ಪುಟ್ಟಕ್ಕನ ಮಕ್ಕಳು: ಕಂಠಿಗೆ ಹೆಚ್ಚಾಗ್ತಿದ್ದಾರೆ ವಿಲನ್ಸ್ : ಸ್ನೇಹಾಳಿಂದ ದೂರವಾಗೋ ಸಮಯ ಬಂತಾ..?

By ಎಸ್ ಸುಮಂತ್

ಸತ್ಯ ನಮ್ಮನ್ನು ಉಳಿಸುವಷ್ಟು ಸುಳ್ಳು ನಮ್ಮನ್ನು ಕಾಪಾಡುವುದಿಲ್ಲ ಎಂಬ ಮಾತು ಅಕ್ಷರಶಃ ಸತ್ಯ. ಇದು ಕಂಠಿ ವಿಚಾರದಲ್ಲೂ ಪ್ರೂವ್ ಆಗ್ತಾ ಇದೆ. ಅವ್ವ ಎಂದರೆ ಪ್ರಾಣ ಬಿಡುವ ಕಂಠಿ, ಕಂಠಿ ಸುಳ್ಳಿನ ಸರಮಾಲೆಯಲ್ಲಿ ಸಿಕ್ಕಿಬಿದ್ದಿದ್ದಾನೆ. ಬಂಗಾರಮ್ಮನ ಮಗ ಯಾರೆಂಬುದು ಗೊತ್ತೆ ಇಲ್ಲ ಎಂದು ಹೇಳಿದ ಆ ಒಂದು ಸುಳ್ಳು, ಇಂದು ದುಷ್ಮನ್‌ಗಳನ್ನು ಹೆಚ್ಚು ಮಾಡಿದೆ. ಅದರಲ್ಲಿ ರಾಜೇಶ್ವರಿ ಮತ್ತು ನಂಜಮ್ಮ ಕಾದು ಕುಳಿತಿದ್ದಾರೆ.

ಪುಟ್ಟಕ್ಕನ ಮನೆಗೆ ಸದಾ ಕೆಡುಕು ಬಯಸುತ್ತಿರುವ ರಾಜೇಶ್ವರಿಗೆ ಬಂಗಾರಮ್ಮನ ಮೇಲೆ ಇನ್ನಿಲ್ಲದ ಕೋಪ ಬಂದಿದೆ. ಪುಟ್ಟಕ್ಕನಿಗೆ ಸಹಾಯ ಮಾಡುತ್ತಾಳೆ ಎಂಬ ವಿಚಾರಕ್ಕೆ ಕೆಂಡಕಾರುತ್ತಿದ್ದಾಳೆ. ಈ ಕಾರಣದಿಂದಾಗಿಯೇ ಸಣ್ಣ ವಿಚಾರ ಸಿಕ್ಕಿದರೂ ಬಂಗಾರಮ್ಮನ ಮನಸ್ಸು ಕಡೆಸುತ್ತಿದ್ದಾಳೆ. ಅತ್ತ ಕಡೆ ನಂಜಮ್ಮ. ಬೀಗಿತ್ತಿ ಎಂದು ನೋಡದೆ, ಮಗನ ಜೀವನ ಹಾಳಾಗುತ್ತಿದೆ ಎಂಬುದನ್ನು ಲೆಕ್ಕಕ್ಕಿಡದೆ ದ್ಚೇಷ ಕಾರುತ್ತಿದ್ದಾಳೆ. ಇದು ಈಗ ಕಂಠಿ ಮೇಲಿನ ದ್ವೇಷಕ್ಕೂ ಕಾರಣವಾಗಿದೆ.

ವಸು ಮತ್ತು ಚಂದ್ರು ಒಂದಾಗಲಿ ಎಂಬುದೇ ಕಂಠಿ ಆಸೆ

ವಸು ಮತ್ತು ಚಂದ್ರು ಒಂದಾಗಲಿ ಎಂಬುದೇ ಕಂಠಿ ಆಸೆ

ವಸು ಮತ್ತು ಚಂದ್ರು ದೂರ ದೂರ ಆಗಿ ಸಾಕಷ್ಟು ತಿಂಗಳುಗಳೇ ಕಳೆದು ಹೋಗಿದೆ. ಮನಸ್ಸಲ್ಲಿ ಪ್ರೀತಿ ಇದ್ದರೂ, ಮನೆಯವರ ವೈಮನಸ್ಸಿನಿಂದಾಗಿ ಇಬ್ಬರು ಪರಸ್ಪರ ಭೇಟಿಯೂ ಸಾಧ್ಯವಾಗುತ್ತಿಲ್ಲ. ಪ್ರೀತಿ ವಿನಿಮಯಕ್ಕೂ ಸಮಯ ಸಿಗುತ್ತಿಲ್ಲ. ಭಯದ ವಾತಾವರಣದಲ್ಲಿಯೇ ಇಬ್ಬರು ಬದುಕುತ್ತಿದ್ದಾರೆ. ಇಬ್ಬರನ್ನು ಒಟ್ಟು ಮಾಡಬೇಕೆಂಬುದು ಕಂಠಿಯ ಧ್ಯೇಯವಾಗಿದೆ. ಹೀಗಾಗಿ ಆಗಾಗ ಅವ್ವನ ಬಳಿ ಸುಳ್ಳು ಹೇಳುತ್ತಾ, ತಂಗ್ಯಮ್ಮನಿಗೆ ಸಪೋರ್ಟ್ ಮಾಡುತ್ತಿದ್ದಾನೆ. ಚಂದ್ರು ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಲು ಟ್ರೈ ಮಾಡ್ತಿದ್ದಾನೆ. ಆದರೆ ಅಲ್ಲಿ ಚಂದ್ರು ಅಮ್ಮ ನಂಜಮ್ಮ ಇಬ್ಬರನ್ನು ಒಂದಾಗದಂತೆ ನೋಡಿಕೊಳ್ಳುತ್ತಿದ್ದಾಳೆ.

ಆಸ್ಪತ್ರೆಯಲ್ಲಿ ಕಂಠಿಗೆ ಟೆನ್ಶನ್‌

ಆಸ್ಪತ್ರೆಯಲ್ಲಿ ಕಂಠಿಗೆ ಟೆನ್ಶನ್‌

ಚಂದ್ರು ಜೋರಾಗಿಯೇ ಗಲಾಟೆ ಮಾಡಿದ್ದಾನೆ. ನೀವೂ ಏನಾದರೂ ಮಾಡಿಕೊಳ್ಳಿ ನಾನು ವಸು ಕರೆದುಕೊಂಡು ಬರ್ತೀನಿ ಅಂತ. ಇದನ್ನು ಅರಗಿಸಿಕೊಳ್ಳಲಾಗದ ನಂಜಮ್ಮ ಸ್ವಲ್ಪ ವಿಷ ತೆಗೆದುಕೊಂಡು ನಾಟಕವಾಡುತ್ತಿದ್ದಾಳೆ. ನಿನ್ನ ಕಾಲಿಗೆ ಬಿದ್ದು ಮನೆಗೆ ಕರೆದುಕೊಂಡು ಹೋಗುತ್ತೀನಿ ಎಂದಿದ್ದ ಚಂದ್ರುಗೆ ತಾಯಿ ವಿಷ ಕುಡಿದಿರುವುದು ಆಘಾತ ತಂದಿದೆ. ಈ ವಿಚಾರ ವಸುಗೆ ತಿಳಿದು ಟೆನ್ಶನ್ ಆಗಿದ್ದಾಳೆ‌. ಕಂಠಿಯ ಸಹಾಯದಿಂದ ಅವ್ವನನ್ನು ಒಪ್ಪಿಸಿ ಆಸ್ಪತ್ರೆಗೆ ಹೊರಟಿದ್ದಾರೆ. ಆದರೆ, ಅದೇ ಆಸ್ಪತ್ರೆಯಲ್ಲಿ ಸ್ನೇಹಾ ಮತ್ತು ಪುಟ್ಟಕ್ಕ ಕೂಡ ಇದ್ದಾರೆ. ಇಡೀ ಕಾಂದಾನ್ ಜೊತೆ ಬಂದಿರುವ ಕಂಠಿ ಸ್ನೇಹಾ ಇನ್ನೆಲ್ಲಿ ನನ್ನ ನೋಡುತ್ತಾಳೋ ಎಂಬ ಭಯದಿಂದ ವಿಲವಿಲ ಅಂತ ಒದ್ದಾಡುತ್ತಿದ್ದಾನೆ. ಬಂಗಾರಮ್ಮ ಅದನ್ನು ಗಮನಿಸುತ್ತಿದ್ದಾಳೆ. ಆದರೆ, ಅದೃಷ್ಟ ಪುಟ್ಟಕ್ಕ ಸ್ನೇಹಾಳನ್ನುಬಾ ಇಲ್ಲಿಂದ ಎಂದು ಕರೆದುಕೊಂಡು ಹೊರಟಿದ್ದಾಳೆ.

ಚಂದ್ರು, ವಸು ಪರ ನಿಲ್ಲುವ ಸಾಧ್ಯತೆ ಕಡಿಮೆ

ಚಂದ್ರು, ವಸು ಪರ ನಿಲ್ಲುವ ಸಾಧ್ಯತೆ ಕಡಿಮೆ

ಚಂದ್ರು ಈ ಬಾರಿ ಗಟ್ಟಿ ಧೈರ್ಯ ಮಾಡಿದ್ದ. ವಸುನನ್ನು ಕರೆದುಕೊಂಡು ಹೋಗಲೇಬೇಕೆಂದು. ಆದರೆ ಇಲ್ಲಿ ನಂಜಮ್ಮ ನಿಜವಾಗಲೂ ವಿಷ ಕುಡಿದು ಆಸ್ಪತ್ರೆ ಸೇರಿದ್ದಾಳೆ. ಅದರಲ್ಲೂ ಭಾವನಾತ್ಮಕವಾಗಿ ಕಟ್ಟಿ ಹಾಕುತ್ತಿದ್ದಾಳೆ. ಈಗಲೂ ಅವಳೇ ಮುಖ್ಯ ಅಂತ ಹೇಳಿಬಿಡಲಿ ನಾನು ಏನನ್ನು ಮಾತನಾಡಲ್ಲ ಅಂತ. ಅತ್ತ ಕಡೆ ಅಂದು ಮನೆ ಬಾಗಿಲಿಗೆ ಹೋದ ನನ್ನ ಮತ್ತು ಮಗನನ್ನು ಅವಮಾನ ಮಾಡಿದ್ದನ್ನು ನೆನೆದು ಬಂಗಾರಮ್ಮ ಕುದಿಯುತ್ತಿದ್ದಾಳೆ. ಆದರೂ ಮಗ ಮತ್ತು ಮಗಳ ಮಾತಿಗೆ ಕಟ್ಟಿ ಬಿದ್ದು ಆಸ್ಪತ್ರೆಗೆ ಬಂದಿದ್ದಾಳೆ. ಇದು ಕಡೆಯ ಅವಕಾಶ ಈ ಬಾರಿಯೇನಾದರೂ ಚಂದ್ರು ಅವರ ಅವ್ವನೇ ಮುಖ್ಯ ಎಂದರೆ ಇಂದಿಗೆ ಸಂಬಂಧ ಮುಗಿಯುತ್ತೆ ಎಂದಿದ್ದಾಳೆ. ಇದು ಚಂದ್ರು ಮತ್ತು ವಸು ಇಬ್ಬರಿಗೂ ಅಗ್ನಿಪರೀಕ್ಷೆಯೇ ಆಗಿದೆ.

ಸುತ್ತಲು ಶತ್ರುಗಳನ್ನೇ ಸೇರಿಸಿಕೊಳ್ಳುತ್ತಿದ್ದಾನೆ ಕಂಠಿ

ಸ್ನೇಹಾಳ ಪ್ರೀತಿ ಪಡೆಯಲು ಕಂಠಿ ಹೇಳಿರುವ ಸುಳ್ಳು ಒಂದಾ ಎರಡಾ.. ಈಗ ಬಂಗಾರಮ್ಮನ ಮಗನನ್ನು ಸೃಷ್ಟಿಸಿ, ಸ್ನೇಹಾಳೇ ಪೊಲೀಸರಿಗೆ ಹಿಡಿದುಕೊಟ್ಟಂತೆ ನಾಟಕ ಬೇರೆ ಆಡಿದ್ದಾನೆ. ಸ್ನೇಹಾ ಕಂಠಿಯನ್ನು ಹಿಡಿದುಕೊಟ್ಟ ಮೇಲಾದ್ರೂ ಸುಮ್ಮನಿದ್ದಾಳಾ..? ಎಲ್ಲರ ಬಳಿಯೂ ಹೇಳಿಕೊಂಡು ಬರುತ್ತಿದ್ದಾಳೆ. ಇದು ಕಂಠಿಯ ಕುತ್ತಿಗೆಗೆ ಬಂದು ನಿಂತಿದೆ. ಅತ್ತ ಕಡೆ ರಾಜೇಶ್ವರಿ ಸಿದ್ಧವಾಗಿದ್ದಾಳೆ. ಬಂಗಾರಮ್ಮನನ್ನು ಇದೇ ವಿಚಾರದಲ್ಲಿ ಹಳ್ಳಕ್ಕೆ ಕೆಡವಬೇಕು ಎಂದು. ಇತ್ತ ನಂಜಮ್ಮ ಅದೇ ವಿಚಾರ ಹಿಡಿದು ಬಂಗಾರಮ್ಮನಿಗೆ ಅವಮಾನ ಮಾಡಬೇಕೆಂದು ಯೋಜನೆ ರೂಪಿಸಿದ್ದಾಳೆ. ಆದರೆ ಸ್ನೇಹಾ ಹಿಡಿದುಕೊಟ್ಟಿರುವ ಬಂಗಾರಮ್ಮನ ಮಗನೇ ಬೇರೆ. ಎಲ್ಲರೂ ಈ ವಿಚಾರ ಕೆದಕಿದರೆ ಸ್ನೇಹಾ ಕಂಠಿ ಪ್ರೀತಿ ಶುರುವಾಗುವ ಮುನ್ನವೇ ನೆಲಕಚ್ಚುತ್ತೆ. ಸುಳ್ಳಿನ ಸರಮಾಲೆ ಹೆಣೆದಿರುವ ಕಂಠಿ ಇದೀಗ ಎಲ್ಲಿಯೂ ಒಂದೆಳೆ ಕಿತ್ತು ಹೋಗದಂತೆ ನೋಡಿಕೊಳ್ಳಬೇಕಾದ ಅನಿವಾರ್ಯತೆ ಇದೆ.

More from Filmibeat

English summary
Zee Kannada Serial Puttakkana Makkalu Written Update On June 7th Episode. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X