Puttakkana Makkalu Jatre: ಮಂಡ್ಯದಲ್ಲಿ ಮಾರ್ಚ್ 30ಕ್ಕೆ 'ಪುಟ್ಟಕ್ಕನ ಮಕ್ಕಳು ಜಾತ್ರೆ'

ಸ್ತ್ರೀಶಕ್ತಿ, ಸಾಮಾಜಿಕ ಸಂದೇಶ, ಸಂಬಂಧಗಳ ಮೌಲ್ಯ ಹೀಗೆ ಎಲ್ಲಾ ವಿಭಾಗವನ್ನು ಪ್ರತಿನಿಧಿಸುತ್ತಿರುವ ವಿಶೇಷ ಸೀರಿಯಲ್ ಆಗಿ 'ಪುಟ್ಟಕ್ಕನ ಮಕ್ಕಳು' ಗುರುತು ಪಡೆದುಕೊಂಡಿದೆ.

ಇತ್ತೀಚಿಗೆ ಮಾಡಲಾಗಿದ್ದ "ಹಿಟ್ಲರ್ ಕಲ್ಯಾಣ ಜಾತ್ರೆ" ಮಾಡಿ ಅಭೂತಪೂರ್ವ ಜನ ಮೆಚ್ಚುಗೆ ಪಡೆದುಕೊಂಡಿತ್ತು. ಹಾಗಾಗಿ ಈಗ 'ಪುಟ್ಟಕ್ಕನ ಮಕ್ಕಳು ಜಾತ್ರೆ' ಮಾಡಲು ಧಾರಾವಾಹಿ ತಂಡ ಹಾಗೂ ಚಾನೆಲ್ ಸಜ್ಜಾಗಿದೆ. ಸಕ್ಕರೆ ನಾಡು ಮಂಡ್ಯ ಜಿಲ್ಲೆಯ, ಮದ್ದೂರಿನಲ್ಲಿರುವ ತಾಲೂಕು ಕ್ರೀಡಾಂಗಣ ದಲ್ಲಿ ಇದೇ ಮಾರ್ಚ್ 30 ಬುಧವಾರ ಸಂಜೆ 5.30ಕ್ಕೆ "ಪುಟ್ಟಕ್ಕನ ಮಕ್ಕಳು ಜಾತ್ರೆ" ಕಾರ್ಯಕ್ರಮ ಆಯೋಜಿಸಲಾಗಿದೆ.

'ಪುಟ್ಟಕ್ಕನ ಮಕ್ಕಳು' ಆರಂಭದಲ್ಲಿಯೇ ಹೆಚ್ಚಿನ ರೇಟಿಂಗ್ ನಲ್ಲಿ ದಾಖಲೆ ಸೃಷ್ಟಿಸಿತ್ತು. ಈಗಲೂಕನ್ನಡ ಕಿರುತೆರೆಯ ನಂಬರ್ 1 ಧಾರಾವಾಹಿಯಾಗಿ ಮುಂದುವರೆದಿದೆ. ಇದರ ಜೊತೆಗೆ ಶುಚಿ ರುಚಿಯೊಂದಿಗೆ ಹಸಿದವರಿಗೆ ಅನ್ನ ನೀಡುತ್ತಿರುವ 'ಪುಟ್ಟಕ್ಕನ ಮೆಸ್ " ಕೂಡ ವೀಕ್ಷಕರೊಟ್ಟಿಗೆ ಭಾವನಾತ್ಮಕವಾಗಿ ಬೆರೆತು ಹೋಗಿದೆ.

Puttakkana Makkalu Serial Team Coming To Mandya On March 30

ಪುಟ್ಮಲ್ಲಿ ಎಂದೇ ಖ್ಯಾತರಾಗಿರುವ ಕನ್ನಡದ ಶ್ರೇಷ್ಟ ನಟಿ ಉಮಾಶ್ರೀ, ಕಿರುತೆರೆಗೆ ಮರಳಿ ಪುಟ್ಟಕ್ಕನ ಪಾತ್ರದಲ್ಲಿ ಜೀವಿಸುತ್ತಿರುವುದು ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಪ್ರಮುಖ ಆಕರ್ಷಣೆ. ಅಷ್ಟೇ ಅಲ್ಲದೆ ತನ್ನೊಟ್ಟಿಗೆ ಅಭಿನಯಿಸುತ್ತಿರುವ ಕಿರಿಯ ಸಹಕಲಾವಿದರಿಗೂ ಕಲಾನುಭವವನ್ನು ಹಂಚಿ ಅವರನ್ನು ತಿದ್ದುವ ಕೆಲಸ ಮಾಡುತ್ತಿದ್ದಾರೆ.

ಈ ಧಾರಾವಾಹಿ ಬಹುದೊಡ್ಡ ತಾರಾಬಳಗವನ್ನೇ ಹೊಂದಿದ್ದು ಹಿರಿಯ - ಕಿರಿಯ ಕಲಾವಿದರ ಸಮಾಗಮವಾಗಿದೆ. ಉಮಾಶ್ರೀ ಅವರ ಜೊತೆ ರಮೇಶ್ ಪಂಡಿತ್ , ಮಂಜು ಭಾಷಿಣಿ ಸೇರಿದಂತೆ ಇನ್ನು ಅನೇಕ ಕಲಾವಿದರು ಅಭಿನಯಿಸಿದ್ದಾರೆ. ನಾಯಕ , ನಾಯಕಿಯಾಗಿ ಅದ್ಭುತವಾಗಿ ನಟಿಸಿರುವ ಕಂಠಿ ಪಾತ್ರಧಾರಿ ಧನುಷ್ , ಸ್ನೇಹ ಪಾತ್ರಧಾರಿ ಸಂಜನಾ ಪದಾರ್ಪಣೆ ಮಾಡಿದ ಧಾರಾವಾಹಿಯಲ್ಲೇ ಗೆದ್ದು ಕರ್ನಾಟಕವೇ ಮೆಚ್ಚಿದ ಜೋಡಿಯಾಗಿದ್ದಾರೆ.

Puttakkana Makkalu Serial Team Coming To Mandya On March 30

ಉಳಿದಂತೆ ಪುಟ್ಟಕ್ಕನ ಇನ್ನಿಬ್ಬರು ಮಕ್ಕಳಾಗಿ ಸುಮಾ ಪಾತ್ರದಲ್ಲಿ ಶಿಲ್ಪ ಮತ್ತು ಸಹನಾ ಆಗಿ ಅಕ್ಷರ ಇಬ್ಬರೂ ಸಹ ತಮ್ಮದೇ ಶೈಲಿಯಲ್ಲಿ ವೀಕ್ಷಕರ ಮನಸ್ಸಿಗೆ ಬಹು ಬೇಗನೆ ಹತ್ತಿರವಾಗಿದ್ದಾರೆ.

'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದ ಮೂಲಕ ಚಿರಪರಿಚಿತರಾಗಿರುವ ಸಂತೋಷ್, ಗಜೇಂದ್ರ ಇಬ್ಬರೂ ನಾಗ ಮತ್ತು ಮುಂಗುಸಿ ಎಂಬ ವಿಶೇಷ ಪಾತ್ರಗಳಲ್ಲಿ ಈ ಸೀರಿಯಲ್ ನಲ್ಲಿ ಅಭಿನಯಿಸಿದ್ದು ವೀಕ್ಷಕರನ್ನು ನಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರೆಲ್ಲರನ್ನೂ ಒಟ್ಟುಗೂಡಿಸಿ ಈ ರೀತಿಯ ನೈಜ ಕಥೆಯನ್ನು ಧಾರಾವಾಹಿಯ ರೂಪದಲ್ಲಿ ಭರ್ಜರಿಯಾಗಿ ಕನ್ನಡ ವೀಕ್ಷಕರಿಗೆ ನೀಡುತ್ತಿರುವ ಪ್ರಧಾನ ನಿರ್ದೇಶಕರಾಗಿರುವ ಆರೂರು ಜಗದೀಶ್ ಮತ್ತು ಸಂಚಿಕೆ ನಿರ್ದೇಶಕರಾಗಿರುವ ಮಹೇಶ್ ಸಾರಂಗ್ ಅವರ ನಿರ್ದೇಶನಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಈ ಮನರಂಜನೆಯ ಮಹಾ ಜಾತ್ರೆಯಲ್ಲಿ ಇಡೀ ಪುಟ್ಟಕ್ಕನ ಮಕ್ಕಳು ತಂಡ ಇರಲಿದ್ದು ನಿಮ್ಮೆಲ್ಲರನ್ನು ನೇರವಾಗಿ ಭೇಟಿಯಾಗಲಿದ್ದಾರೆ. ನಿಮ್ಮ ನೆಚ್ಚಿನ ಕಲಾವಿದರು ನಿಮ್ಮ ಸಮ್ಮುಖದಲ್ಲೇ ಕುಣಿದು ಕುಪ್ಪಳಿಸಿ ನಿಮ್ಮೆಲ್ಲ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.

More from Filmibeat

English summary
Puttakkana Makkalu serial team coming to Mandya on March 30. Serial team will have public interaction on that day.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X