ಪುಟ್ಟಕ್ಕನ ಸವತಿ ರಾಜೇಶ್ವರಿಗೆ ಖಡಕ್ ವಾರ್ನಿಂಗ್ ಕೊಟ್ಟ ಬಂಗಾರಮ್ಮ!

By ಪ್ರಿಯಾ ದೊರೆ

'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಈಗ ಕಂಠಿ, ಸ್ನೇಹ ಕಥೆ ಚೆನ್ನಾಗಿ ಮೂಡಿ ಬರುತ್ತಿದೆ. ಕಂಠಿ ಯಾವಾಗ, ಹೇಗೆ ಸ್ನೇಹಾಳಿಗೆ ಪ್ರಪೋಸ್ ಮಾಡುತ್ತಾನೆ? ಕಂಠಿಯನ್ನು ಹುಡುಕುತ್ತಿರುವ ಸ್ನೇಹಾ ಮುಂದೆ ಏನು ಮಾಡುತ್ತಾಳೆ ಅನ್ನೋದೆ ಸೀರಿಯಲ್‌ನಲ್ಲಿ ಕುತೂಹಲ ಕೆರಳಿಸಿದೆ.

ಸದ್ಯ ಸಹನಾ ಹಾಗೂ ಮುರಳಿ ಪ್ರೇಮದ ಅಲೆಯಲ್ಲಿ ಸಿಲುಕಿದ್ದು, ಇಬ್ಬರು ತಮ್ಮ ಪ್ರೀತಿಯನ್ನು ಹೇಳಿಕೊಳ್ಳಲು ಆಗದೇ ಒದ್ದಾಡುತ್ತಿದ್ದಾರೆ. ಸುಮಾ ಕಾಲೇಜಿನಿಂದ ಬೇಗ ಬಂದಿದ್ದು, ಸಹನಾ ಯಾಕೆ ಎಂದು ಕೇಳಿದ್ದಾಳೆ. ಆಗ ಸುಮ, ಮುರಳಿ ಸರ್ ಕಾಲೇಜಿಗೆ ಬಂದಿಲ್ಲ. ಅದಕ್ಕೆ ಬೇಗ ಬಂದೆ ಎನ್ನುತ್ತಾಳೆ.

ಈ ಮಾತನ್ನು ಕೇಳಿದ ಸಹನಾ, ಯಾಕೆ ಕಾಲೇಜಿಗೆ ಹೋಗಿದ್ದನ್ನು ನಾನೇ ನೋಡಿದೆ. ಏನಾಯ್ತು.? ಎಂದು ಯೋಚನೆಗೆ ಬೀಳುತ್ತಾಳೆ. ಮುರಳಿಗೆ ಹುಷಾರಿಲ್ಲ ಎಂದು ಅನಿಸುತ್ತದೆ. ಪಾಪ ಹೇಗಿದ್ದಾರೋ ಹೋಗಿ ನೋಡಬೇಕು ಎಂದು ಯೋಚಿಸುತ್ತಿರುತ್ತಾಳೆ. ಇದೇ ಸಂದರ್ಭಕ್ಕೆ ತಕ್ಕ ಹಾಗೆ ಪುಟ್ಟಕ್ಕ ಬಂಗಾರಮ್ಮನ ಮನೆಗೆ ಊಟಕ್ಕೆ ಹೋಗುವುದು ಹೇಗೆ? ಸ್ನೇಹಾ ಬಳಿ ಏನು ಹೇಳುವುದು ಎಂದು ಯೋಚಿಸುತ್ತಿರುತ್ತಾಳೆ.

 Puttakkana Makkalu Serial Written Update On April 27th Episode

ಇತ್ತ ಕಂಠಿ ಸ್ನೇಹಿತರು, ಸ್ನೇಹಾಳಿಗೆ ಶುಭಾಶಯಗಳನ್ನು ಕೋರಿ ಪೋಸ್ಟರ್‌ಗಳನ್ನು ಹಾಕಿದ್ದಾರೆ. ಇದರಿಂದ ಖುಷಿಯಾಗಿರುವ ಕಂಠಿಗೆ ಈಗ ವಸು ಬಂದು ಶಾಕಿಂಗ್ ವಿಚಾರ ಹೇಳಿದ್ದಾಳೆ. ಪೋಸ್ಟರ್ ಅನ್ನು ಅಮ್ಮ ನೋಡಿದರೆ ಕಷ್ಟವಾಗುತ್ತೆ. ಮೊದಲೇ ಅಮ್ಮನಿಗೆ ಸ್ನೇಹಾಳನ್ನ ಕಂಡರೆ ಆಗುವುದಿಲ್ಲ ಎಂದು ಹೇಳುತ್ತಾಳೆ. ಆಗ ಕಂಠಿ ಹಾಗೂ ಸ್ನೇಹಿತರು ಟೆಂಷನ್ ಮಾಡಿಕೊಳ್ಳುತ್ತಾರೆ. ಅಮ್ಮ ಮನೆಗೆ ಬಂದಾಗ ಕೋಪದಲ್ಲಿದ್ದರೆ ಸ್ನೇಹಾ ಪೋಸ್ಟರ್ ನೋಡಿದ್ದಾರೆ ಎಂದರ್ಥ. ಇಲ್ಲವೇ ಅರಾಮಾಗಿದ್ದರೆ ನೋಡಿಲ್ಲ ಎಂದರ್ಥ ಎಂದು ಮಾತನಾಡಿಕೊಂಡು ಭಯದಲ್ಲಿರುತ್ತಾರೆ.

ಆಗ ಬಂಗಾರಮ್ಮ ಕೋಪಗೊಂಡು ಮನೆಗೆ ಬರುತ್ತಾಳೆ. ಬಂಗಾರಮ್ಮನನ್ನು ನೋಡಿದ, ಕಂಠಿ, ವಸು ಹಾಗೂ ಸ್ನೇಹಿತರು ಶಾಕ್ ಆಗುತ್ತಾರೆ. ಇನ್ನೇನಾಗುತ್ತೋ ಎಂದು ಯೋಚಿಸುತ್ತಾರೆ. ಆಗ ಬಂಗಾರಮ್ಮ ಮಾತು ಶುರು ಮಾಡುತ್ತಾಳೆ. ದಾರಿಯಲ್ಲಿ ಬರುತ್ತಾ, ರಾಜೇಶ್ವರಿ ಗಲಾಟೆ ಮಾಡುತ್ತಿರುತ್ತಾಳೆ. ಅದೇನು ಅಂತ ನೋಡಲು ಬಂಗಾರಮ್ಮ ಹೋಗುತ್ತಾಳೆ. ಅಲ್ಲಿ ರಾಜೇಶ್ವರಿ ಸ್ನೇಹಾಳ ಪೋಸ್ಟರ್ ಅನ್ನು ಕಿತ್ತು, ಕಾಲಿನಿಂದ ತುಳಿಯುತ್ತಿರುತ್ತಾಳೆ. ಪುಟ್ಟಕ್ಕನ ಮಗಳಿಗೆ ಶುಭಾಶಯ ಕೋರಿದ ಬ್ಯಾನರ್ ಎಂದು ಬಂಗಾರಮ್ಮನಿಗೆ ಗೊತ್ತಾಗುತ್ತದೆ. ಆಗ ಬಂಗಾರಮ್ಮ, ರಾಜೇಶ್ವರಿ ನಿನ್ನ ಬುದ್ಧಿ ಈಗ ಗೊತ್ತಾಗುತ್ತದೆ. ಅದೆಷ್ಟು ಹೊಟ್ಟೆ ಉರಿ ಇದ್ರೆ, ಆ ಮಗುವಿಗೆ ಸನ್ಮಾನ ಮಾಡಿದ್ದನ್ನು ಹೀಗೆ ಅಸಹ್ಯ ಮಾಡುತ್ತಿದ್ದೀಯಾ. ನಾಚಿಕೆಯಾಗಲ್ವಾ ಅಂತ ಬಯ್ಯುತ್ತಾಳೆ.

 Puttakkana Makkalu Serial Written Update On April 27th Episode

ಆಗ ರಾಜೇಶ್ವರಿ, ಏನು ಅವರ ಮನೆಯವರ ಮೇಲೆ ಪ್ರೀತಿ ಉಕ್ಕಿ ಹರಿಯುತ್ತಿದೆ. ಅವರ ಮನೆಯ ಮೆಸ್ ಊಟ ತಿಂದು ಉಪ್ಪಿನ ಋಣ ತೀರಿಸುತ್ತಿದ್ಯಾ ಎಂದು ಹೇಳುತ್ತಾಳೆ. ಆಗ ಬಂಗಾರಮ್ಮ, ಪಂಚಾಯ್ತಿಯಲ್ಲಿ ನಿನಗೆ ಏನೂ ಶಿಕ್ಷೆ ಕೊಡದೇ ಹಾಗೇ ಬಿಟ್ಟೆ ಅಲ್ವಾ ಅದಕ್ಕೆ ಇಷ್ಟು ಕೊಬ್ಬು ಮಾಡುತ್ತಿದ್ದೀಯಾ ಎನ್ನುತ್ತಾಳೆ. ಇದಕ್ಕೆ ರಾಜೇಶ್ವರಿ ಯಾಕೆ ಪಂಚಾಯ್ತಿಯಲ್ಲಿ ಎಲ್ಲರ ಮುಂದೆ ಅವಳ ಕಾಲಿಗೆ ಬೀಳಿಸಿದ್ದು ಶಿಕ್ಷೆ ಅಲ್ವಾ ಎನ್ನುತ್ತಾಳೆ. ಈ ಮಾತಿಗೆ ಬಂಗಾರಮ್ಮ ಅದು ನಿನ್ನ ಅರ್ಥದಲ್ಲಿ ಉಪ್ಪು ತಿಂದವರಿಗೆ ನೀರು ಕುಡಿಸಿದ್ದು ಎಂದು ಹೇಳುತ್ತಾಳೆ.

ಆಗ ರಾಜೇಶ್ವರಿ, ಹೂ ಚೆನ್ನಾಗೇ ಕುಡಿಸಿದ್ರಿ, ನೀನು ಮತ್ತೆ ಆ ಬಿಕಾರಿ ಸೇರಿಕೊಂಡು ಎಂದಾಗ, ಬಂಗಾರಮ್ಮನಿಗೆ ಕೋಪ ಬರುತ್ತದೆ. ನನ್ನ ಹತ್ತಿರ ಮಾತನಾಡುವಾಗ ನಿಗಾ ಇಟ್ಟು ಮಾತನಾಡು, ಯಾರ ಬಗ್ಗೆಯೂ ತಪ್ಪಾಗಿ ಮಾತನಾಡಬೇಡ ಎಂದಿದ್ದಾರೆ. ಆಗ ರಾಜೇಶ್ವರಿ ನಾನು ಬದುಕಿರುವ ವರೆಗೂ ಪುಟ್ಟಕ್ಕನಿಗೆ ಒಳ್ಳೆಯದಾಗಲು ಬಿಡುವುದಿಲ್ಲ ಎನ್ನುತ್ತಾಳೆ. ಆಗ ಬಂಗಾರಮ್ಮ ಆ ರೀತಿ ಯೋಚನೆ ಇದ್ದರೆ ನೆನಪಿಟ್ಟುಕೊ, ಪುಟ್ಟಕ್ಕನಿಗೆ ತೊಂದರೆ ಕೊಡೋದಿದ್ದರೆ ಈ ಬಂಗಾರಮ್ಮನನ್ನು ದಾಟಿ ಹೋಗಬೇಕು. ನಾನಿರುವವರೆಗೂ ಅದು ಅಸಾಧ್ಯ ಹುಷಾರ್ ಎಂದು ಎಚ್ಚರಿಕೆ ಕೊಟ್ಟಿದ್ದಾಳೆ.

More from Filmibeat

English summary
Puttakkana Makkalu Serial Written Update On April 27th Episode, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X