ಕನ್ನಡ ಧಾರಾವಾಹಿಗಳ ಟಿಆರ್‌ಪಿ ರೇಟಿಂಗ್ ಡಿಟೈಲ್ಸ್: ಯಾರಿಗೆ ಮೊದಲ ಸ್ಥಾನ? ಯಾರಿಗೆ ಕೊನೆ ಸ್ಥಾನ?

By ಶೃತಿ ಹರೀಶ್ ಗೌಡ

ಹೊಸ ಹೊಸ ಧಾರಾವಾಹಿಗಳ ನಡುವೆ ದಿನದಿಂದ ದಿನಕ್ಕೆ ಸ್ಪರ್ಧೆಗಳು ಹೆಚ್ಚಾಗ ತೊಡಗಿವೆ. ನಾವು ನಂಬರ್ ಒನ್ ಸ್ಥಾನ ಪಡೆಯಬೇಕು ಎಂದು ಜಿದ್ದಿಗೆ ಬಿದ್ದಂತೆ ಹೊಸ ಹೊಸ‌ ತಿರುವುಗಳನ್ನು ಕೊಡುತ್ತಾ ಮುಂದೆ ಸಾಗುತ್ತಿವೆ.

ಜೀ ಕನ್ನಡ ಮತ್ತು ಕಲರ್ಸ್ ಕನ್ನಡ, ಉದಯ ಟಿವಿ, ಕಲರ್ಸ್ ಸೂಪರ್, ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುವ ಧಾರಾವಾಹಿಗಳು ಹಲವಾರು ಪ್ರೇಕ್ಷಕರ ಮನಸನ್ನು ಗೆದ್ದಿವೆ. ಇನ್ನೂ ಸೋಶಿಯಲ್ ಮೀಡಿಯಾದ ಹವಾ ಜೊತೆಗೆ ಜನರನ್ನು ಯಾವ ಧಾರಾವಾಹಿಗಳು ಮನಸೊರೆ‌ಗೊಂಡು ಹೆಚ್ಚಿನ ಟಿಆರ್‌ಪಿ ಗಳಿಸಿವೆ ಎನ್ನುವ ಕುತೂಹಲ ಮೂಡಿಸಿದೆ.

ಕಳೆದ ವಾರದ ಟಿಆರ್‌ಪಿ ಲಿಸ್ಟ್ ಬಿಡುಗಡೆಯಾಗಿದ್ದು ಕೆಲ ಧಾರವಾಹಿಗಳ ಸ್ಥಾನ ಅದಲು ಬದಲಾಗಿದೆ. ಧಾರಾವಾಹಿಗಳ ಮೇಳೆ ವೀಕ್ಷಕರ ಒಲವು ದಿನದಿಂದ ದಿನಕ್ಕೆ ಬದಲಾಗುತ್ತಿದೆ.

ಮೊದಲ ಸ್ಥಾನದಲ್ಲಿ 'ಪುಟ್ಟಕ್ಕನ ಮಕ್ಕಳು'

ಮೊದಲ ಸ್ಥಾನದಲ್ಲಿ 'ಪುಟ್ಟಕ್ಕನ ಮಕ್ಕಳು'

ಜೀ ಕನ್ನಡದಲ್ಲಿ ಪ್ರಸಾರವಾಗುವ ಪುಟ್ಟಕ್ಕನ 'ಮಕ್ಕಳು ಧಾರಾವಾಹಿ' ಟಾಪ್ ಒನ್ ಸ್ಥಾನದಲ್ಲಿ ಇದೆ. ದೊಡ್ಡ ಮಗಳು ಸಹನಾಳ ಮದುವೆ ಸಂಭ್ರಮ ಇಡೀ ಹಳ್ಳಿಯ ತುಂಬಾ ಮನೆ ಮಾಡಿದೆ. ಈ ಕಡೆ ಸ್ನೇಹ- ಕಂಠಿ ಪ್ರೀತಿ ಸಹ ಚಿಗುರಿದೆ. ಪುಟ್ಟಕ್ಕನ ಮೆಸ್ ಮೇಲೆ ರಾಜಿ ಕಣ್ಣು ಬಿದ್ದಿದೆ. 9.9 ಟಿಆರ್‌ಪಿ ಪಡೆದು ಮೊದಲ ಸ್ಥಾನವನ್ನು ಪುಟ್ಟಕ್ಕನ ಮಕ್ಕಳು ಪಡೆದುಕೊಂಡಿದೆ.

2ನೇ ಸ್ಥಾನದಲ್ಲಿ 'ಗಟ್ಟಿಮೇಳ'

2ನೇ ಸ್ಥಾನದಲ್ಲಿ 'ಗಟ್ಟಿಮೇಳ'

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಗಟ್ಟಿಮೇಳ' ಸೀರಿಯಲ್ ಎರಡನೇ ಸ್ಥಾನದಲ್ಲಿ ಇದೆ. ಹೇಗೋ ಜೈಲುಪಾಲಾಗಿದ್ದ ಅಮೂಲ್ಯಳ ಅಪ್ಪನನ್ನು ವೇದಾಂತ್ ಬಿಡಿಸಿ ಅಮೂಲ್ಯ ಕುಟುಂಬವನ್ನು ಪಾರು ಮಾಡಿದ್ದಾನೆ. ಈ ವಿಲನ್ ಯಾರು , ಯಾಕೆ ಅವನು ಈ ರೀತಿಯಾಗಿ ಮಾಡುತ್ತಿದ್ದಾನೆ ಎಂಬುದನ್ನು ಕಂಡು ಹಿಡಿಯಲು ವೇದಾಂತ್ ಪ್ಲ್ಯಾನ್ ಮಾಡಿದ್ದಾನೆ. ಹಾಗಾಗಿ ಧಾರಾವಾಹಿ ಸಹಜವಾಗಿಯೇ ಕುತೂಹಲ ಮೂಡಿಸಿದೆ. ಇದು 8.8 ಟಿಆರ್‌ಪಿಯನ್ನು ಪಡೆದಿದೆ.

3ನೇ ಸ್ಥಾನಕ್ಕೇರಿದ 'ಹಿಟ್ಲರ್ ಕಲ್ಯಾಣ'

3ನೇ ಸ್ಥಾನಕ್ಕೇರಿದ 'ಹಿಟ್ಲರ್ ಕಲ್ಯಾಣ'

ಜೀ ಕನ್ನಡದಲ್ಲಿ ಪ್ರಸಾರವಾಗುವ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯನ್ನು ಹಿಂದೆ‌ ಹಾಕಿದ 'ಹಿಟ್ಲರ್ ಕಲ್ಯಾಣ' ಧಾರಾವಾಹಿ ಟಾಪ್ 3 ಸ್ಥಾನವನ್ನು ಪಡೆದುಕೊಂಡಿದೆ. ಈಗ ಎಜೆ, ಲೀಲಾಳನ್ನು ಪ್ರೀತಿ ಮಾಡಲು ಶುರು ಮಾಡಿದ್ದಾನೆ. ಈ ಕಡೆ ಲೀಲಾ ಅತ್ತೆಯ ದರ್ಪವನ್ನು ಸೊಸೆಯಂದಿರಿಗೆ ಅರ್ಥ ಮಾಡಿಸುತ್ತಿದ್ದಾಳೆ. ಇದು 8.1 ಟಿಆರ್‌ಪಿಯನ್ನು ಪಡೆದಿದೆ.

4ನೇ ಸ್ಥಾನದಲ್ಲಿ 'ಶ್ರೀರಸ್ತು ಶುಭಮಸ್ತು'

4ನೇ ಸ್ಥಾನದಲ್ಲಿ 'ಶ್ರೀರಸ್ತು ಶುಭಮಸ್ತು'

ಮೂರನೇ ಸ್ಥಾನವನ್ನು ಉಳಿಸಿಕೊಂಡು ಮುಂದೆ ಸಾಗುತ್ತಿದ್ದ 'ಶ್ರೀರಸ್ತು ಶುಭಮಸ್ತು'‌ ಧಾರಾವಾಹಿಗೆ ಕಳೆದ ವಾರ ಹಿನ್ನಡೆ ಆಗಿದೆ. ಕೊಂಚ ಕೆಳಗೆ ಇಳಿದು‌ 4ನೇ ಸ್ಥಾನವನ್ನು ಪಡೆದುಕೊಂಡಿದೆ. ಎರಡು ಕುಟುಂಬಗಳು ಶಿವರಾತ್ರಿ ಹಬ್ಬವನ್ನು ಆಚರಣೆ‌ ಮಾಡುತ್ತಿದ್ದಾರೆ. ಇದು‌ ಟಿಆರ್‌ಪಿಯಲ್ಲಿ 7.7ನ್ನು ಪಡೆದುಕೊಂಡಿದೆ. ಟಾಮ್ ಬಾಯ್ 'ಸತ್ಯ' ಟಾಪ್ 5ರಲ್ಲಿ ತನ್ನ ಸ್ಥಾನವನ್ನು ಪಡೆದುಕೊಂಡಿದೆ. ಇದು 6.5 ಟಿಆರ್‌ಪಿ ಪಡೆದುಕೊಂಡಿದೆ.

'ಭಾಗ್ಯಲಕ್ಷ್ಮೀ'ಗೆ 6ನೇ ಸ್ಥಾನ

'ಭಾಗ್ಯಲಕ್ಷ್ಮೀ'ಗೆ 6ನೇ ಸ್ಥಾನ

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ 'ಭಾಗ್ಯಲಕ್ಷ್ಮೀ'ಗೆ 6ನೇ ಸ್ಥಾನ, 'ಗೀತಾ' ಧಾರಾವಾಹಿಗೆ 7ನೇ ಸ್ಥಾನ, 'ಜೊತೆ ಜೊತೆಯಲಿ' ಹಾಗೂ ತ್ರಿಪುರ ಸುಂದರಿ ಧಾರಾವಾಹಿ 7ನೇ ಸ್ಥಾನವನ್ನು ಪಡೆದುಕೊಂಡಿದೆ. 'ತ್ರಿಪುರ ಸುಂದರಿ' 8ನೇ ಸ್ಥಾನ, ರಾಮಾಚಾರಿಗೆ 9 ಸ್ಥಾನದಲ್ಲಿದ್ದರೆ 10ನೇ ಸ್ಥಾನದಲ್ಲಿ ಲಕ್ಷಣ, ಕೆಂಡಸಂಪಿಗೆ ಧಾರಾವಾಹಿಗಳು ಪಡೆದಿವೆ.

More from Filmibeat

English summary
Puttakkana Makkalu to kenda sampige: Kannada Tv serials TRP ratings Last week. Let’s take a look at the top 10 Kannada serials which were in the highest ranks, according to TRP list. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X