ಸ್ನೇಹಾಳ ಫೊಟೊ ಫ್ಲೆಕ್ಸ್ ಹಾಕಿಸಿದ್ದು ಯಾರು? ಬಂಗಾರಮ್ಮ ಕಿಡಿಕಾರುತ್ತಿರುವುದೇಕೆ?

By ಪೂರ್ವ

ಸದ್ಯ ಕನ್ನಡ ಕಿರುತೆರೆಯಲ್ಲಿ ಸಖತ್ ಸುದ್ದಿಯಲ್ಲಿ ಇರುವ ಧಾರಾವಾಹಿ ಪುಟ್ಟಕ್ಕನ ಮಕ್ಕಳು. ಉಮಾಶ್ರೀ ಮತ್ತು ಹಲವು ಖ್ಯಾತ ನಟ ನಟಿಯರು ನಟಿಸುತ್ತಿರುವ ಈ ಧಾರಾವಾಹಿ ಕನ್ನಡ ಕಿರುತೆರೆಯಲ್ಲಿ ಸಖತ್ ಸುದ್ದಿಯಲ್ಲಿ ಇರುವ ಧಾರಾವಾಹಿ ಎಂದು ಹೇಳಬಹುದು. ಇನ್ನು ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ನಟನೆಯನ್ನು ಮಾಡುವ ಎಲ್ಲ ಕಲಾವಿದರು ಜನರ ಮೆಚ್ಚುಗೆಯನ್ನ ಗಳಿಸಿಕೊಂಡಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಗಂಡನನ್ನು ಬಿಟ್ಟು ಕಷ್ಟಪಟ್ಟು ಮೂವರು ಹೆಣ್ಣು ಮಕ್ಕಳನ್ನು ಸಾಕಿದ ಪುಟ್ಟಕ್ಕನ ಕಥೆ ಜನರಿಗೆ ಇಷ್ಟವಾಗಿದ್ದು ರಾತ್ರಿಯಾದರೆ ಸಾಕು ಟಿವಿ ಮುಂದೆ ಕುಳಿತುಕೊಂಡು ಧಾರಾವಾಹಿ ವೀಕ್ಷಣೆ ಮಾಡುತ್ತಿದ್ದಾರೆ.

ಪುಟ್ಟಕ್ಕನ ಮಕ್ಕಳು ಧಾರವಾಹಿ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ, ಸ್ನೇಹಾಳ ಗೆಳೆತನ ಸಂಪಾದಿಸಲು ಕಂಠಿ ಪರದಾಡಿದರೇ ಇತ್ತ ರಾಜೇಶ್ವರಿಯ ತಮ್ಮ, ತನ್ನನ್ನು ಹೊಡೆದಾತನನ್ನು ಹುಡುಕುತ್ತಿದ್ದಾನೆ, ಆದರೆ ಇದೀಗ ದೊರೆ ಎಂಬಾತ ಸ್ನೇಹಾಳನ್ನ ಕಾಡುತ್ತಿದ್ದಾನೆ. ಈ ನಡುವೆ ಊರು ತುಂಬಾ ಸ್ನೇಹಾಳ ಫೋಟೊವನ್ನು ಫ್ಲೆಕ್ಸ್ ಮಾಡಿ ಹಾಕಲಾಗಿದೆ.

ಇದನ್ನು ನೋಡಿದ ಸ್ನೇಹಾ ಬ್ಯಾನರ್ ಹಾಕುವವರ ಅಂಗಡಿಗೆ ಬಂದಿದ್ದಾಳೆ. ಅಲ್ಲಿ ಅತನ ಬಗ್ಗೆ ವಿಚಾರಿಸಿದಾಗ ಆತ ಅದನ್ನು ಯಾರ ಬಳಿಯೂ ಹೇಳದಂತೆ ಹೇಳಿಕೊಟ್ಟಿದ್ದಾನೆ. ಹಾಗೆಯೇ ಒಂದು ಲೆಟರ್ ಅನ್ನು ಆಕೆಗೆ ಕೊಟ್ಟಿದ್ದಾನೆ, ಆತನ ಕಳ್ಳಾಟಕ್ಕೆ ಸ್ನೇಹಾ ಪರದೆ ಎಳೆಯದೇ ಬಿಡಲ್ಲ. ಇತ್ತ ಕಡೆ ಕಂಠಿ ತನ್ನ ಅಮ್ಮನಿಗೆ ಸ್ನೇಹಳ ಪೋಟೋ ಪೇಪರಲ್ಲಿ ಬಂದಿರುವುದನ್ನು ತೋರಿಸಲು ಹಿಂದೇಟು ಹಾಕುತ್ತಿರುತ್ತಾನೆ.

Puttakkana makkalu serial Written Update Of April 26 Episode

ಬಡ್ಡಿ ಬಂಗಾರಮ್ಮಗೂ ಹೆದರದ ಸ್ನೇಹಾ, ಆಕೆಯನ್ನು ಎದುರು ಹಾಕಿಕೊಂಡಿದ್ದಾಳೆ. ಬಂಗಾರಮ್ಮಗೆ ಸ್ನೇಹಾಳ ನಡವಳಿಕೆ ಚೂರು ಇಷ್ಟವಾಗಿಲ್ಲ. ಇದರಿಂದ ಕಂಠಿ ಮದುವೆಗೆ ಬಂಗಾರಮ್ಮನೇ ತೊಡಕಾಗುಗುವಂತಿದೆ.

ಒಂದು ಬಾರಿಯೂ ಅವ್ವನ ಮಾತು ಮೀರದೇ ಇರೋ ಕಂಠಿ ಪ್ರೀತಿ ವಿಚಾರದಲ್ಲಿ ಅಮ್ಮನ ಮಾತು ಮೀರಲೇ ಬೇಕಾದ ಪ್ರಸಂಗ ಬರುವ ಸಾಧ್ಯತೆ ಇದೆ.

ಕಂಠಿಗೆ ಎಂದೆಂದಿಗೂ ರೆಬೆಲ್ ವ್ಯಕ್ತಿತ್ವದ ಸ್ನೇಹಾನೇ ಬಲು ಇಷ್ಟ. ಅವಳು ಕೂಡ ಅವ್ವ ಎಂಬ ಹಚ್ಚೆ ಹಾಕಿಸಿಕೊಂಡವನನ್ನು ಹುಡುಕುತ್ತಿದ್ದಾಳೆ. ಕಷ್ಟ ಕಾಲದಲ್ಲಿ ತನ್ನ ಅವ್ವನ ಕಾಪಾಡಿದ್ದಾನೆ ಹಾಗೆಯೇ ಕಾಳಿಗೆ ಸರಿಯಾಗಿ ಬುದ್ಧಿಯನ್ನು ಕಲಿಸಿದ್ದಾನೆ ಎಂಬ ಕಾರಣಕ್ಕೆ ಸ್ನೇಹಾನೂ ಕಂಠಿ ಮೇಲೆ ತುಸು ಪ್ರೀತಿ ಇದೆ.

ಇನ್ನೂ ಬಂಗಾರಮ್ಮಗೆ ಸ್ನೇಹ ಮೇಲೆ ಕೆಂಡದಷ್ಟು ಕೋಪವಿದೆ. ಕಾರಿನಲ್ಲಿ ಕೆಲಸದ ನಿಮಿತ್ತ ಹೋಗುತ್ತಿರುವಾಗ ಪುಟ್ಟಕ್ಕನ ಮಗಳ ಬ್ಯಾನರ್ ನೊಡಿ ಮನೆಗೆ ಬಂದು ಸಿಡಿ ಸಿಡಿ ಎಂದು ಕೂಗಾಡಿದ್ದಾಳೆ. ಇದನ್ನು ನೋಡಿದ ಕಂಠಿಗೆ ದಿಕ್ಕು ತೋಚದಾಗಿದೆ. ತನ್ನ ಪ್ರೀತಿಯನ್ನು ಅವ್ವನ ಬಳಿ ಹೇಗಾದರೂ ಬಿಚ್ಚಿಡಲೇಬೇಕು ಎನ್ನುವ ಕಂಠಿಗೆ ಅವ್ವನ ಈ ವರ್ತನೆ ಆತಂಕ ತಂದಿದೆ.

ಇನ್ನೂ ಸ್ನೇಹಾಳ ಜೊತೆಗಿನ ಪ್ರೀತಿಯನ್ನು ಹೇಳ ಹೋದರೆ ಅವ್ವ ಅಂತು ಒಪ್ಪಲ್ಲ ಎನ್ನುವ ವಿಚಾರ ಕಂಠಿಗೆ ತಿಳಿದಿದೆ. ಇದೀಗ ಸ್ನೇಹ ಬ್ಯಾನರ್ ಹಾಕಿದವರು ಯಾರು ಎಂದು ತಿಳಿದರೆ ಸ್ನೇಹ ಏನು ಮಾಡುತ್ತಾಳೆ? ಎನ್ನುವುದು ಪ್ರಶ್ನೆ.

More from Filmibeat

English summary
Puttakkana makkalu serial Written Update Of April 26 Episode. What happened on April 26th episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X