Hamsa narayanaswamy: ಶತ್ರು ಎಂದು ಭಾವಿಸಿರುವ ರಾಜಿಗೆ ಮೇಕಪ್ ಮಾಡಿದ ಪುಟ್ಟಕ್ಕ!

By ಎಸ್ ಸುಮಂತ್

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಟಿಆರ್‌ಪಿಯಲ್ಲೂ ಮುಂದಿದೆ. ಕುಟುಂಬದ ಸುಖ-ದುಃಖ, ನೋವು-ನಲಿವನ್ನು ತೋರಿಸಲಾಗುತ್ತದೆ. ಅದ್ಯಾವುದು ಸ್ಕ್ರಿಪ್ಟೆಡ್ ಅನ್ನಿಸುವುದೇ ಇಲ್ಲ‌. ತಮ್ಮದೇ ಮನೆಯಲ್ಲೋ ಅಥವಾ ಅಕ್ಕ ಪಕ್ಕದ ಮನೆಯಲ್ಲೋ ನಡೆದಂತೆ ಭಾಸವಾಗುತ್ತದೆ. ಹೀಗಾಗಿ ಪುಟ್ಟಕ್ಕ ಎಲ್ಲರ ಅಚ್ಚುಮೆಚ್ಚಾಗಿದ್ದಾಳೆ‌.

ಪುಟ್ಟಕ್ಕನನ್ನು ಕಂಡರೆ ಇಡೀ ಊರಿಗೆ ಊರೇ ಗೌರವ ಕೊಡುತ್ತದೆ, ಪ್ರೀತಿ ನೀಡುತ್ತದೆ. ಆದರೆ ಊರಲ್ಲಿ ಯಾರಾದರೂ ಪುಟ್ಟಕ್ಕನನ್ನು ದ್ವೇಷ ಮಾಡುತ್ತಾರೆ ಎಂದರೆ ಅದು ರಾಜಿ ಮಾತ್ರ. ಪುಟ್ಟಕ್ಕನ ಎಲ್ಲಾ ಸುಖ ಸಂತೋಷವನ್ನು ಕಿತ್ತುಕೊಂಡಿದ್ದೆ ಈ ರಾಜಿ. ಆದರೆ ರಾಜಿಯನ್ನು ಕಂಡು ಪುಟ್ಟಕ್ಕ ಯಾವತ್ತಿಗೂ ಕೋಪ ಮಾಡಿಕೊಂಡಿದ್ದೇ ಇಲ್ಲ. ಸಮಾಧಾನವಾಗಿಯೇ ಉತ್ತರ ನೀಡುತ್ತಿದ್ದಳು, ತಪ್ಪನ್ನ ತಿದ್ದಿ ಹೇಳುತ್ತಿದ್ದಳು. ಆದರೂ ದ್ವೇಷವನ್ನೇ ಹೆಚ್ಚಾಗಿ ಸಾಧಿಸುತ್ತಿದ್ದ ರಾಜಿಗೆ ಈಗ ಪುಟ್ಟಕ್ಕನೇ ಮೇಕಪ್ ಮಾಡುವಂತೆ ಆಗಿದೆ.

Puttakkana Makkalu Umashree turns a makeup artist for Hamsa narayanaswamy

ರಾಜಿಗಾಗಿ ಒಳಿತನ್ನೇ ಮಾಡುವ ಪುಟ್ಟಕ್ಕ

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ರಾಜಿ ಕೆಡುಕು ಮನಸ್ಥಿಯವಳು. ಪುಟ್ಟಕ್ಕ ನೆಮ್ಮದಿಯಿಂದ ಇರುವುದು ಅವಳಿಗೆ ಇಷ್ಟವಿಲ್ಲ‌. ರಾಜಿಯದ್ದು ಜೋರು ಬಾಯಿ. ಪುಟ್ಟಕ್ಕ ನೆಲ ಕಚ್ಚಬೇಕು ಅಂತಾನೇ ಬಯಸುತ್ತಾಳೆ‌. ಅದಕ್ಕೆಂದೆ ಪುಟ್ಟಕ್ಕನ ಗಂಡನನ್ನೇ ಮದುವೆಯಾದ್ಲು. ಆದರೆ ಇದ್ಯಾವುದಕ್ಕೂ ಪುಟ್ಟಕ್ಕ ಎದೆಗುಂದದೆ ಮೂರು ಮಕ್ಕಳನ್ನು ಸಾಕಿದಳು. ಇದ್ಯಾವುದನ್ನು ರಾಜಿಯಿಂದ ಸಹಿಸುವುದಕ್ಕೆ ಆಗುತ್ತಿಲ್ಲ.

ಪುಟ್ಟಕ್ಕನೇ ಮೇಕಪ್ ಆರ್ಟಿಸ್ಟ್

ಪುಟ್ಟಕ್ಕನ ಮೇಲೆ ರಾಜಿ ಸದಾ ಕೆಂಡಕಾರುವುದು, ಕೇವಲ ಧಾರಾವಾಹಿಯಲ್ಲಿ ಮಾತ್ರ. ಆದರೆ ಕ್ಯಾಮರಾ ಆಫ್ ಆದ ಮೇಲೆ ಇಡೀ ಸೆಟ್‌ನಲ್ಲಿರುವವರೆಲ್ಲಾ ಆತ್ಮೀಯವಾಗಿಯೇ ಇರುತ್ತಾರೆ. ಹೇಳಿ ಕೇಳಿ ಈ ಧಾರಾವಾಹಿಯಲ್ಲಿ ದೊಡ್ಡ ದೊಡ್ಡವರೇ ನಟಿಸುತ್ತಿದ್ದಾರೆ. ಹೀಗಾಗಿ ಚಿಕ್ಕವರು ದೊಡ್ಡವರಿಂದ ಕಲಿಯುತ್ತಾರೆ, ದೊಡ್ಡವರು ದೊಡ್ಡವರ ಜೊತೆಗೆ ಒಳ್ಳೆಯ ಒಡನಾಟ ಹೊಂದಿದ್ದಾರೆ. ಹಾಗೇ ಪುಟ್ಟಕ್ಕನ ಪಾತ್ರಧಾರಿ ಉಮಾಶ್ರೀ ಅವರು, ರಾಜೀ ಪಾತ್ರಧಾರಿ ಹಂಸ ನಾರಾಯಣ ಅವರು ಒಳ್ಳೆಯ ಒಡನಾಟ ಹೊಂದಿದ್ದಾರೆ ಎಂಬುದಕ್ಕೆ ಈ ಒಂದು ವಿಡಿಯೋ ಉದಾಹರಣೆ. ಉಮಾಶ್ರೀ ಅವರೇ ಹಂಸ ಅವರಿಗೆ ಮೇಕಪ್ ಮಾಡಿದ್ದಾರೆ.

Puttakkana Makkalu Umashree turns a makeup artist for Hamsa narayanaswamy

ದುಷ್ಮನಿ ಕ್ಯಾಮರಾ ಮುಂದೆ ಮಾತ್ರ

ಹಿಂದಿನಿಂದಲೂ ಅದೇ ತರ. ತೆರೆ ಮೇಲೆ ಕಂಡಂತೆ ತೆರೆ ಹಿಂದೆ ಆ ವ್ಯಕ್ತಿತ್ವ ಇರುವುದಿಲ್ಲ. ಕ್ಯಾಮರಾ ಮುಂದೆ ಬರೀ ಪಾತ್ರವಾಗಿ ಅಷ್ಟೇ ಎಲ್ಲರನ್ನು ಕಾಡುತ್ತಾರೆ. ಅದು ನೆಗೆಟಿವ್ ಆಗಿರಬಹುದು ಅಥವಾ ಪಾಸಿಟಿವ್ ಆಗಿರಬಹುದು. ಅದೇ ಥರ ರಾಜಿ ಹಾಗೂ ಪುಟ್ಟಕ್ಕ ಧಾರಾವಾಹಿ ಒಳಗೆ ಪಾತ್ರವಾಗಿ ನಮ್ಮೆಲ್ಲರ ಕಣ್ಣಿಗೆ ಕಾಣಿಸುತ್ತಾರೆ. ಅದನ್ನು ಹೊರತುಪಡಿಸಿ ನೋಡಿದಾಗಲೆ ಅವರ ಒಡನಾಟ ತಿಳಿಯುವುದು. ಅದರಲ್ಲೂ ಅವರ ಸೋಷಿಯಲ್ ಮೀಡಿಯಾ ನೋಡಿದರೆ ಅವರ ಟ್ರಿಪ್, ಜೊತೆಯಾಗುವುದು ಎಲ್ಲವೂ ತಿಳಿಯುತ್ತದೆ.

ಪುಟ್ಟಕ್ಕನ ಮುಗ್ಧತೆ ಬಹುಪರಾಕ್

ರಾಜಿ ಕಂಡರೆ ಸುಮಾರು ಪ್ರೇಕ್ಷಕರಿಗೆ ಇಷ್ಟವಾಗುವುದಿಲ್ಲ. ಪುಟ್ಟಕ್ಕನಿಗೆ ತೊಂದರೆ ಕೊಡುತ್ತಾಳೆಂದು. ಆದರೆ ಈ ವಿಡಿಯೋ ನೋಡೊದ ನೆಟ್ಟಿಗರು ಖುಷಿ ಪಟ್ಟಿದ್ದಾರೆ. ಸದಾ ಕಾಲ ಹೀಗೆ ಖುಷಿ ಖುಷಿಯಾಗಿ ಇರಿ ಎಂದು ಹಾರೈಸಿದ್ದಾರೆ. ಇಬ್ಬರ ವಿಡಿಯೋಗೆ ಬಹುಪರಾಕ್ ಹಾಕಿದ್ದಾರೆ. ಇದು ಎಂಥ ಸೌಭಾಗ್ಯವೋ. ಉಮಾಶ್ರೀ ಅಮ್ಮ ನೀವು ಬಿಡಿ ಸೂಪರ್. ಎಲ್ಲದರಲ್ಲೂ ನೀವೂ ಮುಂದು ಎಂದೆಲ್ಲಾ ಹೊಗಳಿದ್ದಾರೆ. ಉಮಾಶ್ರೀ ಅವರು ಹಂಸ ಅವರಿಗೆ ಕಾಜಲ್ ಹಚ್ಚಿದ್ದಾರೆ. ಈ ವಿಡಿಯೋ ಸಾಕಷ್ಟು ಜನ ಮೆಚ್ಚುಗೆಗೆ ಪಾತ್ರವಾಗಿದೆ.

More from Filmibeat

English summary
Puttakkana makkalu serial update, Here is the details about Hamsa narayanaswamy new video;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X