Don't Miss!
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- News
Budget 2023: ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮನೆ ಖರೀದಿಸುವವರಿಗೆ ಶುಭ ಸುದ್ದಿ
- Sports
Union Budget 2023: ಕಳೆದ ಬಾರಿಗಿಂತ 700 ಕೋಟಿ ರೂ. ಅಧಿಕ ಪಡೆದ ಕ್ರೀಡಾ ಸಚಿವಾಲಯ
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Automobiles
ಸೇನೆಗೆ ಮಾರುತಿ ಜಿಪ್ಸಿ ಬದಲಿಗೆ ಅತ್ಯಾಧುನಿಕ ಹೊಸ ಜಿಮ್ನಿ ಸೇರ್ಪಡೆ ಹೇಗಿರಬಹುದು?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Puttakkana Makkalu: ಶೂಟಿಂಗ್ ಸ್ಪಾಟ್‌ನಲ್ಲಿ ಜಾಸ್ತಿ ಟೈಮ್ ಇದ್ರೆ, ಸ್ನೇಹಾ ತಲೆ ಸುತ್ತಿ ಬೀಳೋದೆ!
ಶೂಟಿಂಗ್ ಸ್ಪಾಟ್‌ನಲ್ಲಿ ಹಲವು ಫನ್ನಿ ಮೂಮೆಂಟ್ ನಡೆಯುತ್ತಾ ಇರುತ್ತದೆ.ಅದು ಧಾರಾವಾಹಿಯಾಗಿರಬಹುದು, ಸಿನಿಮಾವಾಗಿರಬಹುದು. ಒಂದು ಸೀನ್ ಶೂಟ್ ಮಾಡುವುದಕ್ಕೆ ಹಲವು ರೀಟೇಕ್‌ಗಳು ಆಗಿರುತ್ತವೆ. ಎಲ್ಲರೂ ಅಲರ್ಟ್ ಆಗಿದ್ದಾಗ, ಒಬ್ಬರು ಕಿತಾಪತಿ ಮಾಡಿದರು ಆ ಸೀನ್ ಮತ್ತೆ ಶೂಟ್ ಮಾಡಿಕೊಳ್ಳಬೇಕಾಗುತ್ತದೆ.
'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ವಿಭಿನ್ನ ಟ್ಯಾಲೆಂಟ್ ಇರೋರು ಇದ್ದಾರೆ. ಶೂಟಿಂಗ್ ಸ್ಪಾಟ್‌ನಲ್ಲಿ ಅಂತ ಟ್ಯಾಲೆಂಟ್ ಇರೋರು ಮಾಡುವ ಕಿತಾಪತಿಯನ್ನು ಸೂಕ್ಷ್ಮವಾಗಿ ಸೆರೆಹಿಡಿದರೆ ಸಖತ್ ಮನರಂಜನೆ ಸಿಗುವಂತಹ ವಿಡಿಯೋಗಳು ಸಿಗುತ್ತವೆ. ಪುಟ್ಟಕ್ಕನ ಮೊದಲ ಮಗಳು ಅಂದ್ರೆ ಸಹನಾ, ಈಗ ಅಂಥದ್ದೇ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
Megha
Shetty:ಶೂಟಿಂಗ್
ಜಾಗದಲ್ಲಿ
ಮೇಘಾ
ಶೆಟ್ಟಿ
ಫುಲ್
ಮಸ್ತಿ!

ಸ್ನೇಹಾ ಆಕ್ಷನ್‌ಗೆ ರಿಯಾಕ್ಷನ್ ನೋಡಿ
'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಸ್ನೇಹಾ ಖಡಕ್ ಹುಡುಗಿ.ತಪ್ಪು ಮಾಡಿದವರನ್ನು ಜಾಡಿಸದೆ ಬಿಡುವುದಿಲ್ಲ. ಹಾಗೇ ಮೋಸವನ್ನು ಕಾಣಿಸಿದಾಗ ಎಗರಿ ಬೀಳುತ್ತಾಳೆ. ಇದು ಧಾರಾವಾಹಿಯ ಸ್ನೇಹಾ. ಆದರೆ ಕ್ಯಾಮೆರಾ ಆನ್ ಆಗಿಲ್ಲ ಅಂದ್ರೆ, ಸ್ನೇಹಾ ಇರುವುದೇ ಬೇರೆ ರೀತಿ. ಸ್ನೇಹಾ ಅಲಿಯಾಸ್ ಸಂಜನಾ ಬುರ್ಲಿ ಸೆಟ್‌ನಲ್ಲಿ ಹೇಗೆಲ್ಲಾ ಇರಲಿದ್ದಾರೆ ಎಂಬುದನ್ನು ಯಾರೋ ವಿಡಿಯೋ ಮಾಡಿದ್ದಾರೆ. ಈಗ ಆ ವಿಡಿಯೋ ಫುಲ್ ವೈರಲ್ ಆಗಿದೆ.

ಸ್ನೇಹಾಗೆ ತಲೆ, ಕಣ್ಣು ತಿರುಗಿದ್ದು ಯಾಕೆ..?
ಅದು ಶೂಟಿಂಗ್ ಸಮಯ. ಆ ವಿಡಿಯೋ ನೋಡುತ್ತಾ ಇದ್ದರೆ ಯಾರೋ ಹೆಚ್ಚು ರೀಟೇಕ್ ತೆಗೆದುಕೊಂಡಂತೆ ಕಾಣುತ್ತಿದೆ. ಎಲ್ಲವೂ ಓಕೆ ಅಂತ ಶೂಟ್ ಮಾಡುವಾಗಲೇ ಯಾರದ್ದೋ ಕಿತಾಪತಿಯಿಂದ ಮತ್ತೆ ಅದೇ ಸೀನ್ ರಿಪೀಟ್ ರಿಪೀಟ್ ಆಗಿದೆ ಎನಿಸುತ್ತದೆ. ಅದಕ್ಕೆ ಸ್ನೇಹಾ, ಕಣ್ಣೆಲ್ಲಾ ಪ್ರಪಂಚದ ಸುತ್ತ ತಿರುಗಿಸಿ, ತಲೆ ಸುತ್ತು ಬಂದವರಂತೆ ಆಡಿದ್ದಾರೆ. ಈ ವಿಡಿಯೋ ಸಹನಾ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದು, ಸಖತ್ ನಗು ತರಿಸಿದೆ.

ಸಹನಾ ನಿಶ್ಚಿತಾರ್ಥದ ದೃಶ್ಯವದು
ಸಹನಾ ನಿಶ್ಚಿತಾರ್ಥ ಮಾಡುವುದೇ ಪುಟ್ಟಕ್ಕನಿಗೆ ದೊಡ್ಡ ತಲೆನೋವಾಗಿತ್ತು. ಗೋಪಾಲನನ್ನು ಕರೆಸಲೇಬೇಕೆಂದು ಮುರುಳಿ ಮೇಷ್ಟ್ರ ಅಮ್ಮ ಹೊಸ ಬೇಡಿಕೆಯನ್ನು ಇಟ್ಟಿದ್ದರು. ಅದು ಮಕ್ಕಳಿಗೂ ಗೊತ್ತಿರಲಿಲ್ಲ. ಪುಟ್ಟಕ್ಕನಿಗೆ ಮಾತ್ರ ಗೊತ್ತಿತ್ತು. ಹಾಗೋ ಹೀಗೋ ಗೋಪಾಲನನ್ನು ಪುಟ್ಟಕ್ಕನೇ ಭೇಟಿ ಮಾಡಿ ಕೇಳಿಕೊಂಡು ಬಂದಾಗಿತ್ತು. ಕೊನೆಗೆ ಯಾವುದೋ ಗೇಮ್ ಪ್ಲ್ಯಾನ್ ಮಾಡಿಕೊಂಡು, ರಾಜೇಶ್ವರಿಯೇ ಗೋಪಾಲನನ್ನು ಕರೆದುಕೊಂಡು ಹೋಗಲು ತೀರ್ಮಾನ ಮಾಡಿದ್ದಳು. ನಿಶ್ಚಿತಾರ್ಥದ ಮಾತುಕತೆ ಗೊಂದಲದಲ್ಲಿರುವಾಗಲೇ ಕಂಠಿ ಮತ್ತು ಆತನ ಅಕ್ಕ ಮನೆಗೆ ಬಂದಿದ್ದರು. ಆಗ ನಡೆಯುತ್ತಿದ್ದ ದೃಶ್ಯದಲ್ಲಿ ಇಂಥದ್ದೊಂದು ಫನ್ನಿ ಸನ್ನಿವೇಶವನ್ನು ಸೆರೆ ಹಿಡಿಯಲಾಗಿದೆ.

ಕಂಠಿಗೆ ಸ್ನೇಹಾ ಮೇಲೆ ಪ್ರೀತಿ
ಕಂಠಿ-ಸ್ನೇಹಾ ನಡುವೆ ಸ್ಟ್ರಾಂಗ್ ಆಗ್ತಿದೆ ಪ್ರೀತಿ. ಅಕ್ಕನ ಮದುವೆಯ ಖುಷಿಯ, ಸಂಭ್ರಮದ ನಡುವೆ ಕಂಠಿ ಮತ್ತು ಸ್ನೇಹಾ ತುಂಬಾನೇ ಹತ್ತಿರವಾಗುತ್ತಿದ್ದಾರೆ. ಸ್ನೇಹಾಗೆ ಕಂಠಿನೆ ದೊರೆ ಎಂಬುದು ಗೊತ್ತಾಗಿ, ಅವಳೇ ಆಟ ಆಡಿಸುವುದಕ್ಕೆ ಶುರು ಮಾಡಿದ್ದಾಳೆ. ಮದುವೆಯ ಕೆಲಸ ಮಾಡುವುದರ ಜೊತೆಗೆ ಕಂಠಿ ಮತ್ತಷ್ಟು ಪ್ರೀತಿ ಮಾಡುವುದಕ್ಕೆ ಶುರು ಮಾಡಿದ್ದಾನೆ. ಸ್ನೇಹಾಳಿಗೂ ಕಂಠಿಯ ಮೇಲೆ ಹೊಸದೊಂದು ಭಾವನೆ ಶುರುವಾಗಿದೆ. ಸ್ನೇಹಾ ಕೂಡ ದೊರೆ ನಾನೇ ಎಂಬ ಸತ್ಯವನ್ನು ಕಂಠಿಯೇ ಹೇಳಲಿ ಎಂದು ಬಯಸುತ್ತಿದ್ದಾಳೆ. ಕಂಠಿ ಕೂಡ ಹೇಗಾದರೂ ಮಾಡಿ ಸತ್ಯ ಹೇಳಿ ಬಿಡಬೇಕು ಎಂದು ಒದ್ದಾಡುತ್ತಿದ್ದಾನೆ. ಇದರ ನಡುವೆ ಕಂಠಿ ಬಂಗಾರಮ್ಮನ ಮಗ ಎಂಬುದು ಗೊತ್ತಾದರಂತು, ಪ್ರೀತಿ ಪ್ರೇಮ ಇರಲಿ ಸ್ನೇಹವೂ ಉಳಿಯುವುದು ಕಷ್ಟ.