತಿಯವ್ವ ಅದನ್ನು ತೆಗೆದುಕೊಳ್ಳಲು ಹೋಗುವುದಿಲ್ಲ. ಮನೆ ಹೊತ್ತು ಉರಿಯುತ್ತಿರುವಾಗ ಇದೆಲ್ಲಾ ನನಗೆ ಬೇಡ ಎಂದು ಹೇಳಿ ಅಲ್ಲಿಂದ ಹೋಗುತ್ತಾರೆ. ಇತ್ತ ಸುಮಾಗೆ ಆಕೆಯ ಬಾಯ್ ಫ್ರೆಂಡ್ ನೋಡಿಲ್ಲ ಎನ್ನುವ ಬೇಸರ. ಆತ ಒಂದು ದಿನ ಕಾಲೇಜಿಗೆ ಬಾರದಿದ್ದ ಕಾರಣಕ್ಕೆ ಸುಮಾ ಕೊಂಚ ಆತಂಕಕ್ಕೆ ಒಳಗಾಗಿದ್ದಾರೆ. ಪುರುಷೋತ್ತಮ ಅದೆಷ್ಟೇ ಸಮಾಧಾನ ಹೇಳಿದರೂ, ಸುಮಾ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಇನ್ನು ಪುರುಷೋತ್ತಮ ದಾರಿಯಲ್ಲಿ ನಡೆದುಕೊಂಡು ಬರಬೇಕಾದರೆ ಕಂಠಿ ಅಲ್ಲಿಗೆ ಬರುತ್ತಾನೆ.

Puttakkana Makkalu serial October 5th episode update

ಕಂಠಿಯನ್ನೂ ನೋಡಿದ ಬಳಿಕ ಪುರುಷೋತ್ತಮ ಮಾತನಾಡಿಸುತ್ತಾನೆ. ಹಾಗೆಯೇ ಕಂಠಿ ತನ್ನ ಗಾಡಿಯಲ್ಲಿ ಬರುವಂತೆ ಹೇಳಿದಾಗ ಪುರುಷೋತ್ತಮ ಆಯಿತು ಎಂದು ತನ್ನ ಭಾವನ ಜೊತೆಗೆ ಹೋಗುತ್ತಾನೆ. ದಾರಿಯಲ್ಲಿ ಬರಬೇಕಾದರೆ ಸ್ನೇಹಾ ಫೋಟೋ ಕೆಳಗೆ ಬಿದ್ದಿರುತ್ತದೆ. ಅದನ್ನು ಮತ್ತೆ ಸರಿ ಮಾಡಿ ಕಟ್ಟಿ ಅಲ್ಲಿಂದ ಹೊರಡಬೇಕು ಎನ್ನುವಷ್ಟರಲ್ಲಿ ಅಲ್ಲಿಗೆ ಜೋಗಿತಿಯವ್ವ ಬಂದು ಎಚ್ಚರಿಕೆಯನ್ನು ನೀಡಿ ಅಲ್ಲಿಂದ ಹೋಗುತ್ತಾರೆ. ಇದೆಲ್ಲವನ್ನೂ ನೋಡಿದ ಕಂಠಿಗೆ ಬಹಳ ಆತಂಕ ಆಗುತ್ತದೆ. ಇನ್ನು ಸ್ನೇಹಾ ಬಳಿ ಬಂದ ಮೇಷ್ಟ್ರು ತನಗಾದ ಹಿಂಸಾಚಾರವನ್ನು ಹೇಳಿಕೊಂಡಿದ್ದಾರೆ.

ಸ್ನೇಹ ಬಳಿ ದುಃಖ ತೋಡಿಕೊಂಡ ಮೇಷ್ಟ್ರು

"ಬಂಗಾರಮ್ಮ ಅವರು ಬಹಳ ಹಿಂಸೆ ಮಾಡಿ ನನ್ನ ಕೈಯಿಂದ ಆಸ್ತಿಯನ್ನು ಆಕೆಯ ಹೆಸರಿಗೆ ಮಾಡಿಕೊಂಡಿದ್ದಾರೆ" ಎಂದು ಹೇಳುತ್ತಾಳೆ. ಇದನ್ನು ಕೇಳಿದ ಸ್ನೇಹಾಗೆ ಬಹಳ ಶಾಕ್ ಆಗುತ್ತೆ. ಎಲ್ಲರೂ ಹೇಳಿದ ಹಾಗೆ ಬಂಗಾರಮ್ಮ ನಮ್ಮ ಜೊತೆ ಇಲ್ಲ. ಇಲ್ಲಿ ಇರುವುದು ಸಿಂಗಾರಮ್ಮ. ಇದೆಲ್ಲ ಹೇಗೆ ಸಾಧ್ಯ? ಎಂದೆಲ್ಲ ತನ್ನನ್ನು ತಾನು ಅಂದುಕೊಳ್ಳುತ್ತಿದ್ದಾರೆ. ಇನ್ನು ಸ್ನೇಹಾಗೆ ಏನು ಮಾಡಬೇಕು ಎಂದು ತಿಳಿಯದಾಗುತ್ತೆ. ಇತ್ತೀಚೆಗಿನ ದಿನಗಳಲ್ಲಿ ಅತ್ತೆಯ ಸ್ವಭಾವ ಬದಲಾದ ಹಾಗೆ ಕಾಣಿಸುತ್ತಿತ್ತು. ಆದರೆ ಇದೀಗ ನಮ್ಮ ಜೊತೆ ಇರುವುದು ಅತ್ತೆ ಅಲ್ಲವೇ ಅಲ್ಲ. ಇನ್ನು ಅತ್ತೆ ಯಾವತ್ತೂ ಮೇಷ್ಟ್ರ ಬಳಿ ಹಾಗೆಲ್ಲ ನಡೆದುಕೊಂಡವರೆ ಅಲ್ಲ ಎಂದು ಮನದಲ್ಲಿ ಅಂದುಕೊಳ್ಳುತ್ತಾರೆ.

Puttakkana Makkalu serial October 5th episode update

ಅತ್ತೆ ಬಗ್ಗೆ ಸ್ನೇಹಾ ವಿಚಾರಣೆ

ಇನ್ನೂ ಸ್ನೇಹಾ ಮೇಷ್ಟ್ರುಗೆ ಸಮಾಧಾನ ಮಾಡುತ್ತಾಳೆ. ಸ್ನೇಹಾ ಮನೆಗೆ ಹೋದ ಬಳಿಕ ಅತ್ತೆಯ ಬಳಿ ಮೇಷ್ಟ್ರ ಜಾಗದ ಕಬಳಿಕೆ ಬಗ್ಗೆ ಅತ್ತೆಯ ಬಳಿ ವಿಚಾರಣೆ ಮಾಡಿ ಆಕೆಯನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಮೇಷ್ಟ್ರುಗೆ ಹಿಗ್ಗಾ ಮುಗ್ಗಾ ಥಳಿಸಿ ಅವರ ಜೀವಕ್ಕೆ ಕುತ್ತು ಬರುವ ಹಾಗೆ ಮಾಡಿ ಅವರ ಆಸ್ತಿಯನ್ನು ಕಬಳಿಸಿದ್ದಾರೆ. ಇದರಲ್ಲಿ ನಿಮ್ಮದು ಪಾಲು ಇದೆ ಅತ್ತೆ ಎಂದು ಸ್ನೇಹಾ ಹೇಳುತ್ತಾಳೆ. ಇದನ್ನು ಕೇಳಿದ ಸಿಂಗಾರಮ್ಮ ಗಾಬರಿ ಆಗುತ್ತಾರೆ.

More from Filmibeat

English summary
Puttakkana Makkalu serial October 5th episode update
Read more about: serial poorva filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X