Puttakkana Makkalu: ಅಪಾಯದಲ್ಲಿದೆ ಗೋಪಾಲನ ಜೀವ: ಗಂಡನಿಗಾಗಿ ಮಿಡಿದ ಪುಟ್ಟಕ್ಕ

By Poorva

ಮುರಳಿ ಹಾಗೂ ಆತನ ಜೊತೆ ಕೆಲಸ ಮಾಡುತ್ತಿದ್ದ ಹುಡುಗಿಯೊಬ್ಬಳ ಬಗ್ಗೆ ಸಹನಾ ತಪ್ಪಾಗಿ ಅರ್ಥ ಮಾಡಿಕೊಂಡು ಇರುತ್ತಾಳೆ. ಮಗಳ ಜೀವನ ಹೇಗಾದರೂ ಮಾಡಿ ಸರಿ ಮಾಡಬೇಕು ಎನ್ನುವ ಉದ್ದೇಶದಿಂದ ಮುರಳಿಯನ್ನು ಫಾಲೋ ಮಾಡುತ್ತಾರೆ.

ನಿಜ ವಿಚಾರ ತಿಳಿದು ಪುಟ್ಟಕ್ಕಗೆ ತಿಳಿಸಬೇಕು ಎಂದು ಫೋನ್ ತೆಗೆದು ಕರೆ ಮಾಡಬೇಕು ಎನ್ನುವಷ್ಟರಲ್ಲಿ ಅಪಘಾತ ಆಗುತ್ತದೆ. ಗೋಪಾಲಗೆ ಗಂಭೀರ ಪೆಟ್ಟಾಗುತ್ತದೆ. ಇನ್ನು ಪುಟ್ಟಕ್ಕ ಮನೆಗೆ ಬಂದ ಕಂಠಿಗೆ ಆಘಾತ ಕಾದಿತ್ತು. ಸುಮಾ ತನ್ನ ತಾಯಿ ಬಳಿ ಬಂದು ಅಮ್ಮ ಇನ್ನೂ ಮೇಲೆ ನಾನು ಮನೆಯಿಂದಲೇ ಕಾಲೇಜ್‌ಗೆ ಹೋಗಬಹುದು ಎಂದಾಗ ಪುಟ್ಟಕ್ಕಗೆ ಖುಷಿ ಆಗುತ್ತದೆ.

kannada serial puttakkana makkalu written 29th December

ಇದುವರೆಗೂ ಪುಟ್ಟಕ್ಕ ಒಬ್ಬಳೇ ಮನೆಯಲ್ಲಿ ಇರುತ್ತಿದ್ದಳು. ಆಕೆಗೆ ಮಗಳ ನೆನಪು ಬಹಳ ಕಾಡುತ್ತಿದ್ದು ಏನು ಮಾಡಬೇಕು ಎಂದು ತೋಚದೇ ಬಂದಿದ್ದು ಬಂದ ಹಾಗೆ ಇರಲಿ ಎಂದು ಯೋಚನೆ ಮಾಡುತ್ತಾರೆ.

ಅಕ್ಕನ ಮಾತು ಕೇಳಿ ಸುಮಾ ಶಾಕ್

ಅಕ್ಕ ನೀನು ನನಗೋಸ್ಕರ ಬಹಳ ಕಷ್ಟ ಪಟ್ಟಿದ್ದೆ ಆದರೆ ಇನ್ನೂ ನೀನು ಟೆನ್ಶನ್ ಮಾಡ್ಬೇಡ.. ನೀನು ಇನ್ನೂ ಮೇಲೆ ಗಂಡನ ಮನೆಯಲ್ಲಿ ಆರಾಮವಾಗಿ ಕಳೆಯಬಹುದು ಎಂದು ಸುಮಾ, ಸಹನಾ ಬಳಿ ಹೇಳುತ್ತಾಳೆ. ಸಹನಾಗೆ ಕೋಪ ಬರುತ್ತದೆ. ನೀನು ಯಾಕೆ ಗಂಡನ ಮನೆಗೆ ಹೋಗಬೇಕು, ಅದರಲ್ಲಿ ಏನಿದೆ ನಾನು ನನ್ನ ತಾಯಿ ಮನೆಯಲ್ಲಿ ಇರುತ್ತೇನೆ ಎಂದು ಹೇಳಿದಾಗ ಸುಮಾ, ಪುಟ್ಟಕ್ಕ ಹಾಗೂ ಕಂಠಿ ಕೂಡ ಶಾಕ್ ಆಗುತ್ತಾರೆ.

kannada serial puttakkana makkalu written 29th December

ಫೋನ್ ಕರೆ ಸ್ವೀಕರಿಸಿ ಆಘಾತಗೊಂಡ ಪುಟ್ಟಕ್ಕ

ಪುಟ್ಟಕ್ಕಗೆ ಫೋನ್ ಕರೆ ಬರುತ್ತದೆ. ಗೋಪಾಲಗೆ ಅಪಘಾತ ಆಗಿರುವ ವಿಚಾರ ತಿಳಿದು ಆಕಾಶ ತಲೆ ಮೇಲೆ ಬಿದ್ದ ಹಾಗೆ ಆಗುತ್ತದೆ. ಬಳಿಕ ತರಾತುರಿಯಲ್ಲಿ ಗಂಡನನ್ನು ನೋಡಲು ಹೋಗುತ್ತಾಳೆ . ಸುಮಾ ಅದೆಷ್ಟೇ ತಡೆದರು ಯಾವ ಮಾತನ್ನೂ ಕೇಳಲು ಪುಟ್ಟಕ್ಕ ರೆಡಿ ಇರಲಿಲ್ಲ. ಅಮ್ಮನನ್ನು ನೋಡಿದ ಸಹನಾ ಸರಿ ಆಯಿತು, ಅಮ್ಮ ಅಪ್ಪಯ್ಯನ ನೋಡಲು ಹೋಗೋಣ ನಾನು ಬರುತ್ತೇನೆ ಎಂದು ಹೇಳಿ ಇಬ್ಬರು ಹೋಗುತ್ತಾರೆ.

ಸ್ನೇಹಾ ಮಾತಿಗೆ ಜಗ್ಗದ ಪುಟ್ಟಕ್ಕ

ಸುಮಾ ಈ ವಿಚಾರವನ್ನು ಸ್ನೇಹಾ ಬಳಿ ಹೇಳುತ್ತಾರೆ. ಸ್ನೇಹಾಗೆ ಅಮ್ಮನ ಮೇಲೆ ಬಹಳ ಕೋಪ ಬರುತ್ತದೆ. ಪುಟ್ಟಕ್ಕ ಆಸ್ಪತ್ರೆಯಲ್ಲಿ ಗಂಡನನ್ನು ನೆನೆದು ಬಹಳ ಜೋರಾಗಿ ಅಳುತ್ತಾಳೆ. ತನ್ನ ತಾಳಿ ಭಾಗ್ಯ ಉಳಿಯಲಿ ಎಂದು ಕಂಡ ಕಂಡ ದೇವರ ಬಳಿ ಬೇಡುತ್ತಾ ಇರುತ್ತಾಳೆ. ಪುಟ್ಟಕ್ಕ ಆಸ್ಪತ್ರೆಯಲ್ಲಿ ಇರುವುದನ್ನು ತಿಳಿದ ಸ್ನೇಹಾ ಆಸ್ಪತ್ರಗೆ ಬಂದು ಅಮ್ಮನನ್ನು ಮನೆಗೆ ಕರೆದುಕೊಂಡು ಹೋಗಲು ಸಹನಾ ಬಳಿ ಹೇಳುತ್ತಾರೆ. ಪುಟ್ಟಕ್ಕ ಮಾತ್ರ ತನ್ನ ಗಂಡನನ್ನು ಅಂತಹ ಸ್ಥಿತಿಯಲ್ಲಿ ಬಿಡಲು ಒಪ್ಪದೇ ಪುಟ್ಟಕ್ಕ ಮನೆಗೆ ಹೋಗಲು ಒಪ್ಪುವುದೇ ಇಲ್ಲ. ಆದರೆ ಸ್ನೇಹಾಗೆ ಮಾತ್ರ ಗೋಪಾಲನನ್ನು ಕಂಡರೆ ಆಗುತ್ತಿರಲಿಲ್ಲ. ಅಮ್ಮನ ಹಠದ ಮುಂದೆ ಸ್ನೇಹಾ ಹಠ ನಡೆಯದೆ ಹೋಗಿದೆ.

More from Filmibeat

English summary
kannada serial puttakkana makkalu today episode update;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X