ಪುಟ್ಟಕ್ಕನ ಮಕ್ಕಳು: ಮುರುಳಿ ಮೇಷ್ಟ್ರಿಗೆ ಪಾಠ ಮಾಡುವಾಗ ಪುಟ್ಟಕ್ಕನ ಮಗಳೇ ಕಾಣಿಸ್ತಿದ್ದಾಳೆ!
ಈ ಪ್ರೀತಿಯಲ್ಲಿ ಬಿದ್ದವರು ಪಾಡು ಹೇಳುವುದಕ್ಕೆ ಆಗಲಿ, ಕೇಳುವುದಕ್ಕೆ ಆಗಲಿ ಆಗಲ್ಲ. ಹಾಗೇ ಅವರ ಸ್ಥಿತಿ ಬಾವಿಯಲ್ಲಿ ಹಾಕಿದ ಕಪ್ಪೆಯಂತೆ ಒದ್ದಾಡುತ್ತಿರುತ್ತದೆ. ಆ ಸ್ಥಿತಿಗೆ ಬಂದಿದ್ದಾರೆ ಮುರುಳಿ ಮೇಷ್ಟ್ರು. ಸಹನಾ ಮೇಲೆ ಸಿಕ್ಕಾಪಟ್ಟೆ ಲವ್ ಆಗೋಗಿದೆ. ಹೀಗಾಗಿ ಏನು ಮಾಡಬೇಕು ಅಂತ ಗೊತ್ತಾಗದೆ ಒದ್ದಾಡುತ್ತಿದ್ದಾರೆ. ಆದರೆ ಮನಸ್ಸಲ್ಲಿದ್ದ ಸಹನಾ ಈಗ ಎಲ್ಲೆಂದರಲ್ಲಿ ಕಾಣಿಸಿಕೊಳ್ಳುವುದಕ್ಕೆ ಶುರು ಮಾಡಿದ್ದಾಳೆ. ಇದೇ ಮುರುಳಿ ಮೇಷ್ಟ್ರಿಗೆ ತಲೆ ನೋವಾಗಿರುವುದು.
ಪುಟ್ಟಕ್ಕ ತನ್ನ ಮಗಳು ಸಹನಾಳಿಗೆ ಮದುವೆ ಮಾಡಲು ತಯಾರಿ ನಡೆಸುತ್ತಿದ್ದಾರೆ. ಒಂದೊಳ್ಳೆ ಸಂಬಂಧವನ್ನು ಈ ಹಿಂದೆಯೇ ರಾಜೇಶ್ವರಿ ಹಾಳುಗೆಡವಿದ್ದಾಳೆ. ಇದೀಗ ಮತ್ತೊಂದು ಒಳ್ಳೆ ಸಂಬಂಧ ಬಂದಿದೆ. ಆದರೆ ಪುಟ್ಟಕ್ಕನಿಗೆ ತಲೆ ನೋವಾಗಿರುವುದು ಗೋಪಾಲನದ್ದೇ. ಗೋಪಾಲ ಬರದೆ ಈ ಮದುವೆ ಕಷ್ಟಸಾಧ್ಯ ಎಂಬುದು ಮದುವೆಗೆ ಸಂಬಂಧ ಹುಡುಕಿದವನ ಅಭಿಪ್ರಾಯ. ಹೀಗಾಗಿ ಗೋಪಾಲನ ಚಿಂತೆಗೆ ಬಿದ್ದಿದ್ದಾಳೆ ಪುಟ್ಟಕ್ಕ.

ನಿಂತಲ್ಲಿ ಕುಂತಲ್ಲಿ ಒಬ್ಬೊಬ್ಬಳೇ ನಗುತ್ತಿದ್ದಾಳೆ ಸಹನಾ
ಸಹನಾ ಮಾತಾಡಿದರೆ ಮುತ್ತು ಉದುರಿ ಬಿಡುತ್ತೆ ಎಂಬ ಸ್ವಭಾವದವಳು. ಸಂಕೋಚದ ಜೊತೆ ಜೊತೆಗೆ ಭಯದ ಹುಡುಗಿ ಕೂಡ. ಎಲ್ಲಿಯೂ ಗತ್ತಿನಿಂದ ಕತ್ತು ಎತ್ತಿ ನಡೆಯಲ್ಲ. ಯಾರ ಮುಂದೆಯೂ ಜೋರಾಗಿ ಮಾತನಾಡಲ್ಲ. ತುಂಬಾ ಸೈಲೆಂಟ್ ಸ್ವಭಾವ ಇರುವ ಹೆಣ್ಣು ಮಗಳು. ಆದರೆ ಇತ್ತೀಚೆಗೆ ಸಹನಾ ಒಬ್ಬೊಬ್ಬಳೇ ನಗುವುದಕ್ಕೆ ಶುರು ಮಾಡಿದ್ದಾಳೆ. ಅದಕ್ಕೆ ಕಾರಣ ಮುರುಳಿ ಮೇಷ್ಟ್ರು. ಮುರುಳಿ ಮೇಷ್ಟ್ರು ಹೊಸದಾಗಿ ಊರಿಗೆ ಬಂದಾಗ ಹಸಿವು ಎಂದಾಗ, ತನ್ನ ಊಟವನ್ನೇ ಕೊಟ್ಟು ಹಸಿವು ನೀಗಿಸಿದ್ದು ಇದೇ ಸಹನಾ. ಹೀಗಾಗಿ ಅಂದಿನಿಂದಲೇ ಮುರುಳಿ ಮೇಷ್ಟ್ರಿಗೆ ಸಹನಾ ಮೇಲೆ ಒಂಥರ ಅಟ್ರ್ಯಾಕ್ಷನ್ ಶುರುವಾಯ್ತು. ಬರುತ್ತಾ ಬರುತ್ತಾ ಅದು ಲವ್ವಾಗಿದೆ. ಕಣ್ಣಿನಲ್ಲೇ ಪ್ರೀತಿಯ ಮಿಂಚು ಇಬ್ಬರನ್ನು ಪಸರಿಸಿದೆ. ಸಹನಾಗೂ ಇತ್ತೀಚೆಗೆ ಲೈಟ್ ಆಗಿ ಲವ್ವಾಗಿದೆ. ಅದಕ್ಕೆ ಯಾವಾಗಲೂ ಸಹನಾ ಮುಖದಲ್ಲಿ ನಗು ಆವರಿಸಿರುತ್ತದೆ.

ಊಟ ಕೊಡುವ ನೆಪದಲ್ಲಿ ಮತ್ತೆ ಹತ್ತಿರವಾದ ಸಹನಾ
ಪುಟ್ಟಕ್ಕ ಹತ್ತು ಲಕ್ಷ ಹಣದ ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದರು. ರಾಜೇಶ್ವರಿಯ ಕುತಂತ್ರದಿಂದ. ಸಹನಾ ಮತ್ತು ಪುಟ್ಟಕ್ಕ ಇದರಿಂದಾಗಿ ತುಂಬಾ ತಳಮಳ ಅನುಭವಿಸುತ್ಗಿದ್ದರು. ಈ ಸಮಸ್ಯೆ ಗೊತ್ತಾದ ಬಳಿಕ ಸಹಾಯಕ್ಕೆ ಧಾವಿಸಿದ್ದು ಇದೇ ಮುರುಳಿ ಮೇಷ್ಟ್ರು. ಆದರೆ ಸಹನಾ ಇದನ್ನು ಅಪಾರ್ಥ ಮಾಡಿಕೊಂಡು ನಿಮ್ಮ ಹಣ ಬೇಡ ಎಂದು ಕಳುಹಿಸಿಬಿಟ್ಟಳು. ಮುರುಳಿ ಮೇಷ್ಟ್ರಿಗೆ ಇದರಿಂದ ಮನಸ್ಸಿಗೆ ನೋವಾಗಿದ್ದು, ಬಳಿಕ ಮೆಸ್ ಕಡೆ ಬರುವುದನ್ನೇ ಬಿಟ್ಟರು. ಮನೆಯಲ್ಲಿಯೇ ಬಂದಂಗೆ ಅಡುಗೆ ಮಾಡಿಕೊಂಡು ತಿನ್ನುತ್ತಿದ್ದರು. ಇದೇ ಅನಾರೋಗ್ಯಕ್ಕೆ ಕಾರಣವಾಯಿತು. ಆದರೆ ಮೇಷ್ಟ್ರನ್ನು ಕಾಣದೆ ತಳಮಳ ಅನುಭವಿಸುತ್ತಿದ್ದ ಸಹನಾ ಕಡೆಗೂ ಸುಮಳಾನ್ನು ಕೇಳಿದಳು. ಸುಮಾಳಿಗೆ ಇಬ್ಬರ ನಡವಳಿಕೆ ಮೇಲೆ ಅನುಮಾನ ಮೂಡಿದೆ. ಹೀಗಾಗಿ ಮುರುಳಿ ಮೇಷ್ಟ್ರಿಗೆ ಹುಷಾರಿಲ್ಲದ ವಿಚಾರ ತಿಳಿಸಿ, ಅಡುಗೆ ಅವರೇ ಮಾಡಿಕೊಳ್ಳುತ್ತಿರುವ ಬಗ್ಗೆಯೂ ತಿಳಿಸಿದಳು. ಪಾಪ ಸಹನಾ ಮನಸ್ಸು ವಿಲ ವಿಲ ಅಂತ ಒದ್ದಾಡಿ, ಕಡೆಗೆ ಅವ್ವನನ್ನು ಒಪ್ಪಿಸಿ ಮುರುಳಿ ಮೇಷ್ಟ್ರಿಗೆ ಊಟ ಕೊಡಲು ಅಭ್ಯಾಸ ಮಾಡಿಕೊಂಡಳು. ಈ ಅಭ್ಯಾಸ, ಆ ಅಕ್ಕರೆ, ಕಾಳಜಿಗೆ ಮುರುಳಿ ಮೇಷ್ಟ್ರ ಹೃದಯ ಮತ್ತಷ್ಟು ಕರಗಿ ಹೋಗಿದೆ.

ಅಕ್ಕನ ಪ್ರೀತಿಗೆ ಸಾಥ್ ಕೊಟ್ಟ ತಂಗಿ
ಮುರುಳಿ ಮೇಷ್ಟ್ರಿಗೆ ಅಕ್ಕನ ಮೇಲೆ ಅಕ್ಕನಿಗೆ ಮುರುಳಿ ಮೇಷ್ಟ್ರ ಮೇಲೆ ಏನೋ ಆಕರ್ಷಣೆಯಿದೆ ಎಂಬುದು ಸುಮಾಳಿಗೆ ತಿಳಿದಿದೆ. ಇದೇ ಕಾರಣಕ್ಕೆ ಸಹನಾಳನ್ನು ಆಗಾಗ ರೇಗಿಸ್ತಾ ಇರುತ್ತಾಳೆ. ಅಷ್ಟೇ ಅಲ್ಲ ಅವ್ವನ ಅನುಮತಿ ಪಡೆದು ಇಬ್ಬರನ್ನು ಭೇಟಿ ಮಾಡುವಂತೆ ಮಾಡುತ್ತಿದ್ದಾಳೆ. ಇಬ್ಬರು ಪ್ರೀತಿಯನ್ನು ಆದಷ್ಟು ಬೇಗ ಹೇಳಿಕೊಳ್ಳಲಿ ಎಂದು ಬಯಸುತ್ತಿದ್ದಾಳೆ. ಸುಮಾಳಿಗೆ ಆಕೆಯ ಫ್ರೆಂಡ್ ಕೂಡ ಸಾಥ್ ನೀಡುತ್ತಿದ್ದಾಳೆ. ಆ ಇಬ್ಬರು ಪ್ರೀತಿಯಲ್ಲಿ ಬಿದ್ದು ಇಷ್ಟು ಒದ್ದಾಡುತ್ತಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಸುಮ ಮತ್ತು ಅವಳ ಫ್ರೆಂಡ್ ಕ್ಲಾಸ್‌ನಲ್ಲಿ ಕೂತು ಆ ಇಬ್ಬರ ಬಗ್ಗನೇ ಯೋಚಿಸುತ್ತಿದ್ದಾರೆ. ಒಂದು ಮಾಡಿಸಲು ಪ್ಲ್ಯಾನ್ ಮಾಡುತ್ತಿದ್ದಾರೆ.
ಎಲ್ಲೆಲ್ಲೂ ಮುರುಳಿ ಮೇಷ್ಟ್ರಿಗೆ ಸಹನಾ ಕಾಣಿಸ್ತಿದ್ದಾಳೆ
ಆನ್ಲೈನ್ ಕ್ಲಾಸ್‌ನಿಂದ ಒಂದು ದೊಡ್ಡ ಎಡವಟ್ಟಾಗಿ ಹೋಗಿದೆ. ಪಾಪ, ಸಹನಾಗೆ ಮುರುಳಿ ಮೇಷ್ಟ್ರನ್ನು ನೋಡುವಾಸೆ. ಹೀಗಾಗಿ ಕಾವ್ಯಾ ಆನ್ಲೈನ್ ಕ್ಲಾಸ್‌ನ ತಮ್ಮ ಮನೆಯಲ್ಲಿಯೇ ಅಟೆಂಡ್ ಮಾಡುವಂತೆ ಹೇಳಿದ ಸಹನಾ, ಏನೋ ಮಾಡೋದಕ್ಕೆ ಹೋಗಿ ಇಡೀ ಸ್ಟುಡೆಂಟ್ಸ್ ಕೈನಲ್ಲಿ ಸಿಕ್ಕಿಬಿದ್ದಿದ್ರು. ಮುರುಳಿ ಮೇಷ್ಟ್ರು ಫುಲ್ ಎಕ್ಸೈಟ್ಮೆಂಟ್‌ನಲ್ಲಿ ಸಹನಾ ಕಂಡಿದ್ದೆ ತಡ ಸಹನಾ ಅವರೇ ಅಂತ ಖುಷಿಯಲ್ಲಿ ಕೂಗಿದ್ದರು. ಇದು ಎಲ್ಲಾ ವಿದ್ಯಾರ್ಥಿಗಳಿಗೂ ಆಡಿಕೊಳ್ಳುವುದಕ್ಕೆ ಅವಕಾಶ ಸಿಕ್ಕಂತಾಯಿತು. ಮುರುಳಿ ಸರ್ ಸೀರಿಯಸ್ ಆಗಿ ಪಾಠ ಮಾಡದೆ, ಸಹನಾ ಅವರೇ ಸಹನಾ ಅವರೇ ಅಂತ ಕೂಗುವುದಕ್ಕೆ ಶುರು ಮಾಡಿದ್ದಾರೆ. ಸುಮ ಸುಮ್ಮನೆ ಇರುತ್ತಾಳಾ ಗಪ್ ಚಿಪ್ ಅಂತ ಎಲ್ಲರ ಬಾಯಿ ಮುಚ್ಚಿಸಿದ್ದಾಳೆ. ಆದರೆ ಪಾಪ ಮುರುಳಿ ಮೇಷ್ಟ್ರಿಗೆ ಎತ್ತ ಕಡೆ ನೋಡಿದರು ಸಹನಾ ಕ್ಲಾಸ್ ನಲ್ಲಿ ಕುಳಿತು ಪಾಠ ಕೇಳುತ್ತಿರುವಂತೆ ಆಗಿದೆ. ಮುಖದಲ್ಲಿ ಸಂತಸದ ನಗು ಉಕ್ಕಿ ಹರಿಯುತ್ತಿದೆ.


Click it and Unblock the Notifications











