ಪುಟ್ಟಕ್ಕನ ಮಕ್ಕಳು: ಸುಮಾ ಕ್ಲಾಸ್‌ಗೆ ಬಂದಿಲ್ಲ? ಮೇಷ್ಟ್ರ ಬಳಿ ಕ್ಷಮೆ ಯಾಚಿಸುತ್ತಾಳಾ?

By Poorva

ಸ್ನೇಹಾ ಅಣ್ಣಯ್ಯ ನ ಮನೆಗೆ ಬರುತ್ತಾಳೆ. ಬಂದು"ಅಣ್ಣಯ್ಯ ಇದು ನನ್ನಿಂದಲೇ ಶುರುವಾದ ವಿಚಾರ. ಇದಕ್ಕೆ ನಾನೇ ಅಂತ್ಯ ಕಾಣಿಸಬೇಕು. ನೀವು ಯಾಕೆ ಇದರ ಮಧ್ಯೆ ಬರುತ್ತಿದ್ಧೀರಿ. ನನ್ನಿಂದಾಗಿ ನೀವಿಬ್ಬರು ದೂರ ಆಗುವುದು ಇಷ್ಟವಿಲ್ಲ. ಇದರಿಂದ ನಾನು ಎಲ್ಲಾ ವಿಚಾರವನ್ನು ಬಂಗಾರಮ್ಮನ ಬಳಿ ಹೇಳಬೇಕು ಎಂದು ಹೋಗಿದ್ದೆ." ಎಂದಾಗ ಚಂದ್ರು ಹೇಳುತ್ತಾನೆ ಎಂಥಾ ಕೆಲಸ ಮಾಡಿ ಬಿಡುತ್ತಿದ್ದಿ ಸ್ನೇಹಾ. ನಿಮ್ಮ ವಿಚಾರ ಗೊತ್ತಾಗುತ್ತಿದ್ದರೆ ಬಂಗಾರಮ್ಮ ಸುಮ್ಮನಿರುತ್ತಾರೆಯೇ ಎಂದು ಹೇಳುತ್ತಾನೆ.

ಅದಕ್ಕೆ ಸ್ನೇಹಾ ಏನು ಮಾಡುತ್ತಿದ್ದರು? ಏನು ಮಾಡೋಕೆ ಆಗುತ್ತಿರಲಿಲ್ಲ. ಅವರು ರೇಗಿ ಬಿಟ್ಟರೆ ಏನು ಮಾಡುವುದು ಏನು ಮಾಡಲಾಗುವುದಿಲ್ಲ. ಇರೋ ಸತ್ಯವನ್ನು ಅವರ ಬಳಿ ಹೇಳುತ್ತಿದ್ದೆ. ಕೋಪ ಮಾಡಿಕೊಂಡರೆ ಮಾಡಿಕೊಳ್ಳಲಿ ನಮ್ಮಿಂದ ಅವರಿಗೆ ಏನು ಆಗಬೇಕಿಲ್ಲ.

ನಮಗೂ ಎನು ಆಗಬೇಕಿಲ್ಲ ಎಂದು ಹೇಳುತ್ತಾಳೆ. ಅದಕ್ಕೆ ನಂಜವ್ವ, ಬೇಡ ಸ್ನೇಹಾ ಹಾಗೆ ಮಾಡಬೇಡ ನೀನು ನಿಜ ಹೇಳಿದರೆ ಅವಳ ಮೈಯಲ್ಲಿ ದೆವ್ವ ಬಂದವರ ಹಾಗೆ ಆಡುತ್ತಾಳೆ. ಅವಳಿಂದ ದೂರ ಇರು ಎಂದು ಹೇಳುತ್ತಾಳೆ.

ಬಂಗಾರಮ್ಮ ಮನೆಗೆ ಹೋಗಿದ್ಯಾಕೆ?

ಬಂಗಾರಮ್ಮ ಮನೆಗೆ ಹೋಗಿದ್ಯಾಕೆ?

"ನಾನು ಬಂಗಾರಮ್ಮನ ಮನೆಗೆ ಹೋಗಿದ್ದು ನಿಮಗೆ ಹೇಗೆ ಗೊತ್ತಾಯ್ತು" ಅಂದಾಗ ನಂಜವ್ವ, ಪುಟ್ಟಕ್ಕ ಎಂದು ಹೇಳುತ್ತಾಳೆ. ಆಗ ಸ್ನೇಹಾ ಏನು ಅವ್ವ ಹೇಳಿದ್ದಾ? ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಾಳೆ. ಅದಕ್ಕೆ ನಂಜವ್ವ ಇಲ್ಲ ಸ್ನೇಹಾ ನಮಗೆ ಸ್ವಲ್ಪ ಮಾತನಾಡಬೇಕಿತ್ತು ಅಲ್ಲಿ ಎಂದು ಹೇಳುತ್ತಾಳೆ. ಬಳಿಕ ಸ್ನೇಹಾ ಹೊರಡಲು ಅನುವಾಗುತ್ತಾಳೆ.

ಅಣ್ಣನಿಗೆ ಗೊತ್ತಾದರೆ ಅಣ್ಣ ಸುಮ್ಮನಿರಲ್ಲ

ಅಣ್ಣನಿಗೆ ಗೊತ್ತಾದರೆ ಅಣ್ಣ ಸುಮ್ಮನಿರಲ್ಲ

ತುಪಾಕಿ ಗುಂಡಿನ ಹಾಗೆ ಪಟ ಪಟ ಮಾತನಾಡುತ್ತಾಳೆ. ಎಲ್ಲಾದರೂ ನಿಮ್ಮ ಅಣ್ಣನ ಪರವಾಗಿ ಇವಳು ವಕೀಲೆ ಆಗಿದ್ದಿದ್ದರೆ ಇರೋ ಬರೋ ಕೇಸ್‌ನೆಲ್ಲ ಗೆದ್ದುಕೊಂಡು ಬರುತ್ತಿದ್ದಳು. ಅವಳಿಗೆ ಕೊನೆ ತನಕ ಅವಳು ಹೋದ ಟೈಮ್‌ಗೆ ನಾವು ಹೇಗೆ ಹೋದ್ವಿ ಅನ್ನೋದೇ ಸಂಶಯ ಎಂದು ಮಗಳ ಬಳಿ ನಂಜವ್ವ ಮಾತನಾಡುತ್ತಾ ಇರುತ್ತಾಳೆ. ಆಗ ಮಗಳು ನೀನು ಇಷ್ಟೆಲ್ಲಾ ಮಾಡುತ್ತಿದ್ದೀರಾ ಅಂತ ಅಣ್ಣನಿಗೆ ಗೊತ್ತಾದ್ರೆ ಅಣ್ಣ ಸುಮ್ಮನಿರಲ್ಲ ಎಂದು ಹೇಳುತ್ತಾನೆ.

ಪುಟ್ಟಕ್ಕನ ಮೆಸ್‌ಗೆ ಪುರುಷೋತ್ತಮ ಬಂದಿದ್ದೇಕೆ?

ಪುಟ್ಟಕ್ಕನ ಮೆಸ್‌ಗೆ ಪುರುಷೋತ್ತಮ ಬಂದಿದ್ದೇಕೆ?

ಅದಕ್ಕೆ ನಂಜವ್ವ ಹೇಳುತ್ತಾಳೆ. ಅವನು ಹೇಳಿದನ್ನೆಲ್ಲ ನಾನು ಕೇಳುತ್ತಾ ಹೋದರೆ ಮುಂದೆ ನಾನು ಹೇಳಿದ ಹಾಗೆ ಅವನು ಕೇಳುತ್ತಾನೆ. ಈಗಾಗಲೇ ಮನೆಗೆ ಬಂದಿದ್ದರಲ್ಲ ನಿನ್ನ ನೋಡೋಕೆ ಅವರು ಈಗಾಲೂ ಕಾಯುತ್ತಿದ್ದಾರೆ. ನಿನ್ನ ಅಣ್ಣಯ್ಯ ಒಪ್ಪಿಕೊಂಡು ಬಿಟ್ಟರೆ ಬೇಗ ಮದುವೆ ಮಾಡಿ ಮುಗಿಸೋದೆ. ಇದಕ್ಕೆ ನಿನ್ನ ಅಣ್ಣ ಒಪ್ಪಬೇಕು . ಒಪ್ಪಿಸ್ತಿನಿ ಕೂಡ ಎಂದು ಹೇಳುತ್ತಾಳೆ. ಒಂದೊಂದೇ ಹೆಜ್ಜೆ ಇಡುತ್ತಿದ್ದೇನೆ. ಇನ್ನೂ ಪುರುಷೋತ್ತಮ ಪುಟ್ಟಕ್ಕನ ಮೆಸ್‌ಗೆ ಬರುತ್ತಾನೆ. ಆಗ ಅವನ ಪ್ರೆಂಡ್ ಹೇಳುತ್ತಾನೆ. ಯಾಕೋ ಇಲ್ಲಿಗ್ ಬಂದಿ ಸ್ನೇಹಾ ನೋಡಿದರೆ ಬೈತಾಳೆ ಎಂದಾಗ ಪುರುಷಿ ಹೇಳುತ್ತಾನೆ ಏಯ್ ಸ್ನೇಹಾ ಅಕ್ಕ ಅನ್ನೋ ಎಂದು ಸ್ವಲ್ಪ ತಡಿಯೋ ಮಾತನಾಡಿಕೊಂಡು ಹೋಗೋಣ ಎಂದು ಹೇಳುತ್ತಾನೆ.

ಸಮಾ ಕ್ಲಾಸ್‌ಗೆ ಬಂದಿಲ್ಲ

ಸಹನಾ, ಅಕ್ಕಾ ಎಂದು ಕರೆದಾಗ ಸಹನಾ ಏನ್ಲಾ ಪುರುಷಿ. ಬಾ ಕುಳಿತುಕೋ ಎಂದಾಗ ಪುರುಷಿ, ಸುಮಾ ಬಂದ್ಲು ಎಂದು ಅದಕ್ಕೆ ಸಹನಾ ಹೇಳುತ್ತಾಳೆ ಆಗಲೇ ಬಂದ್ಲು ಅವಳು ಎಂದಾಗ ಹೇಳುತ್ತಾನೆ. ಆಟದಲ್ಲಿ ಏನೋ ಕಿರಿಕ್ ಆಗಿದೆ. ಅದಕ್ಕೆ ಸುಮಾ ಕ್ಲಾಸ್ ಅಟೆಂಡ್ ಮಾಡಿಲ್ಲ. ಸುಮಾ ಬಂದಿಲ್ಲ ಅಂತ ಟೀಂ ಅವರು ಯಾರು ಬಂದಿಲ್ಲ. ಮೇಷ್ಟ್ರು ಸಖತ್ ಉರಿದುಕೊಂದು ಬಿಟ್ಟಿದ್ದಾರೆ. ಆಗ ಪುಟ್ಟಕ್ಕ ಮೇಷ್ಟ್ರು ಏನಾದರು ಬೈದ್ರಾ ಎಂದು ಕೇಳುತ್ತಾಳೆ. ಅದಕ್ಕೆ ಮೇಷ್ಟ್ರ ಕೈಗೆ ಇವರು ಸಿಕ್ಕರೆ ಅಲ್ವಾ ಇವರನ್ನು ಬೈಯುವುದು ಎಂದು ಹೇಳುತ್ತಾನೆ. ನಾನು ಇಲ್ಲಿಗೆ ಬಂದದ್ದು ನಾಳೆ ಕ್ಲಾಸ್‌ಗೆ ಬರಬೇಕಾದರೆ ಅಪಲಜಿ ಲೆಟರ್‌ನ ತಗೊಂಡು ಬರಬೇಕಂತೆ ಎನ್ನುತ್ತಾನೆ. ಬಳಿಕ ನಾನಿಲ್ಲಿಗೆ ಬರೋದು ನಮ್ಮ ಅವ್ವನಿಗೆ ಯಾರೋ ಹೇಳುತ್ತಿದ್ಧಾರೆ. ಯಾರು ಗೊತ್ತಾಗುತ್ತಿಲ್ಲ. ಎಂದು ಹೇಳಿ ಅಲ್ಲಿಂದ ಹೊರಡುತ್ತಾನೆ.

More from Filmibeat

English summary
Puttakkana Makkalu Serial Written Update On 19th July Episode, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X