Puttakkana Makkalu: ಪುಟ್ಟಕ್ಕನ ಮೂರನೇ ಮಗಳ ಕ್ಯೂಟ್ ಫೋಟೊ ವೈರಲ್
ಪುಟ್ಟಕ್ಕನ ಮಗಳು ಸಖತ್ ಕ್ಯೂಟ್ ಆಗಿದ್ದಾರೆ. ಇವರು ಮಾತಿನ ಮಳ್ಳಿ, ನೋಟದಲ್ಲಿ ಕೂಡ ಆಕೆ ಬಹಳ ಸುಂದರಿ. ಆಕೆಯ ಮೈ ಮಾಟಕ್ಕೆ ಬೆರಗಾಗದವರು ಇಲ್ಲ. ಅವರು ಬೇರೆ ಯಾರೂ ಅಲ್ಲ ಶಿಲ್ಪಾ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪುಟ್ಟಕ್ಕನ ಮೂರನೇ ಮಗಳಾಗಿ ನಟನೆ ಮಾಡುತ್ತಾ ನೋಡುಗರ ಮನಸನ್ನು ಗೆಲ್ಲುತ್ತಿದ್ದಾರೆ. ಸುಮಾ ಆಕ್ಟಿಂಗ್ ಜನರಿಗೆ ಮೆಚ್ಚುಗೆ ಆಗುತ್ತಿದೆ. ಸುಮಾ ತನ್ನ ಅಕ್ಕನ ಮದುವೆಯಲ್ಲಿ ಸಖತ್ ಆಗಿ ಮಿಂಚಿದ್ದಾರೆ . ಸುಮಳ ಕ್ಯೂಟ್ ಲುಕ್ ನೋಡಿ ಅನೇಕ ಜನ ಬೆರಗಾಗಿದ್ದಾರೆ ಕೂಡ .
ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪುಟ್ಟಕ್ಕನಾಗಿ ಉಮಾ ಶ್ರೀ ಅಭಿನಯ ಮಾಡುತ್ತಿದ್ದಾರೆ. ಈ ಧಾರಾವಾಹಿಯನ್ನು ನೋಡಲು ಜನರು ಕಾತರದಿಂದ ಕಾಯುವಂತಾಗಿದೆ. ದಿನದಿಂದ ದಿನಕ್ಕೆ ರೋಚಕವಾದ ಟ್ವಿಸ್ಟ್ ಗಳು ಮೂಡಿ ಬರುತ್ತಿದೆ . ಶಿಲ್ಪಾ ಮೂಲತಃ ಬೆಂಗಳೂರಿನವರು. ಈಗಲೂ ಬೆಂಗಳೂರಿನಲ್ಲೇ ವಾಸವಾಗಿದ್ದಾರೆ. ಸುಮಾ ಪಾತ್ರದ ಮೂಲಕ ಖ್ಯಾತಿ ಪಡೆದಿದ್ದಾರೆ. ತಂದೆ ಉಮಾಶಂಕರ್ ಜ್ಯೋತಿಷಿಯಾಗಿದ್ದಾರೆ. ಇವರ ತಾಯಿ ಹೆಸರು ಅನಿತಾ. ಶಿಲ್ಪಾಗೆ ಆಶಾ ಮತ್ತು ದೇವಿಕಾ ಎಂಬ ಸೋದರಿಯರಿದ್ದಾರೆ.

ಇನ್ನು ಶಿಲ್ಪ ಬಣ್ಣದ ಲೋಕದಲ್ಲಿ ಕಾಲಿಡಲು ಆಕೆಗೆ ತನ್ನ ಮನೆಯಲ್ಲಿ ಬಹಳ ಪ್ರೋತ್ಸಾಹ ಕೂಡ ಸಿಕ್ಕಿದೆ. ತಾನು ಏನಾದರೂ ಸಾಧನೆ ಮಾಡಬೇಕು ಎಂದೆಲ್ಲ ಕನಸು ಹೊತ್ತ ಈ ಹುಡುಗಿಯ ಕೈಯನ್ನು ಕಲಾದೇವಿ ಹಿಡಿದಿದ್ದಾಳೆ. ಮೊದಲು ಈಕೆ ಗೀತಾ ಧಾರವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲು ಇಡುತ್ತಾರೆ. ಈ ಧಾರಾವಾಹಿಯಲ್ಲಿ ವಿಜಯ್ ತಂಗಿ ಶೃತಿ ಪಾತ್ರದಲ್ಲಿ ಮಿಂಚಿದ್ದಾರೆ. ಆ ಬಳಿಕ ಇವರಿಗೆ ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಚಾನ್ಸ್ ಸಿಗುತ್ತದೆ. ಉಮಾಶ್ರೀ ಹಾಗೂ ಮೊದಲಾದ ಹಿರಿಯ ಕಲಾವಿದರು ಈ ಧಾರಾವಾಹಿಯಲ್ಲಿ ಮಿಂಚಿದ್ದಾರೆ. ಶಿಲ್ಪಾ ಬಿಬಿಎಂಪಿ ಹೈಸ್ಕೂಲ್ ನಲ್ಲಿ 10 ನೇ ತರಗತಿವರೆಗೆ ಓದಿದ್ದಾರೆ. ಡಿಪ್ಲೋಮೋ ಇನ್ ಫ್ಯಾಷನ್ ಡಿಸೈನಿಂಗ್ ಮಾಡಿಕೊಂಡಿದ್ದಾರೆ.
ಪುಟ್ಟಕ್ಕನಿಗೆ ಮೂರು ಜನ ಹೆಣ್ಣು ಮಕ್ಕಳು ಮೊದಲ ಮಗಳಿಗೆ ಇದೀಗ ಮದುವೆ ಆಯಿತು. ಎರಡನೇ ಮಗಳಿಗೆ ತಾನು ಏನಾದರು ಸಾಧನೆ ಮಾಡಲೇಬೇಕು ಎನ್ನುವ ಹಪಾಹಪಿ. ಇನ್ನು ಮೂರನೇ ಮಗಳು ಸುಮಾ ಕ್ರೀಡೆಯಲ್ಲಿ ಜಾಣೆ, ಹಾಗೆಯೇ ಮಾತಿನಲ್ಲಿ ಕೂಡ ಆಕೆಯನ್ನು ಮೀರಿಸಲು ಯಾರಿಂದಲೂ ಸಾಧ್ಯ ಇಲ್ಲ. ಇನ್ನು ಅಕ್ಕನ ಮದುವೆಯಲ್ಲಿ ಸುಮಾ ಸಖತ್ ಆಗಿ ಮಿಂಚಿದ್ದಾರೆ ಬಹಳ ಎಂಜಾಯ್ ಕೂಡ ಮಾಡಿದ್ದಾರೆ.

ತನ್ನ ಅಕ್ಕ ಇನ್ನು ಮೇಲೆ ನಮ್ಮ ಜೊತೆ ಇರುವುದಿಲ್ಲ. ಆಕೆ ಇನ್ನು ಮುರಳಿ ಸರ್ ಜೊತೆ ಇರುತ್ತಾಳೆ ಎಂದೆಲ್ಲ ನೆನಪಿಸಿಕೊಂಡಾಗ ಸುಮಾಗೆ ನೋವು ಆಗುತ್ತ ಇರುತ್ತದೆ. ಸುಮಾ ಪಾತ್ರ ಒಂತರ ಬಬ್ಲಿ ಬಬ್ಲಿ ಕ್ಯಾರೆಕ್ಟರ್. ಹೈಪರ್ ಆ್ಯಕ್ಟಿವ್ ಇರುವ ಶಿಲ್ಪ ಆಕ್ಟಿಂಗ್‌ಗೆ ಜನರು ಫಿದಾ ಆಗಿದ್ದಾರೆ. ಗೀತಾ ಧಾರಾವಾಹಿಯಲ್ಲಿ ನಟಿಸಿದ್ದಾಗ ಅಷ್ಟಾಗಿ ಜನರಿಗೆ ಹತ್ತಿರ ಆಗಿರದ ಶಿಲ್ಪ ಪುಟ್ಟಕ್ಕನ ಮಕ್ಕಳು ಧಾರವಾಹಿ ಮೂಲಕ ಜನರಿಗೆ ಹತ್ತಿರ ಆಗಿದ್ದಾರೆ. ಇನ್ನು ಉತ್ತಮ ಸಾಧನೆ ಮಾಡಬೇಕು ಎನ್ನುವ ಹಂಬಲ ಹೊತ್ತು ಬಂದ ಪುಟ್ಟಕ್ಕನ ಮಗಳಿಗೆ ಎಲ್ಲರೂ ಆಲ್ ದಿ ಬೆಸ್ಟ್ ಹೇಳುತ್ತ ಇದ್ದಾರೆ.


Click it and Unblock the Notifications











