puttakkana makkalu: ಬೀಗರ ಜಗಳದಲ್ಲಿ ಸಿಲುಕಿದ ಚಂದ್ರು, ವಸು ಬಾಳಲ್ಲಿ ಬಿರುಗಾಳಿ!
ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಮಹಾಸಂಚಿಕೆಯನ್ನು ನಿನ್ನೆ ಪ್ರಸಾರ ಮಾಡಲಾಗಿತ್ತು. ಸ್ನೇಹಾಳಿಗೆ ಕಾಲೇಜಿನಿಂದ ಸನ್ಮಾನ ಮಾಡಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ. ಇದಕ್ಕೆ ಸ್ನೇಹಾ ಬೇಡ ಎಂದು ಹೇಳುತ್ತಾಳೆ. ನಂತರ ಮುರಳಿ ಒಪ್ಪಿಕೊಳ್ಳಲು ಹೇಳಿದ್ದರಿಂದ ಸ್ನೇಹಾ ಸರಿ ಎನ್ನುತ್ತಾಳೆ. ಆದರೆ ಮನೆಯಲ್ಲಿ ಸ್ನೇಹಾ ಹಾಗೂ ಪುಟ್ಟಕ್ಕ ಮಾತನಾಡುತ್ತಿರುವುದಿಲ್ಲ. ಇದರಿಂದ ಸ್ನೇಹಾ ಬೇಸರ ಮಾಡಿಕೊಂಡಿರುತ್ತಾಳೆ.
Recommended Video

ಇತ್ತ ಬಂಗಾರಮ್ಮ ಮಗಳ ಜೀವನವನ್ನ ಸರಿ ಮಾಡಬೇಕು ಎಂದು ಚಂದ್ರು ಮನೆಗೆ ಬಂದಿದ್ದಾಳೆ. ಕಂಠಿ ಹಾಗೂ ಬಂಗಾರಮ್ಮ ಮನೆಗೆ ಬಂದ ಕೂಡಲೇ ಚಂದ್ರು ಹಾಗೂ ಮನೆಯವರು ಶಾಕ್ ಆಗಿದ್ದಾರೆ. ಇದಕ್ಕೆ ಕಾರಣ ಚಂದ್ರು ತಂಗಿಗೆ ಸಂಬಂಧ ನೋಡುವ ನೆಪದಲ್ಲಿ ಆತನಿಗೂ ಎರಡನೇ ಮದುವೆ ಮಾಡಿಸಲು ಅವರ ತಾಯಿ ನಂಜಮ್ಮ ಪ್ಲಾನ್ ಮಾಡಿದ್ದಾರೆ. ಆದರೆ ಈ ವಿಚಾರ ಚಂದ್ರುಗೆ ಗೊತ್ತಿರಲಿಲ್ಲ.
ಆದರೆ ಮನೆಗೆ ಬಂದವರು ತಮ್ಮ ಮಗಳನ್ನು ಚಂದ್ರುಗೆ ಕೊಡುವ ವಿಚಾರವಾಗಿ ಮಾತನಾಡುತ್ತಾರೆ. ಆಗ ಚಂದ್ರುಗೆ ಅರ್ಥವೇ ಆಗುವುದಿಲ್ಲ. ಅಷ್ಟರಲ್ಲಿ ವಸಂತ ಹಾಗೂ ಚಂದ್ರು ಇಬ್ಬರನ್ನು ಒಂದು ಮಾಡಲು ಬಂದ ಬಂಗಾರಮ್ಮ ನಂಜಮ್ಮ ಮನೆಗೆ ಬರುತ್ತಾರೆ. ಮಗನಿಗೆ ಎರಡನೇ ಮದುವೆ ಮಾಡುತ್ತಿರುವ ವಿಚಾರ ಗೊತ್ತಾಗಿ ಇಬ್ಬರೂ ಜಗಳ ಶುರು ಮಾಡುತ್ತಾರೆ.

ಮಾತು ಮಾತಿಗೆ ಬೆಳೆದು ಜಗಳವಾಡುವಾಗ, ಚಂದ್ರು ಹೇಳುತ್ತಾನೆ, ನನಗೆ ಇದೇನು ಗೊತ್ತಿಲ್ಲ ಎನ್ನುತ್ತಾನೆ. ಆಗ ನಂಜಮ್ಮ ಯಾಕೋ ಅವಳು ಬಂದ ತಕ್ಷಣ ಬದಲಾಗಿ ಬಿಟ್ಟೆ. ಪಂಚಾಯ್ತಿ ಮುಂದೆ ನಿಲ್ಲಿಸಿ ನಿನ್ನ ವಸು ಕಾಲಿಗೆ ಬೀಳೋಕೆ ಹೇಳುತ್ತಾಳೆ. ಬೀಳ್ತೀಯಾ.? ಹಾಗೇನಾದರೂ ಹೋಗೋದಾದರೆ ನನಗೆ ಕೊಳ್ಳಿ ಇಟ್ಟು ಹೋಗು ಎನ್ನುತ್ತಾಳೆ. ಆಗ ಕಂಠಿ ಮಾತನಾಡಿ, ಭಾವ ನಿಮ್ಮ ಹತ್ತಿರ ಮಾತನಾಡಿ ಆಮೇಲೆ ವಸು ನ ಕರೆದುಕೊಂಡು ಬರಬೇಕು ಎಂದು ಅವ್ವ ಅಂದುಕೊಂಡಿದ್ದರು. ಕಾಲಿಗೆ ಬೀಳಿಸುವ ಯಾವುದೇ ಯೋಚನೆ ಇರಲಿಲ್ಲ ಎನ್ನುತ್ತಾನೆ.
ನಿನ್ನ ಮಗಳಿಗೆ ನನ್ನ ಮಗ ಬೇಕೇ ಹೊರತು, ನನ್ನ ಮಗನಿಗೆ ನಿನ್ನ ಮಗಳು ಬೇಕಿಲ್ಲ ಎಂದು ನಂಜಮ್ಮ ಹೇಳುತ್ತಾಳೆ. ಮನೆಯಿಂದ ಆಚೆ ಹೋಗು, ನನ್ನ ಮಗನಿಗೆ ಎರಡನೇ ಮದುವೆ ಮಾಡೇ ಮಾಡುತ್ತೀನಿ ಅಂತ ಹೇಳುತ್ತಾಳೆ ನಂಜಮ್ಮ. ಆಗ ಬಂಗಾರಮ್ಮ ಮಾತನಾಡಿ, ನನ್ನ ಮಗಳು ಇಂತಹ ಮನೆಗೆ ಬರದೇ ಇರೋದೇ ಒಳ್ಳೆಯದು. ನಿನ್ನ ಮಗನ ಎರಡನೇ ಮಗನ ಮದುವೆಯನ್ನ ನನ್ನ ಮೀರಿ ಹೇಗೆ ಮದುವೆ ಮಾಡಿಸುತ್ತೀಯಾ ಅಂತ ನಾನೂ ನೋಡುತ್ತೀನಿ. ಊರಿನವರ ಮುಂದೆ ಕ್ಷಮೆ ಕೇಳಿ ನನ್ನ ಮಗಳ ಕಾಲಿಗೆ ಇವನು ಬಿದ್ದ ಮೇಲೆಯೇ ನನ್ನ ಅಳಿಯ ಅಂತ ಒಪ್ಪಿಕೊಳ್ಳುತ್ತೀನಿ ನೋಡುತ್ತಾ ಇರು ಎಂದು ಬಂಗಾರಮ್ಮ ಚಾಲೇಂಜ್ ಹಾಕುತ್ತಾಳೆ. ಚಂದ್ರು ಶಾಕ್ ನಲ್ಲಿರುತ್ತಾನೆ.

ಇತ್ತ ವಸಂತ ಚಂದ್ರಗೋಸ್ಕರ ರೆಸ್ಟೋರೆಂಟ್ ನಲ್ಲಿ ಕಾದು ಕಾದು ಸಾಕಾಗಿ ಕಣ್ಣೀರು ಹಾಕಿಕೊಂಡು ವಾಪಸ್ ಮನೆಗೆ ಹೋಗುತ್ತಾಳೆ. ಮನೆಯಲ್ಲಿ ಬಂಗಾರಮ್ಮ ವಸುಗಾಗಿ ಕಾಯುತ್ತಿರುತ್ತಾಳೆ. ವಸು ಫ್ರೆಂಡ್ ಮನೆಗೆ ಹೋಗಿದ್ದೆ ಎನ್ನುತ್ತಾಳೆ. ಅದಕ್ಕೆ ಬಂಗಾರಮ್ಮ ಸುಳ್ಳು ಹೇಳಬೇಡ, ನೀನು ಚಂದ್ರುಗೋಸ್ಕರ ಕಾಯ್ಕೊಂಡು ಬರುತ್ತಿದ್ದೀಯಾ. ಅವನು ಅಲ್ಲಿ ಎರಡನೇ ಮದುವೆಯಾಗೋದಕ್ಕೆ ಮುಂದಾಗಿದ್ದಾನೆ ಎಂದು ನಡೆದಿದ್ದನ್ನೆಲ್ಲಾ ಹೇಳುತ್ತಾಳೆ. ಅವ್ವ ಹೇಳಿದ್ದನ್ನೆಲ್ಲಾ ಕೇಳಿದ ವಸು ಕಣ್ಣಿರು ಹಾಕುತ್ತಾ ರೂಮಿಗೆ ಓಡಿ ಹೋಗಿದ್ದಾನೆ.
ಚಂದ್ರು ಸೀದಾ ಪುಟ್ಟಕ್ಕನ ಮೆಸ್ ಗೆ ಬಂದು ಊಟ ಕೊಡಿ ಎಂದು ಕೇಳುತ್ತಾನೆ. ಸ್ನೇಹಾ ಊಟ ಬಡಿಸುತ್ತಾಳೆ. ಚಂದ್ರು ಊಟ ಮಾಡುವಾಗ ಸ್ನೇಹಾ ಏನಾಯ್ತು ಅಣ್ಣಯ್ಯ ಅಂತ ಕೇಳುತ್ತಾಳೆ. ಆಗ ಚಂದ್ರು ನಡೆದದ್ದೆಲ್ಲವನ್ನೂ ಹೇಳುತ್ತಾನೆ. ನನ್ನಿಂದ ವಸು ಮನೆಯಲ್ಲಿ ಬೈಸಿಕೊಂಡಿರುತ್ತಾಳೆ ಎಂದು ನೊಂದುಕೊಂಡಿರುತ್ತಾನೆ. ಸ್ನೇಹಾ ಅಷ್ಟಕ್ಕೆಲ್ಲಾ ಬೇಜಾರ್ ಮಾಡ್ಕೋಬೇಡ, ನಾನು ಫೋನ್ ಮಾಡಿಕೊಡುತ್ತೀನಿ ಅನ್ನುತ್ತಾಳೆ. ಇತ್ತ ಕಂಠಿ ಹಾಗೂ ವಸು ಕೂಡ ಇದೇ ವಿಚಾರವಾಗಿ ಮಾತನಾಡುತ್ತಿರುತ್ತಾರೆ. ಕಂಠಿ ವಸುಗೆ ಸಮಾಧಾನ ಮಾಡುತ್ತಾನೆ.


Click it and Unblock the Notifications











