Puttakkana Makkalu: ಅಮ್ಮನ ವಿರುದ್ಧ ನಿಂತ ಪಲ್ಲವಿ, ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಾಳಾ ನಂಜಮ್ಮ?
ಪುಟ್ಟಕ್ಕನಿಗೆ ಇದೀಗ ಎಲ್ಲಾ ಸತ್ಯ ತಿಳಿದು ಹೋಗಿದೆ. ಗಣೇಶ ಹಬ್ಬದಂದೇ ಇದೆಲ್ಲ ಸತ್ಯಗಳು ಹೊರಗೆ ಬರುತ್ತಿದೆ. ಬಂಗಾರಮ್ಮನ ಮೇಲೆ ಆಪಾದನೆ ಹೊರಿಸಬೇಕು ಎನ್ನುವ ನಂಜಮ್ಮನ ಆಸೆಗೆ ಇದೀಗ ಮಗಳೆ ನೀರು ಎರಚಿದ್ದಾಳೆ. ಬಂಗಾರಮ್ಮನ ಕಂಡರೆ ನಂಜಮ್ಮಗೆ ಅಷ್ಟಕಷ್ಟೆ . ಅದೆಷ್ಟೇ ಕೋಪ ಇದ್ದರೂ ನಂಜಮ್ಮ ಈ ರೀತಿ ಮಾಡುತ್ತಾಳೆ ಎಂದು ಅಂದುಕೊಂಡು ಇರಲಿಲ್ಲ.
ನಂಜಮ್ಮ ಮೇಲೆ ಬಂಗಾರಮ್ಮ ಕೋಪವಿತ್ತು. ಅದೇ ಕೋಪ ದ್ವೇಷವಾಗಿ ಪರಿಣಮಿಸಿದೆ. ಚಂದ್ರು ತನ್ನ ಹೆಂಡತಿ ವಸು ಜೊತೆ ಚೆನ್ನಾಗಿ ಸಂಸಾರ ಮಾಡುತ್ತಿದ್ದರೆ ಇಷ್ಟೆಲ್ಲ ಆಗುತ್ತಾ ಇರಲಿಲ್ಲ. ಆತ ತನ್ನ ತಾಯಿ ಹೇಳುವ ಮಾತಿಗೆಲ್ಲ ಕೊಲೆ ಬಸವನ ಹಾಗೆ ತಲೆ ಅಲ್ಲಾಡಿಸಿ ಇವತ್ತಿನ ಪರಿಸ್ಥಿತಿಗೆ ಆತನು ಕಾರಣ ಆಗುತ್ತಾನೆ.

ಇದೀಗ ಪುಟ್ಟಕ್ಕ ನಂಜಮ್ಮನ ಮೇಲೆ ಬಹಳ ಪ್ರೀತಿ ಇಟ್ಟುಕೊಂಡು ಇರುತ್ತಾಳೆ. ಬಹಳ ಒಳ್ಳೆಯ ಸ್ನೇಹಿತರು ಆಗಿರುತ್ತಾರೆ. ಆದರೆ ಸ್ನೇಹಿತೆ ತನ್ನ ಮನೆಗೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಾಳೆ ಎಂದು ಯಾರು ಅಂದುಕೊಂಡು ಇರಲಿಲ್ಲ. ಬಂಗಾರಮ್ಮಗೆ ನಿಜ ಗೊತ್ತಾದ ಕೂಡಲೇ ಪುಟ್ಟಕ್ಕನ ಮನೆಗೆ ಕರೆದುಕೊಂಡು ಬಂದಿದ್ದಾಳೆ.
ಮಾಡಿದ ತಪ್ಪನ್ನು ಒಪ್ಪಿಕೊಳ್ಳದ ನಂಜಮ್ಮ!
ಆದರೆ ನಂಜಮ್ಮ ಬಂಗಾರಮ್ಮನ ಮೇಲೆ ದೂರು ಹಾಕುತ್ತಾಳೆ. ಆಕೆಯೇ ನನ್ನ ಮೇಲೆ ಸುಳ್ಳು ಹೇಳುತ್ತಿದ್ದಾಳೆ. ಆಕೆಯೇ ಮೇಲೆ ಯಾವುದೇ ಅನುಮಾನ ಬರಬಾರದು ಎಂಬ ಕಾರಣಕ್ಕೆ ಇಷ್ಟೆಲ್ಲ ನಾಟಕ ಮಾಡುತ್ತಿದ್ದಾಳೆ ಎಂದು ಹೇಳುತ್ತಾಳೆ. ಅಷ್ಟರಲ್ಲಿ ಅಲ್ಲಿಗೆ ಪಲ್ಲವಿ ಬರುತ್ತಾಳೆ.. ಪುಟ್ಟಕ್ಕ ಅವರ ಮೆಸ್‌ಗೆ ಬೆಂಕಿ ಹಾಕಲು ನನ್ನಮ್ಮ ನೇರ ಕಾರಣ. ಆಕೆಯಿಂದಲೆ ಇಷ್ಟೆಲ್ಲ ಆಗಿದ್ದು ಎಂದಾಗ ಪುಟ್ಟಕ್ಕಗೆ ಆಘಾತ ಆಗುತ್ತದೆ.

ನಿಜ ತಿಳಿದು ಪುಟ್ಟಕ್ಕಗೆ ಆಘಾತ
ಇದೇನಿದು ಯಾಕೆ ಹೀಗೆ ಆಗುತ್ತಿದೆ ಎಂದೆಲ್ಲ ಪುಟ್ಟಕ್ಕ ಮನದಲ್ಲಿ ಯೋಚನ ಮಾಡಿ ಅಳುತ್ತಾಳೆ. ಇನ್ನೂ ನಂಜಮ್ಮ ಮಗಳ ಬಳಿ ಹೇಳುತ್ತಾಳೆ ಏನೇ ನನ್ನ ಮೇಲೆ ಹೀಗೆ ಹೇಳುತ್ತಾ ಇದ್ದೀಯಾ ನಿನಗೂ ಬಂಗಾರಮ್ಮ ಹೆದರಿಸಿ ಬಿಟ್ಟಳ ಹೇಗೆ ಎಂದು ಕೇಳುತ್ತಾಳೆ.
ಕೋಪ ಕುದಿಯುತ್ತಿರುವ ಬಂಗಾರಮ್ಮ
ಇದನ್ನು ಕೇಳಿದ ಬಂಗಾರಮ್ಮ ಕೋಪ ಹೆಚ್ಚಾಗುತ್ತದೆ. ಆಗ ಪಲ್ಲವಿ ಹೇಳುತ್ತಾಳೆ ಇಲ್ಲ ಅಮ್ಮ ನೀನು ಕಾಳಿ ಮಾತನಾಡುವುದನ್ನು ನಾನು ಕೇಳಿಸಿಕೊಂಡೆ. ಅದಕ್ಕಾಗಿ ನಾನೇ ಸಾಕ್ಷಿ ಹೇಳುತ್ತ ಇದ್ದೇನೆ ಎಂದಾಗ ಎಲ್ಲರಿಗೂ ಶಾಕ್ ಆಗುತ್ತದೆ. ರಾಜೇಶ್ವರಿಗೆ ಬಹಳ ಶಾಕ್ ಆಗುತ್ತದೆ ಏನೋ ಕಾಳಿ ಇವರು ಹೇಳುತ್ತಿರುವುದು ನಿಜವೇ? ನೀನು ಪುಟ್ಟಕ್ಕ ಮೆಸ್‌ಗೆ ಬೆಂಕಿ ಹಾಕಿದ್ದೀಯಾ ಎಂದೆಲ್ಲ ಕೇಳಿದಾಗ ಕಾಳಿ ಏನು ಮಾತನಾಡದೆ ತಲೆ ತಗ್ಗಿಸಿ ನಿಲ್ಲುತ್ತಾನೆ. ಇದನ್ನು ಕಂಡ ಪುಟ್ಟಕ್ಕಗೆ ಶಾಕ್ ಆಗುತ್ತದೆ.
ಪಲ್ಲವಿ ಮಾತು ಕೇಳಿ ರಾಜಿಗೆ ಶಾಕ್
ಇನ್ನು, ಪಲ್ಲವಿ ಸಾಕ್ಷಿಗೆ ರಾಜಿ ಕೂಡ ಏನು ಮಾತನಾಡದೆ ಮೌನಕ್ಕೆ ಶರಣಾಗುತ್ತಾಳೆ. ಸಹನಾ ಮೇಲೆ ಜೀವವನ್ನೇ ಇಟ್ಟುಕೊಂಡಿದ್ದೆ. ಆಕೆ ಬೇರೆ ಮದುವೆ ಆಗಿರುವುದಕ್ಕೆ ನನಗೆ ಬಹಳ ಸಿಟ್ಟು ಬಂತು. ಅದಕ್ಕೆ ಹೀಗೆ ಮಾಡಿದೆ. ಇದಕ್ಕೆ ನಂಜಮ್ಮ ಕಾರಣ ಅಲ್ಲ ಎಂದು ಕಾಳಿ ಎಲ್ಲರ ಮುಂದೆ ಹೇಳುತ್ತಾನೆ.


Click it and Unblock the Notifications











