Puttakkana Makkalu: 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ನಡೆದು ಬಿಡುತ್ತಾ ಪವಾಡ?
ಜನ ಮೆಚ್ಚಿದ ಧಾರಾವಾಹಿ 'ಪುಟ್ಟಕ್ಕನ ಮಕ್ಕಳು' ಬಹಳ ಅದ್ಭುತವಾಗಿ ಮೂಡಿಬರುತ್ತಿದೆ. ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಟ್ಟು ಜನರ ಮನ ತಣಿಸುತ್ತಿದ್ದಾರೆ. ರಂಗಭೂಮಿ , ಚಲನಚಿತ್ರ ನಟಿ ಉಮಾಶ್ರೀ ನಟಿಸಿರುವ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಬಹಳ ಅದ್ಭುತವಾಗಿ ಮೂಡಿ ಬರುತ್ತಿದೆ.
ರಂಗಭೂಮಿ , ಚಲನಚಿತ್ರ ನಟಿಯಾದ ಉಮಾಶ್ರೀ ನಟಿಸಿರುವ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಬಹಳ ಅದ್ಭುತವಾಗಿ ಮೂಡಿ ಬರುತ್ತಿದೆ. ಪ್ರತಿ ದಿನ ಸಂಜೆ ಆಗುತ್ತಲೇ ಪುಟ್ಟಕ್ಕನ ಮಕ್ಕಳು ತಮ್ಮ ಜೀವನದ ಕಥೆಯೊಂದಿಗೆ ನಿಮ್ಮ ಮುಂದೆ ಹಾಜರಾಗಿ ಬಿಡುತ್ತಾರೆ. ದಿನವೂ ಧಾರಾವಾಹಿಯಲ್ಲಿ ಒಂದಲ್ಲಾ ಒಂದು ರೋಚಕ ಘಟನೆಗಳು ನಡೆಯುತ್ತಲೇ ಇರುತ್ತವೆ. ಈ ಧಾರಾವಾಹಿಯಲ್ಲಿ ಈಗ ಹೊಸದೊಂದು ಟ್ವಿಸ್ಟ್ ಸಿಕ್ಕಿದೆ. ಬಂಗಾರಮ್ಮನ ಮಗ ಕಂಠಿ ಹೇಗಾದರೂ ಮಾಡಿ ಪುಟ್ಟಕ್ಕನ ಮರ್ಯಾದೆ ಉಳಿಸಿಕೊಡಬೇಕು ಎಂದು ರಾತ್ರಿ ಎಲ್ಲಾ ಕಷ್ಟ ಪಟ್ಟು 10 ಲಕ್ಷ ಕದ್ದ ಕಳ್ಳನನ್ನು ಹುಡುಕಿದ್ದಾನೆ. ಮುಂದೇನಾಯ್ತು ಅಂತ ನೋಡಿ.

ಪುಟ್ಟಕ್ಕ ಅಳುಮುಂಜಿ ಮುಖ ಮಾಡಿ ನಿಂತಿದ್ಯಾಕೆ?
ಹೇಗಾದರೂ ಮಾಡಿ ಪೋಲಿಸಪ್ಪನ ಹುಡುಕಿ, ಎರಡು ತದುಕಿ ಸತ್ಯವನ್ನೆಲ್ಲಾ ತಿಳಿದುಕೊಳ್ಳುತ್ತಾನೆ ಕಂಠಿ. ರಾಜೇಶ್ವರಿ ತಮ್ಮನೇ ಇದೆಲ್ಲಾ ಮಾಡಿದ್ದು ಎಂದು ಗೊತ್ತಾಗುತ್ತಿದ್ದಂತೆ ಆತನನ್ನು ಕಿಡ್ನಾಪ್ ಮಾಡುತ್ತಾನೆ. ಇನ್ನೂ ಪಂಚಾಯತಿ ಶುರುವಾಗಿದೆ. ಬಂಗಾರಮ್ಮ ಗಂಭೀರವಾಗಿ ಕುಳಿತಿದ್ದಾರೆ. ಪುಟ್ಟಕ್ಕ ಅಳುಮುಂಜಿ ಮುಖ ಮಾಡಿ ನಿಂತಿದ್ದಾರೆ. ರಾಜೇಶ್ವರಿ ಇಂದು ಗೆಲುವು ನಂದೆ ಎಂದು ಬೀಗುತ್ತಿದ್ದಾಳೆ. ಪುಟ್ಟಕ್ಕನ ಪರವಾಗಿ ಯಾವುದೇ ಸಾಕ್ಷ್ಯಗಳು ಇಲ್ಲದ ಕಾರಣ ಪುಟ್ಟಕ್ಕನದ್ದೇ ತಪ್ಪು ಎಂದು ಪಂಚಾಯತಿ ತೀರ್ಪು ನೀಡಿ ರಾಜೇಶ್ವರಿ ಕಾಲು ಹಿಡಿದು ಕ್ಷಮೆ ಕೇಳಬೇಕು ಎಂದು ಬಂಗಾರಮ್ಮ ಹೇಳುತ್ತಾಳೆ. ಪುಟ್ಟಕ್ಕನಿಗೆ ಬಹಳ ದುಃಖ ವಾಗುತ್ತದೆ. ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಬೇಕಲ್ಲ ಎಂದು ರಾಜೇಶ್ವರಿ ಕಾಲಿಗೆ ಪುಟ್ಟಕ್ಕ ಬೀಳಬೇಕು ಎನ್ನುವಷ್ಟರಲ್ಲಿ ಪೋಲಿಸಪ್ಪನ ಎಂಟ್ರಿ ಆಗುತ್ತೆ. ತಪ್ಪು ಮಾಡಿರುವುದು ಪುಟ್ಟಕ್ಕ ಅಲ್ಲ . ಕಳ್ಳ ಇಲ್ಲಿ ಇದ್ದಾನೆ ಎಂದಾ ಧಾರಾವಾಹಿಗೆ ಟ್ವಿಸ್ಟ್.

ವಿಚಾರವೆಲ್ಲಾ ತಿಳಿದ ಮೇಲೆ ಮನೆ ಬಿಟ್ಟು ಹೋಗುತ್ತಾಳಾ ಸ್ನೇಹಾ?
ರಾಜೇಶ್ವರಿಗೂ ಸಿಡಿಲೇರಗಿದ ಹಾಗೆ ಆಗುತ್ತದೆ. ಅಲ್ಲಿಗೆ ಬಂದ ಪೊಲೀಸ್ ನಾನು ಕೂಡ ಈ ಕೃತ್ಯದಲ್ಲಿ ಭಾಗಿಯಾಗಿದ್ದೇನೆ. ಪುಟ್ಟಕ್ಕ ಪೊಲೀಸ್ ಠಾಣೆಗೆ ಬಂದಿದ್ರು ಕೇಸ್ ದಾಖಲಿಸಲಿಲ್ಲ. ಆದರೆ, ಈಗ ಕಳ್ಳನನ್ನು ಪಂಚಾಯಿತಿಗೆ ಕರೆದುಕೊಂಡು ಬಂದಿದ್ದೀನಿ ಎಂದು ಹೇಳುತ್ತಾರೆ. ಅಷ್ಟರಲ್ಲಿ ಕಂಠಿಯು ಪಂಚಾಯಿತಿಯತ್ತ ಬರುತ್ತಾನೆ .ಬಂಗಾರಮ್ಮ ಪೊಲೀಸರತ್ತ ತಿರುಗಿ ಮುಖವಾಡ ತೆಗೆಯುವಂತೆ ಹೇಳುತ್ತಾಳೆ . ಈ ವೇಳೆ ಮುಖವಾಡ ತೆಗೆಯುತ್ತಾರೆ.

ರಾಜೇಶ್ವರಿ ಪರಿಸ್ಥಿತಿಗೆ ಕಂಡು ಮುಸಿಮುಸು ನಕ್ಕ ಜನ
ತಮ್ಮನೇ ಕಳ್ಳ ಎಂದಾಗ ರಾಜೇಶ್ವರಿಯೇ ದಿಗ್ಬ್ರಂತಳಾಗುತ್ತಾಳೆ. ಕಳ್ಳ ತಾನೇ ಎಂದು ರಾಜೇಶ್ವರಿ ತಮ್ಮ ಒಪ್ಪಿಕೊಳ್ಳುತ್ತಾನೆ. ಇದರಿಂದ ಕುಪಿತಗೊಂಡ ಬಂಗಾರಮ್ಮ, ರಾಜೇಶ್ವರಿಗೆ ಪುಟ್ಟಕ್ಕನ ಕಾಲಿಗೆ ಬಿದ್ದು ಕ್ಷಮೆ ಕೇಳುವಂತೆ ಹೇಳುತ್ತಾಳೆ. ಇದರಿಂದ ಪುಟ್ಟಕ್ಕನ ಕಾಲಿಗೆ ರಾಜೇಶ್ವರಿ ಬೀಳಬೇಕಾದ ಪ್ರಮೇಯ ಬಂದೊದಗಿದೆ. ಇದ್ದ ಮರ್ಯದೆ ಮಣ್ಣು ಪಾಲಾಯಿತು. ನೆರೆದವರೆಲ್ಲಾ ರಾಜೇಶ್ವರಿ ಪರಿಸ್ಥಿತಿ ಕಂಡು ಮುಸಿ ಮುಸಿ ನಕ್ಕಿದ್ದಾರೆ. ಇನ್ಮುಂದೆ ತಪ್ಪು ಮಾಡೋರಿಗೆ ದೊಡ್ಡ ಪಾಠ ಇದು ಎಂದು ಬಂಗಾರಮ್ಮ ಹೇಳುತ್ತಾರೆ.

ವಿಚಾರವೆಲ್ಲ ತಿಳಿದ ಮೇಲೆ ಮನೆ ಬಿಟ್ಟು ಹೋಗುತ್ತಾಳಾ ಸ್ನೇಹ?
ಇಲ್ಲಿಗೆ ನಿನ್ನೆಯ ಪಂಚಾಯತಿ ಅಂತ್ಯಗೊಂಡಿದೆ. ಈ ವೇಳೆಗಾಗಲೇ ಪುಟ್ಟಕ್ಕನ ಎರಡನೇ ಮಗಳು ಸ್ನೇಹ ಅದು ಹೇಗೋ ವಾಪಾಸ್ ಬರುತ್ತಾಳೆ. ಅಷ್ಟೊತ್ತಿಗಾಗಲೇ ಪಂಚಾಯತಿ ಮುಗಿದು ಹೋಗಿತ್ತು. ಏನಾಗುತ್ತಿದೆ ಎಂದು ಅರ್ಥವಾಗದೆ ಏನವ್ವ ಇದೆಲ್ಲ ಎಂದು ಪುಟ್ಟಕ್ಕನ ಕೇಳುತ್ತಾಳೆ. ಆ ವೇಳೆಗೆ ಪುಟ್ಟಕ್ಕ ಮನೆಗೆ ಹೋದ ಮೇಲೆ ಎಲ್ಲಾ ಹೇಳುತ್ತೇನೆ ಎಂದು ಹೇಳುತ್ತಾರೆ. ಇನ್ನೂ ವಿಚಾರವೆಲ್ಲ ತಿಳಿದ ಮೇಲೆ ಸ್ನೇಹಾ ಮನೆ ಬಿಟ್ಟು ಹೋಗುತ್ತಾಳಾ? ರಾಜೇಶ್ವರಿ ದ್ವೇಷ ಇನ್ನೂ ಯಾರನ್ನು ಸುಡಬಹುದು? ಇಷ್ಟಾದರೂ ರಾಜೇಶ್ವರಿ ತನ್ನ ಮೊಂಡಾಟವನ್ನು ಮುಂದುವರಿಸುತ್ತಾರಾ? ಕಾದು ನೋಡಬೇಕಿದೆ.


Click it and Unblock the Notifications











