Puttakkana Makkalu: ಹಳ್ಳಿ ಹುಡುಗಿ ಅಂದುಕೊಂಡ್ರೆ ಏನಿದು ಲುಕ್..? ಪುಟ್ಟಕ್ಕನ ಮಗಳಿಗೆ ಪ್ರಶ್ನೆಗಳ ಸುರಿಮಳೆ..!
'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ನಂಬರ್ ಒನ್ ಸ್ಥಾನವನ್ನು ಹಾಗೇ ಕಾಪಾಡಿಕೊಂಡು ಬಂದಿದೆ. ಯಾಕಂದ್ರೆ ಮಧ್ಯಮ ವರ್ಗದ ಜನರನ್ನು ಆ ಧಾರಾವಾಹಿ ಅಷ್ಟರಮಟ್ಟಿಗೆ ಹಿಡಿದಿಟ್ಟಿದೆ. ನಮ್ಮದೇ ಮನೆಯ ಕಥೆ ಏನೋ ಎಂಬಂತೆ ಎಲ್ಲರೂ ಫೀಲ್ ಮಾಡುತ್ತಾರೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿ ಇರುವುದೇ ಹಾಗೆ.
ಸದ್ಯ ಪುಟ್ಟಕ್ಕ ತನಗಿದ್ದ ದೊಡ್ಡ ಕನಸೊಂದನ್ನು ಈಡೇರಿಸಿಕೊಂಡಿದ್ದಾಗಿದೆ. ಮೊದಲ ಮಗಳ ಮದುವೆ ಮಾಡಬೇಕೆಂದುಕೊಂಡಿದ್ದ ಪುಟ್ಟಕ್ಕನ ಕನಸು ಸದ್ಯ ಈಡೇರಿದೆ. ಅದರಲ್ಲೂ ಸಹನಾ ಕೂಡ ತಾನಿಷ್ಟ ಪಟ್ಟ ಹುಡುಗನ ಜೊತೆಗೆ ಹಸೆಮಣೆ ಏರಿದ್ದಾಳೆ. ಗಂಡನ ಮನೆಗೆ ಹೋಗುವಾಗ ಮನೆಯವರಿಗೆ ಮಾತ್ರವಲ್ಲ ನೋಡುಗರ ಕಣ್ಣು ನೀರಾಗುವಂತೆ ಮಾಡಿದ್ದಳು.

ಸಹನಾ ಅಂದ್ರೆ ಟ್ರೆಡಿಷನಲ್
'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಮೂರು ಮಕ್ಕಳನ್ನು ನೋಡುವುದೆಂದರೆ ಖುಷಿ. ಹಳ್ಳಿ ಸೊಗಡಿನ ಕಥೆಯಾಗಿರುವ ಕಾರಣ ಹಳ್ಳಿ ರೀತಿಯ ಬದುಕನ್ನೇ ತೋರಿಸಿದ್ದರು. ಸಹನಾ ಅಂತು ಸೀರೆ ಬಿಟ್ಟರೆ ಸೀರಿಯಲ್‌ನಲ್ಲಿ ಬೇರೆ ಯಾವ ಡ್ರೆಸ್ ಕೂಡ ಬಳಸಿಲ್ಲ. ಸಣ್ಣಗೆ ಇದ್ದ ಕಾರಣ ಸಹನಾಗೆ ಸೀರೆ ಇನ್ನಷ್ಟು ಸೌಂದರ್ಯ ಹೆಚ್ಚಿಸಿತ್ತು. ಸದಾ ನಗು ಮುಖದಲ್ಲಿ, ನಾಚಿಕೆಯ ಸ್ವಭಾವ ಹೊಂದಿದ್ದ ಸಹನಾಗೆ ನೋಡಿದವರು ಫಿದಾ ಆಗದೆ ಇರುತ್ತಿರಲಿಲ್ಲ. ಎಲ್ಲರೂ ವಾವ್ ಇಂತೊಬ್ಬ ಹುಡುಗಿ ಸಿಕ್ಕರೆ ಎಂಬ ಆಸೆಯಲ್ಲಿಯೇ ಕನಸು ಕಾಣ್ತಾ ಇದ್ರು.

ಮುರುಳಿ ಕೈ ಹಿಡಿದ ಸಹನಾ..!
ಸಹನಾ ಮುಗ್ಧ ಹುಡುಗಿ. ಆ ರೀತಿಯ ಸ್ವಭಾವ ಇರುವ ಹುಡುಗಿ ಸಿಗ್ತಾಳ ಎಂಬ ನಂಬಿಕೆ ಅಂತು ಹುಡುಗರಿಗೆ ಇರುವುದು ಕಷ್ಟ. ಧಾರಾವಾಹಿಯಲ್ಲಿ ಅಷ್ಟೊಂದು ಸೈಲೆಂಟ್ ಇರುವ ಸಹನಾ ಈಗ ಮದುವೆಯಾಗಿ ಗಂಡನ ಮನೆಗೆ ಹೋಗಿದ್ದಾಳೆ. ಅದು ತಾನಿಷ್ಟಪಟ್ಟಂತೆ ಮುರುಳಿ ಮೇಷ್ಟ್ರನ್ನೇ ಮದುವೆಯಾಗಿ ಹೋಗಿದ್ದಾಳೆ. ಆದ್ರೆ ಸಹನಾಳ ಮೃದು ಸ್ವಭಾವಕ್ಕೆ ಘಾಟಿ ಅತ್ತೆ ಸಿಕ್ಕಿದ್ದು, ಈಗಾಗಲೇ ಕಿರುಕುಳ ಕೊಡುವುದಕ್ಕೆ ಶುರು ಮಾಡಿದ್ದಾಳೆ. ಆದ್ರೆ ಅತ್ತೆಯ ಘಾಟಿತನ ಗೆಲ್ಲುತ್ತೋ, ಇಲ್ಲ ಸೊಸೆಯ ಒಳ್ಳೆತನ ಗೆಲ್ಲುತ್ತೋ ಎಂಬುದನ್ನು ನೋಡುವುದಕ್ಕೆ ಜನ ಕೂಡ ಕಾಯ್ತಾ ಇದ್ದಾರೆ.

ಸಹನಾಳ ರಿಯಲ್ ಲೈಫೇ ಬೇರೆ
'ಪುಟ್ಟಕ್ಕನ ಮಗಳು' ಸಹನಾ ಎಂದಾಕ್ಷಣಾ ಎಲ್ಲರಿಗೂ ಒಂದು ರೀತಿಯಾದ ಟ್ರೆಡಿಷನಲ್ ಲುಕ್ ಕಣ್ಣೆದುರಿಗೆ ಬರುತ್ತದೆ. ಆ ಲುಕ್‌ನಲ್ಲಿಯೇ ಸಹನಾಳನ್ನು ನೋಡಿ ನೋಡಿ ಅಭ್ಯಾಸವಾಗಿ ಹೋಗಿದೆ. ಈಗ ಸೋಶಿಯಲ್ ಮೀಡಿಯಾ ಕೂಡ ಸ್ಟ್ರಾಂಗ್ ಆಗಿರುವುದಕ್ಕೆ ನಟ - ನಟಿಯರ ರಿಯಲ್ ಲೈಫ್ ಏನು ಎಂಬುದು ಗೊತ್ತಾಗುತ್ತದೆ. ಈಗ ಸಹನಾ ಅಲಿಯಾಸ್ ಅಕ್ಷರಾ ಕೂಡ ರಿಯಲ್ ಲೈಫ್‌ನಲ್ಲಿ ಹೇಗಿರ್ತಾರೆ ಎಂಬುದು ಎಲ್ಲರಿಗೂ ಗೊತ್ತಿದೆ.

ಪುಟ್ಟಕ್ಕನ ಮಗಳನ್ನು ಕಂಡು ಶಾಕ್ ಆದ ಮಂದಿ
ಪುಟ್ಟಕ್ಕನ ಮಗಳು ಸಹನಾಳನ್ನು ಇಷ್ಟು ದಿನ ಟ್ರೆಡಿಷನಲ್ ಲುಕ್‌ನಲ್ಲಿ ನೋಡಿ ಫುಲ್ ಖುಷಿಯಾಗಿದ್ದರು. ಅಕ್ಷರಾ ರಿಯಲ್ ಲೈಫ್‌ನಲ್ಲಿ ಇರುವುದು ಧಾರಾವಾಹಿಯ ಸಹನಾ ಪಾತ್ರಕ್ಕೆ ವಿರುದ್ಧವಾಗಿಯೇ. ಅವರ ಸೋಶಿಯಲ್ ಮೀಡಿಯಾ ಫಾಲೋ ಮಾಡಿದ್ರೇನೆ ಗೊತ್ತಾಗುತ್ತೆ. ಆದ್ರೆ ಆ ಪಾತ್ರಕ್ಕೆ ತಕ್ಕಂತ ಮುಗ್ಧತೆ ಸಹನಾ ಅವರಲ್ಲಿ ಇದೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಹೊಸದೊಂದು ಫೋಟೋ ಹಂಚಿಕೊಂಡಿದ್ದು, ಅದಕ್ಕೆ ತರಹೇವಾರಿ ಕಮೆಂಟ್ಸ್ ಬರುತ್ತಿವೆ. ಹಳ್ಳಿ ಅವ್ವಿ ಅಂದ್ಕೊಂಡ್ರೆ ಏನ್ರಿ ಇದು, ದಸರಾ ಗೊಂಬೆ ಹೀಗೆ ಹಲವು ಕಮೆಂಟ್ಸ್ ಬರುತ್ತಿವೆ.


Click it and Unblock the Notifications











