Puttakkana Makkalu: ಸಹನಾ ಮದುವೆಗೆ ಅಂತ ಬಂದ ಒಡವೆ ಮೇಲೆ ಎಲ್ಲರ ಕಣ್ಣು!

By ಎಸ್ ಸುಮಂತ್

ಪುಟ್ಟಕ್ಕನ ಮನೆಯಲ್ಲಿ ಮದುವೆಯ ಸಡಗರ, ಸಂಭ್ರಮ ಜೋರಾಗಿದೆ. ಕೆಲವೊಂದು ಸಂತಸದ ನಡುವೆ ಮನಸ್ತಾಪಗಳು ಚಿಗುರೊಡೆಯುತ್ತವೆ, ಹಾಗೇ ಕಡಿಮೆಯೂ ಆಗುತ್ತಿವೆ. ಆದ್ರೆ ಏನೇ ಬರಲೀ, ಏನೇ ಹೋಗಲಿ ಪುಟ್ಟಕ್ಕನ ದೊಡ್ಡ ಮಗಳು ಇಷ್ಟಪಟ್ಟಂತೆ ಮುರುಳಿ ಮೇಷ್ಟ್ರ ಜೊತೆಗೇನೆ ಮದುವೆ ನಡೆಯುತ್ತಿರುವುದು ಸಂತಸ ತಂದಿದೆ. ಮನೆಯಲ್ಲಿ ಎಲ್ಲರೂ ಖುಷಿ ಖುಷಿಯಾಗಿದ್ದಾರೆ.

ಪ್ರೀತಿಸಿದ ಒಂದು ಜೋಡಿ ಹಸೆಮಣೆ ಏರುತ್ತಿದ್ದರೆ, ಮದುವೆ ಸಂಭ್ರಮದಲ್ಲಿ ಮತ್ತೊಂದು ಜೋಡಿ ಸಿದ್ಧವಾಗುತ್ತಿದೆ. ಅದುವೇ ಸ್ನೇಹಾ - ಕಂಠಿ. ದಿನೇ ದಿನೇ ಕಂಠಿಯ ಕಾಳಜಿ, ಕಂಠಿಯ ಪ್ರೀತಿ ನೋಡಿ ಸ್ನೇಹಾ ಕಳೆದೋಗುತ್ತಿದ್ದಾಳೆ. ಇವನೇ ಬಂಗಾರಮ್ಮನ ಮಗ ಎಂದರೂ ನಂಬಿಕೆ ಬಾರದಷ್ಟರ ಮಟ್ಟಿಗೆ ನಂಬಿಕೆ ಹುಟ್ಟಿಸುತ್ತಿದ್ದಾನೆ ಶ್ರೀ. ಈಗ ಪ್ರಪೋಸ್ ಮಾಡಿದರೂ ಒಪ್ಪಿಕೊಂಡು ಬಿಡುವಷ್ಟರ ಮಟ್ಟಿಗೆ ಸ್ನೇಹಾ ಫಿದಾ ಆಗಿದ್ದಾಳೆ.

ಮದುವೆ ಶಾಸ್ತ್ರದಲ್ಲಿ ಬ್ಯುಸಿ

ಮದುವೆ ಶಾಸ್ತ್ರದಲ್ಲಿ ಬ್ಯುಸಿ

ಈಗಾಗಲೇ ಕಳೆದ ಒಂದು ವಾರದಿಂದಾನೂ ಪುಟ್ಟಕ್ಕನ ಮನೆಯಲ್ಲಿ ಮದುವೆ ಶಾಸ್ತ್ರಗಳು ನಡೆಯುತ್ತಿವೆ. ಚಪ್ಪರದ ಶಾಸ್ತ್ರ, ಬಳೆ ಶಾಸ್ತ್ರ, ಅರಿಶಿನ ಶಾಸ್ತ್ರ ಹೀಗೆ ಮದುವೆಗೆ ಸಂಬಂಧಿಸಿದ ಶಾಸ್ತ್ರಗಳು ನಡೆಯುತ್ತಿವೆ. ಈ ಎಲ್ಲಾ ಶಾಸ್ತ್ರದಲ್ಲೂ 'ಪುಟ್ಟಕ್ಕನ ಮಕ್ಕಳು' ಸಿಕ್ಕಾಪಟ್ಟೆ ಮಿಂಚುತ್ತಿದ್ದಾರೆ. ಸಹನಾ ಕೂಡ ಪ್ರತಿ ದಿನ ಧಾರಾವಾಹಿಯಲ್ಲಿ ಕಾಣುವುದಕ್ಕಿಂತ ಅದ್ಬುತವಾಗಿ ಕಾಣಿಸಿಕೊಳ್ಳುತ್ತಿದ್ದಾಳೆ.

ಸಹನಾ ಸೀರೆ ಮೇಲೆ ಎಲ್ಲರ ಕಣ್ಣು

ಸಹನಾ ಸೀರೆ ಮೇಲೆ ಎಲ್ಲರ ಕಣ್ಣು

ಮದುವೆ ಅಂದ್ರೇನೆ ಎಲ್ಲರ ಚಿತ್ತ ಅರಿಯುವುದು ಬಟ್ಟೆಗಳ ಮೇಲೆ. ಮದುವೆಯ ಹೆಣ್ಣು ಸೇರಿದಂತೆ ಮನೆಯವರೆಲ್ಲಾ ಯಾವ ರೀತಿಯ ಬಟ್ಟೆಗಳನ್ನು ಹಾಕಿಕೊಂಡು ಮಿಂಚುತ್ತಾರೆ ಎಂಬುದು. ಅದರಲ್ಲೂ ಇತ್ತೀಚೆಗೆ ಧಾರಾವಾಹಿಗಳಲ್ಲೂ ಮದುವೆ ಸಂಭ್ರಮ ಸಿಂಪಲ್ ಅಂದ್ರೂ ಅದ್ದೂರಿಯಾಗಿಯೇ ನಡೆಯುತ್ತದೆ. ಈಗ ಮುದ್ದವ್ವನ ಪುಟ್ಟಕ್ಕನ ಮನೆಯಲ್ಲಿಯೇ ನಡೆದರು ಕೂಡ, ಅಲಂಕಾರ ಮಾಡಿರುವುದು, ಶಾಸ್ತ್ರಗಳ ಆಚರಣೆ ಅದ್ದೂರಿಯಾಗಿ ಮಾಡಲಾಗುತ್ತಿದೆ. ಈ ಅದ್ದೂರಿ ಆಚರಣೆಯ ನಡುವೆ ಸಹನಾ ಅಂಡ್ ಫ್ಯಾಮಿಲಿ ಯಾವ ರೀತಿಯ ಬಟ್ಟೆ ತೊಟ್ಟಿದ್ದಾರೆ ಎಂಬುದೇ ಹೈಲೈಟ್. ಸಹನಾ ಬಳೆ ಶಾಸ್ತ್ರಕ್ಕೆ ಹಸಿರು ಹಾಗೂ ನೀಲಿ ಬಣ್ಣ ಮಿಶ್ರಿತ ಸೀರೆ ತೊಟ್ಟಿದ್ದರು. ಹಳದಿ ಶಾಸ್ತ್ರಕ್ಕೆ ಬಿಳಿ ಬಣ್ಣದ ಸೀರೆ ಇದ್ದರೆ ಚೆಂದ. ಅದಕ್ಕೆಂದೇ ಬಿಳಿ ಬಣ್ಣದ ಸೀರೆಗೆ ಕೆಂಪು ಬಾರ್ಡರ್ ಇರುವಂತ ಸೀರೆ ತೊಟ್ಟಿದ್ದರು.

ಪಿಂಕ್ ಸೀರೆಯಲ್ಲಿ ಸಹನಾ ಮಿಂಚಿಂಗ್

ಪಿಂಕ್ ಸೀರೆಯಲ್ಲಿ ಸಹನಾ ಮಿಂಚಿಂಗ್

ಮದುವೆ ಶಾಸ್ತ್ರಗಳು ಮುಗಿಯುತ್ತಾ ಬಂದಿದೆ. ಮುಹೂರ್ತಕ್ಕೆ ಸಮಯ ಹತ್ತಿರವಾಗುತ್ತಿದೆ. ಇನ್ನೇನಿದ್ದರು ಮುರುಳಿ ಮೇಷ್ಟ್ರು - ಸಹನಾ ಒಂದಾಗುವ ಸಮಯ. ಸಹನಾ ಕುತ್ತಿಗೆಗೆ ಮೂರು ಗಂಟು ಬೀಳಲಿ, ಅವಳ ಬಾಳು ಹಸನಾಗಲಿ ಎಂದೇ ಪುಟ್ಟಕ್ಕನ ಹಾರೈಕೆ. ಅದಕ್ಕೆಂದೇ ಮಗಳು ಇಷ್ಟಪಟ್ಟಿದ್ದೆಲ್ಲವನ್ನು ಕೊಡಿಸುತ್ತಿದ್ದಾರೆ. ಈಗ ಮದುವೆಯ ಮುಹೂರ್ತಕ್ಕಾಗಿ ಮುದ್ದವ್ವ ಹಾಕಿದ ಸೀರೆ ಎಲ್ಲರ ಆಕರ್ಷಣೆಗೆ ಒಳಗಾಗಿದೆ.

ಸಹನಾಗೆ ಇದು ಪುಟ್ಟಕ್ಕ ಕೊಡಿಸಿದ ಸೀರೆ ಅಲ್ಲ

ಸಹನಾಗೆ ಇದು ಪುಟ್ಟಕ್ಕ ಕೊಡಿಸಿದ ಸೀರೆ ಅಲ್ಲ

ಸಹನಾ ಮದುವೆಗೆ ಅದ್ದೂರಿ ತಯಾರಿ ನಡೆದಿದೆ. ಚೆಂದವಾದ ಸೀರೆಯನ್ನುಟ್ಟು ಅಂದವಾಗಿ ಸಹನಾ ಕೂಡ ಸಿದ್ಧವಾಗಿದ್ದಾಳೆ. ಪುಟ್ಟಕ್ಕ ಬಂಗಾರಮ್ಮನ ಬಳಿ ಸಾಲ ಸೋಲ ಮಾಡಿ, ಗಂಡಿನ ಕಡೆಯವರು ಕೇಳಿದಂತೆ ಮದುವೆ ತಯಾರಿ ನಡೆಸಿದ್ದಾಳೆ. ಮಗಳಿಗೆ ಏನೆಲ್ಲಾ ಬೇಕೋ ಅದನ್ನು ಕೊಡಿಸಿದ್ದಾಳೆ. ಸೀರೆಯ ಶಾಪಿಂಗ್ ಕೂಡ ಆಗಿದೆ. ಒಡವೆಗಳನ್ನು ಕೊಡಿಸಿದ್ದಾರೆ. ಆದರೆ ಮುದ್ದವ್ವನಿಗೆ ಒಡವೆ ಗಿಫ್ಟ್ ಅಂದ್ರೆ ಸ್ಪಾನ್ಸರ್ ಮಾಡಿರುವುದು Waymore-priyanka.

More from Filmibeat

English summary
Puttakkana Makkalu Serial Written Update About Sahana Marriage. Here is the details about Sahana marriage and jewellery.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X