'ಪುಟ್ಟಕ್ಕನ ಮಕ್ಕಳು' ಊರ ಪಂಚಾಯಿತಿಯಲ್ಲಿ ಯಾರಿಗೆ ಸಿಗಲಿದೆ ನ್ಯಾಯ?

By Poorva

ಉಮಾಶ್ರೀ ಮೂರು ಹೆಣ್ಣು ಮಕ್ಕಳ ತಾಯಿಯಾಗಿ ನಟಿಸಿದ್ದಾರೆ. 'ಪುಟ್ಟಕ್ಕನ ಮಕ್ಕಳು' ಸಂಚಿಕೆ ಬಹಳ ಇಂಟ್ರೆಸ್ಟಿಂಗ್ ಆಗಿ ಮೂಡಿಬಂದಿದೆ. ಕಿರುತೆರೆ ವೀಕ್ಷಕರಿಗೆ ಮುಂದೇನು ನಡೆಯಬಹುದು ಎಂಬ ಕುತೂಹಲ ಕಾಡುತ್ತಿದೆ. ಟಿವಿ ಮುಂದೆ ಕೂತರೆ ಅರ್ಧಗಂಟೆ ಹೇಗೆ ಕಳೆದುಹೋಯಿತು ಅನ್ನೋದೆ ಗೊತ್ತಾಗದ ಮಟ್ಟಿಗೆ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ವೀಕ್ಷಕರ ಮನ ಗೆದ್ದಿದೆ ಎಂದು ಹೇಳಿದರೂ ತಪ್ಪಾಗಲ್ಲ. ಜೀ ವಾಹಿನಿಯಲ್ಲಿ ಪ್ರತಿ ದಿನ 7.30ಕ್ಕೆ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಪ್ರಸಾರವಾಗುತ್ತದೆ.

ಇಂದಿನ ಸಂಚಿಕೆಯಲ್ಲಿ(ಮಾರ್ಚ್ 17) ರಾಜೇಶ್ವರಿ ಕುತಂತ್ರಕ್ಕೆ ಪುಟ್ಟಕ್ಕ ನಲುಗಿ ಹೋಗಿರುವುದಂತೂ ಸತ್ಯ. ಪುಟ್ಟಕ್ಕನನ್ನ ಪಂಚಾಯತಿಗೆ ಕರೆದಿದ್ದಾಳೆ ಸವುತಿ ರಾಜೇಶ್ವರಿ. ಮೂರು ಜನ ಹೆಣ್ಣು ಮಕ್ಕಳು ಆದವು ಅಂತ ಹೇಳಿ ಪುಟ್ಟಕ್ಕನ ಗಂಡ ಬಿಟ್ಟು ಹೋಗಿ ಬೇರೆ ಮದುವೆ ಮಾಡಿಕೊಂಡ. ಆದರೆ, ಪುಟ್ಟಕ್ಕ ಬದುಕಿನ ಬಂಡಿ ಸಾಗಿಸಲು ಅದೆಷ್ಟು ಬಾಧೆ ಪಟ್ಟರೋ? ಇದೇ ಪಂಚಾಯತಿಯಲ್ಲಿ ಪುಟ್ಟಕ್ಕ ತನ್ನ ಗಂಡನನ್ನು ಬೇರೆಯವರಿಗೆ ಬಿಟ್ಟು ಕೊಡುವ ಪರಿಸ್ಥಿತಿ ಪುಟ್ಟಕ್ಕನಿಗೆ ಎದುರಾಗಿತ್ತು . ಈ ಬಾರಿಯ ಪಂಚಾಯತಿಯಲ್ಲಿ ಕೂಡ ತನ್ನ ಮನೆ ಕೈ ತಪ್ಪಿ ಹೋಗೋ ಪರಿಸ್ಥಿತಿ ಪುಟ್ಟಕ್ಕನಿಗೆ ಎದುರಾಗಿದೆ.

ಪುಟ್ಟಕ್ಕ ತನ್ನ ಕಾಲಿಗೆ ಬಿದ್ದು ಕ್ಷಮೆ ಯಾಚಿಸಬೇಕು ಎಂದು ರಾಜೇಶ್ವರಿ ಶತಾಯಗತಾಯ ಪ್ರಯತ್ನ ಪಡುತ್ತಿದ್ದಾಳೆ. ಆದರೆ ಸತ್ಯ ಅನ್ನೋದು ಪುಟ್ಟಕ್ಕನ ಕೈ ಬಿಡಲ್ಲ ಎನ್ನುವುದು ವೀಕ್ಷಕರ ನಂಬಿಕೆ. ಪುಟ್ಟಕ್ಕನ ಎರಡನೇ ಮಗಳು ಸ್ನೇಹಾನನ್ನು ಕೆಲಸದ ನಿಮಿತ್ತ ಮೈಸೂರಿಗೆ ಕಳುಹಿಸಿಕೊಟ್ಟಿದ್ದಾರೆ ಪುಟ್ಟಕ್ಕ. ಹಾಗಾದ್ರೆ ನಾಳಿನ ಸಂಚಿಕೆಯಲ್ಲಿ ಪುಟ್ಟಕ್ಕನ್ನ ಈ ಧರ್ಮ ಸಂಕಟದಿಂದ ಯಾರೂ ಪಾರು ಮಾಡುತ್ತಾರೆ. ಪಂಚಾಯತಿಯಲ್ಲಿ ಬಡ್ಡಿ ಬಂಗಾರಮ್ಮ ಕೇಳಿದ ಒಂದೇ ಒಂದು ಪ್ರಶ್ನೆಗೆ ಪುಟ್ಟಕ್ಕ ಸರಿಯಾದ ಉತ್ತರ ನೀಡಿಲ್ಲ ಎಂದು ರಾಜೇಶ್ವರಿ ಪರ ತೀರ್ಪು ನೀಡಲು ಮುಂದಾದ ಬಂಗಾರಮ್ಮಗೆ ಸತ್ಯದ ಅರಿವು ಆಗುತ್ತಾ? ಅನ್ನೋದು ಕುತೂಹಲ.

Puttakkana Makkalu Written update on March 17th

ಪುಟ್ಟಕ್ಕ ಅತ್ತು ಅತ್ತು ಮುಂದೇನು ಎಂಬ ಆತಂಕದಲ್ಲೇ ಅರ್ಧ ಸೊರಗಿದ್ದಾರೆ. ಗಂಡನ ಕಥೆ ಹೀಗೆ ಎಂದು ತಿಳಿದ ಮೇಲಂತೂ ಪುಟ್ಟಕ್ಕ ಯಾವತ್ತೂ ಗಂಡನೊಂದಿಗೆ ಸರಿಯಾಗಿ ಮಾತಾಡಿಲ್ಲ. ದೇವಸ್ಥಾನದ ಬಳಿ ಗಂಡನನ್ನು ಭೇಟಿಯಾಗಿ ಪರಿ ಪರಿಯಾಗಿ ವಿನಂತಿಸಿದರು . ಬೇಡಯ್ಯ ಹೀಗೆಲ್ಲಾ ಮಾಡಬೇಡ ಎಂದರೂ, ಗಂಡನ ಕಠೋರ ಮನಸ್ಸು ಎರಡನೇ ಹೆಂಡತಿ ಮಾತು ಮಾತ್ರ ಕೇಳುತ್ತಿತ್ತು. ಗಂಡ ಹೆಂಡತಿ ಇಬ್ಬರೂ ಬಗೆಹರಿಸಬಹುದಾದ ವಿಷಯವನ್ನು ಊರಿನವರೆಲ್ಲರ ಎದುರು ಪಂಚಾಯಿತಿ ಮಾಡುವ ಪರಿಸ್ಥಿತಿ ಎದುರಾಗಿದೆ.

More from Filmibeat

English summary
kannada serial puttakkana makkalu March 17th episode. Here is more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X