Puttakkana Makkalu: ಬೆಂಕಿಯ ಕೆನ್ನಾಲಿಗೆಗೆ ಸಿಲುಕಿಕೊಂಡ ಪುಟ್ಟಕ್ಕ..ಜೀವದ ಹಂಗು ತೊರೆದು ಕಾಪಾಡಲು ಬಂದ ಕಂಠಿ!
'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಕನ್ನಡ ಕಿರುತೆರೆ ಲೋಕದ ನಂಬರ್ ಒನ್ ಧಾರಾವಾಹಿ. ಸಾಕಷ್ಟು ತಿರುವುಗಳಿಂದಲೇ ವೀಕ್ಷಕರನ್ನು ಹಿಡಿದಿಟ್ಟುಕೊಂಡಿದೆ. ಇದೀಗ ಪುಟ್ಟಕ್ಕನ ಮೆಸ್‌ಗೆ ಬೆಂಕಿ ಬಿದ್ದಿರುವುದನ್ನು ನೋಡಿದ ಪುಟ್ಟಕ್ಕ ಎದೆ ಒಡೆದುಕೊಂಡು ಅಳುತ್ತಾಳೆ.. ತನ್ನ ಕಷ್ಟಕ್ಕೆ ಆಗಿ ಬರುತ್ತಿದ್ದ ಮೆಸ್ ಇದೀಗ ಇಲ್ಲ. ತನ್ನ ಜೀವನವನ್ನು ಕಟ್ಟಿಕೊಳ್ಳಲು ಪುಟ್ಟಕ್ಕಗೆ ಮೆಸ್ ಬಹಳ ಸಹಕಾರಿ ಆಗಿತ್ತು..
ಬಂಗಾರಮ್ಮನ ಸಾಲ ತೀರಿಸಲು ಪುಟ್ಟಕ್ಕನಿಗೆ ಇದ್ದಿದ್ದು ಇದೊಂದೇ ದಾರಿ. ಆದರೆ ಆಸರೆ ಆಗಿದ್ದ ಮೆಸ್‌ಗೆ ಕಿಡಿಗೇಡಿಗಳು ಬೆಂಕಿ ಹಾಕಿದ್ದಾರೆ. ಮೆಸ್ ಸುಟ್ಟು ಭಸ್ಮ ಆಗುತ್ತಿರುವಾಗಲೇ ಪುಟ್ಟಕ್ಕ ಮೆಸ್ ಒಳಗೆ ಓಡಿ ಹೋಗಿದ್ದಾಳೆ. ಇದನ್ನು ನೋಡಿದ ನೆರೆದವರು ಬಹಳ ಶಾಕ್ ಆಗುತ್ತಾರೆ. ಪುಟ್ಟಕ್ಕ ಮೆಸ್ ಒಳಗೆ ಹೋದರೆ ಆಪತ್ತು ಖಂಡಿತ ಎನ್ನುವುದು ಎಲ್ಲರಿಗೆ ತಿಳಿದಿತ್ತು. ಪುಟ್ಟಕ್ಕನ ಮಕ್ಕಳ ಆಕ್ರಂದನ ಮುಗಿಲು ಮುಟ್ಟಿತ್ತು.

ಆದರೂ ಪುಟ್ಟಕ್ಕ ಮಾತ್ರ ಒಳಗೆ ಹೋದವಳು ಬಾರದೆ ಇರುವುದನ್ನು ನೋಡಿದ ಕಂಠಿ ಮಾತ್ರ ತನ್ನ ಪ್ರಾಣದ ಹಂಗು ತೊರೆದು ಮೆಸ್ ಒಳಗೆ ಹೋಗುತ್ತಾನೆ. ಬೆಂಕಿಯ ಕೆನ್ನಾಲಿಗೆಗೆ ಸಿಲುಕಿಕೊಂಡು ಇರುವ ಪುಟ್ಟಕ್ಕನನ್ನು ಉಳಿಸುತ್ತಾನೆ. ಪುಟ್ಟಕ್ಕನನ್ನು ಎತ್ತಿಕೊಂಡೂ ಬರುತ್ತಾನೆ ಕಂಠಿ. ಕಂಠಿ ಪುಟ್ಟಕ್ಕನನ್ನು ಎತ್ತಿಕೊಂಡು ಬರುತ್ತಿರುವುದನ್ನು ನೋಡಿದ ಆಕೆಯ ಮಕ್ಕಳಿಗೆ ಕಣ್ಣೀರು ಸುರಿಸುತ್ತಾರೆ.
ಅಮ್ಮನ ಸ್ಥಿತಿ ಕಂಡು ಮಕ್ಕಳು ಕಣ್ಣೀರು
ಆ ಬಳಿಕ ತನ್ನ ತಾಯಿ ಬಳಿ ಹೇಳುತ್ತಾರೆ. "ಯಾಕಮ್ಮ ಈ ಥರದ ನಿರ್ಧಾರ ತೆಗೆದುಕೊಳ್ಳುತ್ತಾ ಇದ್ದೀಯಾ ಏನಾಯಿತು" ಎಂದು ಕೇಳುತ್ತಾರೆ. ಆಗ ಪುಟ್ಟಕ್ಕ ತನ್ನ ತಾಯಿ ಕೊಟ್ಟಿರುವ ಹಣವನ್ನು ತೋರಿಸಿ. ಇದು ನನ್ನ ಅವ್ವ ಕೊಟ್ಟಿರುವ ಹಣ. ಇದನ್ನು ದೇವರ ಮನೆಯಲ್ಲಿ ಇಟ್ಟಿದ್ದೆ. ಅದನ್ನು ತೆಗೆದುಕೊಂಡು ಬರಲು ಹೋಗಿದ್ದೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಮಕ್ಕಳು ಏನೂ ಪ್ರಶ್ನೆ ಮಾಡಲು ಹೋಗುವುದಿಲ್ಲ.
ಕಂಠಿಗೆ ಧನ್ಯವಾದ ಹೇಳಿದ ಸ್ನೇಹಾ
ಪುಟ್ಟಕ್ಕ ಮೆಸ್ ಒಳಗೆ ಹೋದ ವೇಳೆ ತನ್ನ ಜೀವವನ್ನು ಲೆಕ್ಕಿಸದೆ ಕಂಠಿ ಹೋಗದೆ ಇದ್ದಿದ್ದರೆ ಬಹಳ ಕಷ್ಟ ಆಗಿ ಬಿಡುತ್ತದೆ ಇತ್ತು. ಇದನ್ನು ನೋಡಿದ ಸ್ನೇಹಾ ಸುಮಾ ಸಹನಾಗೆ ಕೂಡ ಹೌದು ಎನಿಸಿ ಬಿಡುತ್ತದೆ. ಸ್ನೇಹಾ, ಕಂಠಿಗೆ ಧನ್ಯವಾದ ಹೇಳುತ್ತಾಳೆ. ಇದನ್ನು ನೋಡಿದ ಕಂಠಿಗೆ ಬಹಳ ಆಶ್ಚರ್ಯ ಆಗುತ್ತದೆ. ಇದೇ ವೇಳೆ ಅಲ್ಲಿಗೆ ರಾಜೇಶ್ವರಿ ಬರುತ್ತಾಳೆ.
ಪುಟ್ಟಕ್ಕನ ಮನೆಗೆ ಆಗಮಿಸಿದ ರಾಜೀ
ಅಯ್ಯೋ ಪುಟ್ಟಕ್ಕನ ಮೆಸ್‌ಗೆ ಯಾರು ಬೆಂಕಿ ಕೊಟ್ಟವರು. ಅವರಿಗೆ ನನ್ನ ಶಾಪ ಇದ್ದೆ ಇರುತ್ತದೆ ಎಂದು ಹಿಡಿ ಶಾಪ ಹಾಕುತ್ತಾರೆ. ಇನ್ನೂ ಮೆಸ್‌ಗೆ ಬೆಂಕಿ ಇಟ್ಟ ವಿಡಿಯೋ ರಾಜೀ ಕೈ ಗೆ ಸಿಗುತ್ತದೆ. ಆಕೆ ಜೋರಾಗಿ ಹೇಳುತ್ತಾಳೆ ಮೆಸ್‌ಗೆ ಬೆಂಕಿ ಇಟ್ಟವರು ಬೇರೆ ಯಾರು ಅಲ್ಲ ಬಂಗಾರಮ್ಮನವರ ಕಡೆಯವರು ಎಂದಾಗ ನೆರೆದವರು ಎಲ್ಲರೂ ಶಾಕ್ ಆಗುತ್ತಾರೆ. ಕಂಠಿಗೆ ಇನ್ನೇನು ಸ್ನೇಹಾಳಿಂದ ಪ್ರೀತಿ ದೊರೆಯಬೇಕು ಎನ್ನುವ ವೇಳೆ ದೂರ ಆಗುತ್ತಾರಾ ಎಂಬ ಪ್ರಶ್ನೆ ಕಾಡುತ್ತಿದೆ.


Click it and Unblock the Notifications











