For Quick Alerts
  ALLOW NOTIFICATIONS  
  For Daily Alerts

  ಕಂಠಿ ಪ್ರೀತಿಗೆ ಮನಸೋಲುತ್ತಿರುವ ಸ್ನೇಹ, ರಾಜಿಗೆ ತಕ್ಕ ಪಾಠ ಕಲಿಸಿದಳೇ ಬಂಗಾರಮ್ಮ?

  By ಪೂರ್ವ
  |

  ಪುಟ್ಟಕ್ಕನ ಮಕ್ಕಳು ಧಾರವಾಹಿಯ ಎಲ್ಲಾ ನಟರು ಮನೋಜ್ಞವಾಗಿ ನಟನೆ ಮಾಡುತ್ತಿದ್ದಾರೆ, ಇದರಿಂದ ಧಾರವಾಹಿಯೂ ಜನ ಮನ ಗೆದ್ದಿದೆ. ಇದೀಗ ರಾಜಿ ಕೆಂಗಣ್ಣು ಸ್ನೇಹ ಹಾಗೂ ಕಂಠಿ ಪ್ರೀತಿ ಮೇಲೆ ಬಿದ್ದಿದೆ. ಬಂಗಾರಮ್ಮನ ಮೇಲಿನ ಸೇಡಿಗಾಗಿ ಜಿದ್ದಿಗೆ ಬಿದ್ದಿರುವ ರಾಜಿ, ಬಂಗಾರಮ್ಮನ ಮಾನ, ಮರ್ಯಾದೆ ತೆಗೆಯಲು ಹೊಂಚು ಹಾಕುತ್ತಿದ್ದಾಳೆ, ಹಾಗೆಯೇ ಸರಿಯಾಗಿ ಮಂಗಳಾರತಿಯನ್ನು ಮಾಡಿಸಿಕೊಳ್ಳುತ್ತಿದ್ದಾಳೆ.

  ಪುಟ್ಟಕ್ಕನ ಮಗಳು ಸ್ನೇಹ ಮತ್ತು ಬಂಗಾರಮ್ಮನ ಮಗ ಕಂಠಿಯ ನಡುವೆ ಪ್ರೇಮ ಚಿಗುರಿದೆ. ಎದೆ ಮೇಲೆ ಅವ್ವ ಅಂತ ಬಂಗಾರಮ್ಮನ ಹಚ್ಚೆ ಹಾಕಿಸಿಕೊಂಡಿರೋ ಕಂಠಿಯನ್ನು ಸ್ನೇಹ ಒಳಗೊಳಗೇ ಮೆಚ್ಚುತ್ತಿರುವಂತೆ ಕಾಣುತ್ತಿದೆ. ಇದಕ್ಕೆ ಸರಿಯಾಗಿ ಅವರಿಬ್ಬರನ್ನು ಮತ್ತೂ ಹತ್ತಿರಾಗಿಸುವ ಸನ್ನಿವೇಶವೊಂದು ನಿರ್ಮಾಣವಾಗಿದೆ. ಆದರೆ ಈ ಆಕಸ್ಮಿಕವನ್ನು ದುಷ್ಟ ಬುದ್ಧಿಯ ರಾಜಿ ಬೇರೆಯೇ ರೀತಿ ಬಂಗಾರಮ್ಮನಿಗೆ ರಿಪೋರ್ಟ್ ಮಾಡುತ್ತಿದ್ದಾಳೆ. ಇದು ನಿಜವಾ ಎಂದು ಖಚಿತಪಡಿಸಿಕೊಳ್ಳಲು ಬಂಗಾರಮ್ಮನ ರಾಜಿ ಹೇಳಿದ ಜಾಗಕ್ಕೆ ಬಂದರೆ ಅಲ್ಲಿ ಸ್ನೇಹಾ ಬದಲಿಗೆ ಬಂಗಾರಮ್ಮ ಆಯ್ಕೆ ಮಾಡಿರುವ ಹುಡುಗಿ ಕಂಠಿ ಜೊತೆ ಇರುವುದನ್ನು ಕಂಡ ಬಮಗಾರಮ್ಮ ಸಮಾಧಾನಗೊಳ್ಳುತ್ತಾಳೆ ಹಾಗೆಯೇ ರಾಜೇಶ್ವರಿಗೆ ತಕ್ಕ ಶಾಸ್ತಿ ಮಾಡಿದ್ದಾಳೆ.

  ಜನ್ಮದಿನ: ಕಲ್ಲು-ಮುಳ್ಳಿನ ಹಾದಿಯಲ್ಲಿ ಅರಳಿದ ಹೂವು ಉಮಾಶ್ರೀಜನ್ಮದಿನ: ಕಲ್ಲು-ಮುಳ್ಳಿನ ಹಾದಿಯಲ್ಲಿ ಅರಳಿದ ಹೂವು ಉಮಾಶ್ರೀ

  ಪುಟ್ಟಕ್ಕನ ಮಗಳು ಸ್ನೇಹಾ ಜೊತೆಗೆ ಕಂಠಿ ಪ್ರೀತಿಯಲ್ಲಿದ್ದಾನೆ ಅನ್ನೋದು ಗೊತ್ತಾದ್ರೆ ಅವಳೇನು ಮಾಡಬಹುದು? ಹಾಗೆಯೇ ಈಗ ಚಿಗುರುತ್ತಿರುವ ಪ್ರೀತಿಗೆ ಅವಳ ಪ್ರತಿಕ್ರಿಯೆ ಹೇಗಿರಬಹುದು ಅನ್ನುವುದು ಜನರ ಕುತೂಹಲಕ್ಕೆ ಕಾರಣವಾಗಿದೆ. ಬಂಗಾರಮ್ಮನ ಪಾತ್ರದಲ್ಲಿ ಮಿಂಚುತ್ತಿರುವ ಮಂಜುಭಾಷಿಣಿಯ ನಟನೆಯನ್ನು ಜನ ಮೆಚ್ಚಿಕೊಳ್ಳುತ್ತಿದ್ದಾರೆ. ಇನ್ನು ಹಲ್ಲು ಕಿತ್ತ ಹಾವಿನ ಥರ ಬುಸುಗುಡುತ್ತಿರುವ ರಾಜೀ ಬಂಗಾರಮ್ಮನನ್ನು ನೋಡಿ ಕತ್ತಿ ಮಸೆಯುತ್ತಿದ್ದಾಳೆ. ಇತ್ತ ಪುಟ್ಟಕ್ಕನ ಸ್ನೇಹಿತೆ, ಕೆಲಸ ಮಾಡುವಾಕೆ ಲಕ್ಷ್ಮೀ ಗಂಡ ಕುಡಿದು ಆಸ್ಪತ್ರೆಗೆ ದಾಖಲಾಗಿದ್ದಾನೆ ಲಕ್ಷ್ಮವ್ವ ಪುಟ್ಟಕ್ಕನಿಗೆ ಫೋನ್ ಮಾಡಿ ನಡೆದ ವಿಚಾರ ತಿಳಿಸಿದಾಗ ಪುಟ್ಟಕ್ಕನಿಗೆ ಲಕ್ಷ್ಮವ್ವ ಮೇಲೆ ಮರುಕ ಹುಟ್ಟ ಉಟ್ಟುವಂತೆ ಆಗಿದೆ.

  ಇನ್ನೂ ಬಂಗಾರಮ್ಮನ ಮನೆಗೆ ಊಟಕ್ಕೆ ಬರುವುದಾಗಿ ಪುಟ್ಟಕ್ಕ ಹೇಳಿದ್ದಾಳೆ. ಪುಟ್ಟಕ್ಕನಿಗೆ ಈವಾಗ ಏನು ಮಾಡಬೇಕೆಂಬುವುದೇ ತೋಚದಾಗಿದೆ. ಇತ್ತ ಸ್ನೇಹ ಹಾಗೂ ಅವಳ ತಂಗಿ ಹಚ್ಚೆ ಹಾಕಿಕೊಂಡಿರುವಾತ ಯಾರು? ಎಂಬುವುದನ್ನು ಹುಡುಕಾಟ ಮಾಡುತ್ತಿದ್ದಾರೆ. ಹಾಗೆಯೇ ಸ್ನೇಹ ಮೊಬೈಲ್‌ಗೆ ಕಾಲ್ ಮಾಡಿದಾತ ಯಾರು ಎಂದು ಹುಡುಕಾಟ ನಡೆಸುತ್ತಿದ್ದಾರೆ. ಸ್ನೇಹಾ ತಂಗಿ ಮೊಬೈಲ್‌ನಿಂದ ಆ ನಂಬರ್‌ಗೆ ಕಾಲ್ ಮಾಡಿದ್ರೆ ಸಿಕ್ಕಿ ಬೀಳಬಹುದು ಎಂದು ಆ ರೀತಿ ಮಾಡುತ್ತಾರೆ ಆದರೆ ಕಂಠಿ ಪ್ರೆಂಡ್ ನಂಬರ್‌ನ್ನು ಬೇರೆ ಮೊಬೈಲ್‌ನಲ್ಲಿ ಹಾಕಿದಾಗ ಇದು ಸ್ನೇಹ ತಂಗಿ ನಂಬರ್ ಎಂದು ತಿಳಿಯುತ್ತದೆ. ಸ್ನೇಹನ ಕಿಲಾಡಿತನಕ್ಕೆ ಮಾರು ಹೋದ ಕಂಠಿ ಮುಂದೇನು ಮಾಡುತ್ತಾನೆ ಎಂಬುವುದೇ ಯಕ್ಷ ಪ್ರಶ್ನೆಯಾಗಿದೆ.

  English summary
  Puttakkana Makkalu Serial Written Update of 11 May Episode. Hear is more details.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  Desktop Bottom Promotion