Puttakkana Makkalu: ಬಂಗಾರಮ್ಮನಿಗೆ ಶಾಪ ಹಾಕಿದ ಸ್ನೇಹಾ.. ಹುಡುಗಿಗಾಗಿ ಅವ್ವನನ್ನು ಬಿಡ್ತಾನಾ ಕಂಠಿ?

By ಎಸ್ ಸುಮಂತ್

ಅಂತೂ ಇಂತೂ ಪುಟ್ಟಕ್ಕನ ದೊಡ್ಡ ಆಸೆ ನೆರವೇರಿದೆ. ದೊಡ್ಡ ಮಗಳು ಸಹನಾಳ ಮದುವೆ ಕೆಲವು ಆತಂಕಗಳ ನಡುವೆ ಅದ್ದೂರಿಯಾಗಿ ನಡೆದಿದೆ. ಗೋಪಾಲನೇ ಮುಂದೆ ನಿಂತು ತನ್ನ ಕರ್ತವ್ಯವನ್ನು ನಿಭಾಯಿಸಿದ್ದಾನೆ. ಸಹನಾ ಕೂಡ ತಾನೂ ಪ್ರೀತಿಸಿದ ಹುಡುಗನ ಕೈ ಹಿಡಿದು ಸಂತಸ ಪಟ್ಟಿದ್ದಾಳೆ. ಇನ್ನು ಪ್ರೀತಿಸಿದವನ ಜೊತೆಗೆ ಹೊಸ ಜೀವನ ಶುರು ಮಾಡಲು ಕಾತುರಳಾಗಿದ್ದಾಳೆ.

ಮುರುಳಿ ಮೇಷ್ಟ್ರ ಅಮ್ಮ ಅದೆಷ್ಟೇ ಪ್ರಯತ್ನ ಪಟ್ಟರು ಕಂಠಿಯೊಬ್ಬ ಸಾಕು ಪುಟ್ಟಕ್ಕನ ಸಹಾಯಕ್ಕೆ ಎಂಬಂತೆ, ಗೋಪಾಲನ ಉಸ್ತುವಾರಿಯಲ್ಲಿ ಮದುವೆ ನಡೆದಿದೆ. ಮನೆ, ಮೆಸ್ಸು ಕಳೆದುಕೊಂಡರೂ ಸಹ ಪುಟ್ಟಕ್ಕ ಮಗಳ ಮದುವೆಯನ್ನು ಕಣ್ತುಂಬಿಕೊಂಡಿದ್ದಾಳೆ. ಮಕ್ಕಳಿಗೆಲ್ಲಾ ಇನ್ನೇನು ತಿಳಿದೇ ಬಿಡುತ್ತಿದ್ದ ವಿಚಾರವನ್ನು ಪುಟ್ಟಕ್ಕ ಹಂಗೆ ಯಾಮಾರಿಸಿದ್ದಾಳೆ.

ಮದುವೆ ಮನೆಗೆ ಬಂದ ಬಂಗಾರಮ್ಮ

ಮದುವೆ ಮನೆಗೆ ಬಂದ ಬಂಗಾರಮ್ಮ

ಬಂಗಾರಮ್ಮನಿಗೆ ಪುಟ್ಟಕ್ಕನೆಂದರೆ ಇನ್ನಿಲ್ಲದ ಪ್ರೀತಿ. ಆಕೆಯ ಒಳ್ಳೆತನಕ್ಕೆ ಮಾರು ಹೋಗಿದ್ದಾಳೆ. ಯಾರಿಗೂ ಪುಕ್ಸಟ್ಟೆಯಾಗಿ ಏನನ್ನು ನೀಡದ ಬಂಗಾರಮ್ಮ, ಪುಟ್ಟಕ್ಕನಿಗಾಗಿ ಲಕ್ಷ ಲಕ್ಷ ಹಣವನ್ನು ಯಾವುದೇ ಆಧಾರವಿಲ್ಲದೆ ನೀಡಿದ್ದಾಳೆ. ಮಗಳ ಮದುವೆಯಂತೆ ಪುಟ್ಟಕ್ಕನ ಮಗಳ ಮದುವೆಯನ್ನು ಮಾಡುವಾಸೆ. ಯಾವುದೊ ಅನಿವಾರ್ಯ ಕಾರಣಕ್ಜೆ ಸಹನಾ ಮುಹೂರ್ತದ ಸಮಯಕ್ಕೆ ಬರುವುದಕ್ಕೆ ಆಗಿಲ್ಲ. ಆದರೆ ವಧು ವರರಿಗೆ ಹರಸಲು ಬಂಗಾರಮ್ಮ ಮದುವೆ ಮನೆಗೆ ಬಂದಿದ್ದಾರೆ. ಇಬ್ಬರನ್ನು ಮನಸಾರೆ ಹಾರೈಸಿದ್ದಾರೆ.

ಬಚ್ಚಿಟ್ಟುಕೊಂಡ ಕಂಠಿ - ಸ್ನೇಹಾ..!

ಬಚ್ಚಿಟ್ಟುಕೊಂಡ ಕಂಠಿ - ಸ್ನೇಹಾ..!

ಕಂಠಿಗೆ ಬಂಗಾರಮ್ಮನೆ ಹೇಳಿದ್ದಾರೆ. ಮುಂದೆ ನಿಂತು ಪುಟ್ಟಕ್ಕನ ಮನೆ ಕಾರ್ಯವನ್ನೆಲ್ಲಾ ಮಾಡಿಸು ಅಂತ. ಆದರೆ ಬಂಗಾರಮ್ಮ ಎದುರು ಬಂದಾಗ ಕಂಠಿಗೆ ಎದುರು ನಿಲ್ಲುವಷ್ಟು ಧೈರ್ಯವಿಲ್ಲ. ಯಾಕಂದ್ರೆ ಸ್ನೇಹಾಗೆ ಆಗಲಿ, ಪುಟ್ಟಕ್ಕನ ಮನೆಯವರಿಗೆ ಆಗಲಿ ತಾನೂ ಬಂಗಾರಮ್ಮನ ಮಗನೆಂದು ತೋರಿಸಿಯೇ ಇಲ್ಲ. ಹೀಗಾಗಿ ಬಂಗಾರಮ್ಮ ಬಂದಾಗೆಲ್ಲ ಒಂದೊಂದು ನೆಪ ಹೇಳಿ ಬಚ್ಚಿಟ್ಟುಕೊಳ್ಳುತ್ತಾನೆ. ಇನ್ನು ಸ್ನೇಹಾಗೂ ಬಂಗಾರಮ್ಮನಿಗೂ ಮೊದಲಿನಿಂದಾನು ಆಗದ ಕಾರಣ ಬಂಗಾರಮ್ಮ ಬಂದೊಡನೆ ಅವ್ವನಿಗೆ ನೋವಾಗಬಾರದು ಅಂತ ಅವಳು ಬಚ್ಚಿಟ್ಟುಕೊಳ್ಳುತ್ತಾಳೆ. ಈಗ ಕಂಠಿ ಅಂಡ್ ಸ್ನೇಹಾ ಇಬ್ಬರು ಒಂದೇ ರೂಮಲ್ಲಿ ಲಾಕ್ ಆಗಿದ್ದಾರೆ.

ಕಂಠಿಗೆ ಸ್ನೇಹಾ ಮಾತಿನಿಂದ ಖುಷಿ

ಕಂಠಿಗೆ ಸ್ನೇಹಾ ಮಾತಿನಿಂದ ಖುಷಿ

ಸ್ನೇಹಾಗೂ ತನ್ನ ಮೇಲೆ ಪ್ರೀತಿ ಇರುವುದು ಕಂಠಿಗೆ ಈಗಾಗಲೇ ಖಾತ್ರಿಯಾಗಿದೆ. ಆದ್ರೆ ಶ್ರೀ ಮೇಲೆ ಪ್ರೀತಿ ಇರುವುದೇ ವಿನಃ ಕಂಠಿಯ ಮೇಲೆ ಅಲ್ಲ. ಕಂಠಿಗೋ ಸಿಕ್ಕಾಪಟ್ಟೆ ಲವ್ವಾಗಿ ಹೋಗಿದೆ. ಅದರ ಜೊತೆಗೆ ಸ್ನೇಹಾ ಅಗಾಗ ಬೇರೆ ಚಮಕ್ ಕೊಡ್ತಾ ಇರುತ್ತಾಳೆ. ಈಗ ರೂಮಲ್ಲಿ ಲಾಕ್ ಆಗಿರುವುದಕ್ಕೂ "ನಿಮ್ಮ ಜೊತೆಗೆ ತಾನೆ ಲಾಕ್ ಆಗಿರುವುದು. ಖುಷಿಯೇ ಇದೆ" ಎಂದು ಹೇಳಿ ಕಂಠಿಯ ದಿಲ್ ಖುಷಿ ಮಾಡಿದ್ದಾಳೆ. ಇದೇ ಜೋಶ್‌ನಲ್ಲಿರುವ ಕಂಠಿ ಪ್ರೀತಿ ಹೇಳಿ ಬಿಡಲಾ..? ಇಲ್ಲ ನಾನು ಬಂಗಾರಮ್ಮನ ಮಗ ಎಂಬ ಸತ್ಯ ಹೇಳಲಾ ಎಂಬ ಗೊಂದಲದಲ್ಲಿದ್ದಾನೆ.

ಅವ್ವನನ್ನು ಬಿಟ್ಟು ಮದುವೆಯಾಗುತ್ತಾನಾ..?

ಅವ್ವನನ್ನು ಬಿಟ್ಟು ಮದುವೆಯಾಗುತ್ತಾನಾ..?

ಕಂಠಿ ಪ್ರೀತಿಗಾಗಿ ಸಾಕಷ್ಟು ಸುಳ್ಳುಗಳನ್ನು ಹೇಳಿದ್ದಾನೆ. ಅವ್ವನನ್ನು ಮುಚ್ಚಿಟ್ಟಿದ್ದಾನೆ, ತನ್ನ ಹಿನ್ನೆಲೆಯನ್ನು ಮುಚ್ಚಿಟ್ಟಿದ್ದಾನೆ. ಈಗ ಸ್ನೇಹಾಳ ಮೇಲೆ ಅಪಾರ ಪ್ರೀತಿ ಹುಟ್ಟಿದೆ. ಸ್ಮೇಹಾ ಮಾತು ಮಾತಲ್ಲೇ ಕಟ್ಟಿ ಹಾಕುತ್ತಿದ್ದಾಳೆ. ಈಗ ಬೇರೆ "ನನ್ನ ಅಕ್ಕನ ಮದುವೆಯಲ್ಲಿ ನಾನು ಎಂಜಾಯ್ ಮಾಡುವುದನ್ನು ತಪ್ಪಿಸಿದ ಬಂಗಾರಮ್ಮನಿಗೆ ಮಗನ ಮದುವೆಯನ್ನೇ ನೋಡದಂತೆ ಆಗಲಿ" ಎಂದು ಶಾಪ ಬೇರೆ ಹಾಕಿದ್ದಾಳೆ. ಕಂಠಿ ಪ್ರೀತಿಗಾಗಿ ಅವ್ವನಿಂದ ಮದುವೆಯನ್ನೇ ಮುಚ್ಚಿಡುವ ಸಾಧ್ಯತೆಯೂ ಇದೆ.

More from Filmibeat

English summary
Puttakkana Makkalu Serial Written Update on February 22nd Episode. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X