Puttakkana Makkalu: ಪುಟ್ಟಕ್ಕನ ಮಾತಿಗೆ ಮೆತ್ತಗಾದ ಸ್ನೇಹಾ.. ಬಂಗಾರಮ್ಮ ಮಾತಿಗೆ ಗರಂ ಆಗಿದ್ದೇಕೆ?

By ಪೂರ್ವ

'ಪುಟ್ಟಕ್ಕನ ಮಕ್ಕಳು' ಬಹಳ ಅದ್ದೂರಿಯಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಗೆದ್ದಿದೆ ಎಂದರೆ ತಪ್ಪಾಗದು. ಇದೀಗ ಪುಟ್ಟಕ್ಕ ಮಕ್ಕಳು ಧಾರಾವಾಹಿಯಲ್ಲಿ ಪುಟ್ಟಕ್ಕ ಪಂಚಾಯಿತಿ ಕರೆದು ಊರ ಜನರು ನೆರೆದಿದ್ದಾರೆ. ರಾಜೀ ಹಾಗೂ ಪುಟ್ಟಕ್ಕ ನಡುವೆ ವಾಗ್ವಾದಗಳು ನಡೆಯುತ್ತಲೇ ಇರುತ್ತದೆ. ಆದರೆ, ಬಂಗಾರಮ್ಮ ಮಾತ್ರ ಪುಟ್ಟಕ್ಕನ ಮಾತಿಗೆ ನಿಜಕ್ಕೂ ಶಾಕ್ ಆಗಿ ಇರುತ್ತಾಳೆ.

ಇನ್ನೂ ಸ್ನೇಹಾ ಕಂಠಿಯನ್ನು ಕರೆದುಕೊಂಡು ಬರಲು ಪೊಲೀಸ್ ಸ್ಟೇಶನ್‌ಗೆ ಹೋದರೆ ಮೊದಲು ತಾಂಡವ ಕಂಠಿಯನ್ನು ಕರೆದುಕೊಂಡು ಹೋಗಲು ಬಿಡಲಿಲ್ಲ. ಆ ಬಳಿಕ ಸ್ನೇಹಾ ಕಂಠಿ ಯನ್ನು ಬಿಡಿಸಿಕೊಂಡು ತಣ್ಣಬೈಕ್ ಮೇಲೆ ಕೂರಿಸಿಕೊಂಡು ಪಂಚಾಯಿತಿ ಕಟ್ಟೆಯ ಬಳಿ ಬರುತ್ತಾಳೆ. ಇನ್ನೂ ಎಲ್ಲರೂ ಪಂಚಾಯಿತಿ ಕಟ್ಟೆಯ ಬಳಿ ನಿಂತು ಇರುವುದನ್ನು ಕಂಡು ಕಂಠಿ ಕೊಂಚ ದಂಗಾದರು ಆ ಬಳಿಕ ಮಾತ್ರ ಮೆತ್ತಗೆ ತಾಯಿ ಬಳಿ ಬರುತ್ತಾನೆ.

Puttakkana Makkalu, Zee Kannada Serial

ಕಂಠಿಯನ್ನು ನೋಡಿದ ಬಂಗಾರಮ್ಮ ಓಡಿ ಬಂದು ಬಿಗಿದು ಅಪ್ಪಿಕೊಂಡು ಮಾತನಾಡುತ್ತಾಳೆ. ಆಕೆಗೆ ಕಂಠಿ ಕಣ್ಣು ನೋಡಿ ದುಃಖ ತಡೆಯಲು ಆಗದೆ ಬಹಳ ಬೇಸರ ಮಾಡಿಕೊಳ್ಳುತ್ತಾಳೆ. ಇನ್ನೂ ವಸು ಕೂಡ ಕಂಠಿ ಪರಿಸ್ಥಿತಿ ನೋಡಿ ಯಾಕಣ್ಣಯ್ಯ ಎಷ್ಟೆಲ್ಲ ಹೊಡೆದಿದ್ದಾರೆ ನಿನಗೆ ಎಂದು ಕೇಳಿದಾಗ ಕಂಠಿ ಮಾತ್ರ ಏನಗಿಲ್ಲ ತಂಗಿಯವ್ವ ಎಂದು ತಂಗಿಯನ್ನೇ ಸಮಾಧಾನ ಮಾಡುತ್ತಾನೆ

ಪುಟ್ಟಕ್ಕನ ಮಾತಿಗೆ ಕೋಪಗೊಂಡ ಬಂಗಾರಮ್ಮ

ಇನ್ನೂ ಪಂಚಾಯಿತಿ ಕಟ್ಟೆಯಲ್ಲಿ ಕುಳಿತ ಗೌಡರು ಹೇಳುತ್ತಾರೆ. ಪುಟ್ಟಕ್ಕ ನೀವೇ ಅಲ್ವಾ ಪಂಚಾಯಿತಿ ಕರೆದಿದ್ದು ಅದೇನು ಜಗಳ ಹೇಳಿ ಎಂದಾಗ ಪುಟ್ಟಕ್ಕ ಮೆತ್ತಗೆ ಜಗಳ ಎನು ಇಲ್ಲ ಇದು ಒಂದು ಸಣ್ಣ ಸಮಸ್ಯೆ ಅಷ್ಟೇ ಎಂದು ಹೇಳುತ್ತಾರೆ. "ನನ್ನ ಮಗಳು ಹಾಗೂ ಕಂಠಿ ಮದುವೆ ಮಾಡಿಕೊಂಡಿದ್ದಾರೆ. ಅವರಿಬ್ಬರೂ ಬಹಳ ಪ್ರೀತಿ ಮಾಡಿ ಮದುವೆ ಆಗಿದ್ದಾರೆ. ಈಗೊಂದು ಸಮಸ್ಯೆಯಾಗಿದೆ ಎಂದು" ಪುಟ್ಟಕ್ಕ ಪಂಚಾಯ್ತಿ ಅವರಿಗೆ ಹೇಳಿದ್ದಾರೆ.

Puttakkana Makkalu, Zee Kannada Serial

ಅಮ್ಮನ ಮಾತಿಗೆ ಮೆತ್ತಗಾದ ಸ್ನೇಹಾ

ಪಂಚಾಯ್ತಿಯವರ ಬಳಿ "ಅವರಿಬ್ಬರೂ ಒಟ್ಟಿಗೆ ಇರಲು ಅವಕಾಶ ಕೊಡಿ" ಎಂದು ಹೇಳಿದಾಗ, ಸ್ನೇಹಾ ಮಾತ್ರ ಅವ್ವ ಏನು ಮಾತನಾಡುತ್ತಾ ಇದ್ದೀಯಾ" ಎಂದಾಗ ಪುಟ್ಟಕ್ಕ ಮೆತ್ತಗೆ ಸ್ನೇಹಾಗೆ ಗದರುತ್ತಲೆ ಇರುತ್ತಾಳೆ. "ನನ್ನ ಸರದಿ ಇದು ..ನಿನ್ನ ಸರದಿ ಬಂದಾಗ ಮಾತನಾಡು" ಎಂದು ಖಡಕ್ ಆಗಿ ಹೇಳುತ್ತಾರೆ.

ಬಂಗಾರಮ್ಮನ ಮಾತಿಗೆ ತಿರುಗಿ ಬಿದ್ದ ಸ್ನೇಹಾ

ಇದು ಸರಿಯಾದ ರೀತಿಯಲ್ಲಿ ನಡೆದ ಮದುವೆ ಅಲ್ಲ. ತಪ್ಪಾಗಿ ನಡೆದ ಮದುವೆ ಇದನ್ನು ಮದುವೆ ಎಂದು ಕರೆಯುವುದು ಇಲ್ಲ ಎಂದು ಹೇಳುತ್ತಾರೆ. ಆ ಬಳಿಕ ಊರ ಗೌಡರು ಕಂಠಿ ಬಳಿ ಮದುವೆ ಬಗ್ಗೆ ಕೇಳಿದಾಗ ಕಂಠಿಯನ್ನು ಮಾತನಾಡಲು ಬಿಡದೆ ಬಂಗಾರಮ್ಮನೇ ಮಾತಿಗಿಳಿಯುತ್ತಾಳೆ. ಇದೇ ವೇಳೆ ಸ್ನೇಹಾ ಬಳಿ ಪ್ರಶ್ನೆ ಮಾಡುತ್ತಾರೆ ಗೌಡರು. ಆಗ ಸ್ನೇಹಾ "ನನಗೆ ಈ ಮದುವೆ ಒಪ್ಪಿಗೆ ಇದೆ" ಎಂದು ಕಡ್ಡಿ ಮುರಿದ ಹಾಗೆ ಹೇಳುತ್ತಾಳೆ. ಆಗ ಬಂಗಾರಮ್ಮನಿಗೆ ಶಾಕ್ ಆಗುತ್ತೆ.. ಮುಂದೇನಾಗುತ್ತೆ ಅನ್ನೋದು ಮುಂದಿನ ಸಂಚಿಕೆಯಲ್ಲಿ ರಿವೀಲ್ ಆಗುತ್ತೆ.

More from Filmibeat

English summary
Zee Kannada Serial Puttakkana Makkalu written updated on July 18th, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X