Puttakkana Makkalu: ದಿನದಿಂದ ದಿನಕ್ಕೆ ಹೊಸ ಕೌತುಕ ಹುಟ್ಟು ಹಾಕುವ ಪುಟ್ಟಕ್ಕನ ಮಕ್ಕಳು
ಪುಟ್ಟಕ್ಕನ ಮಕ್ಕಳು ಧಾರವಾಹಿ ದಿನದಿಂದ ದಿನಕ್ಕೆ ಹೊಸ ಹೊಸ ಕುತೂಹಲಗಳನ್ನು ಹುಟ್ಟು ಹಾಕುತ್ತಿದೆ. ಇದೀಗ ಪುಟ್ಟಕ್ಕನ ವಿರುದ್ಧ ರಾಜೇಶ್ವರಿ ತಿರುಗಿ ಬಿದ್ದಿದ್ದಾಳೆ. ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನೋ ಗಾದೆ ಮಾತಿನ ಹಾಗೆಯೇ ಊರವರ ಮುಂದೆ ಎಷ್ಟೆಲ್ಲಾ ಅವಮಾನವಾದರೂ ಇದೀಗ ಪುಟ್ಟಕ್ಕನನ್ನು ಸೋಲಿಸಲು ರಣತಂತ್ರ ಮಾಡುತ್ತಿದ್ದಾಳೆ ರಾಜಿ.
ರಾಜಿ ಮಾಡಿದ ತಪ್ಪು ಕೆಲಸಕ್ಕೆ ಆಕೆಯ ಗಂಡ ಹಾಗೂ ತಮ್ಮನ ಕುಮ್ಮಕ್ಕು ಇದೆ. ಇಷ್ಟೆಲ್ಲಾ ತನ್ನ ವಿರುದ್ಧವಾಗಿ ಇದ್ದರು ಪುಟ್ಟಕ್ಕ ಮಾತ್ರ ಸಮಾಧಾನದಿಂದ ಎಲ್ಲವನ್ನು ಸಂಭಾಳಿಸುತ್ತಿದ್ದಾಳೆ. ಪುಟ್ಟಕ್ಕನಿಗೆ ಗಂಡು ಮಕ್ಕಳು ಆಗಲಿಲ್ಲ ಎಂಬ ಕಾರಣಕ್ಕೆ ಆಕೆಯ ಗಂಡ ರಾಜೇಶ್ವರಿಯನ್ನು ಮದುವೆ ಮಾಡಿಕೊಂಡಿದ್ದ, ಇದರಿಂದ ಬಹಳ ಅಘಾತ ಹಾಗೂ ದುಃಖಕ್ಕೆ ಒಳಗಾದ ಪುಟ್ಟಕ್ಕ ಮಕ್ಕಳನ್ನು ಸಾಕುವುದಕ್ಕೆ ಸಲುವಾಗಿ ಮೆಸ್ ಶುರು ಮಾಡುತ್ತಾರೆ.
ತನ್ನ ಮಕ್ಕಳನ್ನು ಸಾಕಿ ಬೆಳೆಸಿ, ವಿಧ್ಯಾಭ್ಯಾಸವನ್ನು ಕೊಡಲು ಯಶಸ್ವಿಯಾಗಿದ್ದಾಳೆ ಪುಟ್ಟಕ್ಕ. ಇಷ್ಟೆಲ್ಲಾ ಆದರೂ ಗಂಡ ಈ ರೀತಿಯಾಗಿ ನಡೆದುಕೊಂಡಿರುವುದು ಮಾತ್ರ ಪುಟ್ಟಕ್ಕನಿಗೆ ಈಗಲೂ ನುಂಗಲಾರದ ಬಿಸಿ ತುಪ್ಪದ ಹಾಗೆ ಆಗಿದೆ ಎನ್ನುವುದು ಅಕ್ಷರಶಃ ಸತ್ಯ. ಇದೀಗ ರಾಜೇಶ್ವರಿಗೆ ಪುಟ್ಟಕ್ಕನ ಮೇಲೆ ಅತಿಯಾದ ಕೋಪದಿಂದಾಗಿ ಇದೀಗ ಪುಟ್ಟಕ್ಕನ ಮೆಸ್ ಬಳಿಯೇ ರಾಜೀ ವೈನ್ ಶಾಪ್‌ನ್ನು ಓಪನ್ ಮಾಡಿದ್ದಾಳೆ ರಾಜೇಶ್ವರಿ. ಈ ವೈನ್ ಶಾಪ್ ಓಪನ್ ಮಾಡಿರುವುದರಿಂದ ಪುಟ್ಟಕ್ಕನ ಮೆಸ್‌ಗೆ ಬಹಳ ಹೊಡೆತ ಬೀಳುತ್ತದೆ ಎನ್ನುವ ಉದ್ದೇಶ ರಾಜೇಶ್ವರಿಯದ್ದು.

ಅದೆಷ್ಟು ಸಮಾಧಾನ ಪಡಿಸಲು ಬಂದರು ಸಿಡಿದು ಬೀಳುತ್ತಿದ್ದಾಳೆ ಸ್ನೇಹಾ, ಹಾಗೆಯೇ ಮನೆಯವರನ್ನು ಮೌನದಿಂದಲೇ ಕೊಲ್ಲುತ್ತಿದ್ದಾಳೆ. ಅದೆಷ್ಟೇ ಪ್ರೀತಿ ಮನದಲ್ಲಿ ಇದ್ದರೂ ಅದನ್ನು ತೋರ್ಪಡಿಸಿಕೊಳ್ಳದೇ ಸಿಡುಕು ಮೂತಿ ಹಾಕುತ್ತಾ ಇರುತ್ತಾಳೆ. ಆಕೆಯ ಕೋಪ ಇಷ್ಟೇ, ತನ್ನ ಅವ್ವ ಎಲ್ಲವನ್ನು ನನ್ನಿಂದ ಮರೆ ಮಾಚುತ್ತಿದ್ದಾಳೆ, ಒಂದು ಮಾತನ್ನು ನನ್ನ ಬಳಿ ಹೇಳುತ್ತಿಲ್ಲ. ನಾನು ಇವರಿಗೆ ಇಷ್ಟು ಬೇಗ ಬೇಡವಾದೆನಾ ಎನ್ನುವ ವಿಚಾರ ಮನೆಯವರ ಮೇಲೆ ಸ್ನೇಹಾಗೆ ಬೇಸರ ಮುನಿಸು ಎರಡನ್ನು ತರಿಸಿದೆ. ಇದರಿಂದ ಪುಟ್ಟಕ್ಕ ಬಹಳವಾಗಿ ನೊಂದುಕೊಂಡಿದ್ದಾರೆ, ಈ ವಿಷಯವಾಗಿ ಪುಟ್ಟಕ್ಕ ಬಂಗಾರಮ್ಮನ ಬಳಿಯಲ್ಲೂ ಮಾತನಾಡಿದ್ದಾರೆ. ಆದರೆ ಇದಕ್ಕೆ ಬಂಗಾರಮ್ಮ ಮರುಕ ಕೂಡ ಪಟ್ಟಿದ್ದಾರೆ.
ಪುಟ್ಟಕ್ಕ ತನ್ನ ಗಂಡನ ಬಗ್ಗೆ ಹಾಗೆಯೇ ಆಗ ನಡೆದಿದ್ದ ಪಂಚಾಯತಿಯಲ್ಲಿ ನಡೆದ ಎಲ್ಲಾ ವಿಷಯವನ್ನು ಬಂಗಾರಮ್ಮನ ಬಳಿ ಪುಟ್ಟಕ್ಕ ಹೇಳಿಕೊಂಡಿದ್ದರು. ಇದರಿಂದ ಚಿಂತೆಗೆ ಒಳಗಾದ ಬಂಗಾರಮ್ಮ ತನ್ನ ಮಗಳ ಜೀವನ ಸರಿಪಡಿಸಬೇಕು ಎಂದು ಪಣತೊಟ್ಟಿರುವುದು ವೀಕ್ಷಕರಿಗೆ ಬಹಳ ಇಷ್ಟವಾಗಿತ್ತು. ಬಂಗಾರಮ್ಮ ಅಷ್ಟೇನು ಕೆಟ್ಟವಳು ಅಲ್ಲ ಎಂಬುವುದನ್ನು ಪುಟ್ಟಕ್ಕನೇ ಸಾಭೀತು ಪಡಿಸಿದ್ದಾಳೆ. ಅದೆಷ್ಟೋ ಜನರಿಗೆ ಕಷ್ಟ ಎಂದು ಹೇಳಿದ ಕೂಡಲೇ ನೆರವಿನ ಹಸ್ತ ಚಾಚುತ್ತಿದ್ದ ಬಂಗಾರಮ್ಮಗೆ ಕೊನೆಗೆ ಆ ಸಾಲ ಮರು ಪಾವತಿಸಲಾಗದೇ ಬಂಗಾರಮ್ಮನ ಕೋಪಕ್ಕೆ ಗುರಿಯಾಗುತ್ತಿದ್ದರು.


Click it and Unblock the Notifications











