Puttakkana Makkalu:ಅಧಿಕಾರಿಗಳಿಗೆ ಬುದ್ಧಿ ಕಲಿಸಿದ ಕಂಠಿ; ಸಿಂಗಾರಮ್ಮ ಕುತಂತ್ರ ಬಯಲಾಗುತ್ತಾ?
ಸ್ನೇಹಾ ಡಿಸಿ ಆದರೆ ಕೆಲಸವೆಲ್ಲ ಕೆಟ್ಟು ಹೋಗುತ್ತದೆ. ಆಕೆಗೆ ಆ ಡಿಸಿ ಪಟ್ಟ ಸಿಕ್ಕರೆ ನಮಗೆ ಬಹಳ ತೊಂದರೆ. ಈಗಲೇ ಸ್ನೇಹಾ ಬಹಳ ಹದ್ದುಮೀರಿ ನಡೆದುಕೊಳ್ಳುತ್ತಾಳೆ. ಸ್ನೇಹಾ ನಡುವಳಿಕೆಯನ್ನು ಸಹಿಸಿಕೊಳ್ಳಲಾಗುತ್ತಿಲ್ಲವೆಂದು ರಾಜಿ, ಬಂಗಾರಮ್ಮ ಎಂದುಕೊಂಡು ಸಿಂಗಾರಮ್ಮನ ಜೊತೆಗೆ ಮಾತನಾಡುತ್ತಿರುತ್ತಾಳೆ. ಹೇಗಾದರೂ ಮಾಡಿ ಸ್ನೇಹಾ ಡಿಸಿ ಆಗುವುದನ್ನು ತಪ್ಪಿಸಲೇಬೇಕು. ಆಕೆ ಡಿಸಿ ಆಗಬಾರದು ಎಂದು ಸಿಂಗಾರಮ್ಮನ ತಲೆ ಕೆಡಿಸಿ ಅಧಿಕಾರಿಗಳ ಜೊತೆ ಮಾತನಾಡುವಂತೆ ರಾಜಿ ಪುಸಲಾಯಿಸುತ್ತಾಳೆ.
ಸಿಂಗಾರಮ್ಮ, ರಾಜಿಯ ಮಾತು ಕೇಳಿ ಅಧಿಕಾರಿಗಳ ಜೊತೆ ಮಾತನಾಡುತ್ತಾಳೆ. ಆಗ ಲಂಚದ ಆಮಿಷಕ್ಕೆ ಒಳಗಾದ ಅಧಿಕಾರಿಗಳು ಒಪ್ಪಿಕೊಳ್ಳುತ್ತಾರೆ. ಇನ್ನೂ ಸ್ನೇಹಾ ಖಂಡಿತವಾಗಿಯೂ ಡಿಸಿ ಆಗುವುದಿಲ್ಲ ಎಂದು ಆಕೆ ಅಂದುಕೊಂಡಿರುತ್ತಾಳೆ. ಆದರೆ, ಈ ವಿಚಾರವನ್ನು ಕಂಠಿಗೆ ಬೇರೆಯವರು ಮುಟ್ಟಿಸುತ್ತಿರುತ್ತಾರೆ. ಈ ವಿಷಯ ಕೇಳಿ ಕಂಠಿಗೆ ಬಹಳ ಕೋಪ ಬರುತ್ತೆ. ಹಾಗೆಯೇ ಆ ಅಧಿಕಾರಿಗಳನ್ನು ಕಿಡ್ನ್ಯಾಪ್ ಮಾಡಿ ಒಂದು ಗೋಡಾನ್ ಬಳಿ ಕರೆದುಕೊಂಡು ಬರುತ್ತಾನೆ.

ಇನ್ನು ಅಧಿಕಾರಿಗಳ ಬಳಿ ಸ್ನೇಹಾ ಡಿಸಿ ಆಗಲೇಬೇಕು. ನೀವು ಏನಾದರೂ ಈ ವಿಚಾರದಲ್ಲಿ ನಮಗೆ ಮಂಕುಬೂದಿ ಎರಚಲು ಶುರು ಮಾಡಿದರೆ ನಿಮ್ಮ ಮನೆಯವರು ಖಂಡಿತವಾಗಿಯೂ ತೊಂದರೆಗೆ ಸಿಲುಕುತ್ತಾರೆ ಎಂದು ಕಂಠಿ, ಮಾರ್ನಿಂಗ್ ಮಾಡುತ್ತಾನೆ. ಕಂಠಿಯ ಮಾತು ಕೇಳಿ ಅಧಿಕಾರಿಗಳಿಗೆ ಭಯವಾಗುತ್ತೆ. ಹಾಗಾಗಿ ಸ್ನೇಹಾ ಡಿಸಿ ಆಗುವುದು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅಧಿಕಾರಿಗಳು ಕೂಡ ಹೇಳುತ್ತಾರೆ.
ಸ್ನೇಹಾ ಕಷ್ಟದ ದಿನಗಳನ್ನು ನೆನೆದ ಕಂಠಿ
"ಸ್ನೇಹಾ ಪರೀಕ್ಷೆ ಬರೆದು ಒಳ್ಳೆಯ ಅಂಕದೊಂದಿಗೆ ಪಾಸಾಗಿದ್ದಾರೆ. ಹಾಗೆಯೇ ಅವರು ಡಿಸಿ ಆಗಲೇಬೇಕು" ಎಂದು ಕಂಠಿ ಹೇಳುತ್ತಾನೆ. ಅದಕ್ಕೆ ಅಧಿಕಾರಿಗಳು ಕೂಡ ತಲೆ ಅಲ್ಲಾಡಿಸುತ್ತಾರೆ. ಇನ್ನು ಸಹನಾ ಕ್ಯಾಟರಿಂಗ್ ವ್ಯವಸ್ಥೆಯನ್ನು ನೋಡಿಕೊಂಡಿರುತ್ತಾಳೆ. ಅಷ್ಟರಲ್ಲಿ ಅಲ್ಲಿಗೆ ವಿನುತಾ ಬರುತ್ತಾಳೆ. ಸಹನಾ ಚೋಟು ಬಳಿ ಮಾತನಾಡುತ್ತಿರುವುದನ್ನು ನೋಡಿದ ವಿನುತಾಗೆ ಶಾಕ್ ಆಗುತ್ತೆ. ಸಹನಾ ಅವರೇ ಎಂದು ವಿನುತಾ ಕರೆಯುತ್ತಾಳೆ. ಆಕೆಯನ್ನು ನೋಡಿ ಸಹನಾಗೆ ಬಹಳ ಶಾಕ್ ಆಗುತ್ತೆ.

ಸಹನಾಳನ್ನು ಕಂಡು ಓಡಿ ಬಂದ ವಿನುತಾ
ವಿನುತಾ ಸಹನಾ ಬಳಿ ಓಡೋಡಿ ಬರುತ್ತಾಳೆ. "ಸಹನಾ ಅವರೇ ನೀವು ಬದುಕಿದ್ದೀರಾ? ನೀವು ಈ ಭೂಮಿ ಮೇಲೆ ಇಲ್ಲ ಎಂದು ನಾವು ಅಂದುಕೊಂಡಿದ್ದೆವು. ಆದ ಕಾರಣ ನಾನು ಮುರಳಿಯವರನ್ನು ಮದುವೆಯಾಗಲು ಒಪ್ಪಿದ್ದೇನೆ. ಇದೀಗ ನೀವು ಬದುಕಿಯೇ ಇದ್ದೀರಾ? ಮುರಳಿಯವರು ನಿಮ್ಮನ್ನು ನೋಡಿದರೆ ಬಹಳ ಖುಷಿಪಡುತ್ತಾರೆ. ನೀವು ಬನ್ನಿ" ಎಂದು ವಿನುತಾ ಕರೆಯುತ್ತಾಳೆ. ಆಗ ಸಹನಾ "ನಾನು ಎಲ್ಲಿಗೂ ಬರುವುದಿಲ್ಲ. ನಾನೀಗ ಹಿಂದಿನ ಸಹನಾ ಅಲ್ಲ. ನಾನೀಗ ಸಾಧನಾ ಆಗಿ ಬದಲಾಗಿದ್ದೇನೆ. ನನ್ನಿಂದಾಗಿ ಮುರಳಿ ಅವರ ಜೀವನ ಹಾಳಾಗುತ್ತಿತ್ತು. ಆದರೆ, ಇದೀಗ ಅವರು ಕೂಡ ಖುಷಿಯಲ್ಲಿದ್ದಾರೆ. ಅವರು ನಿಮ್ಮೊಂದಿಗೆ ಖುಷಿಯಾಗಿರುತ್ತಾರೆ. ನಿಮಗೆ ಮುರಳಿಯವರಂದರೆ ಹಿಂದಿನಿಂದಲೂ ಕೂಡ ಬಹಳ ಇಷ್ಟ ಅಲ್ಲವಾ? ಅದಕ್ಕೆ ನೀವೇ ಅವರನ್ನು ಮದುವೆಯಾಗುವುದು ಸೂಕ್ತ" ಎಂದು ಹೇಳಿದಾಗ ವಿನುತಾ, ಸಹನಾ ಕಾಲಿಗೆ ಬೀಳುತ್ತಾಳೆ.
ಸಹನಾ ಕಾಲಿಗೆ ಬಿದ್ದ ವಿನುತ
ಸಹನಾ ಅವರೆ ನಿಮ್ಮ ಮನಸ್ಸನ್ನು ನಾನು ಅರ್ಥಮಾಡಿಕೊಳ್ಳಲು ಸಾಧ್ಯವಾಗದೆ ಬಹಳ ದುಡಿಕಿದ್ದೇನೆ ನಿಮಗೆ ಬಹಳ ಕಷ್ಟಗಳನ್ನು ಕೊಟ್ಟಿದ್ದೇನೆ ಎಂದು ಅಳುತ್ತಾಳೆ. ಇದನ್ನು ಕೇಳಿದ ಸಹನ ಹಾಗೇನಿಲ್ಲ ವಿನುತ ನೀವೇನು ನನಗೆ ಕಷ್ಟ ಕೊಟ್ಟಿಲ್ಲ ನಾನು ಮುರಳಿಯವರನ್ನು ಮದುವೆಯಾದ ಬಳಿಕ ಬಹಳ ಖುಷಿಯಾಗಿ ಏನು ಇರಲಿಲ್ಲ. ಅವರನ್ನು ನಾನು ಪ್ರೀತಿಸಿ ಮದುವೆಯಾದೆ. ಪ್ರೀತಿ ಅನ್ನೋದೇ ಒಂದು ದೊಡ್ಡ ನಂಬಿಕೆ. ಆದರೆ ಅವರು ನನ್ನನ್ನು ನಂಬಲೇ ಇಲ್ಲ. ಬೇರೆಯವರ ಮಾತನ್ನೇ ಕೇಳುತ್ತಿದ್ದರು" ಎಂದು ಹೇಳಿದಳು. ಆಗ ಬೇಸರಿಂದ ವಿನುತಾ ಸಹನಾ ಕಾಲಿಗೆ ಬೀಳುತ್ತಾಳೆ.


Click it and Unblock the Notifications











