Puttakkana Makkalu: ಕಡೆಗೂ ಸಿಕ್ಕಳು ಸಹನಾ; ಆದ್ರೆ ಪುಟ್ಟಕ್ಕ ಹುಡುಕಿದ್ದೇಗೆ ಅಂತ ಎಪಿಸೋಡ್‌ನಲ್ಲೇ ನೋಡ್ಬೇಕು!

By ಎಸ್ ಸುಮಂತ್

ಪುಟ್ಟಕ್ಕನ ಮಕ್ಕಳು ಶುರುವಾಗಿ ವರ್ಷಗಳೇ ಉರುಳುತ್ತಿವೆ. ಆದರೆ ಇಂದಿಗೂ ತನ್ನ ಟಿಆರ್‌ಪಿಯಲ್ಲಿ ಕೊಂಚವೂ ಇಳಿಕೆ ಕಂಡಿಲ್ಲ. ಆಗಾಗ ಏರುಪೇರಾಗುತ್ತಿರುತ್ತೆ. ಆದರೂ ಮತ್ತೆ ನಂಬರ್ ಒನ್ ಪಟ್ಟಕ್ಕೆ ಬಂದು ಕುಳಿತುಕೊಳ್ಳುತ್ತದೆ. ಯಾಕಂದ್ರೆ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಟ್ವಿಸ್ಟ್ ಗಳು ಆ ರೀತಿ ಇರುತ್ತವೆ. ಬಂಗಾರಮ್ಮ ಕಿಡ್ನ್ಯಾಪ್ ಆಗಿದ್ದಾರೆ. ಸಹನಾ ಮನೆ ಬಿಟ್ಟು ಹೋಗಿದ್ದಾಳೆ. ಸುಮನಾ ಅವ್ವನಿಗೆ ಕೊಟ್ಟ ಮಾತು ತಪ್ಪಿ ಲವ್ವಲ್ಲಿ ಬಿದ್ದಿದ್ದಾಳೆ. ಅತ್ತ ಪುಟ್ಟಕ್ಕ ಮಗಳನ್ನು ಹುಡುಕಿಕೊಂಡು ಹೊರಟಿದ್ದಾಳೆ.

ಹೆತ್ತ ಕರುಳಿಗೆ ಮಕ್ಕಳ ನೋವು ತಿಳಿಯದೆ ಇರುವುದಿಲ್ಲ. ಹೀಗಾಗಿ ಸಹನಾ ಸತ್ತಿದ್ದಾಳೆ ಎಂದು ಎಲ್ಲರು ಭಾವಿಸಿದ್ದರು. ಮಗಳು ಸತ್ತಿಲ್ಲ ಎಂದೇ ಪುಟ್ಟಕ್ಕನ ಮನಸ್ಸು ಹೇಳುತ್ತಿತ್ತು. ಕೊರವಂಜಿ ಕೂಡ ಆಗಾಗ ಅದನ್ನೇ ಹೇಳಿದ್ದರು. ದೇವರ ಮೇಲೆ ಭಾರ ಹಾಕಿ ಮಗಳನ್ನು ಹುಡುಕಿಕೊಂಡು ಪುಟ್ಟಕ್ಕ ಹೊರಟಿದ್ದಾಳೆ. ರಾತ್ರೋ ರಾತ್ರಿ ಮನೆ ಬಿಟ್ಟಿದ್ದಾಳೆ.

Puttakkana makkalu Umashree hints on next episode with Photo

ತಾನೇ ಬೆಂಗಳೂರಿಗೆ ಹೊರಟ ಪುಟ್ಟಕ್ಕ

ಸಹನಾ ತಾನು ದುಡಿದ ಹಣದಲ್ಲಿ ಅವ್ವನಿಗೆ ಏನಾದರೂ ಕೊಡಬೇಕೆಂದುಕೊಂಡಳು. ಅದಕ್ಕೆಂದೆ ಒಂದೊಳ್ಳೆ ಸೀರೆ ತೆಗೆದುಕೊಂಡು, ಮ್ಯಾಕ್ಸಿ ಬಳಿ ಕೊಟ್ಟು ಕಳುಹಿಸಿದಳು. ಮ್ಯಾಕ್ಸಿ ಮೊದಲೇ ಪುಟ್ಟಕ್ಕನ ಮೆಸ್‌ಗೆ ಹೋಗಿ, ವಿಡಿಯೋ ಮಾಡಿ ಬಂದಿದ್ದ. ಹೀಗಾಗಿ ಮ್ಯಾಕ್ಸಿ ಆ ಸೀರೆಯನ್ನು ಕೊಟ್ಟು ಬಂದಿದ್ದ. ಅವನಿಂದ ಮಗಳ ಸುಳಿವು ಸಿಗುತ್ತೆ ಎಂಬುದು ಪುಟ್ಟಕ್ಕನಿಗೆ ಗೊತ್ತಾಯ್ತು. ಆದ್ರೆ ಅವನ ನಂಬರ್ ಸಿಗಲೇ ಇಲ್ಲ.

ಇನ್ಸ್ಟಾದಲ್ಲಿ ಹಂಚಿಕೊಂಡ ಪುಟ್ಟಕ್ಕ

ಸಹನಾ ಬದುಕಿದ್ದಾಳೆಂದರೆ ಯಾರೂ ನಂಬುತ್ತಿಲ್ಲ. ಅದಕ್ಕೆ ಪುಟ್ಟಕ್ಕನೇ ಹುಡುಕುವುದಕ್ಕೆ ಹೊರಟಿದ್ದಾಳೆ. ಪುಟ್ಟಕ್ಕ ಮನೆ ಬಿಟ್ಟು ಹೋಗಿರುವುದು ಸುಮಾಳಿಂದ ಗೋಪಾಲನಿಗೆ ತಿಳಿದಿದೆ. ಈಗ ಪುಟ್ಟಕ್ಕನಿಗೆ ಮಗಳು ಸಿಗುವುದು ಖಾತ್ರಿಯಾಗಿದೆ. ಪುಟ್ಟಕ್ಕನ ಪಾತ್ರ ಮಾಡಿರುವ ಉಮಾಶ್ರೀ ಅವರು, ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್ ನಲ್ಲಿ ಮ್ಯಾಕ್ಸಿ, ಸಹನಾ, ಸಹನಾ ಜೊತೆಗೆ ಕೆಲಸ ಮಾಡುವ ಹುಡುಗನ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

ಪುಟ್ಟಕ್ಕನ ಫ್ಯಾನ್ಸ್ ಖುಷಿ

ಈ ಫೋಟೋ ನೋಡಿ ಫ್ಯಾನ್ಸ್ ಖುಷಿಯಾಗಿದ್ದಾರೆ. ಕಡೆಗೂ ಪುಟ್ಟಕ್ಕನ ನಂಬಿಕೆ ನಿಜವಾಗಿದೆ. ಪುಟ್ಟಕ್ಕನಿಗೆ ಮಗಳು ಸಿಕ್ಕಿದ್ದಾಳೆಂದು ಖುಷಿ ಪಟ್ಟಿದ್ದಾರೆ. ಜೊತೆಗೆ ಆ ಫೋಟೋ ನೋಡುವುದಕ್ಕೇನೆ ಖುಷಿಯಾಗುತ್ತದೆ ಎಂದು ಕಮೆಂಟ್ ಹಾಕುತ್ತಿದ್ದಾರೆ. ಸಹನಾ ಪುಟ್ಟಕ್ಕನಿಗೇನೋ ಸಿಕ್ಕಿದ್ದಾಯ್ತು. ಆದರೆ ವಾಪಾಸ್ ಊರಿಗೆ ಬರುತ್ತಾಳಾ? ಇಲ್ಲ ಅಲ್ಲಿಯೇ ಇದ್ದು ಏನಾದರೂ ಸಾಧಿಸುತ್ತಾಳಾ? ಎಂಬುದನ್ನು ನೋಡಬೇಕು. ಅವ್ವನಿಗೆ ಮಗಳು ಬದುಕಿದ್ದಾಳೆ ಎಂಬ ವಿಚಾರವೇ ನೆಮ್ಮದಿ ತಂದಿದೆ. ಊರಿಗೆ ಬರಲ್ಲ ಅಂದರು ಪುಟ್ಟಕ್ಕ ಬೆಂಬಲ ನೀಡಬಹುದು.

Puttakkana makkalu Umashree hints on next episode with Photo

ಪುಟ್ಟಕ್ಕನಿಗೆ ಸಿಕ್ಕಿದ್ದೇಗೆ ಸಹನಾ?

ಅಂದು ಕಂಠಿಯ ಜೊತೆಗೆ ಹೋದಾಗಲೇ ಸಹನಾ ಸಿಕ್ಕಿರಲಿಲ್ಲ. ಈಗ ಪುಟ್ಟಕ್ಕ ಒಬ್ಬಳೇ ಹೋಗಿ ಹುಡುಕಿದ್ದೇಗೆ ಎಂಬುದೇ ಕುತೂಹಲ. ಇತ್ತ ಪುಟ್ಟಕ್ಕ ಕಾಣಿಸುತ್ತಿಲ್ಲ ಎಂಬುದು ಸುಮ ಹಾಗೂ ಗೋಪಾಲನಿಗಷ್ಟೇ ಗೊತ್ತು. ಇನ್ನು ಎಲ್ಲರಿಗೂ ಗೊತ್ತಾದರೆ ಎಷ್ಟು ಗಾಬರಿಯಾಗುತ್ತಾರೆ. ಹುಡುಕಾಟ ಹೇಗಿರುತ್ತೆ, ಅಲ್ಲಿ ಮಗಳನ್ನು ಕಂಡಾಗ ಪುಟ್ಟಕ್ಕನ ಸಂತೋಷ, ದುಃಖ ಎಲ್ಲವೂ ಹೇಗೆ ಒಟ್ಟಾಗಿ ಬರಲಿದೆ. ಮೊದಲೇ ಆ ಪಾತ್ರವನ್ನು ಮಾಡಿರುವುದು ಉಮಾಶ್ರೀ ಅವರು. ಈ ಎಲ್ಲಾ ಭಾವನೆಗಳನ್ನು, ತೊಳಲಾಟಗಳನ್ನು ನೋಡಬೇಕೆಂದರೆ ಎಪಿಸೋಡಿನಲ್ಲಿ ಬರುವ ತನಕ ಕಾಯಲೇಬೇಕು. ಆದರೆ ಈಗ ಸಿಕ್ಕಿದ್ದು ಬರೀ ಫೋಟೋ ಮಾತ್ರ. ಫೋಟೋ ಕೂಡ ಭರವಸೆಯನ್ನೇ ಹುಟ್ಟಿಸಿದೆ.

More from Filmibeat

English summary
zee kannada puttakkana makkalu Written Update on Umashre social media. Here is the details about Umashree share special photo
Read more about: filmbeat original tv sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X