Puttakkana makkalu: ಸ್ನೇಹಾ ಜೀವನ ಹಾಳಾಗುವ ಆತಂಕದಲ್ಲಿ ಪುಟ್ಟಕ್ಕ, ಮಗಳ ಮಾತಿಗೆ ಕುಸಿದು ಬಿದ್ದ ತಾಯಿ!

By Poorva

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಬಂಗಾರಮ್ಮ ಅರೆಸ್ಟ್ ಆಗಿರುವುದು ಮಗ ಕೊಟ್ಟ ದೂರಿನಿಂದಲೆ.. ಅದಕ್ಕೆ ಕುಮ್ಮಕ್ಕು ನೀಡಿದ್ದು ಸ್ನೇಹಾ. ಹೀಗಾಗಿ ಬಂಗಾರಮ್ಮ ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುವ ಹಾಗೆ ಆಗಿದೆ. ಇದರಿಂದ ಬಂಗಾರಮ್ಮನ ತಾಯಿ ಮಾತ್ರ ಆಘಾತಕ್ಕೆ ಒಳಗಾಗಿದ್ದಾರೆ.

ಅಯ್ಯೋ ನನ್ನ ಬಂಗಾರ ಎಂದು ಮಗಳನ್ನು ಪರಿ ಪರಿಯಾಗಿ ಕರೆದು ಗೋಳಾಡುತ್ತಾ ಇದ್ದಾರೆ. ಇನ್ನೂ ಪುಟ್ಟಕ್ಕ ಮಾತ್ರ ಶಾಕ್ ಆಗಿದ್ದಾರೆ. ಇದೆನಾಯಿತು ಮಗಳನ್ನು ಗೌರಿ ಹಬ್ಬಕ್ಕೆ ಮನೆಗೆ ಕರೆದುಕೊಂಡು ಹೋಗಲು ಬಂದಿದ್ದರು. ಆದರೆ ನನ್ನ ಮಗಳು ಹಾಗೂ ಅಳಿಯ ಇದೀಗ ಅವರ ಮೇಲೆಯೇ ಕಂಪ್ಲೇಂಟ್ ಕೊಟ್ಟಿದ್ದಾರೆ ಎಂದು ನೊಂದುಕೊಂಡಿದ್ದಾಳೆ.

puttakkana-makkalu

ಇನ್ನೂ ಏನು ಮಾಡುವುದು ಎಂದು ಪುಟ್ಟಕ್ಕ ಆತಂಕದಲ್ಲಿ ಇದ್ದಾಳೆ. ಪುಟ್ಟಕ್ಕ ಸ್ನೇಹಾನಾ ಬಳಿ ಒಂದು ಏನು ಮಾಡಿದೆ ನೀನು.. ನಿನ್ನ ಸಂಸಾರವನ್ನು ನಿನ್ನ ಕೈಯಾರೆ ಹಾಳು ಮಾಡಿಕೊಂಡು ಬಿಟ್ಟೆಯಲ್ಲ ಎಂದು ಬಹಳ ಬೇಸರ ಮಾಡಿಕೊಂಡಿದ್ದಾರೆ. ಯೋಚನೆ ಮಾಡುತ್ತಲೇ ಕಣ್ಣೀರು ಹಾಕಿದ್ದಾಳೆ ಪುಟ್ಟಕ್ಕ..

ಕಂಠಿ ಪರವಾಗಿ ಮಾತನಾಡಿದ ಪುಟ್ಟಕ್ಕ

ಪಾಪ ಆ ಹುಡುಗನಿಗೆ ತನ್ನ ತಾಯಿಯ ಮೇಲೆ ಕಂಪ್ಲೇಂಟ್ ಕೊಡುವ ವೇಳೆ ಎಷ್ಟು ಬೇಸರ ಪಟ್ಟುಕೊಂಡು ಇರಬೇಕು... ಅದು ನಿನಗೆ ಅರ್ಥ ಆಗುತ್ತಿದ್ದಿಯಾ..? ಆ ಹುಡುಗ ಸುಳ್ಳು ಹೇಳಿದ ಎಂಬ ಕಾರಣಕ್ಕೆ ಆತನನ್ನು ಎಷ್ಟು ಗೋಳು ಹೋಯ್ದುಕೊಂಡು ಬಿಟ್ಟೆ. ಪಾಪ ನಿನ್ನ ಮದುವೆ ಆಗಿ ಆತ ಪಡಬಾರದ ಕಷ್ಟ ಪಟ್ಟಿದ್ದಾನೆ. ಆದರೆ ಇದ್ಯಾವುದೂ ನಿನಗೆ ತಿಳಿದೇ ಇಲ್ವಾಲ್ಲ ಎಂದು ಬಹಳ ಬೇಸರ ಮಾಡಿಕೊಂಡಿದ್ದಾಳೆ.

puttakkana-makkalu

ಅಮ್ಮನ ಮಾತಿಗೆ ಸ್ನೇಹಾಳ ಉಡಾಫೆ ಉತ್ತರ

ಪುಟ್ಟಕ್ಕ ಹೇಳಿದನ್ನೆಲ್ಲ ಕೇಳಿದ ಸ್ನೇಹಾ, ನಾನು ಅವರ ಮೇಲೆ ಕಂಪ್ಲೇಂಟ್ ಕೊಟ್ಟಿಲ್ಲ ಅಮ್ಮ. ಹಾಗೇಯೆ ಅವರು ನನ್ನನ್ನು ಕರೆದುಕೊಂಡು ಪೊಲೀಸ್ ಸ್ಟೇಶನ್ ಗೆ ಹೋಗುತ್ತಾರೆ ಎಂಬುವುದು ನನಗೆ ತಿಳಿದೇ ಇರಲಿಲ್ಲ.. ಅವರು ಕಂಪ್ಲೇಂಟ್ ಕೊಟ್ಟಾಗಲೆ ನನಗೆ ತಿಳಿದಿದ್ದು ಎಂದು ಹೇಳುತ್ತಾಳೆ. ಇದನ್ನು ಕೇಳಿದ ಪುಟ್ಟಕ್ಕ ಮಗಳ ಬಳಿ ಕೊಂಚ ಜೋರಾಗಿ ಮಾತನಾಡುತ್ತಾಳೆ.

ಕಂಠಿ ಮನದ ನೋವು ಅರ್ಥ ಮಾಡಿಕೊಂಡ ಪುಟ್ಟಕ್ಕ

ಆತ ಆತನ ತಾಯಿ ವಿರುದ್ಧ ಕಂಪ್ಲೇಂಟ್ ಕೊಡಬೇಕಾದರೆ ಅದೆಷ್ಟು ಬೇಸರ ಆಗಿರಬಾರದು ಆತನಿಗೆ, ಆದರೆ ನಿನಗೆ ಅದೆಲ್ಲ ಅರ್ಥ ಆಗುವುದು ಇಲ್ಲ ಬಿಡು. ಬಂಗಾರಮ್ಮ ಯಾರಿಗೂ ತಿಳಿಯದ ಹಾಗೆ ನನಗೆ ಎಷ್ಟು ಸಹಾಯ ಮಾಡಿದ್ದಾರೆ ಎಂಬುವುದು ನಿನಗೆ ತಿಳಿದಿಲ್ಲ. ಅವರು ತುಂಬಿದ ಕೊಡ .. ಅವರು ಯಾವತ್ತೂ ತುಳುಕುವುದು ಇಲ್ಲ ಎಂದು ಹೇಳುತ್ತಾರೆ.. ಆ ಬಳಿಕ ಜೋರಾಗಿ ಅಳುತ್ತಾರೆ. ಆದೆ ಹೊತ್ತಿಗೆ ಅಲ್ಲಿಗೆ ರಾಜೇಶ್ವರಿ ಬರುತ್ತಾಳೆ. ಆಕೆ ಪುಟ್ಟಕ್ಕ ಅಳುತ್ತಾ ಇರುವುದನ್ನು ನೋಡಿ ಇನ್ನಷ್ಟು ಖುಷಿ ಪಡುತ್ತಾಳೆ.

ಪುಟ್ಟಕ್ಕನ ಸ್ಥಿತಿ ಕಂಡು ನಕ್ಕ ರಾಜಿ

ಕಂಠಿ ಪರವಾಗಿ ಮಾತನಾಡಿದ ಪುಟ್ಟಕ್ಕ ಬಹಳ ಅಳುತ್ತಾಳೆ. ಅಳುತ್ತಾ ನೆಲಕ್ಕೆ ಕುಸಿದು ಬೀಳುತ್ತಾಳೆ..ಆಕೆ ಬಿದ್ದಿರುವುದನ್ನು ಕಂಡ ಮನೆ ಮಂದಿ ಗೆ ಬೇಸರ ಆಗುತ್ತದೆ. ಸ್ನೇಹಾಗೆ ಡಾಕ್ಟರ್ ಹೇಳಿದ ಮಾತು ಗಮನಕ್ಕೆ ಬರುತ್ತದೆ.. ಬಳಿಕ ಮಾತ್ರೆ ಕೊಟ್ಟು ಪುಟ್ಟಕ್ಕನನ್ನು ಮಲಗಿಸುತ್ತಾರೆ.

More from Filmibeat

English summary
Kannada serial puttakkana makkalu written updated on 12th September
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X