ಪುಟ್ಟಕ್ಕ ಕೋಪಕ್ಕೆ ಮಗಳ ಮದುವೆ ನಿಂತುಹೋಯ್ತು!

By ಪ್ರಿಯಾ ದೊರೆ

ಮಗಳ ಮದುವೆ ಮಾಡುವುದಕ್ಕಾಗಿ ಪುಟ್ಟಕ್ಕ ಒದ್ದಾಡುತ್ತಿದ್ದಾಳೆ. ಕಾಡಿ ಬೇಡಿ ಗೋಪಾಲ ಹಾಗೂ ರಾಜೇಶ್ವರಿಯನ್ನು ಒಪ್ಪಿಸಿ ಮನೆಗೆ ಕರೆದುಕೊಂಡು ಬಂದಿದ್ದಾಳೆ. ಸಹನಾಳನ್ನು ನೋಡಲು ಮನೆಗೆ ಗಂಡಿನ ಕಡೆಯವರು ಬಂದಿದ್ದಾರೆ. ಇದೇ ವೇಳೆ ಅವಾಂತರವೊಂದು ನಡೆದು ಹೋಗಿದೆ.

ಸಹನಾಳನ್ನು ಇಷ್ಟ ಪಡುತ್ತಿರುವ ರಾಜೀ ತಮ್ಮ ಕುಡಿದು ಪುಟ್ಟಕ್ಕನ ಮನೆಗೆ ಬಂದು ರಂಪ ಮಾಡಿದ್ದಾನೆ. ಇದೇ ವೇಳೆಗೆ ಗೌರಮ್ಮ ಕರೆ ಮಾಡಿ ತನ್ನ ಗಂಡನ ಸ್ಥಿತಿಗೆ ಆ ಬಾರ್‌ ಕಾರಣ ಎಂಬ ಸತ್ಯ ಹೇಳಿದ್ದಾಳೆ. ಕೋಪಗೊಂಡ ಪುಟ್ಟಕ್ಕ ಬಾರ್‌ ಕ್ಲೋಸ್‌ ಮಾಡಿಸಿದ್ದಾಳೆ.

ಇತ್ತ ಕಂಠಿ, ತಂಗಿ ವಸಂತ ಬದುಕನ್ನು ಸರಿ ಮಾಡಲು ಚಂದ್ರನನ್ನು ಕರೆಸಿದ್ದಾನೆ. ಆದರೆ, ಸ್ನೇಹಾ ವಿಚಾರವಾಗಿ ಚಂದ್ರು ಬಳಿ ಎಲ್ಲಾ ಸತ್ಯವನ್ನು ಹೇಳಿಕೊಳ್ಳುವ ಸಂದರ್ಭ ಎದುರಾಗಿದೆ. ಚಂದ್ರು, ಕಂಠಿ ಪ್ರೀತಿಯನ್ನು ಮೆಚ್ಚಿಕೊಳ್ಳುತ್ತಾನಾ..?

ಕಂಠಿ ಪ್ರೀತಿ ವಿಚಾರ ತಿಳಿದ ಚಂದ್ರು!

ಕಂಠಿ ಪ್ರೀತಿ ವಿಚಾರ ತಿಳಿದ ಚಂದ್ರು!

ಕಂಠಿಯನ್ನು ಚಂದ್ರು ಸ್ನೇಹಾ ಬಳಿ ಸುಳ್ಳು ಹೇಳಿರುವುದು ಯಾಕೆ ಎಂದು ಪ್ರಶ್ನೆ ಮಾಡಿದ್ದಾನೆ. ಆಗ ಕಂಠಿ ವಿಧಿ ಇಲ್ಲದೇ, ತನ್ನ ಪ್ರೀತಿಯ ವಿಚಾರವನ್ನು ಹೇಳಿಕೊಂಡಿದ್ದಾನೆ. ಈ ಮಾತುಗಳನ್ನು ಕೇಳಿದ ಚಂದ್ರು, ಸ್ನೇಹಾ ಬಳಿ ಸತ್ಯ ಹೇಳುವಂತೆ ಕೇಳಿದ್ದಾನೆ. ಇದಕ್ಕೆ ಒಪ್ಪದಿದ್ದಕ್ಕೆ, ನನ್ನ ನಿನ್ನ ತಂಗಿ ಸಂಸಾರ ಸರಿ ಹೋಗಬೇಕೆಂದರೆ ಸ್ನೇಹಾ ಬಳಿ ಸತ್ಯ ಹೇಳಬೇಕು. ಹಾಗಂತ ಮಾತು ಕೊಡು ಎಂದು ಕೇಳಿದ್ದಾನೆ. ಇದಕ್ಕೆ ವಸಂತ ಒಪ್ಪುತ್ತಿಲ್ಲ. ನನಗೋಸ್ಕರ ಅಣ್ಣಯ್ಯನ ಪ್ರೀತಿನ ಬಲಿಕೊಡುವುದು ಬೇಕಿಲ್ಲ. ಇಷ್ಟು ದಿನ ಇದ್ದಂತೆಯೇ ಇಬ್ಬರೂ ದೂರ ಉಳಿದು ಬಿಡೋಣ ಎಂದು ವಸಂತ ಗರಂ ಆಗಿದ್ದಾಳೆ.

ಪುಟ್ಟಕ್ಕನ ಅರೆಸ್ಟ್ ಮಾಡಿದ್ರಾ ಪೊಲೀಸರು..?

ಪುಟ್ಟಕ್ಕನ ಅರೆಸ್ಟ್ ಮಾಡಿದ್ರಾ ಪೊಲೀಸರು..?

ರಾಜೇಶ್ವರಿ ಪೊಲೀಸರನ್ನು ಕರೆಸಿದ್ದಾಳೆ. ಪೊಲೀಸರು ಸ್ಥಳಕ್ಕೆ ಬಂದಿದ್ದು, ಪುಟ್ಟಕ್ಕನನ್ನು ಅರೆಸ್ಟ್ ಮಾಡಲು ಮುಂದಾಗಿದ್ದಾರೆ. ಆದರೆ ಊರಿನ ಜನ ಪುಟ್ಟಕ್ಕನ ಪರ ನಿಂತಿದ್ದಾರೆ. ಊರಿನ ಸಂಸಾರಗಳು ಈ ಬಾರ್‌ ನಿಂದ ಹಾಳಾಗುತ್ತಿದೆ. ಒಳ್ಳೆಯ ಕೆಲಸ ಮಾಡಿದ ಪುಟ್ಟಕ್ಕನನ್ನು ಅರೆಸ್ಟ್ ಮಾಡುತ್ತಿರುವುದು ತಪ್ಪು ಎಂದು ಪೊಲೀಸರ ವಿರುದ್ಧವೇ ಜನ ರೊಚ್ಚಿಗೆದ್ದಿದ್ದಾರೆ. ಇದನ್ನು ನೋಡಿ ಪೊಲೀಸರು ಕೂಡ ಪುಟ್ಟಕ್ಕನನ್ನು ಅರೆಸ್ಟ್ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿ ಕೈ ಚೆಲ್ಲಿದ್ದಾರೆ.

ಬಾರ್‌ ಬಾಗಿಲು ಮುಚ್ಚಿಸಿದ ಪುಟ್ಟಕ್ಕ!

ಬಾರ್‌ ಬಾಗಿಲು ಮುಚ್ಚಿಸಿದ ಪುಟ್ಟಕ್ಕ!

ಗಲಾಟೆ ಮಾಡಿ ಪುಟ್ಟಕ್ಕ ಬಾರ್‌ ಕ್ಲೋಸ್‌ ಮಾಡಿಸಿದ್ದು ಒಳ್ಳೆಯದಾಗಿದೆ. ಪೊಲೀಸರು ಕೂಡ ಪುಟ್ಟಕ್ಕನ ಪರವಿದ್ದು, ಕಳ್ಳಬಟ್ಟಿ ಮಾಡುತ್ತಿದ್ದ ಬಗ್ಗೆ ಸಾಕ್ಷಿ ಕೊಟ್ಟರೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಆದರೆ, ಸ್ನೇಹಾ ಪೊಲೀಸರ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದಾಳೆ. ಹಾಗಾಗಿ ಕಂಠಿಯನ್ನು ಅರೆಸ್ಟ್ ಮಾಡಿ ಬಿಟ್ಟಂತೆ ಮಾಡುತ್ತೀರಾ. ನಿಮ್ಮ ಮೇಲೆ ನನಗೆ ನಂಬಿಕೆ ಇಲ್ಲ ಎಂದು ಮುಖಕ್ಕೆ ಹೊಡೆದಂತೆ ಹೇಳಿದ ಸ್ನೇಹ ಅಲ್ಲಿಂದ ಹೊರಟು ಬಿಡುತ್ತಾಳೆ.

ಪುಟ್ಟಕ್ಕನ ಜೊತೆ ಜಗಳ ಮಾಡಿದ ರಾಜಿ!

ಪುಟ್ಟಕ್ಕನ ಜೊತೆ ಜಗಳ ಮಾಡಿದ ರಾಜಿ!

ಇನ್ನು ಪುಟ್ಟಕ್ಕ, ರಾಜೇಶ್ವರಿ ಹಾಗೂ ಗೋಪಾಲನ ಜೊತೆಗೆ ಮಾತನಾಡಲು ಮುಂದಾಗಿದ್ದಾಳೆ. ಗೋಪಾಲ ಎಲ್ಲವನ್ನೂ ನಿನ್ನ ಕೈಯಿಂದ ನೀನೇ ಹಾಳು ಮಾಡಿಕೊಂಡೆ ಎಂದು ಹೇಳಿದ್ದಾನೆ. ಅದಕ್ಕೆ ಪುಟ್ಟಕ್ಕ, ವ್ಯವಹಾರವೇ ಬೇರೆ, ಸಹನಾ ಮದುವೆ ವಿಚಾರವೇ ಬೇರೆ ಎಂದು ಹೇಳಿದ್ದಕ್ಕೆ ರಾಜೇಶ್ವರಿ ಕಿಡಿಕಾರಿದ್ದಾಳೆ. ಬೇಕಂತಾನೇ ಹೀಗೆ ಮಾಡಿದ್ದೀಯಾ ನೀನು. ನಮಗೂ ಟೈಮ್‌ ಬರುತ್ತೆ ಆಗ ನೋಡಿಕೊಳ್ಳುತ್ತೀವಿ.‌ ಅದು ಹೇಗೆ ನಮ್ಮನ್ನ ಬಿಟ್ಟು ನಿಮ್ಮ ಮಗಳ ಮದುವೆಯನ್ನು ಮಾಡುತ್ತೀರೋ ನಾನು ನೋಡುತ್ತಿನಿ ಎಂದು ಕೂಗಾಡಿ ಹೋಗಿದ್ದಾಳೆ.

More from Filmibeat

English summary
Puttakkana Makkalu Serial Written Update On July 7th Episode, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X