ಪೊಲೀಸ್ ಕೈಗೆ ಸಿಕ್ಕಿ ಬೀಳ್ತಾನಾ ಕಂಠಿ?
'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಮುರಳಿ ಇನ್ನೂ ಸಹನಾಗೆ ಪ್ರಪೋಸ್ ಮಾಡಿಲ್ಲ. ಸಹನಾಗೂ ಮುರಳಿ ಮೇಲೆ ಮನಸಿದ್ದು, ಇದುವರೆಗೂ ತನ್ನ ಮನದಾಸೆಯನ್ನು ಹೇಳಿಕೊಂಡಿಲ್ಲ. ಅಲ್ಲದೇ, ಮನೆಯಲ್ಲಿ ಗಂಡು ನೋಡುವ ಮುಂಚೆಯೇ ಇಬ್ಬರೂ ಮಾತನಾಡಬೇಕು ಎಂದು ತೀರ್ಮಾನಿಸಿದ್ದಾರೆ.
ಕಂಠಿಗೆ ಈಗ ಸ್ನೇಹಾಳದ್ದೇ ಯೋಚನೆಯಾಗಿದೆ. ಹೇಗಪ್ಪ ಸ್ನೇಹಾಗೆ ತಾನೇ ಬಂಗಾರಮ್ಮನ ಮಗ ಕಂಠಿ ಎಂದು ಹೇಳುವುದು. ಹಾಗೆ ಹೇಳಿದರೆ ಸ್ನೇಹಾ ಹೇಗೆ ಉತ್ತರಿಸೋದು? ತನ್ನ ಪ್ರೀತಿಯನ್ನು ಸ್ನೇಹಾ ಒಪ್ಪಿಕೊಳ್ಳದಿದ್ದರೆ ಹೇಗೆ ಎಂದು ಯೋಚಿಸುತ್ತಿದ್ದಾನೆ.
ಪೊಲೀಸ್‌ಗೆ ಸ್ನೇಹಾ ಹೇಳಿದ ಮಾತುಗಳು ಕೊಂಚವೂ ಇಷ್ಟವಾಗಿಲ್ಲ. ತಾನೊಬ್ಬ ಹಣ್ಣುಬಾಕ ಎಂಬಂತೆ ಸ್ನೇಹಾ ಮಾತನಾಡಿದ್ದು, ಕಂಠಿಯನ್ನು ಬಿಟ್ಟು ಕಳಿಸಿದ್ದೇ ತಪ್ಪಾಗಿದೆ. ಹೀಗಾಗಿ ಏನಾದರೂ ಮಾಡಿ ಕಂಠಿಯನ್ನು ಹುಡುಕಿ ಅರೆಸ್ಟ್ ಮಾಡಬೇಕು ಎಂದು ಅಂದುಕೊಂಡಿದ್ದಾರೆ.

ಸುಮ ಪರ ನಿಂತ ಸ್ನೇಹಾ!
ಸುಮ ಕೊಕ್ಕೊ ಆಡಲು ಹೋಗಿ ಸೋತು ಬಂದಿದ್ದಾಳೆ. ಅಲ್ಲದೇ ತಮ್ಮ ಪಿಟಿ ಮಾಸ್ಟರ್ ಸ್ಪೋರ್ಟ್ಸ್ ಗೆ ಸಪೋರ್ಟ್ ಮಾಡದೇ, ಉಡಾಫೆ ಮಾತನ್ನು ಆಡಿದ್ದಾರೆ. ಹೀಗಾಗಿ ತನ್ನದೇನು ತಪ್ಪಿಲ್ಲ ಎಂಬುದು ಅವರಿಗೆ ಗೊತ್ತಾಗಬೇಕು ಎಂದು ಬಂಕ್ ಹಾಕಿದ್ದಾಳೆ. ಇದರಿಂದ ಮ್ಯಾನೇಜ್‌ಮೆಂಟ್‌ನವರು, ಸುಮಳನ್ನು ಕ್ಷಮಾಪಣಾ ಪತ್ರ ಕೊಡುವಂತೆ ಕೇಳಿದ್ದು, ಈಗ ಸುಮಗೆ ಭಯವಾಗಿದೆ. ಈ ಬಗ್ಗೆ ಮನೆಯಲ್ಲಿ ಸುಮ, ಸ್ನೇಹಾ ಬಳಿ ಮಾತನಾಡಿದ್ದು, ತನ್ನದೇನು ತಪ್ಪಿಲ್ಲ ಎಂದು ಹೇಳಿಕೊಂಡಿದ್ದಾಳೆ. ಇದಕ್ಕೆ ಸ್ನೇಹಾ ಸುಮ ಪರ ನಿಂತಿದ್ದು, ನಾನು ಬಂದು ಮಾತನಾಡುತ್ತೇನೆ ಎಂದು ಧೈರ್ಯ ತುಂಬಿದ್ದಾಳೆ. ಸುಮಗೆ ಈಗ ಸಮಾಧಾನವಾಗಿದ್ದು, ಕಣ್ಣೀರು ಒರೆಸಿಕೊಂಡು ನಕ್ಕಿದ್ದಾಳೆ.

ಸಹನಾ ಬಳಿ ಪ್ರೀತಿ ಹೇಳಲು ಮುರುಳಿ ತಯಾರಿ!
ಸಹನಾ ಹಾಗೂ ಆಕೆಯ ಸ್ನೇಹಿತೆ ಮುರಳಿಯನ್ನು ಭೇಟಿ ಮಾಡಲು ಮನೆಯಲ್ಲಿ ಸುಳ್ಳು ಹೇಳಿ ಹೊರಟಿದ್ದಾರೆ. ಆದರೆ ಈಗ ಸುಮ ಮತ್ತು ಸ್ನೇಹಾ ಕೂಡ ನಾವೂ ದೇವಸ್ಥಾನಕ್ಕೆ ಬರುತ್ತೀವಿ ಎಂದು ಹೇಳಿದ್ದಾರೆ. ಇದು ಸಹನಾಳಿಗೆ ಇಕ್ಕಟ್ಟಿನ ಸ್ಥಿತಿಯನ್ನು ತಂದೊಡ್ಡಿದೆ. ಈಗ ಏನು ಮಾಡುವುದು ಎಂದು ಸಹನಾ ಯೋಚಿಸುತ್ತಿದ್ದಾಳೆ. ಇತ್ತ ಮುರಳಿಗೆ ಭಯವಾಗುತ್ತಿದೆ. ಹೇಗೆ ಸಹನಾಳಿಗೆ ಪ್ರಪೋಸ್ ಮಾಡುವುದು? ಸಹನಾ ತನ್ನನ್ನು ಒಪ್ಪದಿದ್ದರೆ, ಮುಂದೇನು? ಈಗ ಏನು ಮಾಡುವುದು ಎಂಬ ಟೆನ್ಷನ್ ನಲ್ಲಿ ಇದ್ದಾನೆ. ನಿಜಕ್ಕೂ ಮುರಳಿ ಸಹನಾಗೆ ಪ್ರಪೋಸ್ ಮಾಡುತ್ತಾನಾ ಇಲ್ವಾ? ಎಂಬುದನ್ನು ಮುಂದಿನ ದಿನಗಳಲ್ಲಿ ನೋಡಬೇಕಿದೆ.

ಕಂಠಿ ಪ್ರೀತಿಯ ಬಗ್ಗೆ ಆತಂಕ!
ಕಂಠಿಗೆ ಈಗ ತಮ್ಮ ಭಾವನಿಗೆ ಕೊಟ್ಟ ಮಾತಿನ ವಿಚಾರವೇ ತಲೆ ಕೆಡುವಂತೆ ಮಾಡಿದೆ. ತನ್ನ ತಂಗಿಯ ಬಾಳು ಸರಿ ಹೋಗಬೇಕೆಂದರೆ, ಸ್ನೇಹಾಳ ಬಳಿ ತಾನೇ ಕಂಠಿ. ತನ್ನ ತಾಯಿಯೇ ಬಂಗಾರಮ್ಮ ಎಂಬ ಸತ್ಯವನ್ನು ಹೇಳಬೇಕಿದೆ. ಆದರೆ ಈ ಸತ್ಯವನ್ನು ಒಪ್ಪಿಕೊಂಡರೆ ಸ್ನೇಹಾ ಹೇಗೆ ಪ್ರತಿಕ್ರಿಯಿಸುತ್ತಾಳೆ ಅನ್ನೋದು ಗೊತ್ತಾಗುತ್ತಿಲ್ಲ. ಇನ್ನು ಕಂಠಿ ಸ್ನೇಹಿತರು ಕೂಡ ಈ ಬಗ್ಗೆಯೇ ತಲೆ ಕೆಡಿಸಿಕೊಂಡಿದ್ದಾರೆ. ಆದರೆ ಸಂತು, ಸ್ನೇಹಾಗೆ ಏನೂ ಹೇಳಬೇಡಿ. ಸದ್ಯಕ್ಕೆ ಸುಮ್ಮನಿದ್ದು ಬಿಡಿ ಎಂದು ಸಲಹೆ ಕೊಟ್ಟಿದ್ದಾನೆ.

ಕಂಠಿಯ ಹಿಂದೆ ಬಿದ್ದ ಪೊಲೀಸರು!
ಈಗ ಪೊಲೀಸ್ ಗೆ ಕಂಠಿಯನ್ನು ಹೇಗಾದರೂ ಮಾಡಿ ಹಿಡಿಯಬೇಕು. ಅವನನ್ನು ಜೈಲಿಗೆ ಹಾಕಬೇಕು. ಮಾರ್ಕೆಟ್‌ನಲ್ಲಿ ಪ್ರತಿಯೊಬ್ಬರನ್ನೂ ಕಂಠಿ ಬಗ್ಗೆ ವಿಚಾರಿಸಿದ್ದಾರೆ. ಆದರೆ, ಎಲ್ಲರೂ ಕಂಠಿ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದ್ದಾರೆ. ಇದು ಪೊಲೀಸರ ತಲೆ ಕೆಡುವಂತೆ ಮಾಡಿದೆ. ಕಂಠಿ ಎದುರಿಗೇ ನಿಂತಿದ್ದರೂ ಪೊಲೀಸ್‌ಗೆ ಅವನೇ ಕಂಠಿ ಅನ್ನೋದು ಗೊತ್ತಾಗಿಲ್ಲ.


Click it and Unblock the Notifications











