Puttakkana Makkalu: ಬಂಗಾರಮ್ಮ ಅಲ್ಲ ಅದು ಸಿಂಗಾರಮ್ಮ ಅನ್ನೋ ಸಹನಾಗೆ ಗೊತ್ತಾಯ್ತು; ಮುಂದೇನು?
ಸಹನಾಗೆ ಸಿಂಗಾರಮ್ಮ ಯಾರೆನ್ನುವುದು ಗೊತ್ತಾಗಿದೆ. ಬಂಗಾರಮ್ಮ ಕುಟುಂಬಕ್ಕೆ ಬಹಳ ದೊಡ್ಡ ಕಂಟಕ ಕಾದಿದೆ ಎಂಬುದೂ ಅರಿವಾಗಿದೆ. ಇದನ್ನು ಹೇಗಾದರೂ ಮಾಡಿ ಸ್ನೇಹಾಗೆ ಹೇಳಬೇಕು. ಇಲ್ಲವಾದರೆ ಬಹಳ ದೊಡ್ಡ ಗಂಡಾಂತರಕ್ಕೆ ಸಿಲುಕಬೇಕಾಗುತ್ತದೆ. ಇದನ್ನು ತಾನಾಗಿ ಹೇಳಿದರೆ ನಾನು ಕೂಡ ಅವರ ಜೊತೆ ಸಿಕ್ಕಿ ಬೀಳುತ್ತೇನೆ. ಆದ ಕಾರಣ ನಾನು ಏನು ಹೇಳೋಕೆ ಆಗಲ್ಲ. ಹಾಗೆಯೇ ಅವರಿಗೆ ತಿಳಿದರೆ ಉತ್ತಮ ಎಂದು ಅಂದುಕೊಂಡಿರುತ್ತಾಳೆ.
ಆದರೂ ಕೂಡ ಆಕೆಯ ಮನಸ್ಸು ತಡೆಯಲಾಗದೆ ಚೋಟು ಕೈಯಲ್ಲಿ ಒಂದು ಪತ್ರವನ್ನು ಬರೆದು ಕಳುಹಿಸುತ್ತಾಳೆ. ಅದರಲ್ಲಿ ಸಿಂಗಾರಮ್ಮ ಹೇಗೆ ಮಸಲತ್ತು ಮಾಡಿದ್ದಾಳೆ. ಹಾಗೆಯೇ ಅದೆಲ್ಲವನ್ನು ವಿವರವಾಗಿ ಸಹನಾ ಬರೆದಿರುತ್ತಾಳೆ. ಸಹನಾ ಆ ಪತ್ರವನ್ನು ಸ್ನೇಹಾ ಕೈಗೆ ಕೊಡುವಂತೆ ಚೋಟು ಬಳಿ ಹೇಳುತ್ತಾಳೆ. ಇನ್ನು ಚೋಟು ನೇರವಾಗಿ ಮದುವೆಯ ಮಂಟಪದ ಬಳಿಗೆ ಹೋಗುತ್ತಾನೆ. ಹಾಗೆಯೇ ಸ್ನೇಹಾ ಬಳಿ ಮಾತನಾಡುತ್ತಾನೆ.

ನಾವು ಮಾಡಿದ ಊಟದ ವ್ಯವಸ್ಥೆ ಹೇಗಿತ್ತು ಮೇಡಂ ಎಂದು ಕೇಳುತ್ತಾನೆ. ಇದನ್ನು ಕೇಳಿದ ಸ್ನೇಹಾಗೆ ಬಹಳ ಖುಷಿಯಾಗುತ್ತದೆ. ಹಾಗೆ ಸುಮಾ ಅಂತೂ ಅಡುಗೆಯನ್ನು ಹಾಡಿ ಹೊಗಳಿದ್ದಾಳೆ. ಇನ್ನೂ ಸ್ನೇಹಾ ಜೊತೆ ಮಾತನಾಡಿದ ಚೋಟು "ನೀವೇನು ನಮ್ಮ ಅಡುಗೆಯ ಬಗ್ಗೆ ಕಮೆಂಟ್ ಮಾಡಲೇ ಇಲ್ಲ" ಎಂದು ಹೇಳುತ್ತಾನೆ. "ಸ್ನೇಹಾ ಚೋಟುವನ್ನು ನೋಡಿ ಅಡುಗೆ ತುಂಬಾ ಚೆನ್ನಾಗಿದೆ" ಎಂದು ಹೇಳುತ್ತಾಳೆ. ಇದನ್ನು ಕೇಳಿ ಮೇಡಂ ನನಗೇನಾದರೂ ಟಿಪ್ಸ್ ಕೊಡುವುದಿಲ್ಲವೇ ಎಂದು ಕೇಳುತ್ತಾನೆ.
ಸ್ನೇಹಾ ಬ್ಯಾಗಲ್ಲಿ ಅಡಗಿದೆ ಸತ್ಯ
ಇದನ್ನು ಕೇಳಿದ ಸ್ನೇಹಾ ಆಕೆಯ ಕೈಯಲ್ಲಿದ್ದ ಹಣವನ್ನು ಕೊಡುವಾಗ ಚೋಟು ಮೆತ್ತಗೆ ಕೈಯಲ್ಲಿದ್ದ ಕವರನ್ನು ಆಕೆಯ ವ್ಯಾನಿಟಿ ಬ್ಯಾಗ್ ಒಳಗೆ ಹಾಕಿ ಬಿಡುತ್ತಾನೆ. ಹಾಗೆ ಸ್ನೇಹಾ ಕೊಟ್ಟ ಟಿಪ್ಸ್ ಅನ್ನು ಕೂಡ ತೆಗೆದು ಕೊಂಡು ಬರುತ್ತಾನೆ. ಇನ್ನು ಮದುವೆ ಮುಗಿಸಿ ಪುಟ್ಟಕ್ಕ ಹಾಗೂ ಆಕೆಯ ಮಕ್ಕಳು, ಬಂಗಾರಮ್ಮ ಇವರೆಲ್ಲರೂ ಕೂಡ ಹೊರಡಲು ಅನುವಾಗುತ್ತಾರೆ.
ಊಟದ ಬಗ್ಗೆ ಮೆಚ್ಚುಗೆ ಸೂಚಿಸಿದ ಸಿಂಗಾರವ್ವ
ಅದಕ್ಕಿಂತ ಮುಂಚಿತವಾಗಿ ಬಂಗಾರಮ್ಮನ ರೂಪದಲ್ಲಿರುವ ಸಿಂಗಾರಮ್ಮ ಪುಟ್ಟಕ್ಕನ ಬಳಿ ಹೇಳುತ್ತಾರೆ. ಪುಟ್ಟಕ್ಕ ಇನ್ನು ನಾನು ಹೊರಡಲೇ ಎಂದು ಹೇಳಿದಾಗ, ಪುಟ್ಟಕ್ಕ ಒಪ್ಪಿಗೆಯನ್ನು ಸೂಚಿಸುತ್ತಾರೆ. ಆಗ ಸಿಂಗಾರಮ್ಮ "ಪುಟ್ಟಕ್ಕ ಊಟದ ವ್ಯವಸ್ಥೆಯನ್ನು ನೀನೇನಾದರೂ ನೋಡಿಕೊಂಡಿದ್ದೀಯಾ? ಇವತ್ತು ಊಟ ಬಹಳ ಚೆನ್ನಾಗಿತ್ತು. ನನಗೆ ಬಹಳ ಖುಷಿಯಾಯಿತು" ಎಂದು ಹೇಳಿದಾಗ ಪುಟ್ಟಕ್ಕ "ಊಟದ ವ್ಯವಸ್ಥೆಯನ್ನು ವಿನುತಾ ಅವರೇ ಮಾಡಿದ್ದು" ಎಂದು ಹೇಳುತ್ತಾರೆ.

ಗಂಡನನ್ನು ನೆನೆದು ದುಃಖಿಸಿದ ಸಹನಾ
ಇನ್ನು ವಿನುತಾ ಹಾಗೂ ಮುರಳಿಯನ್ನು ಅವರ ಮನೆಗೆ ಕಳುಹಿಸಿಕೊಡುತ್ತಾರೆ. ಇದನ್ನೆಲ್ಲಾ ದೂರದಿಂದ ನೋಡುತ್ತಿದ್ದ ಸಹನಾಗೆ ಅಳು ಉಮ್ಮಳಿಸಿ ಬರುತ್ತದೆ. ತನ್ನ ಗಂಡ ಚೆನ್ನಾಗಿರಲಿ ಎಂದು ಆಕೆಯ ಸರ್ವಸ್ವವನ್ನೇ ಧಾರೆ ಎರೆದವಳು ಸಹನಾ. ಅದನ್ನೆಲ್ಲ ನೋಡಿ ಸಹನಾಗೆ ಅಳು ಉಮ್ಮಳಿಸಿ ಬರುತ್ತಿದೆ.


Click it and Unblock the Notifications











