For Quick Alerts
  ALLOW NOTIFICATIONS  
  For Daily Alerts

  ಪುಟ್ಟಕ್ಕನ ಮಕ್ಕಳು: ಒಂದು ಗಿಫ್ಟ್‌ಗಾಗಿ ಬಾವಿಗೆ ಹಾರಿದ ಮುರುಳಿ ಮೇಷ್ಟ್ರು !

  By ಎಸ್ ಸುಮಂತ್
  |

  ಸಹನಾ ತುಂಬಾ ಅಂದರೆ ತುಂಬಾ ಮುಗ್ಧೆ. ಯಾರಾದರೂ ಜೋರಾಗಿ ಗದರಿದರೂ ಸಾಕು ಕೈಯೆಲ್ಲಾ ನಡುಗುತ್ತೆ. ಕಣ್ಣಲ್ಲಿ ನೀರು ತುಂಬಿಕೊಂಡು ಬಿಡುತ್ತೆ. ಅವಳ ಭಯ ಎಂಥದ್ದು ಎಂಬುದು ಅವರ ಅವ್ವನಿಗೆ ಮಾತ್ರ ಗೊತ್ತು. ಜೋರು ಧ್ವನಿಯಲ್ಲಿ ಮಾತನಾಡುವುದಕ್ಕೂ ಬಾರದಂತ ನಡವಳಿಕೆ ಸಹನಾಳದ್ದು. ಈಗ ಮುರುಳಿ ಮೇಷ್ಟ್ರನ್ನು ಬೇರೆ ಕದ್ದು ಮುಚ್ಚಿ ಲವ್ ಮಾಡುತ್ತಿದ್ದಾಳೆ. ಮುರುಳಿ ಮೇಷ್ಟ್ರು ಮೀಟ್ ಮಾಡುವುದಕ್ಕೆ ಬಂದರೂ ಸಹ ಭಯ ಭಯದಲ್ಲಿಯೇ ಮಾತನಾಡಿಸುತ್ತಾಳೆ. ಆದರೆ ಈಜು ಬಾರದ ಮೇಷ್ಟ್ರು ಇದೀಗ ಬಾವಿಗೆ ಬಿದ್ದು ಬಿಟ್ಟಿದ್ದಾರೆ. ಪಾಪ ಸಹನಾಳ ಪಾಡು ನೋಡುವುದಕ್ಕೆ ಆಗುತ್ತಿಲ್ಲ.

  Exclusive: ಬಿಗ್‌ ಬಾಸ್ ಸೀಸನ್ 9ಕ್ಕೆ ಅನಿರುದ್ಧ್ ಎಂಟ್ರಿ? ನನ್ನನ್ನು ಯಾರು ತಡೆಯೋಕ್ಕಾಗಲ್ಲ!Exclusive: ಬಿಗ್‌ ಬಾಸ್ ಸೀಸನ್ 9ಕ್ಕೆ ಅನಿರುದ್ಧ್ ಎಂಟ್ರಿ? ನನ್ನನ್ನು ಯಾರು ತಡೆಯೋಕ್ಕಾಗಲ್ಲ!

  ಸಹನಾಗೆ ಸುಮ್ಮ ಸುಮ್ಮನೆ ಕದ್ದು ಮುಚ್ಚಿ ಬಂದು ಮಾತನಾಡಿಸುವುದು ಇಷ್ಟವಾಗುವುದಿಲ್ಲ. ಈಗಾಗಲೇ ಅದನ್ನು ಹೇಳಿ ಬಿಟ್ಟಿದ್ದಾಳೆ. ಹಾಗೇ ಕೈಹಿಡಿದು ಮಾತನಾಡಿಸುವುದು ಇಷ್ಟವಾಗುವುದಿಲ್ಲ. ಸ್ನೇಹಾಳ ಬಳಿ ತಮ್ಮ ಪ್ರೀತಿಯ ವಿಚಾರವನ್ನು ಹೇಳಬೇಕು ಎಂಬ ಕಂಡೀಷನ್ ಕೂಡ ಹಾಕಿ ಆಗಿದೆ. ಅಷ್ಟಾಗ್ಯೂ ಮುರುಳಿ ಮೇಷ್ಟರು ಪಾಪ, ಕ್ಷಮೆ ಕೇಳುವುದಕ್ಕೆ ಸ್ಪೆಷಲ್ ಗಿಫ್ಟ್ ತಂದು ಕೊಟ್ಟಿದ್ದಾರೆ. ಇನ್ನೇನು ಆ ಗಿಫ್ಟ್ ನೋಡಬೇಕು, ಅಷ್ಟರಲ್ಲಿ ಕೈತಪ್ಪಿ ಬಾವಿಗೆ ಬಿದ್ದಿದೆ.

  ಈಜು ಬಾರದೆ ಇದ್ದರು ಮುರುಳಿ ಮೇಷ್ಟ್ರ ಸಾಹಸ

  ಈಜು ಬಾರದೆ ಇದ್ದರು ಮುರುಳಿ ಮೇಷ್ಟ್ರ ಸಾಹಸ

  ಸಹನಾ ಕೋಪ ಮಾಡಿಕೊಂಡಿದ್ದಳು. ಹೇಗಾದರೂ ಮಾಡಿ ಸಮಾಧಾನ ಮಾಡಬೇಕು ಎಂಬ ಕಾರಣಕ್ಕೆ ಮುರುಳಿ ಮೇಷ್ಟ್ರು ಗಿಫ್ಟ್ ಒಂದನ್ನು ಕೊಟ್ಟು ಸಮಾಧಾನ ಮಾಡಲು ಯತ್ನಿಸಿದ್ದಾರೆ. ಗಿಫ್ಟ್ ಕೊಟ್ಟು ಮುರುಳಿ ಮೇಷ್ಟ್ರು ಅಲ್ಲಿಂದ ಹೋಗಿದ್ದಾರೆ. ಆ ಗಿಫ್ಟ್ ನೋಡುತ್ತಾ ಖುಷಿಯಲ್ಲಿರುವಾಗಲೇ ಪುಟ್ಟಕ್ಕ ಬಂದು ಸಹನಾಳನ್ನು ಕರೆದಿದ್ದಾರೆ. ಗಾಬರಿಯಾದ ಸಹನಾ ಆ ಗಿಫ್ಟ್ ಅನ್ನು ಬಾವಿಗೆ ಹಾಕಿದ್ದಾಳೆ. ಇದನ್ನು ಮುರುಳಿ ಬಳಿ ಹೇಳಿದ್ದೆ ತಡ, ಈಜು ಬರಲ್ಲ ಅಂತ ಗೊತ್ತಿದ್ದರು ಬಾವಿಗೆ ಹಾರಿಯೇ ಬಿಟ್ಟಿದ್ದಾರೆ. ಮುರುಳಿ ಮಾಸ್ಟರ್ ಬಿದ್ದಿದ್ದಕ್ಕೆ ಸಹನಾ ಗಾಬರಿಯಾಗಿದ್ದಾಳೆ.

  ಕೌಸಲ್ಯ ಪ್ಲ್ಯಾನ್‌ಗೆ ಕೌಂಟರ್ ಕೊಡುತ್ತಾಳಾ ದುರ್ಗಾಂಬಾ?ಕೌಸಲ್ಯ ಪ್ಲ್ಯಾನ್‌ಗೆ ಕೌಂಟರ್ ಕೊಡುತ್ತಾಳಾ ದುರ್ಗಾಂಬಾ?

  ಸಹನಾಳ ಕಣ್ಣಲ್ಲಿ ನೀರು

  ಸಹನಾಳ ಕಣ್ಣಲ್ಲಿ ನೀರು

  ಗಿಫ್ಟ್‌ಗಾಗಿ ಮುರುಳಿ ಮೇಷ್ಟ್ರು ಬಾವಿಗೆ ಬಿದ್ದಿದ್ದಾರೆ. ಮೊದಲೇ ಈಜು ಬರಲ್ಲ ಅಂತ ಕೂಡ ಹೇಳಿದ್ದರು. ಮೇಲಕ್ಕೆ ಬರಲು ಆಗದೆ ಕಷ್ಟಪಡುತ್ತಿದ್ದ ಮೇಷ್ಟ್ರನ್ನು ಕಂಡು ಸಹನಾ ಕೂಡ ಕೈಕಾಲು ಆಡದಂತೆ ಟೆನ್ಶನ್ ಆಗಿದ್ದಾಳೆ. ಆ ಕಡೆಯಿಂದ ಈ ಕಡೆಗೆ ಓಡಾಡಿ ಎಲ್ಲರನ್ನು ಕರೆದಿದ್ದಾಳೆ. ಆಗ ಪುಟ್ಟಕ್ಕ, ಸ್ನೇಹಾ, ಕಂಠಿ ಅಂಡ್ ಗ್ಯಾಂಗ್ ಓಡಿ ಬಂದಿದೆ. ಮೇಷ್ಟ್ರು ಬಾವಿಗೆ ಬಿದ್ದಿದ್ದಾರೆ ಎಂದಾಕ್ಷಣಾ ಕಂಠಿ ಬಾವಿಯೊಳಕ್ಕೆ ಎಗರಿ ಮೇಷ್ಟ್ರನ್ನು ಕಾಪಾಡಿದ್ದಾನೆ. ಆದರೆ ಮೇಲಕ್ಕೆ ಎತ್ತುಕೊಂಡು ಬಂದರೂ ಕೂಡ ಮೇಷ್ಟ್ರಿಗೆ ಇನ್ನು ಜ್ಞಾನ ಬಂದಿರಲಿಲ್ಲ.

  ಸಹನಾಳ ಭಯ ಕಂಡು ಗಾಬರಿಯಾದ ಪುಟ್ಟಕ್ಕ

  ಸಹನಾಳ ಭಯ ಕಂಡು ಗಾಬರಿಯಾದ ಪುಟ್ಟಕ್ಕ

  ಮುಂಗುಸಿಗೆ ಮೇಷ್ಟ್ರು ಬಾವಿಗೆ ಬಿದ್ದಿದ್ದು ತುಂಬಾ ಖುಷಿ ಕೊಟ್ಟಿದೆ. ಯಾಕೆಂದರೆ ಆತ ಸ್ನೇಹಾಳ ಹಿಂದೆ ಬಿದ್ದಿದ್ದಾನೆ ಎಂದುಕೊಂಡು ಅವನನ್ನು ಕೊಲ್ಲಲು ಯತ್ನಿಸಿದ್ದ. ಈಗ ಮೇಷ್ಟ್ರೇ ಬಾವಿಗೆ ಬಿದ್ದಿದ್ದು ತುಂಬಾ ಖುಷಿಯಾಗಿದ್ದಾರೆ. ಅದಕ್ಕೆ ಆಗಾಗ ಮೇಷ್ಟ್ರು ಹೋಗಿಬಿಟ್ಟರು ಎನಿಸುತ್ತದೆ ಎಂದಾಗೆಲ್ಲಾ ಅಯ್ಯೋ ದೇವ್ರೆ ಅಂತ ಸಹನಾ ಗಾಬರಿಯಾಗುತ್ತಿದ್ದಾಳೆ. ಕಣ್ಣಲ್ಲಿ ನೀರು ಸುರಿಯುತ್ತಿದೆ. ಇದನ್ನೆಲ್ಲಾ ನೋಡಿದ ಪುಟ್ಟಕ್ಕ ಸುಮ್ಮನೆ ಇರು ಸಹನಾ ಏನು ಆಗಲ್ಲ ಅಂತ ಸಮಾಧಾನ ಮಾಡಿದ್ದಾಳೆ.

  ಪುಟ್ಟಕ್ಕನ ಮುಂದೆ ಸಹನಾ ವಿಚಾರ ಹೊರಬರುತ್ತಾ?

  ಪುಟ್ಟಕ್ಕನ ಮುಂದೆ ಸಹನಾ ವಿಚಾರ ಹೊರಬರುತ್ತಾ?

  ಮುರುಳಿಯನ್ನು ಕಂಠಿ ಬಾವಿಯಿಂದ ಹೊರ ತಂದಿದ್ದಾನೆ. ಪ್ರಜ್ಞೆಯಿಲ್ಲದ ಮೇಷ್ಟ್ರಿಗೆ ಹುಡುಗರೆಲ್ಲಾ ಸೇರಿಕೊಂಡು ಪ್ರಜ್ಞೆ ತರಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಏನೇ ಮಾಡಿದರು ಪ್ರಜ್ಞೆ ಬರುತ್ತಿಲ್ಲ. ಅದೇ ಸಮಯಕ್ಕೆ ಅವರ ಅಪ್ಪ ಅಮ್ಮನ ಎಂಟ್ರಿಯಾಗಿದೆ. ಮುರುಳಿಗೆ ಬರಬೇಡ ಅಂತ ಹೇಳಿದರೂ ಕೇಳಲಿಲ್ಲ. ನೋಡು ಇವತ್ತು ಯಾವ ಸ್ಥಿತಿಯಲ್ಲಿ ಬಿದ್ದಿದ್ದಾನೆ ಅಂತ ಅವರ ತಂದೆ ಹೇಳುತ್ತಿದ್ದಾರೆ. ಮುರುಳಿ, ತನ್ನ ತಂದೆ ತಾಯಿಯ ಬಳಿ ಸಹನಾಳ ವಿಚಾರವನ್ನು ಹೇಳಿದ್ದರೆ. ಆಕೆಯ ಮುಖ ನೋಡದೆ ಎಲ್ಲರ ಮುಂದೆ ಸಹನಾಳ ಪ್ರೀತಿಯಲ್ಲಿ ಬಿದ್ದು ಹಿಂಗೆ ಮಾಡಿಕೊಂಡ ಎಂದು ಒಂದು ಮಾತು ಹೇಳಿದರೆ ಮುಗೀತು. ಆ ಕಡೆ ಕಂಠಿಯ ಸಮಸ್ಯೆಯೂ ಬಗೆಹರಿದಂತೆ ಆಗುತ್ತದೆ.

  English summary
  Puttakkana Makkalu Serial September 15th Episode Written Update. Here is the details.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X