ಪುಟ್ಟಕ್ಕನ ಮಕ್ಕಳು: ರಾಜೇಶ್ವರಿಗೆ ತಕ್ಕ ಪಾಠ ಕಲಿಸುತ್ತಾಳ ಸ್ನೇಹ?
ಇತ್ತೀಚಿನ ದಿನಗಳಲ್ಲಿ ರಾಜೇಶ್ವರಿ ಉಪಟಳ ಮಿತಿ ಮೀರಿದೆ. ಪುಟ್ಟಕ್ಕನ ಮೆಸ್‌ಗೆ ಇದೀಗ ಕುಡುಕರು ಕೂಡ ಹಾಜರಾಗುತ್ತಿರುವುದು ನೋಡಿದ ವೀಕ್ಷಕರು ರಾಜೇಶ್ವರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಪುಟ್ಟಕ್ಕನಿಗೆ ಉಪಟಳವಾಗಲಿ ಎಂದು ಪುಟ್ಟಕ್ಕನ ಮೆಸ್ ಪಕ್ಕನೇ ಬಾರ್ ಇಟ್ಟ ರಾಜೇಶ್ವರಿ ಕುತುಂತ್ರ ಬುದ್ಧಿಗೆ ವೀಕ್ಷಕರು ಆಡಿಕೊಳ್ಳುವ ಹಾಗೆ ಆಗಿದೆ. ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ದಿನಕ್ಕೊಂದು ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಲೇ ಇದೆ. ಇದೀಗ ಪುಟ್ಟಕ್ಕನ ಮೆಸ್‌ಗೆ ಒಬ್ಬ ಕುಡುಕ ಬಂದು ಐವತ್ತು ಮಸಾಲ್ ದೋಸೆ ಬಾರ್‌ಗೆ ಪಾರ್ಸಲ್ ಮಾಡಲು ಹೇಳುತ್ತಾನೆ ಇದಕ್ಕೆ ಒಪ್ಪದ ಪುಟ್ಟಕ್ಕ, ಮೆಸ್‌ನಲ್ಲಿ ಕುಳಿತು ಊಟ ಮಾಡುವಂತೆ ಹೇಳುತ್ತಾಳೆ. ಆತ ಕುಡಿದು ತೂರಾಡಿಕೊಂಡು ಬಂದು ಒಂದು ಟೇಬಲ್‌ನಲ್ಲಿ ಕುಳಿತುಕೊಂಡು ಆತನ ಬಳಿ ಇದ್ದ ಮಧ್ಯದ ಬಾಟಲನ್ನು ತೆಗೆದು ಕುಡಿದು ಪಕ್ಕದಲ್ಲಿ ಇಡುವ ಎಂದು ಇಟ್ಟಾಗ ಮಧ್ಯದ ಬಾಟಲಿ ಚೆಲ್ಲಿ ಇಡೀ ಮೆಸ್ ವಾಸನೆ ಬರುವ ಹಾಗೆ ಆಗುತ್ತದೆ.
ಈ ವೇಳೆಗೆ ಸ್ನೇಹ ಮೆಸ್‌ಗೆ ಆಗಮಿಸುತ್ತಿರುವುದನ್ನು ಸಹನಾ ನೋಡುತ್ತಾಳೆ. ಪುಟ್ಟಕ್ಕನಿಗೂ ಹೇಳುತ್ತಾಳೆ. ಇದರಿಂದ ಪುಟ್ಟಕ್ಕ ಹಾಗೂ ಸಹನಾಗೆ ದಿಕ್ಕೆ ತೋಚದಾಗುತ್ತದೆ. ಸ್ನೇಹಳಿಗೆ ಈ ಬಗ್ಗೆ ತಿಳಿದರೆ ದೊಡ್ಡ ರಂಪಾಟವೇ ನಡೆದು ಹೋಗುತ್ತದೆ ಎಂದು ಇಬ್ಬರಿಗೆ ತಿಳಿದಿದೆ. ಇನ್ನೂ ಮೆಸ್ ಕಡೆ ಬರುತ್ತಿದ್ದ ಸ್ನೇಹಾನ ಕಂಡು ಸಹನ, ಮಧ್ಯದ ಮೇಲೆ ಸಾಂಬಾರನ್ನು ಚೆಲ್ಲುತ್ತಾಳೆ. ಇನ್ನೂ ಮೆಸ್ ಒಳಗಡೆ ಬಂದ ಸ್ನೇಹನಿಗೆ ಕೆಟ್ಟ ವಾಸನೆ ಬೀರುತ್ತದೆ, ಆ ವೇಳೆ ಆಕೆ ಪುಟ್ಟಕ್ಕನ ಬಳಿ ಕೇಳುತ್ತಾಳೆ ಏನಮ್ಮ ಇದು ಏನೋ ಒಂಥರಾ ವಾಸನೆ ಬರುತ್ತಿದೆ ಎಂದು ಆ ವೇಳೆ ಪುಟ್ಟಕ್ಕ ಸಾಂಬಾರ್ ಚೆಲ್ಲಿದೆ ಎಂದು ಹೇಳುತ್ತಾಳೆ. ಅದಕ್ಕೆ ಸ್ನೇಹ ಅದಲ್ಲ ಬೇರೆ ಏನೋ ಕೆಟ್ಟ ವಾಸನೆ ಬರುತ್ತಿದೆ ಎಂದು ಹೇಳುತ್ತಾಳೆ. ಅಕ್ಕನ ಬಳಿಯೂ ಕೇಳುತ್ತಾಳೆ ಸ್ನೇಹ.
ಈ ವೇಳೆ ಮತ್ತೊಬ್ಬ ಕುಡುಕ ಆಗಮಿಸಿ ವಡೆ ತೆಗೆದುಕೊಂಡು ಬರಲು ಹೇಳಿದೆ ಅಲ್ವಾ? ಎಂದಾಗ ಸ್ನೇಹಾ ಕುಡುಕನಿಗೆ ಎದುರು ಜವಾಬು ನೀಡುತ್ತಾಳೆ. ಎಲ್ಲಿ ತನ್ನ ಮಗಳಿಗೆ ಎಲ್ಲಾ ತಿಳಿದರೆ ಜಗಳವಾಗುತ್ತದೋ ಎಂದು ಪುಟ್ಟಕ್ಕೆ ಈ ವೇಳೆ ಭಯದಲ್ಲಿ ಇರುತ್ತಾಳೆ. ಸ್ನೇಹ ಕೇಳಿದ ಪ್ರಶ್ನೆಗೆ ಕುಡುಕ ಉತ್ತರಿಸುವಾಗ ಮಧ್ಯದ ಗಬ್ಬು ವಾಸನೆ ಸ್ನೇಹಳ ಮೂಗಿಗೆ ಬಡಿಯುತ್ತದೆ. ಆ ವೇಳೆ ಇಬ್ಬರು ಕುಡುಕರನ್ನು ಹೊರ ಹೋಗಲು ಸ್ನೇಹ ಹೇಳುತ್ತಾಳೆ. ರಾಜೇಶ್ವರಿ ವೈನ್ ಅಂಗಡಿ ಇಟ್ಟಿರುವುದನ್ನು ಪುಟ್ಟಕ್ಕ ಸ್ನೆಹಳ ಬಳಿ ಮುಚ್ಚಿಟ್ಟಿರುತ್ತಾಳೆ. ಆದರೆ ಸ್ನೇಹಳಿಗೆ ಇದೀಗ ಎಲ್ಲಾ ತಿಳಿದಿದೆ. ರಾಜೇಶ್ವರಿಗೆ, ಸ್ನೇಹ ಹಿಡಿ ಶಾಪ ಹಾಕುತ್ತಾಳೆ. ರಾಜೇಶ್ವರಿ ಕುತಂತ್ರಕ್ಕೆ ಪ್ರತಿ ತಂತ್ರ ಹುಡುತ್ತಾಳ ಸ್ನೇಹ ಕಾದುನೋಡಬೇಕಿದೆ.

ರಾಜೇಶ್ವರಿಗೆ ಬಂಗಾರಮ್ಮ ವಾರ್ನಿಂಗ್ ನೀಡುತ್ತಾಳೆ. ಪುಟ್ಟಕ್ಕಳ ಮಗಳ ಬ್ಯಾನರ್ ಮೇಲೆ ದನದ ಸೆಗಣಿ ಮೆತ್ತಿಸಿ ಬ್ಯಾನರನ್ನು ತುಳಿಯುತ್ತಿದ್ದಾಗ ಹಿಂದೆಯಿಂದ ಬಂಗಾರಮ್ಮ ರಾಜೇಶ್ವರಿಗೆ ಬೈದು ಬುದ್ಧಿ ಹೇಳುತ್ತಾಳೆ. ಇದನ್ನು ಅವಮಾನವಾಗಿ ತೆಗೆದುಕೊಂಡ ರಾಜೇಶ್ವರಿ ಮುಂದೇನು ಮಾಡುತ್ತಾಳೆ ಎಂದು ಕಾದು ನೋಡಬೇಕಿದೆ.


Click it and Unblock the Notifications











