Puttakkana Makkalu: ಸುಮಾ ಮೇಲೆ ಕೈ ಹಾಕಲು ಬಂದ ಸುಕುಮಾರನ ಸೊಕ್ಕು ಅಡಗಿಸಿದ ಸಹನಾ
ಕಂಠಿ ಕೊನೆಗೂ ಕುಸ್ತಿ ಅಖಾಡಕ್ಕೆ ಇಳಿದಿದ್ದಾನೆ. ಸ್ನೇಹಗೆ ಕೊಟ್ಟ ಮಾತಿನಂತೆ ಕಂಠಿಗೆ ನಡೆದುಕೊಳ್ಳಲು ಹಣದ ಅವಶ್ಯಕತೆ ಬಹಳ ಇತ್ತು. ಆದರೆ ಕಂಠಿಗೆ ಅಮ್ಮನ ಬಳಿ ದುಡ್ಡು ಕೇಳಲು ಆಗುವುದಿಲ್ಲ, ನಾಲ್ಕು ತಲೆಮಾರಿಗೆ ಆಗುವಷ್ಟು ಮನೆಯಲ್ಲಿ ಹಣವಿದ್ದರೂ ಅದನ್ನು ಉಪಯೋಗಿಸಲು ಸ್ನೇಹ ಬಿಡುವುದಿಲ್ಲ.
ಆಕೆಗೆ ಅದು ಬಡ್ಡಿಯ ಹಣ ಎನ್ನುವಂತಹ ಆಲೋಚನೆ ಇತ್ತು. ಬಡ್ಡಿ ಹಣದಲ್ಲಿ ಯಾವುದೇ ಕೆಲಸ ಮಾಡುವುದು ಆಕೆಗೆ ಇಷ್ಟ ಇರಲಿಲ್ಲ. ಆದರೂ ಯಾರ ಮಾತು ಕೇಳದೇ ಕಂಠಿ ನೇರವಾಗಿ ಕುಸ್ತಿ ಪಂದ್ಯಕ್ಕೆ ಸೇರಿಕೊಳ್ಳುತ್ತಾನೆ. 10 ಲಕ್ಷ ಹಣ ಸಿಗುತ್ತದೆ ಎನ್ನುವ ಉದ್ದೇಶದಿಂದ ಕಂಠಿ ಈ ಕೆಲಸಕ್ಕೆ ಕೈ ಹಾಕುತ್ತಾನೆ.

ಇನ್ನು ಕಂಠಿ ಕುಸ್ತಿ ಪಂದ್ಯಕ್ಕೆ ಸೇರಿದನೆಂದು ಸ್ನೇಹ ಹಾಗೂ ಬಂಗಾರಮ್ಮ ಮುನಿಸಿಕೊಂಡಿದ್ದರೆ ಪುಟ್ಟಕ್ಕ ಮಾತ್ರ ಕಂಠಿಯನ್ನು ನೀನು ಬಂದಿದ್ದಲ್ಲಿ ಆಡಲೇಬೇಕು ಇಲ್ಲವಾದರೆ ಮುಂದೊಂದು ದಿನ ನೀನು ಕುಸ್ತಿ ಪಂದ್ಯವನ್ನು ಆಡಬೇಕಿತ್ತು ಎಂದೆಲ್ಲಾ ನಿನಗೆ ಅನಿಸುತ್ತದೆ, ಹಾಗಾಗಿ ನೀನು ಕುಸ್ತಿ ಪದ್ಯಕ್ಕೆ ಹೋಗು ನಾನು ನಿನ್ನ ತಂದೆ ತಾಯಿಯನ್ನು ಹಾಗೂ ಸ್ನೇಹ ಗಳನ್ನು ಕರೆದುಕೊಂಡು ಬರುತ್ತೇನೆ ಎಂದು ಹೇಳುತ್ತಾಳೆ.
ಬಳಿಕ ಬಂಗಾರಮ್ಮ ಹಾಗೂ ಸ್ನೇಹಗೆ ಬುದ್ಧಿ ಮಾತನ್ನ ಹೇಳುತ್ತಾಳೆ. ನೀವಿಬ್ಬರು ಆತನ ಜೊತೆ ಇದ್ದರೆ ಆತ ಯಾವುದೇ ಕೆಲಸವನ್ನು ಮಾಡಲು ಹಿಂಜರಿಯುವುದಿಲ್ಲ ಎನ್ನುತ್ತಾಳೆ. ಇದನ್ನೆಲ್ಲ ಕೇಳಿದ ಸ್ನೇಹ ಮತ್ತು ಬಂಗಾರಮ್ಮ ಇಬ್ಬರೂ ಕಂಠಿಗೆ ಸಪೋರ್ಟ್ ಮಾಡಲು ಹೋಗುತ್ತಾರೆ.
ಕಂಠಿ ಮೇಲೆ ಸವಾರಿ ಮಾಡಿದ ಮಾರ
ಕಂಠಿ ಆಗಲೇ ಮಾರನ ಕೈಗೆ ಸಿಕ್ಕಿ ನಲುಗಿ ಹೋಗಿರುತ್ತಾನೆ. ಮಾರ, ಕಂಠಿಯನ್ನ ನೆಲಕ್ಕೆ ಕೆಡವಿರುತ್ತಾನೆ. ಇದನ್ನೆಲ್ಲಾ ನೋಡಿದ ಬಂಗಾರಮ್ಮ ಹಾಗೂ ಸ್ನೇಹಾ, ಕಂಠಿಗೆ ಪ್ರೋತ್ಸಾಹ ನೀಡುತ್ತಾರೆ. ಕಂಠಿ ಮೈ ಕೊಡವಿಕೊಂಡು ಎದ್ದೇಳುತ್ತಾನೆ. ಆತನಿಗೆ ಸ್ನೇಹ ಹಾಗೂ ಬಂಗಾರಮ್ಮನೇ ಸ್ಪೂರ್ತಿ..

ಅಮ್ಮ- ಹೆಂಡತಿ ಧ್ವನಿ ಕೇಳಿ ಮೇಲೆದ್ದ ಕಂಠಿ
ಹೆಂಡತಿ-ತಾಯಿ ಒಟ್ಟಾಗಿ ಇದ್ದರೆ ಕಂಠಿ ಯಾವುದೇ ಸ್ಪರ್ಧೆಯನ್ನು ಗೆದ್ದೇ ಗೆಲ್ಲುತ್ತಾನೆ. ಇತ್ತ ಸಹನಾ, ಸುಕುಮರಗೆ ಒಳ್ಳೆಯ ಪಾಠ ಕಲಿಸುತ್ತಾಳೆ. ತನ್ನ ಶ್ರಮದಿಂದಲೇ ಸಹನಾ ಕರಾಟೆಯನ್ನು ಕರಗತ ಮಾಡಿಕೊಂಡಿರುತ್ತಾಳೆ. ಸುಕುಮಾರ ತನ್ನ ತಂಗಿಯ ಮೇಲೆ ಕಣ್ಣು ಹಾಕಿದಾಗ ಆಕೆಯನ್ನು ಹೇಗಾದರೂ ಉಳಿಸಿಕೊಳ್ಳಲು ಬೇಕು ಎಂದು ಆಲೋಚನೆ ಮಾಡುತ್ತಾ ಇರುತ್ತಾಳೆ.
ಸುಕುಮಾರನಿಗೆ ಪಾಠ ಕಲಿಸಿದ ಸಹನಾ
ಸುಕುಮಾರಾಗೆ ಸಹನಾ ಪೆಟ್ಟಿನ ರುಚಿ ತೋರಿಸಿ ಬಿಡುತ್ತಾಳೆ. ಇನ್ನು ಸಹನಾ ಮೆತ್ತಗೆ ತನ್ನ ತಂಗಿಯ ಬಳಿ ಬಂದು ಮಾತನಾಡುತ್ತಾ ಇರುತ್ತಾಳೆ. ಸುಮಾ ಮಾತ್ರ ಸುಖವಾದ ನಿದ್ದೆಗೆ ಜಾರಿರುತ್ತಾಳೆ.


Click it and Unblock the Notifications