Puttakkana Makkalu: ಕಂಠಿ ಮನಸ್ಸು ಕೆದಕಿದ ಬಂಗಾರಮ್ಮನ ಫ್ಯೂಚರ್ ಸೊಸೆ..ಮುಂದಾಗಿದ್ದೇನು?
ಪುಟ್ಟಕ್ಕನ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಸಹನಾ ಮದುವೆ ಮಾಡುವುದು ಪುಟ್ಟಕ್ಕನ ದೊಡ್ಡ ಕನಸಾಗಿತ್ತು. ಒಂದೆರಡು ಸಂಬಂಧಗಳು ಅದಾಗಲೇ ಮುರಿದು ಬಿದ್ದಿತ್ತು. ಅದಕ್ಕೆ ಕಾರಣ ಗೋಪಾಲ. ಆದ್ರೆ ಈ ಬಾರಿ ಪುಟ್ಟಕ್ಕನ ಆಸೆಯೂ ಈಡೇರುತ್ತಿದೆ. ಸಹನಾಳ ಕನಸು ಕೂಡುತ್ತಿದೆ. ಎಲ್ಲವೂ ಒಟ್ಟಾಗಿ ಪುಟ್ಟಕ್ಕನ ಮನೆಯಲ್ಲಿ ಮದುವೆ ದಿಬ್ಬಣ ಹೊರಟಿದೆ. ಇದಕ್ಕಾಗಿ ಇಡೀ ಊರು ಶೃಂಗಾರಗೊಂಡಿದೆ.
ರಾಜೇಶ್ವರಿ ಕಿತಾಪತಿ ಈಗಲೂ ಕಡಿಮೆ ಏನು ಆಗಿಲ್ಲ. ಮುರುಳಿ ಮೇಷ್ಟ್ರು ಸಹನಾಳನ್ನು ಲವ್ ಮಾಡಿ ಮದುವೆಯಾಗಿದ್ದರು ಕೂಡ, ರಾಜೇಶ್ವರಿ ಕುತಂತ್ರಕ್ಕೆ ಬಲಿಯಾಗಿದ್ದಾಳೆ ಮುರುಳಿ ಮೇಷ್ಟ್ರ ಅಮ್ಮ. ಹೀಗಾಗಿ ಪುಟ್ಟಕ್ಕನಿಗೆ ಹಣದ ಡಿಮ್ಯಾಂಡ್ ಇಟ್ಟಿದ್ದಾಳೆ. ಆದರೆ, ಬಂಗಾರಮ್ಮ ಮತ್ತು ಮಗ ಕಂಠಿ ಇರುವ ತನಕ ಯಾವುದೇ ರೀತಿಯ ಸಮಸ್ಯೆಯಂತು ಆಗುವುದಿಲ್ಲ.

ಸಹನಾ ಮದುವೆಯ ಸಹಾಯಕ್ಕೆ ನಿಂತ ಕಂಠಿ..!
ಪುಟ್ಟಕ್ಕನ ಗುಣಕ್ಕೆ ಸೋಲದವರಿಲ್ಲ. ನೂಲಿನಂತೆ ಸೀರೆ ತಾಯಿಯಂತೆ ಮಕ್ಕಳು ಎಂಬ ಗಾದೆ ಮಾತು ಸುಮ್ಮನೆ ಮಾಡಿರುವುದಲ್ಲ. ಅದನ್ನು ಅನುಭವಿಸಿಯೇ ಹಿರಿಯರು ಹೆಣೆದಿರುವ ಮಾತದು. ಅದು ಪುಟ್ಟಕ್ಕನ ಮಕ್ಕಳಿಗೆ ಸೂಪರ್ ಆಗಿಯೇ ಮ್ಯಾಚ್ ಆಗುತ್ತದೆ. ಅದಕ್ಕೆ ಆ ಕಡೆ ಪುಟ್ಟಕ್ಕನ ಗುಣಕ್ಕೆ ಮಾರು ಹೋದ ಬಂಗಾರಮ್ಮ ಸಹಾಯಕ್ಕೆ ನಿಂತಿದ್ದರೆ, ಈ ಕಡೆ ಪುಟ್ಟಕ್ಕನ ಮಗಳ ಗುಣಕ್ಕೆ ಮಾರುಹೋದ ಮಗ, ಮನೆಯವರ ಸಹಾಯಕ್ಕೆ ನಿಂತಿದ್ದಾನೆ.

ಕಂಠಿಯ ಮನಸ್ಸು ತಿಳಿಯುವ ಕಾತುರ..!
ಸ್ನೇಹಾ ಅಕ್ಷರಶಃ ಕಂಠಿಗೆ ಸೋತು ಹೋಗಿದ್ದಾಳೆ. ಕಂಠಿ ತಮಗಾಗಿ ತುಡಿಯುವ ರೀತಿಗೆ ಮಾರು ಹೋಗಿದ್ದಾಳೆ. ಜೊತೆಯಲ್ಲಿ ಕೂತು ಊಟ ಮಾಡುತ್ತಾಳೆ. ಜೊತೆಯಾಗಿಯೇ ಡ್ಯಾನ್ಸ್ ಮಾಡುತ್ತಾರೆ. ಅಬ್ಬಬ್ಬಾ ಇವರಿಬ್ಬರ ಬಾಂಡಿಂಗ್ ನೋಡಿದ ಸುಮಾಗೆ ಅರ್ಥ ಆಗೋಯ್ತು. ಮನೆಯಲ್ಲಿ ಮುಂದಿನ ಮದುವೆ ಶ್ರೀ ಮತ್ತು ಸ್ನೇಹಾ ಅಕ್ಕನದ್ದು ಎಂಬುದು ಗೊತ್ತಾಗಿದೆ. ಈಗ ಸ್ನೇಹಾಗೆ ಸಿಕ್ಕಾಪಟ್ಟೆ ಕುತೂಹಲ. ಕಂಠಿ ಮೇಲೆ ಪ್ರೀತಿಯೇನೋ ಆಗಿ ಹೋಗಿದೆ. ಆದರೆ, ಕಂಠಿಗೂ ಅದೇ ಪ್ರೀತಿ ಇದೆಯಾ ಇಲ್ಲವಾ ಎಂಬುದಕ್ಕೆ ಕಂಠಿ ಬಳಿ ಪ್ರಶ್ನಿಸಿದ್ದಾಳೆ. "ನಿಮಗೆ ಹಳ್ಳಿ ಹುಡುಗಿ ಬೇಕಾ..? ಸಿಟಿ ಹುಡುಗಿ ಬೇಕಾ" ಅಂತ. ಕಂಠಿ ಈ ಚಾನ್ಸ್ ಮಿಸ್ ಮಾಡಿಕೊಳ್ಳುತ್ತಾನಾ ನೋ ವೇ ಚಾನ್ಸೇ ಇಲ್ಲ.

ಕಂಠಿ ಮಾತು ಕೇಳಿ ಖುಷಿ ಪಟ್ಟ ಸ್ನೇಹಾ..!
ಸ್ನೇಹಾ, ಕಂಠಿ ಮದುವೆಯಾಗುವ ಹುಡುಗಿ ಯಾವ ರೀತಿ ಇರಬೇಕೆಂದು ತಿಳಿಯುವ ಕುತೂಹಲ ವ್ಯಕ್ತಪಡಿಸಿದ್ದಾಳೆ. ಜೊತೆಗೆ ತನ್ನನ್ನೇ ಕಲ್ಪಿಸಿಕೊಂಡಿರುವ ಕಾರಣ "ಓದಿರುವ ಹುಡುಗಿ ಕೆಲಸಕ್ಕೆ ಸೇರಿದ ಹುಡುಗಿ ಆದ್ರೆ ಒಪ್ಪಿಕೊಳ್ಳುತ್ತಿರಾ ಶ್ರೀ" ಎಂದಿದ್ದಾಳೆ. ಆಗ ಶ್ರೀ ಕೂಡ ಅಷ್ಟೇ ಬುದ್ಧಿವಂತಿಕೆ ಉತ್ತರ ನೀಡಿದ್ದಾನೆ. "ಇಬ್ಬರ ಮನಸ್ಸಲ್ಲಿ ಪ್ರೀತಿ ಮಾತ್ರ ಇದ್ರೆ ಅದೆಲ್ಲಾ ಸಮಸ್ಯೆ ಅಲ್ಲ ಮೆಸ್ಸು" ಎಂದಿದ್ದಾನೆ. ಜೊತೆಗೆ ಸ್ನೇಹಾಳನ್ನು ಹಾಡಿ ಹೊಗಳಿದ್ದಾನೆ. ಧೈರ್ಯದಿಂ ಇರಬೇಕು, ಊರಿನವರೆಲ್ಲಾ ಹೊಗಳಬೇಕು, ಮನೆಯವರ ಮೇಲೆ ಕಾಳಜಿ ಇರಬೇಕು ಹೀಗೆ ಎಲ್ಲಾ ಸ್ನೇಹಾಳ ಗುಣಗಳನ್ನೇ ಹೇಳಿದ್ದಾನೆ.

ಕಂಠಿಯ ಗುಣವನ್ನೇ ಹೇಳುತ್ತಾಳಾ..?
ಈಗ ಸ್ನೇಹಾಳ ಸರದಿ ಬಂದಿದೆ. ಕಂಠಿ ತನ್ನ ಮನಸ್ಸಿನಲ್ಲಿ ಇದ್ದ ಹುಡುಗಿಯ ಗುಣವನ್ನೇ ಹೇಳಿದ್ದಾನೆ. ಆ ಎಲ್ಲಾ ಗುಣಗಳು ತನ್ನಲ್ಲಿರುವುದೇ ಎಂದು ಖುಷಿ ಪಟ್ಟಿದ್ದಾಳೆ. ಆದ್ರೆ ಇದೀಗ ಕಂಠಿಗೆ ಕುತೂಹಲ ಹೆಚ್ಚಾಗಿದೆ. ಸ್ನೇಹಾಳನ್ನು ಮರು ಪ್ರಶ್ನೆ ಮಾಡಿದ್ದಾನೆ. ಹಾಗಾದ್ರೆ ನೀವಿಷ್ಟ ಪಡುವ ಹುಡುಗ ಹೇಗಿರಬೇಕು ಅಂತ. ಇಬ್ಬರ ಮನಸ್ಸುಗಳು, ಭಾವನೆಗಳು ಒಂದಾಗಿದೆ. ಇನ್ನು ಪ್ರಪೋಸ್ ಮಾಡುವುದೊಂದೆ ಬಾಕಿ.


Click it and Unblock the Notifications











