Puttakkana Makkalu: ಪುಟ್ಟಕ್ಕನ ಮನೆ,ಮಠ ಹೋಯ್ತು.. ಮಗಳ ಮದುವೆ ನಡೆಯುತ್ತಾ? ಇಲ್ವ?
ಪುಟ್ಟಕ್ಕನ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಮಗಳನ್ನು ಧಾರೆ ಎರೆದುಕೊಡುವುದಕ್ಕೆ ಸಮಯ ಕೂಡಿ ಬಂದಿದೆ. ಶಾಸ್ತ್ರಗಳೆಲ್ಲಾ ಮುಗಿದು, ಇನ್ನು ಮುಹೂರ್ತವೊಂದೆ ಬಾಕಿ ಇದೆ. ಪುಟ್ಟಕ್ಕನ ಸಹಾಯಕ್ಕಾಗಿ ಇಡೀ ಊರಿಗೆ ಊರೇ ನಿಂತಿದೆ. ಒಳ್ಳೆಯವರಿಗೆ ಶತ್ರುಗಳು ಜಾಸ್ತಿ ಅನ್ನೋ ಮಾತಿದೆ. ಅದಕ್ಕೆ ತಕ್ಕಂತೆ ಪುಟ್ಟಕ್ಕನಿಗೆ ಒಳ್ಳೆಯದ್ದನ್ನು ಮಾಡುವವರ ನಡುವೆ ಕೆಟ್ಟದ್ದನ್ನು ಬಯಸುವವರೇ ಹೆಚ್ಚಾಗಿದ್ದಾರೆ.
ಸಹನಾಗೆ ಈ ಮುಂಚೆಯೂ ಗಂಡುಗಳು ಬಂದು ಹೋಗಿದ್ದವು. ಮದುವೆಗೆ ಅಪ್ಪ ಇರಲೇಬೇಕೆಂದು ಬೇಡಿಕೆ ಇಟ್ಟಿದ್ದರಿಂದ ಆ ಸಂಬಂಧಗಳೆಲ್ಲಾ ಅಲ್ಲಿಗಲ್ಲಿಗೆ ನಿಂತು ಹೋಯಿತು. ಆದ್ರೆ ಮುರುಳಿ ಮೇಷ್ಟ್ರನ್ನ ಸಹನಾ ಪ್ರೀತಿ ಮಾಡುತ್ತಿದ್ದ ಕಾರಣಕ್ಕೆ ಬೇಡಿಕೆ ಅದೇ ಆದರೂ ಮನೆಯವರೆಲ್ಲಾ ಒಪ್ಪಿಗೆ ನೀಡಿದ್ದರು.

ಹಣ, ಆಸ್ತಿ ಕಳೆದುಕೊಂಡ ಪುಟ್ಟಕ್ಕ
ರಾಜಿಗೆ ಅದೆಷ್ಟು ದ್ವೇಷ ಅಂದ್ರೆ, ಪುಟ್ಟಕ್ಕನಿಂದ ಗಂಡನನ್ನು ಕಿತ್ತುಕೊಂಡಳು. ಬಳಿಕ ಅವಳ ಮನೆ, ಮೆಸ್ಸು ಕಿತ್ತುಕೊಂಡು ಬೀದಿಯಲ್ಲಿ ನಿಲ್ಲಿಸಬೇಕು ಎಂದು ಹಠ ತೊಟ್ಟು ಏನೇನೋ ಮಾಡಿದಳು. ಆದ್ರೆ ಅದ್ಯಾವುದು ಕೈಗೂಡದೆ ಇದ್ದಾಗ ಮದುವೆಯಲ್ಲಿ ಕೈ ಅಲ್ಲಾಡಿಸುವುದಕ್ಕೆ ಪ್ಲ್ಯಾನ್ ಮಾಡಿದಳು. ಈಗ ಅದು ಸಕ್ಸಸ್ ಆಗಿದೆ. ಮುರುಳಿ ಅಮ್ಮನಿಗೆ ಗೋಪಾಲ ಬರಲೇಬೇಕೆಂದು ಡಿಮ್ಯಾಂಡ್ ಇಡುವಂತೆ ಸೂಚಿಸಿದ ರಾಜಿ, ಗೋಪಾಲ ಬರಲೇಬೇಕೆಂದರೆ ಆಸ್ತಿಯನ್ನು ಬರೆದುಕೊಡುವಂತೆ ಬೇಡಿಕೆ ಇಟ್ಟಿದ್ದಾಳೆ. ದಾರಿಯಿಲ್ಲದೆ ಪುಟ್ಟಕ್ಕ ಆಸ್ತಿ ಬರೆದುಕೊಟ್ಟಿದ್ದಾಳೆ.

ಅಲ್ಲಿ ಗೋಪಾಲ ಇಲ್ಲವೇ ಇಲ್ಲ
ರಾಜೇಶ್ವರಿ ಮದುವೆ ಕಾರ್ಯ ಆರಂಭವಾದಾಗಿನಿಂದ ಸಖತ್ ಪ್ಲ್ಯಾನ್ ಮಾಡಿಕೊಂಡೆ ಬಂದಿದ್ದಾಳೆ. ಮುರುಳಿ ಮೇಷ್ಟ್ರಿನ ಅಮ್ಮ ಕೂಡ ಅವಳ ತಾಳಕ್ಕೆ ಕುಣಿಯುತ್ತಿದ್ದಾಳೆ. ಆಸ್ತಿ ಬರೆಸಿಕೊಳ್ಳುವುದಕ್ಕೆ ಗೋಪಾಲನನ್ನೇ ಕೂಡಿ ಹಾಕಿ ಬಂದಿದ್ದಳು. ಆಸ್ತಿ ಪತ್ರ ಸಹಿ ಹಾಕಿದ ಮೇಲೆ ಬೀಗದ ಕೀ ಕೊಟ್ಟಿದ್ದಾಳೆ. ಮುತ್ತುನನ್ನು ಕಳುಹಿಸಿ ಗೋಪಾಲನನ್ನು ಕರೆದುಕೊಂಡು ಬರುವುದಕ್ಕೆ ಹೇಳಿದ್ದಾಳೆ ಪುಟ್ಟಕ್ಕ. ಆದ್ರೆ ಅಲ್ಲಿ ಹೋಗಿ ನೋಡಿದರೆ ಗೋಪಾಲನೇ ಇಲ್ಲ.

ಗೋಪಾಲ ಬೇಕೆ ಬೇಕೆಂದ ಮುರುಳಿ ತಾಯಿ
ಮುರುಳಿ ತಾಯಿಗೆ ಈ ಮದುವೆ ಬೇಡವಾಗಿದೆ. ಮಗ ಕೆಲಸದಲ್ಲಿರುವುದಕ್ಕೆ ಇನ್ನು ದೊಡ್ಡ ಮನೆತನದ ಹುಡುಗಿ ತರಬಹುದು ಎಂಬುದೇ ಆಕೆಯ ಭಾವನೆ. ಹೀಗಾಗಿ ಕಿರಿಕ್ ತೆಗೆಯುತ್ತಲೇ ಇದ್ದಾಳೆ. ದೊಡ್ಡಮಟ್ಟದ ಹಣ ಕೇಳಿದಾಗಲೂ ಪುಟ್ಟಕ್ಕ ಒದಗಿಸಿ ಕೊಟ್ಟಿದ್ದಾಳೆ. ಈಗ ಇನ್ನೇನು ತಾಳಿ ಕಟ್ಟಬೇಕು ಎನ್ನುವಾಗ ಗೋಪಾಲ ಬೇಕೇಬೇಕು ಎಂದು ಕೂತಿದ್ದಾಳೆ. ಇದು ಪುಟ್ಟಕ್ಕನಿಗೆ ಕಂಗಾಲು ಮಾಡಿದೆ.

ಇದು ಕಾಳಿಯ ಪ್ಲ್ಯಾನ್ ?
ರಾಜೇಶ್ವರಿ, ಗೋಪಾಲನ ವಿಚಾರದಲ್ಲಿ ಸುಳ್ಳು ಹೇಳುತ್ತಿಲ್ಲ. ಯಾಕಂದ್ರೆ ಅವಳಿಗೆ ಬೇಕಾಗಿದ್ದಿದ್ದು ಆಸ್ತಿ. ಅದಕ್ಕೆ ಪುಟ್ಟಕ್ಕ ಈಗಾಗಲೇ ಸಹಿ ಹಾಕಿ ಆಗಿದೆ. ಆದರೆ ಗೋಪಾಲನನ್ನು ಇದ್ದ ಜಾಗದಿಂದ ಕಿಡ್ನ್ಯಾಪ್ ಮಾಡಿರುವುದು ಕಾಳಿಯ ಕೆಲಸವೇ ಆಗಿರುತ್ತದೆ. ಗೋಪಾಲ ಇಲ್ಲದೆ ಮದುವೆ ಆಗುವುದಿಲ್ಲ ಎಂಬುದು ಕಾಳಿಗೂ ಗೊತ್ತಿದೆ. ಹೀಗಾಗಿ ಗೋಪಾಲನನ್ನೆ ಕಿಡ್ನ್ಯಾಪ್ ಮಾಡಿದರೆ ಮದುವೆ ನಿಲ್ಲುತ್ತೆ ಎಂಬ ಕಾರಣಕ್ಕೆ ಕಾಳಿ ಮಾಡಿರಬಹುದು.

ಭವಿಷ್ಯವೇ ನಿಜವಾಗುತ್ತಾ..?
ಮದುವೆ ಮಾತುಕತೆಯೆಲ್ಲಾ ಮುಗಿದ ಮೇಲೆ ಪುಟ್ಟಕ್ಕ ಮಕ್ಕಳನ್ನು ಕರೆದುಕೊಂಡು ಮನೆ ದೇವರಿಗೆ ಹೋಗಿದ್ದಳು. ಆಗಲೇ ಸಹನಾಳ ಮದುವೆಯಲ್ಲಿ ಕಂಟಕವಿರುವುದು ಗೋಚರವಾಗಿತ್ತು. ಆದ್ರೆ, ಪುಟ್ಟಕ್ಕನನ್ನು ನೋಡಿ ಆ ವಿಷಯ ಹೇಳುವ ಮನಸ್ಸು ಜ್ಯೋತಿಷಿಗೆ ಬರಲೇ ಇಲ್ಲ. ಈಗ ಅದೇ ಸತ್ಯವಾಗಿವ ಸಮಯ ಸನಿಹವಾಗಿದೆ.


Click it and Unblock the Notifications











