Puttakkana Makkalu:ಅಕ್ಕನ ರಹಸ್ಯ ಗೊತ್ತಾಗುತ್ತಾ? ಸಹನಾಳನ್ನ ಹುಡುಕುತ್ತಾಳಾ ಸ್ನೇಹಾ?
ಸ್ನೇಹಾಗೆ ಸಹನಾ ಬದುಕಿರುವ ಬಗ್ಗೆ ಆಕೆಗೆ ಅನುಮಾನ ಮೂಡಿದೆ. ಸಿಂಗಾರಮ್ಮನ ಮೇಲೂ ಅನುಮಾನ ಬಂದಿದೆ. ಬಂಗಾರಮ್ಮ ಯಾವತ್ತೂ ಕೂಡ ಆಸ್ತಿ ಪತ್ರವನ್ನು ಮನೆಗೆ ತಂದವರೇ ಅಲ್ಲ. ಅಂತಹದರಲ್ಲಿ ಈಗ ಮನೆಗೆ ಆಸ್ತಿ ಪತ್ರವನ್ನು ಯಾಕೆ ತಂದಿರಬಹುದು ಎನ್ನುವುದು ಸ್ನೇಹಾ ಪ್ರಶ್ನೆ. ಹಾಗೆಯೇ ಸಿಂಗಾರಮ್ಮನ ಬಳಿ ಬಹಳ ಖಡಕ್ಕಾಗಿಯೇ ಸ್ನೇಹಾ "ನಾನು ಇರುವವರಿಗೆ ಈ ಮನೆಯಲ್ಲಿ ಏನು ಆಗಲು ಬಿಡುವುದಿಲ್ಲ" ಎಂದು ಸ್ನೇಹಾ ಹೇಳುತ್ತಾಳೆ. ಆಗ ಸಿಂಗಾರಮ್ಮ ಮಾತ್ರ ಸ್ನೇಹಾ ಮುಖ ನೋಡಿ ಏನೂ ಮಾತನಾಡದೆ ಒಂದು ಮುಗುಳುನಗೆ ಬೀರುತ್ತಾಳೆ.
ಸಿಂಗಾರಮ್ಮನ ಪ್ರತಿಕ್ರಿಯೆಗೆ ಸ್ನೇಹಾ ಮಾತ್ರ ಏನೂ ಮಾತನಾಡದೆ ಸುಮ್ಮನೆ ಇರುತ್ತಾಳೆ. ಆದರೆ, ಕಂಠಿ ಮಾತ್ರ ಹೆಂಡತಿಯ ಮಾತು ಕೇಳಿ ಅಮ್ಮನ ಮುಖವನ್ನು ನೋಡುತ್ತಾನೆ. ಸಿಂಗಾರಮ್ಮಗೆ ಈ ಸ್ನೇಹಾಳದ್ದೇ ದೊಡ್ಡ ತಲೆನೋವಾಗಿದೆ. ಆಕೆಯ ಕಣ್ಣು ತಪ್ಪಿಸಿ ಹೇಗಾದರೂ ಮಾಡಿ ನಾನು ಈ ಆಸ್ತಿಯನ್ನೆಲ್ಲ ಪಟಾಯಿಸಲೇಬೇಕು. ಇಲ್ಲವಾದರೆ ಬಹಳ ಕಷ್ಟವಿದೆ ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾಳೆ.

ಇನ್ನು ಪತ್ರದಲ್ಲಿ ಇರುವ ಬರವಣಿಗೆಯನ್ನು ನೋಡಿ ಸ್ನೇಹಾಗೆ ಅನುಮಾನ ಶುರುವಾಗುತ್ತದೆ. ಈ ಪತ್ರವನ್ನು ಬರೆದವರು ಯಾರು ಎಂದು ತಲೆಗೆ ಹುಳ ಬಿಟ್ಟುಕೊಂಡಿರುತ್ತಾಳೆ. ಆದರೆ, ಕೊನೆಗೆ ಸುಮಾಗೆ ಫೋನ್ ಮಾಡಿ "ಅಕ್ಕ ಟೈಲರಿಂಗ್ ಕ್ಲಾಸಿಗೆ ಹೋಗಿದ್ದಂತಹ ಪುಸ್ತಕ ಅಥವಾ ರೆಸಿಪಿಗಳನ್ನು ಬರೆದಿರುವ ಪುಸ್ತಕ ಏನಾದರೂ ಅಲ್ಲಿ ಇದೆಯಾ" ಎಂದು ಕೇಳುತ್ತಾಳೆ. ಬಳಿಕ ಅದರ ಫೋಟೋವನ್ನು ಕಳುಹಿಸುವಂತೆ ಹೇಳುತ್ತಾಳೆ.
ಸ್ನೇಹಾಗೆ ಅಕ್ಕನದ್ದೇ ಚಿಂತೆ
ಇನ್ನು ಸ್ನೇಹಾ ಮರುದಿನ ಎದ್ದು ನೋಡಿದಾಗ ಸುಮಾ ಅಕ್ಕನ ಹ್ಯಾಂಡ್ ರೈಟಿಂಗ್ ಇರುವ ಫೋಟೋವನ್ನು ಕಳುಹಿಸುತ್ತಾಳೆ. ಸಹನಾ ಪತ್ರ ಬರೆದಿರುವ ಹ್ಯಾಂಡ್ ರೈಟಿಂಗ್ ಹಾಗೂ ಪುಸ್ತಕದಲ್ಲಿದ್ದ ಹ್ಯಾಂಡ್ ರೈಟಿಂಗ್ ಒಂದೇ ರೀತಿಯಲ್ಲಿ ಇರುವುದರಿಂದ ಸ್ನೇಹಾಗೆ ಇನ್ನೂ ಅನುಮಾನ ಶುರುವಾಗುತ್ತೆ. ಅಕ್ಕ ಬದುಕಿಯೇ ಇದ್ದಾಳೆ ಅನ್ನೋ ಅನುಮಾನ ಮೂಡುತ್ತೆ. ಆಗ ಅಲ್ಲಿಗೆ ಬಂದ ವಸು, ಸ್ನೇಹಾ ಏನೋ ಯೋಚನೆ ಮಾಡುತ್ತಿರುವುದನ್ನು ನೋಡಿ ಏನಾಯ್ತು ಸ್ನೇಹಾ ಎಂದು ಕೇಳುತ್ತಾಳೆ. ಆಗ ಸ್ನೇಹಾಗೆ ಒಮ್ಮೆಲೆ ಏನು ಹೇಳಬೇಕು ಅನ್ನೋದೇ ನೆನಪಾಗುವುದಿಲ್ಲ.
ವಸು ಬಳಿ ಸಬೂಬು ಹೇಳಿದ ಸ್ನೇಹಾ
ಇಲ್ಲ ವಸು ಅತ್ತಿಗೆ ಅಕ್ಕನ ಬಗ್ಗೆ ಸ್ವಲ್ಪ ನೆನಪು ನನಗೆ ಹೆಚ್ಚಾಗಿದೆ. ಅದಕ್ಕೆ ಸಹನಾ ಅಕ್ಕ ಎಂದು ನಾನು ಹೇಳಿದೆ ಅಷ್ಟೇ ಎಂದು ಹೇಳುತ್ತಾಳೆ. ಆಗ ವಸುಗೆ ಏನು ಮಾತನಾಡಬೇಕು ಎಂದು ತಿಳಿಯದೇ, ಸಹನಾ ಅಕ್ಕನ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ ಸ್ನೇಹಾ ಎಂದು ಹೇಳಿ ಮಗು ರೂಮ್‌ನಲ್ಲಿ ಒಬ್ಬಳೆ ಇದ್ದಾಳೆ ಎಂದು ಹೇಳಿ ಅಲ್ಲಿಂದ ಹೊರಟು ಹೋಗುತ್ತಾಳೆ.

ರೌಡಿಗಳಿಂದ ತಪ್ಪಿಸಿಕೊಂಡ ಹುಡುಗಿಗೆ ಆಶ್ರಯ
ಇನ್ನು ಪುಟ್ಟಕ್ಕನ ಮನೆಗೆ ಒಂದು ಹುಡುಗಿ ಬಂದಿದ್ದಾಳೆ. ಆದರೆ ಆಕೆ ಯಾರು ಏನು ಎಂಬುವುದು ತಿಳಿಯಬೇಕಿದೆ. ಸಹನಾ ಜೀವವನ್ನು ಹಾಗೂ ಜೀವನವನ್ನು ಕಾಳಿ ಕಾಪಾಡಿದ್ದಾನೆ. ಸಹನಾ ಬಗ್ಗೆ ಇರುವ ಕಾಳಿ ಪ್ರೀತಿಯನ್ನು ಸಹನಾ ಅರ್ಥ ಮಾಡಿಕೊಳ್ಳುತ್ತಾಳಾ? ನೋಡಬೇಕಿದೆ.


Click it and Unblock the Notifications











