ಪುಟ್ಟಕ್ಕನ ಮಕ್ಕಳು: ಎಲ್ಲಿ ಹೋಗಿ ಮುಟ್ಟುತ್ತೆ ಸಹನಾ, ಮೇಷ್ಟ್ರು ಲವ್ ಸ್ಟೋರಿ
ಪುಟ್ಟಕ್ಕನ ಮಕ್ಕಳು ಧಾರವಾಹಿ ಚೆನ್ನಾಗಿ ಮೂಡಿಬರುತ್ತಿದೆ. ಅಭಿಮಾನಿಗಳು ಉಮಾಶ್ರೀ ಅಭಿನಯಕ್ಕೆ ಫಿದಾ ಆಗಿದ್ದಾರೆ. ಈಗಂತೂ ಸಹನಾ ಹಾಗೂ ಮೇಸ್ಟ್ರು ಲವ್ ಸ್ಟೋರಿ ನೋಡೋದಕ್ಕೆ ಜನ ಕಾಯುವ ರೀತಿ ಆಗಿದೆ. ಮೇಷ್ಟ್ರಿಗೆ ಊಟ ತಂದುಕೊಟ್ಟಿರುವ ಸಹನಾಳನ್ನು ನೆನಪಿಸಿಕೊಳ್ಳುತ್ತಿರಬೇಕಾದರೆ ಮೇಷ್ಟ್ರ ಮನೆ ಕದವನ್ನು ಯಾರೋ ತಟ್ಟುತ್ತಿರುವ ಹಾಗೆ ಭಾಸವಾಗುತ್ತದೆ. ಮೇಷ್ಟ್ರು ಮನೆ ಬಾಗಿಲು ತೆಗೆದು ನೋಡುವಾಗ ಎದುರಿಗೆ ಸಹನಾ ನಿಂತಿರುತ್ತಾಳೆ ಇದನ್ನು ನೋಡಿದ ಮೇಷ್ಟ್ರಿಗೆ ಬಹಳ ಖುಷಿಯಾಗುತ್ತದೆ, ಆದರೆ ಪಕ್ಕದಲ್ಲಿ ಪುಟ್ಟಕ್ಕ ಹಾಗೂ ಪುಟ್ಟಕ್ಕನ ಕೊನೆ ಮಗಳು ನಿಂತಿರುತ್ತಾಳೆ. ಅದನ್ನು ನೋಡಿ ಒಮ್ಮೆ ಮೇಷ್ಟ್ರು ಶಾಕ್ ಆಗಿದ್ರು ಸ್ವಲ್ಪ ಸಮಾಧಾನ ಮಾಡಿಕೊಂಡು ಪುಟ್ಟಕ್ಕ ಹಾಗೂ ಅವರ ಮಕ್ಕಳುನ್ನು ಮಾತಾಡಿಸುತ್ತಾರೆ. ಪುಟ್ಟಕ್ಕ ಮೇಷ್ಟ್ರು ಬಳಿ 'ಹೇಗಿದ್ದೀರಾ ಚೆನ್ನಾಗಿದ್ದೀರ' ಎಂದು ಕೇಳುತ್ತಾಳೆ. ಅದಕ್ಕೆ ಮೇಷ್ಟ್ರು ನಿಮ್ಮ ಮನೆ ಊಟ ಮಾಡಿ ಸ್ವಲ್ಪ ಚೆನ್ನಾಗಿದ್ದೀನಿ ಎಂದು ಹೇಳುತ್ತಾರೆ. ಪುಟ್ಟಕ್ಕನನ್ನು ಮನೆ ಒಳಗೆ ಆದರದಿಂದ ಮೇಷ್ಟ್ರು ಕರೆಯುತ್ತಾರೆ. ಅದಕ್ಕೆ ಪುಟ್ಟಕ್ಕನ ಸಣ್ಣ ಮಗಳು ಮನೆ ಒಳಗೆ ಬಂದರೆ ಚಹಾ ಕುಡುತ್ತಿರಾ ಎಂದು ಹಾಸ್ಯ ಚಟಾಕಿ ಹಾರಿಸುತ್ತಾಳೆ.
ಸ್ನೇಹಾ ಕಂಠಿಯ ಜೀಪ್ ಹತ್ತಿ ಪೊಲೀಸ್ ಠಾಣೆಗೆ ತೆರಳಿದ್ದಾಳೆ. ಸ್ನೇಹಾ ಬಂಗಾರಮ್ಮ ಮನೆಗೆ ಊಟಕ್ಕೆ ಕರೆದಿರುವ ವಿಚಾರವನ್ನು ಪ್ರಸ್ತಾಪ ಮಾಡಿದ್ದಾಳೆ. ಬಡ್ಡಿ ಬಂಗಾರಮ್ಮ ಬಗ್ಗೆ ಸಿಡುಕಿನ ಮಾತುಗಳನ್ನು ಆಡುವಾಗ ಕಂಠಿಗೆ ಬಹಳ ಕಷ್ಟವಾಗುತ್ತಿರುತ್ತದೆ. ಬಂಗಾರಮ್ಮ ಬಗ್ಗೆ ಸ್ನೇಹ ತಪ್ಪು ತಿಳಿದುಕೊಳ್ಳುತ್ತಿದ್ದಾಳೆ. ಇದನ್ನು ಕಂಠಿ ಸ್ನೇಹಳಿಗೆ ಯಾವ ರೀತಿ ತಿಳಿ ಹೇಳುತ್ತಾನೆ ಎಂಬುವುದನ್ನು ಕಾದು ನೋಡಬೇಕಿದೆ. ಹಾಗೆಯೇ ಪೊಲೀಸ್ ಠಾಣೆಗೆ ಆಗಮಿಸಿದ ಸ್ನೇಹ, ಕಾಳಿ ಹಾಗೂ ರಾಜೇಶ್ವರಿ ಮೇಲೆ ಕಂಪ್ಲೇಟ್ ಕೊಡಲು ಮುಂದಾಗುತ್ತಾಳೆ. ಹಾಗೆಯೇ ಪೊಲೀಸರ ಮೇಲೆ ಇರುವ ಅಪನಂಬಿಕೆಯನ್ನು ಬಿಚ್ಚಿಡುತ್ತಾಳೆ. ಹೋದ ಬಾರಿ ಬಂಗಾರಮ್ಮನ ಮಗನ ಮೇಲೆ ಕಂಪ್ಲೇಟ್ ಕೊಟ್ಟಿರುವ ಬಗ್ಗೆ ಮಾಹಿತಿಯನ್ನು ಹೇಳುತ್ತಾಳೆ. ಹಳೇ ಎಸ್.ಐ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದನ್ನು ಹೇಳುತ್ತಾಳೆ. 'ನೀವು ಕೊಟ್ಟ ಕಂಪ್ಲೇಂಟ್ ಕಾಪಿ ಮಿಸ್ ಆಗಿದೆ' ಹೊಸ ಪೊಲೀಸ್ ಅಧಿಕಾರಿ ಸ್ನೇಹ ಬಳಿ ಹೇಳುತ್ತಾನೆ. ನೀವು ಮತ್ತೆ ಕಂಪ್ಲೇಟ್ ಬರೆದುಕೊಡಬಹುದಾ ಎಂದು ಕೇಳುತ್ತಾನೆ.
ಇನ್ನು ಪುಟ್ಟಕ್ಕ ಬಂಗಾರಮ್ಮನ ಮನೆಗೆ ತಲುಪಿದ್ದಾಳೆ. ಬಂಗಾರಮ್ಮ, ಪುಟ್ಟಕ್ಕಳನ್ನು ಬಹಳ ಆದರದಿಂದ ಭರ ಮಾಡಿಕೊಳ್ಳುತ್ತಾಳೆ. ಸ್ನೇಹನ ಬಗ್ಗೆ ಬಂಗಾರಮ್ಮ ವಿಚಾರಿಸಿದಾಗ ಪುಟ್ಟಕ್ಕನಿಗೆ ಏನು ಹೇಳಬೇಕು ಎಂದು ತೋಚುವುದಿಲ್ಲ ಪುಟ್ಟಕ್ಕನಿಗೆ. ಆಗ ಬಂಗಾರಮ್ಮನೇ, ''ಅವಳಿಗೆ ನನ್ನ ಮೇಲೆ ಸಿಟ್ಟು ಹೋಗಿಲ್ಲ ಎಂದು ಕಾಣುತ್ತದೆ. ಪೂರ್ವಿ ತಾಯಿ ಸರಳ ಪುಟ್ಟಕ್ಕನ ಬಳಿ ಊಟಕ್ಕೆ ಬರಲ್ಲ ಎಂದು ಇಷ್ಟು ಹೇಳಲು ಇಲ್ಲಿ ತನ್ಕ ಬಂದ್ರ'' ಎಂದು ಕೇಳಿದಾಗ ಬಂಗಾರಮ್ಮ, ಪುಟ್ಟಕ್ಕನ ಪರವಾಗಿ ಬ್ಯಾಟಿಂಗ್ ಮಾಡುತ್ತಾಳೆ. ಬಳಿಕ ನೀವಾದರೂ ನಮ್ಮ ಆತಿಥ್ಯ ಸ್ವೀಕರಿಸಲೇ ಬೇಕು ಎಂದು ಬಂಗಾರಮ್ಮ ಒತ್ತಾಯಿಸುತ್ತಾಳೆ.

ಇನ್ನು ರಾಜೇಶ್ವರಿಯ ತಮ್ಮ ಕಾಳಿ ಏನೂ ಮಸಲತ್ತು ಮಾಡುತ್ತಿದ್ದಾನೆ. ಬಾರ್‌ನಲ್ಲಿ ಅಸ್ವಸ್ಥ ಆಗಿದ್ದ ಶಾರದಕ್ಕನ ಗಂಡ ಇದೀಗ ಆಸ್ಪತ್ರೆಯಲ್ಲಿ ಇದ್ದಾನೆ. ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ, ಇತ್ತ ಕಾಳಿ ನರ್ಸ್‌ಗೆ ಹಣ ಕೊಟ್ಟು ಏನು ಮಾಡಲು ಹೊರಟ್ಡಿದ್ದಾನೆ ಎಂಬುವುದೇ ಯಕ್ಷ ಪ್ರಶ್ನೆಯಾಗಿದೆ. ಉತ್ತರಕ್ಕೆ ಮುಂದಿನ ಎಪಿಸೋಡ್ ನೋಡಬೇಕಿದೆ.


Click it and Unblock the Notifications











