ಕಂಠಿ ಪ್ರೀತಿಗೆ ಕಂಟಕ: ಸ್ನೇಹಾಗೆ ಗೊತ್ತಾಯ್ತು ಕಂಠಿ ನಕಲಿ ವೇಷ!

By ಪ್ರಿಯಾ ದೊರೆ

'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಕಳೆದ ವಾರವಷ್ಟೇ 100 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿದೆ. ಪುಟ್ಟಕ್ಕನ ವ್ಯಾಪಾರವನ್ನು ಹೇಗಾದರೂ ಮಾಡಿ ಕೆಡಿಸಬೇಕು ಎಂದು ರಾಜೇಶ್ವರಿ ಲೆಕ್ಕಾಚಾರ ಹಾಕಿಕೊಂಡಿದ್ದಾಳೆ. ಅದಕ್ಕಾಗೇ ಪುಟ್ಟಕ್ಕನ ಮೆಸ್ ಎದುರಿಗೇ ವೈನ್ ಶಾಪ್ ಅನ್ನು ತೆರೆದಿದ್ದಾಳೆ.

ಸ್ನೇಹಾ ಈಗ ವೈನ್ ಶಾಪ್‌ಗೆ ಹೋಗಿ ಕಾಳಿ ಜೊತೆ ಜಗಳವಾಡಿದ್ದಾಳೆ. ಕಾಳಿಯ ಕೊರಳ ಪಟ್ಟಿಯನ್ನು ಹಿಡಿದು ಬೀದಿಯಲ್ಲಿ ಗಲಾಟೆ ಮಾಡಿದ್ದಾಳೆ. ಹೆದರಿಕೊಂಡು ಓಡಿ ಹೋದವನು ರಾಜೇಶ್ವರಿಯನ್ನು ಕರೆದುಕೊಂಡು ಬಂದಿದ್ದಾನೆ. ರಾಜೇಶ್ವರಿ ಪುಟ್ಟಕ್ಕನ ಮನೆ ಎದುರು ನಿಂತು ರಂಪ ಮಾಡಿದ್ದಾಳೆ.

ಯಾವುದಕ್ಕೂ ಜಗ್ಗದ ಸ್ನೇಹಾ ಕೂಡ ರಾಜೇಶ್ವರಿ ಧ್ವನಿಗೆ ಧ್ವನಿ ಕೊಟ್ಟು ಕೂಗಾಡಿದ್ದಾಳೆ. ಯಾರಿಗೂ ವೈನ್ ಶಾಪ್ ತೆಗೆಯೋದಕ್ಕೆ ಬಿಡೋದಿಲ್ಲ. ಕೇಸ್ ಹಾಕುತ್ತೀನಿ. ಹಾಗೆ ಹೀಗೆ ಅಂತೆಲ್ಲಾ ಸ್ನೇಹಾ ಕೂಗಾಡಿದ್ದಾಳೆ. ಆದರೆ ರಾಜೇಶ್ವರಿ ಈಗ ಪೇಪರ್ ಒಂದನ್ನು ತೋರಿಸಿದ್ದು ಶಾಕ್ ಕೊಟ್ಟಿದ್ದಾಳೆ.

ವೈನ್ ಶಾಪ್ ತೆರೆಯಲು ರಾಜೇಶ್ವರಿ ತಯಾರಿ!

ವೈನ್ ಶಾಪ್ ತೆರೆಯಲು ರಾಜೇಶ್ವರಿ ತಯಾರಿ!

ರಾಜೇಶ್ವರಿ ವೈನ್ ಶಾಪ್ ತೆರೆಯಲು ಸರ್ಕಾರದಿಂದ ಪ್ರಮಾಣ ಪತ್ರವನ್ನು ಪಡೆದುಕೊಂಡಿದ್ದಾಳೆ. ಈ ಪತ್ರವನ್ನು ಸ್ನೇಹಾಳ ಕೈಗೆ ಕೊಟ್ಟು ಓದಲು ಹೇಳಿದ್ದಾಳೆ. ಪ್ರಮಾಣ ಪತ್ರವನ್ನು ಕೈಯಲ್ಲಿ ಹಿಡಿದು ಓದಿದ ಸ್ನೇಹ ಶಾಕ್ ಆಗಿದ್ದಾಳೆ. ಈ ಮಾತಿನ ಚಕಮಕಿಯಲ್ಲಿ ರಾಜೇಶ್ವರಿ, ಬಡ್ಡಿ ಬಂಗಾರಮ್ಮನ ಸಹಾಯ ಇದೆ ಅಂತ ಇಷ್ಟೆಲ್ಲಾ ಹಾರಾಡುತ್ತಿದ್ದೀರಾ ಎಂದು ಹೇಳಿದ್ದಾಳೆ. ಈ ಮಾತನ್ನು ಕೇಳಿದ ಸ್ನೇಹಾ, ನಾವ್ಯಾಕೆ ಇನ್ನೊಬ್ಬರ ಸಹಾಯ ತಗೋಬೇಕು. ನಾವು ಯಾರ ಸಹಾಯವನ್ನೂ ತೆಗೆದುಕೊಳ್ಳುವುದಿಲ್ಲ. ಅದರಲ್ಲೂ ಬಡ್ಡಿ ಬಂಗಾರಮ್ಮನ ಸಹಾಯವಂತೂ ಬೇಡವೇ ಬೇಡ. ನಿನಗೂ ಬಡ್ಡಿ ಬಂಗಾರಮ್ಮನಿಗೂ ವ್ಯತ್ಯಾಸವೇ ಇಲ್ಲ. ಇನ್ನೊಬ್ಬರ ಜೀವ ಹಿಂಡಿ ಬದುಕುವವರು ಎಂದೆಲ್ಲಾ ಮಾತನಾಡಿದ್ದಾಳೆ.

ಸ್ನೇಹ ಮೇಲೆ ಕಂಠಿಗೆ ಕೋಪ!

ಸ್ನೇಹ ಮೇಲೆ ಕಂಠಿಗೆ ಕೋಪ!

ಇತ್ತ ಮರೆಯಲ್ಲಿ ನಿಂತು ಎಲ್ಲವನ್ನೂ ಗಮನಿಸುತ್ತಿದ್ದ ಕಂಠಿ ಹಾಗೂ ಅವರ ಸ್ನೇಹಿತರು, ಸ್ನೇಹಾ ಮಾತುಗಳನ್ನು ಕೇಳಿಸಿಕೊಂಡಿದ್ದಾರೆ. ಅವ್ವನ ಬಗ್ಗೆ ಮಾತನಾಡಿದ್ದಕ್ಕೆ ಕಂಠಿಗೆ ಸಿಟ್ಟು ಬಂದಿದೆ. ಆದರೆ, ಸ್ನೇಹಿತರು ಕಂಠಿಯನ್ನು ತಡೆದು, ಸಮಾಧಾನ ಹೇಳಿದ್ದಾರೆ. ಇತ್ತ ಇದರ ಬಗ್ಗೆಯೇ ಯೋಚಿಸುತ್ತಾ ಸರಿಯಾಗೆ ಊಟ ಮಾಡದೆ ಅನ್ನದ ಮುಂದೆ ಕುಳಿತಿದ್ದ ಕಂಠಿಗೆ ಬಡ್ಡಿ ಬಂಗಾರಮ್ಮ ಮತ್ತೊಂದು ಶಾಕ್ ಕೊಟ್ಟಿದ್ದಾಳೆ.

ಕಂಠಿ ಪ್ರೀತಿಗೆ ಸ್ನೇಹಾಳಿಂದ ತೊಂದರೆ!

ಕಂಠಿ ಪ್ರೀತಿಗೆ ಸ್ನೇಹಾಳಿಂದ ತೊಂದರೆ!

ಅದೇನೆಂದರೆ, ಕಂಠಿ ವಿರುದ್ಧ ದೂರು ಕೊಟ್ಟ ಹುಡುಗಿ ಯಾರು ಎಂಬುದನ್ನು ತಿಳಿದುಕೊಳ್ಳುವ ಆತುರದಲ್ಲಿದ್ದಾಳೆ. ಈ ಮಾತನ್ನು ಕೇಳಿದ ಕಂಠಿ, ದೂರು ಕೊಟ್ಟಿದ್ದು ಸ್ನೇಹಾಳೇ ಎಂದು ಗೊತ್ತಾದರೆ, ಏನಾಗುತ್ತದೋ ಎಂಬ ಚಿಂತೆಯಲ್ಲಿದ್ದಾನೆ. ಈಗ ಸ್ನೇಹಾಳ ಜೊತೆ ಪ್ರೀತಿಯಲ್ಲಿ ಬಿದ್ದಿರುವ ಕಂಠಿಗೆ ಇಬ್ಬಂದಿ ಶುರುವಾಗಿದೆ. ಅಮ್ಮನ ಪರವೂ ನಿಲ್ಲಲಾಗದೇ, ಪ್ರೇಯಸಿಯ ಪರವೂ ಇರಲಾರದೇ ಒದ್ದಾಡುತ್ತಿದ್ದಾನೆ. ದೂರು ಕೊಟ್ಟಿದ್ದು, ಸ್ನೇಹಾ ಎಂಬುದು ಬಂಗಾರಮ್ಮನಿಗೆ ಗೊತ್ತಾದರೂ ಕಷ್ಟ. ತಾನೇ ಬಂಗಾರಮ್ಮನ ಮಗ ಎಂಬುದು ಈಗಲೇ ಸ್ನೇಹಾಳಿಗೆ ತಿಳಿದರೂ ಕಷ್ಟ.

ಕಂಠಿ ಪ್ರೀತಿಯ ಗತಿ ಏನು?

ಕಂಠಿ ಪ್ರೀತಿಯ ಗತಿ ಏನು?

ಅದರ ಜೊತೆಗೆ ಎದೆಯ ಮೇಲೆ ಅವ್ವ ಎಂದು ಅಚ್ಚೆ ಹಾಕಿಸಿಕೊಂಡಿರುವುದು ಕಂಠಿ ಎಂಬುದು ಗೊತ್ತಾದರೂ ತೊಂದರೆಯಾಗುತ್ತದೆ ಅನ್ನೋ ಟೆನ್ಷನ್ ಶುರುವಾಗಿದೆ. ಈ ಸಮಸ್ಯೆಯಲ್ಲಿದ್ದಾಗಲೇ, ಬಡ್ಡಿ ಹಣ ಕೊಡದೆ ತಿರುಗಾಡುತ್ತಿದ್ದ ಇತನನ್ನು ನೋಡಿದ ಕಂಠಿ ಸ್ನೇಹಿತರು ಕುಡಿದು ಮಜಾ ಮಾಡಿಕೊಂಡು ತಪ್ಪಿಸಿಕೊಂಡು ಓಡಾಡುತ್ತಿದ್ದವನನ್ನು ಹಿಡಿದು ಹಣ ಕೇಳಲಾಗಿದೆ. ಆಗ ಆತ ಕಂಠಿಯ ಎದೆಯ ಮೇಲಿರುವ ಅವ್ವ ಎಂಬ ಹಚ್ಚೆಯನ್ನು ಕಂಡು ಶಾಕ್ ಆಗುತ್ತಾನೆ. ಮುಂದೇನಾಗುತ್ತದೆ ಎಂಬುದೇ ಈಗ ಕುತೂಹಲ. ಸ್ನೇಹಾಳಿಗೆ ಈ ವಿಚಾರ ಗೊತ್ತಾದರೆ ಏನಾಗುತ್ತದೆ.? ಕಂಠಿಯ ಪ್ರೀತಿಯ ಕಥೆ ಹೀಗೆ ಮುಂದುವರೆಯುತ್ತಾ ಅನ್ನೋದು ಸದ್ಯದ ಪ್ರಶ್ನೆ.

More from Filmibeat

English summary
Puttakkana Makkalu Serial Written Update On May 3rd Episode, Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X