Puttakkana Makkalu : ಕಂಠಿ ಇರುವಾಗ ಚಿಂತೆ ಏಕೆ..ವಿಘ್ನಗಳಿಲ್ಲದೆ ನಡೆಯಿತು ಸಹನಾ ಮದುವೆ..!

By ಎಸ್ ಸುಮಂತ್

ಗಂಡ ಬಿಟ್ಟು ಹೋದಾಗಲೂ ಧೈರ್ಯಗೆಡಲಿಲ್ಲ.ಮೂರು ಮಕ್ಕಳನ್ನು ಸಾಕಬೇಕು ಎಂದಾಗಲೂ ಹೆದರಲಿಲ್ಲ. ಹೆಣ್ಣು ಮಕ್ಕಳು ಶಿಕ್ಷಣ, ಆ ಕಡೆ ಮೆಸ್ಸನ್ನು ನೋಡಿಕೊಳ್ಳುವಾಗಲೂ ತಲೆ ಕೆಡಿಸಿಕೊಳ್ಳಲಿಲ್ಲ. ಅದೆಷ್ಟೋ ರಾತ್ರಿಗಳು ಉಪವಾಸ ಮಲಗಿದಾಗಲೂ ಕಣ್ಣೀರು ಹಾಕಲಿಲ್ಲ. ಆದರೆ ಪುಟ್ಟಕ್ಕ ಇಂದು ಮೌನಿಯಾಗಿದ್ದಾಳೆ. ಕಣ್ಣಲ್ಲಿ ನೀರು ತುಂಬಿದೆ. ಕಾರಣ ಮುದ್ದಿನ ಮಗಳು ತವರು ತೊರೆದು ಗಂಡನ ಮನೆಗೆ ಹೋಗುತ್ತಿದ್ದಾಳೆ.

ಇದು ಪುಟ್ಟಕ್ಕನ ಬಹಳ ವರ್ಷದ ಕನಸು. ಮಗಳನ್ನು ಒಳ್ಳೆ ಮನೆಗೆ ಮದುವೆ ಮಾಡಿ ಕಳುಹಿಸಬೇಕೆಂದು ಕಷ್ಟಪಟ್ಟಳು. ಅವಳಿಗಾಗಿ ಹಣ ಹೊಂದಿಸಿ ಇಟ್ಟಿದ್ದಳು. ಗಂಡಿನ ಮನೆಯವರು ಕೇಳಿದ್ದೆಲ್ಲವನ್ನು ಇಂದು ಒದಗಿಸಿದ್ದಾಳೆ. ಕಷ್ಟವಾಗಲೀ, ಸಾಲವಾಗಲಿ. ಒಳ್ಳೆಯವರಿಗೆ ದೇವರು ಯಾವತ್ತು ಕೈ ಬಿಡುವುದಿಲ್ಲ ಎಂಬಂತೆ ಪುಟ್ಟಕ್ಕನಿಗೆ ಬಂಗಾರಮ್ಮ ಸಹಾಯವಾಗಿ ನಿಂತಿದ್ದಾಳೆ.

ಮಗಳಿಗೆ ಧಾರೆ ಎರೆದ ಪುಟ್ಟಕ್ಕ - ಗೋಪಾಲ

ಮಗಳಿಗೆ ಧಾರೆ ಎರೆದ ಪುಟ್ಟಕ್ಕ - ಗೋಪಾಲ

ಸಹನಾಳನ್ನು ಮುರುಳಿ ಪ್ರೀತಿಸಿದ್ದಕ್ಕಾಗಿ ತಂದೆ ತಾಯಿ ಬೇರೆ ದಾರಿಯಿಲ್ಲದೆ ಒಪ್ಪಿಕೊಂಡಿದ್ದರು. ಆದರೆ ಪ್ರತಿ ಕ್ಷಣವೂ ಮದುವೆ ನಿಲ್ಲಲಿ ಎಂದೇ ಬಯಸುತ್ತಿದ್ದಳು. ಆದರೆ ದೇವರ ದಯೆ ಎಂಬಂತೆ ಸಹನಾಳ ಮದುವೆ ಸರಾಗವಾಗಿ ನೆರವೇರಿದೆ. ಗೋಪಾಲ, ಸದ್ಯಕ್ಕೆ ರಾಜೇಶ್ವರಿಯ ಗಂಡನೇ ಆದರೂ, ಪುಟ್ಟಕ್ಕನ ಪಕ್ಕದಲ್ಲಿ ನಿಂತು ಮಗಳಿಗೆ ಮನಸಾರೆ ಅರಸಿ, ಹಾರೈಸಿ ಧಾರೆ ಎರೆದಿದ್ದಾರೆ. ಕನ್ಯಾದಾನ ಮಾಡಿ, ಮಗಳನ್ನು ಚೆನ್ನಾಗಿರಲಿ ಎಂದು ಮನ ತುಂಬಿ ಹಾರೈಸಿದ್ದಾರೆ.

ಗೋಪಾಲನನ್ನು ಕರೆ ತಂದ ಕಂಠಿ

ಗೋಪಾಲನನ್ನು ಕರೆ ತಂದ ಕಂಠಿ

ಕಂಠಿಗೆ 'ಪುಟ್ಟಕ್ಕನ ಮಕ್ಕಳು' ಕಷ್ಟ ಪಡುವುದೆಂದರೆ ಆಗಲ್ಲ. ಅದೆಂಥದ್ದೆ ಕಷ್ಟವಾಗಲಿ ಅದನ್ನು ಚಿಟಿಕೆ ಹೊಡೆಯುವುದರಲ್ಲಿ ಸರಿ ಮಾಡಿ ಬಿಡುತ್ತಾನೆ. ಪಂಚಾಯ್ತಿಯಲ್ಲಿ ಇನ್ನೇನು ಮಾನ ಹೋಗಬೇಕೆನ್ನುವಾಗಲೂ ಸತ್ಯವನ್ನು ಬಹಿರಂಗ ಪಡಿಸಿ, ಕಳ್ಳನನ್ನು ಹಿಡಿದು ತಂದಿದ್ದ. ಈಗ ಗೋಪಾಲ ನಿಲ್ಲದೆ ಮದುವೆಯೇ ನಡೆಯಲ್ಲ ಎನ್ನುತ್ತಿರುವಾಗಲೇ ಗೋಪಾಲನನ್ನು ಎಳೆದು ತಂದಿದ್ದಾನೆ. ಮಗಳ ಮದುವೆಯನ್ನು ಸಂತಸದಿಂದ ಮಾಡುವಂತೆ ಮಾಡಿದ್ದಾನೆ. ಪುಟ್ಟಕ್ಕನ ಮನೆಗೆ ಬೆಂಗಾವಲಾಗಿ ಕಂಠಿ ನಿಂತಿರುವಾಗ ಇನ್ನೆಲ್ಲಿಯ ಸಮಸ್ಯೆಗಳು. ಗೋಪಾಲನನ್ನು ಕರೆದುಕೊಂಡು ಬಂದಾಗ ಸ್ನೇಹಾಳ ಮುಖದಲ್ಲಿ ಸಂತಸ ಎದ್ದು ಕಾಣುತ್ತಿತ್ತು. ನಂಬಿಕೆ ಇನ್ನಷ್ಟು ಜಾಸ್ತಿಯಾಗಿತ್ತು.

ಕಾಳಿ ಮಾಡಿದ ಪ್ಲ್ಯಾನ್ ಪ್ಲಾಫ್

ಕಾಳಿ ಮಾಡಿದ ಪ್ಲ್ಯಾನ್ ಪ್ಲಾಫ್

ಕಾಳಿಗೆ ಮೊದಲಿನಿಂದಾನು ಸಹನಾ ಮೇಲೆ ಕಣ್ಣು. ಹೇಗಾದರೂ ಮಾಡಿ ಮದುವೆಯಾಗಲೇಬೇಕೆಂದು ಪ್ಲ್ಯಾನ್ ಮಾಡಿದ್ದ. ಅದಕ್ಕೆ ಅಕ್ಕ ರಾಜೇಶ್ವರಿಯ ಸಹಾಯವನ್ನು ಕೇಳಿದ್ದ. ರಾಜೇಶ್ವರಿ ಹು ಎನ್ನುತ್ತಲೇ, ಆಸ್ತಿ ಸಿಕ್ಕ ಕೂಡಲೇ ಕಾಳಿಗೆ ಕೈ ಎತ್ತಿದ್ದಳು. ಬಳಿಕ ಮುರುಳಿ ತಾಯಿಯೇ ಎಲ್ಲಾ ಪ್ಲ್ಯಾನ್ ಮಾಡಿ ಗೋಪಾಲನನ್ನು ಕಿಡ್ನ್ಯಾಪ್ ಮಾಡಲು ಸೂಚನೆ ನೀಡಿದ್ದಳು. ಆದರೆ, ಕಾಳಿಯ ಅಡ್ಡವನ್ನು ಭೇದಿಸಿ ಕಂಠಿ,ಗೋಪಾಲನನ್ನು ಕರೆ ತಂದಿದ್ದಾನೆ.

ಸಹನಾ ನೆಮ್ಮದಿಯಾಗಿ ಇರುತ್ತಾಳಾ..?

ಸಹನಾ ನೆಮ್ಮದಿಯಾಗಿ ಇರುತ್ತಾಳಾ..?

ಈ ಮದುವೆ ಗಂಡಿನ ಮನೆಯವರಿಗೆ ಇಷ್ಟವಿರಲಿಲ್ಲ. ದುಡ್ಡಿನ ಬಕಾಸುರರು. ಮದುವೆಗೆ ಮುಂಚೆನೆ ಇರೋ ಬರೋ ದುಡ್ಡೆಲ್ಲ ಪಡೆದಿದ್ದಾರೆ‌. ಕಡೆ ಕ್ಷಣದ ತನಕ ಮದುವೆ ಮುರಿಯಲು ಯತ್ನಿಸಿದ್ದಾರೆ. ಆದರೆ ಎಲ್ಲಾ ಅಡೆ ತಡೆ ಮೀರಿ ಮದುವೆ ಏನೋ ನಡೆದು ಹೋಗಿದೆ. ಹೀಗಿರುವಾಗ ಮುರುಳಿ ತಾಯಿ ಸಹನಾಳನ್ನು ನೆಮ್ಮದಿಯಾಗಿ ಇರಲು ಬಿಡುತ್ತಾಳಾ? ಸದಾ ಕೊಂಕು ಮಾಡುವ ಅತ್ತೆಯ ಜೊತೆಗೆ ಹೆಣಗುವುದೇ ಸಹನಾಗೆ ಇರುವ ಟಾರ್ಗೆಟ್ ಆಗಿದೆ. ಕಷ್ಟವೇ ಬಂದರೂ ಸುಖವೇ ಆದರೂ ಸಹನಾ ಯಾರ ಬಳಿಯೂ ಹೇಳಿಕೊಳ್ಳಲ್ಲ.

More from Filmibeat

English summary
Puttakkana Makkalu Serial Written Update on February 21st Episode. Here is the details about Sahana and Muruli marriage.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X