ತಾಂಡವ್ ವಿರುದ್ಧ ಸಮರ ಸಾರಿದ ಕಂಠಿ: 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಮುಂದೇನು?

By ಪೂರ್ವ

ಚೆನ್ನಾಗಿ ಮೂಡಿಬರುತ್ತಿರುವ ಕನ್ನಡ ಧಾರಾವಾಹಿಗಳಲ್ಲಿ ಒಂದು 'ಪುಟ್ಟಕ್ಕನ ಮಕ್ಕಳು'. ವೀಕ್ಷಕರಿಗೆ ಈ ಧಾರವಾಹಿ ಬಲು ಪ್ರಿಯವಾಗಿದೆ. ಅದರಲ್ಲೂ ಪುಟ್ಟಕ್ಕನ ಪಾತ್ರದಲ್ಲಿ ನಟಿಸುತ್ತಿರುವ ಉಮಾಶ್ರೀ ಅಭಿನಯಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ಈ ಧಾರವಾಹಿಯಲ್ಲಿ ನಟಿಸುತ್ತಿರುವ ಎಲ್ಲ ನಟರ ಅಭಿನಯ ಬಹಳ ಮನೋಜ್ಞವಾಗಿ ಮೂಡಿಬರುತ್ತಿದೆ. ಇದೀಗ ಕಂಠಿಯನ್ನು ಅರೆಸ್ಟ್ ಮಾಡಲು ಹೊರಟಿದ್ದಾರೆ ಪೊಲೀಸ್ ಇನ್ಸ್‌ಪೆಕ್ಟರ್ ತಾಂಡವ್. ಆ ಠಾಣೆಯಲ್ಲಿರುವ ಎಲ್ಲಾ ಪೊಲೀಸರಿಗೆ ತಿಳಿದಿರುತ್ತದೆ ಬಂಗಾರಮ್ಮ ಅವರ ಪವರ್ ಹಾಗೆಯೇ ಖದರ್, ಇನ್ನೂ ಬಂಗಾರಮ್ಮ ಅವರ ಮಗನನ್ನು ಅರಸ್ಟ್ ಮಾಡಲು ಬಂದರೆ ಬಿಡ್ತಾರ? ಪೊಲೀಸ್ ಇನ್ಸ್ ಪೆಕ್ಟರ್ ಬರಲಿ ಮನೆಗೆ ಏನು ಕೇಸ್ ಕೊಟ್ಟಿದ್ದಾರೆ ಯಾರು ಕೇಸ್ ಕೊಟ್ಟಿದ್ದಾರೆ ಎಂಬುವುದನ್ನೆಲ್ಲ ತಿಳಿದುಕೊಳ್ಳಬೇಕು ಹಾಗೆಯೇ ತಪ್ಪೆ ಮಾಡದ ನನ್ನ ಮಗನಿಗೆ ಯಾಕೆ ಶಿಕ್ಷೆ ಕೊಡಿಸಬೇಕು ಎಂಬುವುದು ಬಂಗಾರಮ್ಮನ ವಾದ.

ಇನ್ನೂ ಇತ್ತ ಸ್ನೇಹಾ, ಕಂಠಿ ಮೇಲೆ ಕೇಸ್ ಕೊಟ್ಟಿರುವುದು ಜನರ ಒಳಿತಿಗಾಗಿ ಎಂಬುದು ಆಕೆಯ ದೃಷ್ಟಿ ಕೋನ. ಇನ್ನು ತಾಂಡವ್ ಕಂಠಿಯನ್ನು ಅರೆಸ್ಟ್ ಮಾಡಲು ಕಾಯುತ್ತಿದ್ದಾನೆ, ಕಂಠಿಯನ್ನು ಅರೆಸ್ಟ್ ಮಾಡುತ್ತಾರಾ ಪೊಲೀಸಪ್ಪ? ಇಷ್ಟೆಲ್ಲ ಆದ್ರೂ ಸ್ನೇಹಾಗೆ ಬುದ್ಧಿ ಬಂದಿಲ್ಲ, ಮುಂಗೋಪದಿಂದ ಅಪಾಯಕ್ಕೆ ಸಿಲುಕಿಕೊಳ್ಳುತ್ತಾಳಾ ಸ್ನೇಹ ಎಂದು ಸ್ನೇಹ ತಾಯಿ ಪುಟ್ಟಕ್ಕ ಭಯಗೊಳ್ಳುತ್ತಿರುತ್ತಾಳೆ. ಕಾಳಿ ವಿರುದ್ಧ ಕಂಪ್ಲೇಂಟ್ ಕೊಡಲು ಹೋಗಿ ಕಂಠಿ ವಿರುದ್ಧ ಕೂಡ ಸಮರ ಸಾರುತ್ತಿದ್ದಾಳೆ. ಆಕೆಯ ಜೊತೆಗಿದ್ದು ಆಕೆಗೆ ಬೆನ್ನುಲುಬಾಗಿ ನಿಂತ ಕಂಠಿ ಎಂದು ಇದುವರೆಗೂ ಆಕೆಗೆ ತಿಳಿದಿಲ್ಲ. ಕಂಠಿ ಅಂದ್ರೆ ಯಾರು, ಆತನ ಮುಖ ಪರಿಚಯವೇ ಇಲ್ಲ ಸ್ನೇಹಾಗೆ. ಇನ್ನೂ ಇತ್ತ ಬಂಗಾರಮ್ಮನ ಮನೆಯಲ್ಲಿ ಪುಟ್ಟಕ್ಕ, ಸಹನಾ ಆಕೆಯ ಚಿಕ್ಕ ಮಗಳು ಇರುತ್ತಾರೆ. ಪುಟ್ಟಕ್ಕ ಗಾಬರಿಯಿಂದ ಏನು ಮಾಡುವುದು ಬಂಗಾರಮ್ಮನ ಮಗನ ವಿರುದ್ಧ ಕಂಪ್ಲೇಂಟ್ ಕೊಟ್ಟಿರುವುದು ಸ್ನೇಹನೇ ಎಂಬ ವಿಚಾರ ಮಾತ್ರ ಪುಟ್ಟಕ್ಕನಿಗೆ ತಿಳಿದಿದೆ.

ಇನ್ನು ಬಂಗಾರಮ್ಮ ಪುಟ್ಟಕ್ಕನನ್ನು ಬರ ಹೇಳಿರುವುದು ಅಥಿತಿ ಸತ್ಕಾರಕ್ಕೆ, ಬಂಗಾರಮ್ಮ, ಪುಟ್ಟಕ್ಕನನ್ನು ಊಟಕ್ಕೆ ಕುಳಿತುಕೊಳ್ಳಲು ಹೇಳಿದಾಗ ಪುಟ್ಟಕ್ಕ ನಯವಾಗಿ ತಿರಸ್ಕಾರ ಮಾಡುತ್ತಾಳೆ. ಆದ್ರೂ ಬಂಗಾರಮ್ಮ ಊಟ ಮಾಡಿಯೇ ತೆರಳಬೇಕು ಎಂದು ಹೇಳುತ್ತಾರೆ ಆ ಕಾರಣದಿಂದಾಗಿ ಊಟ ಮಾಡಿ ತೆರಳಬೇಕಾದ ಅನಿವಾರ್ಯ ಎದುರಾಗಿದೆ. ತನ್ನೊಂದಿಗೆ ಜಗಳವಾಡಿದಳು, ಕಂಠಿ ವಿರುದ್ಧ ಕೇಸ್ ಕೊಟ್ಟವಳು ಪುಟ್ಟಕ್ಕನ ಮಗಳೆಂದು ಬಂಗಾರಮ್ಮಗೆ ಅರಿವಾಗುತ್ತಾ? ಎಂಬುವುದು ಜನರ ಪ್ರಶ್ನೆ.

Puttakkana Makkalu Serial Written Update of 22 May Episode

ಕಂಠಿಯ ಪೇಚಾಟಕ್ಕೆ ಕಾರಣವಾದ ಸ್ನೇಹಾ ಮೇಲೆ ಚೂರೂ ಮುನಿಸು ತೋರ್ಪಡಿಸದ ಕಂಠಿ, ತಾಯಿ ವಿರುದ್ಧ ಕೆಟ್ಟದಾಗಿ ಮಾತನಾಡಿದ ಪೊಲೀಸ್ ಅಧಿಕಾರಿಯ ಮೇಲೆ ಉಗ್ರ ಕೋಪ ತಾಳಿದ್ದಾನೆ. ಇನ್ಸ್‌ಪೆಕ್ಟರ್ ತಾಂಡವ್ ಹಾಗೂ ಸ್ನೇಹಾ, ಕಂಠಿ , ಒಂದೇ ಜೀಪಿನಲ್ಲಿ ಬಂಗಾರಮ್ಮನ ಮಗನ್ನು ಅರೆಸ್ಟ್ ಮಾಡಲು ಹೋಗುತ್ತಿರುತ್ತಾರೆ. ಆ ವೇಳೆ ರಸ್ತೆಯಲ್ಲಿ ವಾಗ್ವಾದ ನಡೆಯುತ್ತಿರುತ್ತದೆ. ಅದನ್ನು ಸರಿಪಡಿಸಲು ಪೊಲೀಸ್ ತೆರಳಿದ ವೇಳೆ ಕಂಠಿ ಜೀಪಿನಿಂದ ಇಳಿದು ತನ್ನ ಗೆಳೆಯನಿಗೆ ಕಾಲ್ ಮಾಡುತ್ತಾರೆ. ಇತ್ತ ಕಂಠಿ ಗೆಳೆಯ ಮಾರ್ಕೇಟಿಗೆ ಬರುವಂತೆ ತಾಂಡವ್‌ನನ್ನು ಕೆರಳಿಸಿದ್ದಾನೆ. ತಾಂಡವ್ ಮಾರ್ಕೇಟಿಗೆ ಬರುತ್ತಿದ್ದಂತೆ ಕಂಠಿ ಮುಖಮುಚ್ಚಿಕೊಂಡು ತಾಂಡವ್‌ಗೆ ಮನಬಂದಂತೆ ಥಳಿಸಿದ್ದಾನೆ. ಕಂಠಿ ಉಗ್ರ ಅವತಾರ ನೋಡಿದ ಜನ ದಂಗಾಗಿದ್ದಾರೆ.

More from Filmibeat

English summary
Puttakkana Makkalu Serial Written Update of 22 May Episode. Hear is more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X