ಬಂಗಾರಮ್ಮನ ವಿರುದ್ಧ ನಿಂತ ಸ್ನೇಹಾ: ದಂಗಾದ ಪುಟ್ಟಕ್ಕ

By ಪೂರ್ವ

ಕಿರುತೆರೆ ಹಲವು ಧಾರವಾಹಿಗಳಲ್ಲಿ ಪೈಪೋಟಿ ಇದೆ. ಆದರೆ 'ಪುಟ್ಟಕ್ಕನ ಮಕ್ಕಳು' ಧಾರವಾಹಿ ವಿಭಿನ್ನ ರೀತಿಯಲ್ಲಿ ಮೂಡಿಬರುತ್ತಿದೆ. ಬಂಗಾರಮ್ಮನ ಮನೆಗೆ ಊಟಕ್ಕೆ ತೆರಳಿರುವ ಪುಟ್ಟಕ್ಕಗೆ ಒಂದಲ್ಲ ಒಂದು ಸಂಕಷ್ಟ ಎದುರಾಗುತ್ತಲೇ ಇದೆ. ಭಯದಲ್ಲಿಯೇ ಬಂಗಾರಮ್ಮ ಮನೆಯಲ್ಲಿ ಊಟ ಮಾಡುವ ಪರಿಸ್ಥಿತಿ ಪುಟ್ಟಕ್ಕನದ್ದು.

ಹಾಗೆಯೇ ಊಟ ಮಾಡುತ್ತಿರಬೇಕಾದರೆ ರಾಜೇಶ್ವರಿಯ ರಗಳೆ ಬೇರೆ. ಪುಟ್ಟಕ್ಕನ ಮನೆಗೆ ಶಾರದಕ್ಕನ ಬದಲಾಗಿ ಇನ್ನೊಬ್ಬಾಕ್ಕೆ ಕೆಲಸಕ್ಕೆ ಬಂದಿದ್ದಾರೆ. ಆಕೆ ರಾಜೇಶ್ವರಿ ಕಡೆಯವಳು ಎಂಬ ವಿಚಾರ ಪುಟ್ಟಕ್ಕಗೆ ಅರಿವಿಲ್ಲ. ಇತ್ತ ಹೋಟೆಲ್ ಕೆಲಸದಾಕೆ ಶಾರದಾಳ ಗಂಡ ಆಸ್ಪತ್ರೆಯಲ್ಲಿ ಹುಷಾರಿಲ್ಲದೇ ಇದ್ದಾರೆ. ಇತ್ತ ಮತ್ತೊಬ್ಬ ಹೋಟೆಲ್ ಕೆಲಸದಾಕೆ ಪುಟ್ಟಕ್ಕನ ತಿಜೋರಿಗೆ ಕೈ ಹಾಕಿ 200 ರೂ. ಎಗರಿಸಿದ್ದಾಳೆ!

ಇನ್ನೂ ಪುಟ್ಟಕ್ಕನ ಮೆಸ್ ಬಳಿ ರಾಜೇಶ್ವರಿ ಆಗಮಿಸಿದ್ದಾಳೆ. ಪುಟ್ಟಕ್ಕ ಮನೆಯಲ್ಲಿ ಇಲ್ಲ ಎಂಬುವುದನ್ನು ತಿಳಿದು ರಾಜೇಶ್ವರಿ ಆಗಮಿಸಿದ್ದಾಳೆ, ರಾಜೇಶ್ವರಿಯನ್ನು ಕಂಡೊಡನೆ ಪುಟ್ಟಕ್ಕನ ಮನೆಗೆಲಸದವಳು ಓಡಿ ಬಂದು ರಾಜೇಶ್ವರಿ ಬಳಿ ಭಯದಲ್ಲಿ ಮಾತನಾಡಿಸಿದ್ದಾಳೆ. ಇತ್ತ ಮನೆಗೆಲಸದಾಕೆ ರಾಜೇಶ್ವರಿಗೆ ಪುಟ್ಟಕ್ಕ ಬಂಗಾರಮ್ಮನ ಮನೆಗೆ ತೆರಳಿರುವುದನ್ನು ಹೇಳಿದ್ದಾರೆ. ಇದನ್ನು ತಿಳಿದ ರಾಜೇಶ್ವರಿಗೆ ಹೊಟ್ಟೆಕಿಚ್ಚಾಗುತ್ತದೆ.

ರಾಜೇಶ್ವರಿ ಮೇಲೆ ಬಂಗಾರಮ್ಮ ಸಿಟ್ಟು

ರಾಜೇಶ್ವರಿ ಮೇಲೆ ಬಂಗಾರಮ್ಮ ಸಿಟ್ಟು

ಮೆಸ್ ಬಳಿ ಬರಬೇಡಿ ಏನೆ ಇದ್ದರು ಫೋನ್‌ನಲ್ಲಿ ನಿಮಗೆ ತಿಳಿಸುತ್ತೇನೆ ಎಂದು ಹೇಳುತ್ತಾಳೆ ಆ ಕೆಲಸದಾಕೆ. ಬಳಿಕ ರಾಜೇಶ್ವರಿ ಕೈಯಿಂದ ದುಡ್ಡು ತೆಗೆದುಕೊಂಡು ಮೆಸ್‌ ಒಳಗೆ ಹೋಗುತ್ತಾಳೆ ಕೆಲಸದಾಕೆ. ಬಳಿಕ ಬಂಗಾರಮ್ಮಗೆ ರಾಜೇಶ್ವರಿ ಕಾಲ್ ಮಾಡುತ್ತಾಳೆ. ತುಂಬಾ ಅಸೂಯೆಯಿಂದ ಮಾತನಾಡಿದ ರಾಜೇಶ್ವರಿ ಮೇಲೆ ಬಂಗಾರಮ್ಮಗೆ ಕುಪಿತಗೊಂಡು ಪಿತ್ತ ನೆತ್ತಿಗೇರುತ್ತದೆ.

ಜೀಪಿನಿಂದ ಇಳಿದ ಕಂಠಿ ಮುಂದೇನು ಮಾಡುತ್ತಾನೆ?

ಜೀಪಿನಿಂದ ಇಳಿದ ಕಂಠಿ ಮುಂದೇನು ಮಾಡುತ್ತಾನೆ?

ಮತ್ತೊಂದು ಕಡೆ ಕಂಠಿ ಪೊಲೀಸ್ ಜೀಪ್‌ನಲ್ಲಿ ತೆರಳುತ್ತಿರುತ್ತಾನೆ, ಆ ವೇಳೆ ಕಂಠಿ, ಮೊಬೈಲ್‌ಗೆ ಕಾಲ್ ಬಂದ ಹಾಗೆ ನಟಿಸಿ ಜೀಪಿನಿಂದ ಕೆಳಗೆ ಇಳಿಯುವುದಾಗಿ ಹೇಳುತ್ತಾನೆ ಇದಕ್ಕೆ ಸ್ನೇಹ ಹೇಳುತ್ತಾಳೆ ನಾನು ಆಗಲೇ ಹೇಳಿದೆ ನಿಮಗೆ ಬೇರೆ ಕೆಲಸ ಇರಬಹುದು ಎಂದು ಹೇಳಿದೆ ಎನ್ನುತ್ತಾಳೆ ಈ ವೇಳೆ ಹೌದು ಈಗ ಕೆಲಸ ಬಂದಿದೆ ನಾನು ತೆರಳಲೇಬೇಕು ಎಂದು ಹೇಳುತ್ತಾನೆ ಕಂಠಿ. ಇನ್ನು ಜೀಪಿನಿಂದ ಇಳಿಯುತ್ತಾನೆ ಕಂಠಿ. ಜೀಪಿನಿಂದ ಇಳಿದ ಕಂಠಿ ಮುಂದೇನು ಮಾಡುತ್ತಾನೆ ಎಂಬುವುದನ್ನು ಕಾದು ನೋಡಬೇಕಿದೆ.

ಬಂಗಾರಮ್ಮ ಮನೆಗೆ ಆಗಮಿಸಿದ ಪೊಲೀಸ್ ಜೀಪ್

ಬಂಗಾರಮ್ಮ ಮನೆಗೆ ಆಗಮಿಸಿದ ಪೊಲೀಸ್ ಜೀಪ್

ಬಂಗಾರಮ್ಮ ಮನೆಗೆ ಪೊಲೀಸ್ ಜೀಪ್ ಆಗಮಿಸುತ್ತದೆ. ಪೊಲೀಸ್ ಮನೆ ಬಳಿ ಬಂದಿದ್ದು ಕಂಡು ಬಂಗಾರಮ್ಮ ಸಿಟ್ಟಾಗುತ್ತಾಳೆ. ಈ ವೇಳೆ ಎಲ್ಲರನ್ನು ತಡೆದು ನೀವು ಯಾರು ಬರುವುದು ಬೇಡ ನಾನು ಎಲ್ಲ ನೋಡಿಕೊಳ್ಳುವೆ ಎಂದು ತಿಳಿಸಿ ಪೊಲೀಸಪ್ಪನನ್ನು ಬೇಟಿಯಾಗಲು ಬಂಗಾರಮ್ಮ ಆಗಮಿಸುತ್ತಾರೆ. ಪೊಲೀಸ್ ಮನೆಗೆ ಕಾಲಿಡುವ ವೇಳೆ ಆಗಮಿಸಿದ ಬಂಗಾರಮ್ಮ ಖಾಕಿ ಪಡೆಯವರು ಬಂಗಾರಮ್ಮ ಮನೆ ಒಳಗೆ ಎಂದಿಗೂ ಪ್ರವೇಶ ಇರುವುದಿಲ್ಲ ಎಂದು ಹೇಳುತ್ತಾಳೆ. ಬಳಿಕ ಮನೆಗೆ ಬಂದ ಕಾರಣ ಕೇಳುತ್ತಾಳೆ ಬಂಗಾರಮ್ಮ. ಮಗನನ್ನು ಅರೆಸ್ಟ್ ಮಾಡಲು ಬಂದಿರುವೆ. ಸಿಕ್ಕ ಸಿಕ್ಕವರ ಮೇಲೆ ಹಿಗ್ಗಾಮುಗ್ಗಾ ಥಳಿಸುತ್ತಾರಂತೆ ಹಾಗಂತ ಕಂಪ್ಲೆಂಟ್ ಬಂದಿದೆ ಎಂದಾಗ ಪೊಲೀಸ್ ಬಳಿ ಅರೆಸ್ಟ್ ವಾರೆಂಟ್ ಎಲ್ಲ ಕೇಳುತ್ತಾರೆ, ಹಾಗೆಯೇ ಕೇಸ್ ಕೊಟ್ಟವರು ಯಾರು ಎಂಬುವುದನ್ನು ಹೇಳಲು ಹೇಳುತ್ತಾರೆ ಇದನ್ನೆಲ್ಲ ಹೇಳಲು ಪೊಲೀಸ್ ನಿರಾಕರಿಸುತ್ತಾನೆ.

ಸ್ನೇಹಾಳನ್ನು ನೋಡುತ್ತಾಳ ಬಂಗಾರಮ್ಮ?

ಸ್ನೇಹಾಳನ್ನು ನೋಡುತ್ತಾಳ ಬಂಗಾರಮ್ಮ?

ಇನ್ನೂ ಇದಕ್ಕೆ ಪ್ರತ್ಯುತ್ತರವಾಗಿ ಇದನ್ನೆಲ್ಲ ಪೊಲೀಸರು ಹೇಳಬೇಕು ಯಾಕಪ್ಪ ನೀನು ಪುಸ್ತಕದಲ್ಲಿ ಓದಿಕೊಂಡು ಬಂದಿಲ್ಲವೇ ಎಂದು ಕೇಳುತ್ತಾಳೆ ಬಂಗಾರಮ್ಮ. ನನ್ನ ಮಗ ಯಾರ ಮೇಲು ಸುಮ್ನೆ ಕೈ ಮಾಡಿದವನೇ ಅಲ್ಲ. ಸಾಮಾನ್ಯ ಜನರನ್ನು ತುಂಬಾ ಮರ್ಯಾದೆಯಿಂದ ನಡೆಸಿಕೊಂಡಿದ್ದಾನೆ. ಇನ್ನೂ ಕಂಪ್ಲೇಂಟ್ ಕೊಟ್ಟ ಸ್ನೇಹಾನಾ ಬಂಗಾರಮ್ಮ ನೋಡುತ್ತಾಳ? ಸ್ನೇಹಾನೇ ಕಂಠಿ ವಿರುದ್ಧ ಸಮರ ಸಾರುತ್ತಿರುವುದು ಎಂದು ಬಂಗಾರಮ್ಮಗೆ ತಿಳಿಯುತ್ತಾ? ಕಾದು ನೋಡಬೇಕಿದೆ.

More from Filmibeat

English summary
Puttakkana Makkalu Serial Written Update of 23 May Episode. Hear is more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X