ಪುಟ್ಟಕ್ಕನ ಮಗಳ ಹೀರೋ ಕಂಠಿ ಲವ್‌ ಸ್ಟೋರಿಗೆ ವಿಲನ್ ಯಾರು ಗೊತ್ತಾ?

ಪುಟ್ಟಕ್ಕನ ಮಕ್ಕಳ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. ಪ್ರತಿ ದಿನ ಸಂಜೆ ಆಗುತ್ತಲೇ ಪುಟ್ಟಕ್ಕನ ಮಕ್ಕಳು ತಮ್ಮ ಜೀವನದ ಕಥೆಯೊಂದಿಗೆ ನಿಮ್ಮ ಮುಂದೆ ಹಾಜರಾಗಿ ಬಿಡುತ್ತಾರೆ. ನೀವೂ ಕೂಡ ಪುಟ್ಟಕ್ಕನ ಮಕ್ಕಳ ಕಥೆಯನ್ನು ದಿನ ನೋಡುತ್ತಲೇ ಇರುತ್ತೀರಿ. ಆದರೆ ಧಾರಾವಾಹಿಯಲ್ಲಿ ಹೊಸ ಟ್ವಿಸ್ಟ್‌ಗೆ ಮುನ್ಸೂಚನೆ ಸಿಕ್ಕಿದೆ.

ಪುಟ್ಟಕ್ಕನ ಮಗಳು ಸ್ನೇಹ ಮತ್ತು ಕಂಠಿ ಧಾರಾವಾಹಿಯ ನಾಯಕ, ನಾಯಕಿ. ಈಗಾಗಲೇ ಇವರ ನಡುವೆ ಲವ್‌ ಸ್ಟೋರಿ ಆರಂಭ ಆಗಿದೆ. ಲವ್‌ ಸ್ಟೋರಿ ಇದ್ದ ಮೇಲೆ ವಿಲನ್ ಇರಲೇ ಬೇಕಲ್ಲವಾ. ಹಾಗಾಗಿ ಸದ್ಯ ಧಾರಾವಾಹಿಯಲ್ಲಿ ವಿಲನ್‌ ಪರಿಚಯ ಆಗಿದೆ.

ನಟ ಕಂಠಿಗೆ ಈ ವಿಲನ್ ಇಂದ ಹೊಸ ತಲೆನೋವು ಶುರುವಾಗಿದೆ. ಯಾಕೆಂದರೆ ಈ ವಿಲನ್ ಕಂಠಿ ಪಾಲಿಗೆ ಆರಾಧ್ಯ ದೈವ. ಹಾಗಾಗಿ ಸದ್ಯ ಕಂಠಿ ಕೈ ಕಟ್ಟಿ ಹಾಕಲಾಗಿದೆ. ಏನೂ ಮಾಡದ ಪರಿಸ್ಥಿತಿಯಲ್ಲಿ ಕಂಠಿ ಇದ್ದಾನೆ.

ಅಮ್ಮನ ವಿರುದ್ಧ ನಿಲ್ಲುತ್ತಾನಾ ಕಂಠಿ?

ಅಮ್ಮನ ವಿರುದ್ಧ ನಿಲ್ಲುತ್ತಾನಾ ಕಂಠಿ?

ಪುಟ್ಟಕ್ಕನ ಎರಡನೇ ಮಗಳೂ ಸ್ನೇಹ ಹಿಂದೆ ಬಿದ್ದಿದ್ದಾನೆ ಕಂಠಿ. ಕಂಠಿಗೆ ಸ್ನೇಹ ಎಂದರೆ ಪ್ರಾಣ. ಒಂದು ದಿನ ಸ್ನೇಹ ಕಾಣಿಸಿಲ್ಲ ಅಂದರೆ ನಮ್‌ ಹೀರೋಗೆ ನಿದ್ದೆ ಬರೋದೇ ಇಲ್ಲ. ಆದರೆ ಪ್ರೀತಿ ಆರಂಭದಲ್ಲೇ ವಿಲನ್‌ ಎಂಟ್ರಿ ಆಗಿದೆ. ಇವರ ಪ್ರೀತಿಗೆ ಮತ್ಯಾರು ವಿಲನ್ ಅಲ್ಲ. ಅವರ ಸ್ವತಃ ಕಂಠಿ ತಾಯಿಯೇ ಇವರ ಪ್ರೀತಿಗೆ ವಿಲನ್. ಹಾಗಾಗಿ ಇದು ನಾಯಕ ನಟನಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಕಂಠಿ ಪ್ರೀತಿ ಉಳಿಸಿಕೊಳ್ಳ ಬೇಕು ಅಂದರೆ ಅಮ್ಮನ ವಿರುದ್ಧ ನಿಲ್ಲಬೇಕು. ಇಲ್ಲವಾದರೆ ತನ್ನ ಪ್ರೀತಿ ತ್ಯಾಗ ಮಾಡಬೇಕು.

ಕಂಠಿ ತಾಯಿಯ ದೃಷ್ಟಿಯಲ್ಲಿ ಕೆಟ್ಟವಳಾದ ಸ್ನೇಹ!

ಕಂಠಿ ತಾಯಿಯ ದೃಷ್ಟಿಯಲ್ಲಿ ಕೆಟ್ಟವಳಾದ ಸ್ನೇಹ!

ಕಂಠಿ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡುವ ಸ್ನೇಹ, ಕಂಠಿ ತಾಯಿಯ ಕಣ್ಣಲ್ಲಿ ವಿಲನ್ ಆಗಿದ್ದಾಳೆ. ಮೊದಲ ಭೇಟಿಯಲ್ಲೇ ಇಬ್ಬರ ನಡುವೆ ಜಗಳ ಆಗಿದೆ. ಹಾಗಾಗಿ ಸ್ನೇಹ ಬಗ್ಗೆ ಕಂಠಿ ತಾಯಿಗೆ ಒಳ್ಳೆ ಅಭಿಪ್ರಾಯ ಇಲ್ಲದಂತೆ ಆಗಿದೆ. ಕಂಠಿಯ ಎದುರೆ ಅವರ ತಾಯಿ ಸ್ನೇಹಳಿಗೆ ಬೈತಾರೆ. ಇದರಿಂದ ಕಂಠಿ ಕಂಗಾಲಾಗಿದ್ದಾನೆ.

ಸಂಕಷ್ಟದಲ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿ ನಟ ಕಂಠಿ!

ಸಂಕಷ್ಟದಲ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿ ನಟ ಕಂಠಿ!

ಸದ್ಯ ತನ್ನ ಪ್ರೀತಿ ವಿಚಾರದಲ್ಲಿ ಕಂಠಿ ದೊಡ್ಡ ಸಂಕಷ್ಟಕ್ಕೆ ಸಿಲುಕಿದ್ದಾನೆ. ಧಾರಾವಾಹಿಯಲ್ಲಿ ಪ್ರೇಮ್ ಕಹಾನಿ ಆರಂಭ ಆಗುತ್ತಲೇ, ವಿಗ್ನ ಎದುರಾಗಿದೆ. ಅದು ಅಂತಿಂಥ ವಿಗ್ನ ಅಲ್ಲ. ಕಂಠಿ ದೇವರ ಹಾಗೆ ಪೂಜಿಸೋ ಅವರ ತಾಯಿಯೇ ಪ್ರೀತಿಗೆ ಅಡ್ಡಗಾಲು ಹಾಕಿದ್ದಾರೆ. ಹಾಗಾಗಿ ಇದು ಕಂಠಿಗೆ ದೊಡ್ಡ ಸಮಸ್ಯೆ ಆಗಿ ಕಾಡುತ್ತಿದೆ. ಇದನ್ನು ಹೇಗೆ ಸರಿ ಪಡಿಸುವುದು ಎನ್ನುವ ಸಂಕಷ್ಟ ಕಂಠಿಗೆ ಎದುರಾಗಿದೆ.

ಕಂಠಿ ಲವ್ ಸ್ಟೋರಿ ಮುಂದೇ ಏನಾಗಬಹುದು!

ಕಂಠಿ ಲವ್ ಸ್ಟೋರಿ ಮುಂದೇ ಏನಾಗಬಹುದು!

ಸದ್ಯ ಧಾರಾವಾಹಿಯಲ್ಲಿ ಒಂದು ಕಡೆ ಪುಟ್ಟಕ್ಕನ ಸವತಿ ಮತ್ತು ಪತಿ ಕಾಟ ಕೊಡುತ್ತಿದ್ದರೆ. ಮತ್ತೊಂದು ಕಡೆ ಕಂಠಿ ಪ್ರೇಮದ ಕಹಾನಿ ಸಾಗಿದೆ. ಇನ್ನು ಪುಟ್ಟಕ್ಕನ ಪರವಾಗಿ ಹೊರಾಡಲು ಸ್ನೇಹ ಇದ್ದಾಳೆ. ಆದರೆ ಕಂಠಿ ತನ್ನ ಪ್ರೀಯನ್ನು ಅಮ್ಮನಲ್ಲಿ ಹೇಳಿಕೊಳ್ಳುವ ಧೈರ್ಯ ಇಲ್ಲ. ಹಾಗಾಗಿ ಒಂದು ತಾನು ತನ್ನ ಪ್ರೀತಿಯನ್ನು ತ್ಯಾಗ ಮಾಡಬೇಕು. ಇಲ್ಲವಾದರೆ ಅಮ್ಮನಿಗೆ ಸ್ನೇಹ ಮೇಲೆ ಉತ್ತಮ ಭಾವನೆ ಬರುವ ಹಾಗೆ ಮಾಡಬೇಕು. ಅಥವ ಕಂಠಿ ತಾಯಿಗೆ ಸ್ನೇಹಳ ನಿಜ ಗುಣದ ಬಗ್ಗೆ ತಿಳಿಯುವ ಹಾಗೆ ಮಾಡಬೇಕು. ಇದಕ್ಕೆ ಧಾರಾವಾಹಿಯಲ್ಲಿ ಇನ್ನು ಸಮಯ ಬೇಕಾಗುತ್ತದೆ. ಅಷ್ಟರಲ್ಲಿ ಅದೆಷ್ಟು ಟ್ವಿಸ್ಟ್‌ಗಳು ಬರುತ್ತವೆ ಎನ್ನುವುದನ್ನು ನೋಡಬೇಕು.

More from Filmibeat

English summary
Puttakkana Makkalu Tv Serial Hero Kanti Is In Big Trouble, How He Deal With It,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X