ಸ್ನೇಹಾ ಪರವಾಗಿ ಪುಟ್ಟಕ್ಕ ಹೋರಾಟ ಮಾಡುತ್ತಿರುವಾಗಲೇ ಪೋಸ್ಟ್ ಹಾಕಿದ ಸಂಜನಾ ಬುರ್ಲಿ; ಅದರಲ್ಲಿ ಏನಿದೆ?
ಜೀ ಕನ್ನಡ ವಾಹಿನಿಯಲ್ಲಿ ಆರೂರು ಜಗದೀಶ್ ನಿರ್ದೇಶನದಡಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿ 'ಪುಟ್ಟಕ್ಕನ ಮಕ್ಕಳು'. ಈ ಧಾರಾವಾಹಿಯಲ್ಲಿ ಸ್ನೇಹಾ ಪಾತ್ರದಲ್ಲಿ ಸಂಜನಾ ಬುರ್ಲಿ ನಟಿಸುತ್ತಿದ್ದರು. ಪುಟ್ಟಕ್ಕನ ಎರಡನೇ ಮಗಳು ಸ್ನೇಹಾ ಪಾತ್ರದಲ್ಲಿ ನಟಿಸಿದ್ದ ಸಂಜನಾಗೆ ಧಾರಾವಾಹಿಯಲ್ಲಿ ಡಿಸಿ ಆಗಿಯೂ ಭಡ್ತಿ ಸಿಕ್ಕಿತ್ತು. ಬಳಿಕ ಕಾರಣಾಂತರಗಳಿಂದ ಸಂಜನಾ ಬುರ್ಲಿ ಧಾರಾವಾಹಿಗೆ ವಿದಾಯ ಹೇಳಿದ್ದರು. ಈ ವೇಳೆ ಸ್ನೇಹಾ ಪಾತ್ರವನ್ನುಅಪಘಾತದಲ್ಲಿ ಸಾಯಿಸುವ ಮೂಲಕ ಪಾತ್ರಕ್ಕೆ ಅಂತ್ಯ ಹಾಡಲಾಗಿತ್ತು.
ಅದೆಲ್ಲಾ ಕಳೆದು ತಿಂಗಳುಗಳೇ ಕಳೆದಿದೆ. ಆದರೂ, ಧಾರಾವಾಹಿಯಲ್ಲಿ ಸ್ನೇಹ ಮೇಲೆ ಬಂದಿರುವ ಆರೋಪವನ್ನು ಇಟ್ಟುಕೊಂಡು ಕಥೆಯನ್ನು ಹೆಣೆಯಲಾಗಿದೆ. ಅಷ್ಟಕ್ಕೂ ಈಗ್ಯಾಕೆ ಸಂಜನಾ ವಿಷಯ ಎಂದು ನೀವು ಆಲೋಚಿಸುತ್ತಿರಬಹುದು. ಅದಕ್ಕೆ ಕಾರಣವೂ ಇದೆ. ಸಂಜನಾ ಬುರ್ಲಿ ಅವರು ಡಿಸಿಯಾಗಿ ಅಭಿನಯಿಸುತ್ತಿದ್ದಾಗ ತೆಗೆದಂತಹ ಸೀನ್‌ಗಳ ವಿಡಿಯೋವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಸಂಜನಾ ಹಂಚಿಕೊಂಡಿದ್ದಾರೆ.

"Late post.. ಈ edit.. ಡಿಸಿ ಸ್ನೇಹಾ ಆಗಿ ನಟಿಸಿದಾಗ ತೆಗೆದಂತಹ ವಿಡಿಯೋಗಳು. ಸ್ನೇಹಾ ಪಾತ್ರವನ್ನು ಚಿತ್ರೀಕರಣದ ಸಂದರ್ಭದಲ್ಲಿನ ವಿಡಿಯೋದ ತುಣುಕುಗಳು.. ಎಲ್ಲಾ ವಿಡಿಯೋಗಳನ್ನು ಸೇರಿಸಿ ಒಂದು ವಿಡಿಯೋ ಮಾಡಿದ್ದೇನೆ. ಇದನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಬೇಕೆಂದುಕೊಂಡೆ. ನಾನು ಪ್ರಜ್ಞಾಪೂರ್ವಕವಾಗಿ ಇಲ್ಲಿ ನನ್ನ ಅತ್ಯುತ್ತಮ ಸಹಜತೆ ನೀಡಲು ಪ್ರಯತ್ನಿಸಿದೆ. ಹೀಗಾಗಿ ಕ್ಯಾಮೆರಾದ ಹಿಂದೆ, 'ಆಕ್ಷನ್' ಮತ್ತು 'ಕಟ್' ನಡುವಿನ ಆ ಕ್ಷಣಗಳನ್ನು ಅನುಭವಿಸಲು ನಾನು ನನ್ನನ್ನು ಕೇಳಿಕೊಂಡೆ" ಎಂದು ಆಕೆ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
"ನಾನು ಆ ಪಾತ್ರವನ್ನೇ ಜೀವಿಸಲು ಪ್ರಯತ್ನ ಪಟ್ಟೆ. youtubeನಲ್ಲಿ ಅನೇಕ ವೀಡಿಯೊಗಳ ಮೂಲಕ ವಿವಿಧ ಅಧಿಕಾರಿಗಳ ನಡವಳಿಕೆ, ವ್ಯಕ್ತಿತ್ವ ಮತ್ತು ವರ್ಚಸ್ಸನ್ನು ನಾನು ಗಮನಿಸಿದ್ದೇನೆ. ಆದರೆ ಕೊನೆಯಲ್ಲಿ, ನಾನು ಅದರ ಜೊತೆಗೆ ನನ್ನದೇ ಆದ ಅಂಶವನ್ನು ಕೂಡ ಸೇರಿಸಲು ಪ್ರಯತ್ನಿಸಿದೆ. ಪಾತ್ರಕ್ಕೆ ಸಾಧ್ಯವಾದಷ್ಟು ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದೆ. ಅದು ಆ ಪಾತ್ರದ ಕೊನೆಯ ಕೆಲವು ದಿನಗಳು ಎಂದು ಸಹ ನಂಗೆ ಗೊತ್ತಿದ್ದರಿಂದ ಅದನ್ನು ಮನಸ್ಪೂರ್ತಿಯಾಗಿ ಜೀವಿಸಿದೆ. ಆ ಕ್ಷಣಗಳನ್ನು ನಾನು ಯಾವಾಗಲೂ ಪಾಲಿಸುತ್ತೇನೆ. ನೀವೆಲ್ಲರೂ DC Sneha ಆಗಿ ನನ್ನ ಅಭಿನಯ ಕರ್ನಾಟಕದಾದ್ಯಂತ ಮೆಚ್ಚಿರೋದೆ ಇದೆಲ್ಲದರ ಪ್ರತಿಫಲ" ಎಂದು ಇನ್‌ಗ್ರಾಂನಲ್ಲಿ ಬರೆದುಕೊಂಡಿದ್ದಾರೆ ಸಂಜನಾ ಬುರ್ಲಿ.
ಅಂದ ಹಾಗೇ ಸಂಜನಾ ಬುರ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಿಂದ ಕಾರಣಾಂತರಗಳಿಂದ ಹೊರಬಂದಿದ್ದರು. ಸದ್ಯದ ಇಲ್ಲಿವರೆಗೂ ಈ ನಟಿ ಯಾವುದೇ ಹೊಸ ಪಾತ್ರವನ್ನು ಒಪ್ಪಿಕೊಂಡಿರುವಂತಹ ವಿಷಯ ಹೊರಬಿದ್ದಿಲ್ಲ. ಹೊಸ ಪಾತ್ರದ ಮೂಲಕ ಮತ್ತೆ ಕಿರುತೆರೆಗೆ ಮರಳುತ್ತಾರಾ ಎಂಬ ಕುತೂಹಲ ವೀಕ್ಷಕರಿಗಿದ್ದು ಅದಕ್ಕೆ ಉತ್ತರ ಆಕೆಯ ಹೇಳಬೇಕಷ್ಟೆ.
ಇನ್ನು ಸಂಜನಾ ಬುರ್ಲಿ ಅವರು ಕಿರುತೆರೆಗೆ ಕಾಲಿಟ್ಟಿದ್ದು 'ಪತ್ತೇದಾರಿ ಪ್ರತಿಭಾ' ಧಾರಾವಾಹಿಯ ಮೂಲಕ. ನವೀನ್ ಕೃಷ್ಣ ನಿರ್ದೇಶನದ 'ಪತ್ತೇದಾರಿ ಪ್ರತಿಭಾ' ಧಾರಾವಾಹಿಯಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದ ಈಕೆ ಮುಂದೆ ಪೂರ್ಣ ಪ್ರಮಾಣದಲ್ಲಿ ನಾಯಕಿಯಾಗಿ ನಟಿಸಿದ್ದು 'ಲಗ್ನಪತ್ರಿಕೆ' ಧಾರಾವಾಹಿಯಲ್ಲಿ. 'ಲಗ್ನಪತ್ರಿಕೆ' ಧಾರಾವಾಹಿಯಲ್ಲಿ ನಾಯಕಿ ಮಯೂರಿ ಆಗಿ ನಟಿಸಿದ್ದ ಸಂಜನಾ ಬುರ್ಲಿ ತಮ್ಮ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದರು.
ಆದರೆ, ಮುಂದೆ ಟಿ.ಆರ್.ಪಿ ಸಮಸ್ಯೆಯಿಂದಾಗಿ ಆ ಧಾರಾವಾಹಿಯು ಅರ್ಧದಲ್ಲಿಯೇ ತನ್ನ ಪ್ರಸಾರ ನಿಲ್ಲಿಸಿತ್ತು. ತದ ನಂತರ ಕಿರುತೆರೆಯಿಂದ ಕೊಂಚ ಬ್ರೇಕ್ ಪಡೆದುಕೊಂಡಿದ್ದ ಸಂಜನಾ ಬುರ್ಲಿ ನಂತರ ಬದಲಾದುದು ಸ್ನೇಹಾಳಾಗಿ. ಪುಟ್ಟಕ್ಕನ ಮಗಳು ಸ್ನೇಹಾ ಪಾತ್ರದಲ್ಲಿ ನಟಿಸಿದ್ದ ಸಂಜನಾ ಆ ಪಾತ್ರದ ಮೂಲಕ ವೀಕ್ಷಕರ ಮನ ಸೆಳೆದುದು ಮಾತ್ರವಲ್ಲದೇ ಅದೆಷ್ಟೋ ಹೆಣ್ಣು ಮಕ್ಕಳಿಗೆ ಸ್ಫೂರ್ತಿ ನೀಡಿದಂತಹ ಪಾತ್ರದಲ್ಲಿ ಆಕೆ ನಟಿಸಿದ್ದು ಹೆಮ್ಮೆಯ ಸಂಗತಿ.
ಸಂಜನಾ ಬುರ್ಲಿ ಅವರು ಕೇವಲ ಕಿರುತೆರೆಯಲ್ಲಿ ಮಾತ್ರವಲ್ಲದೇ ಸಿನಿಮಾದಲ್ಲಿಯೂ ಅಭಿನಯಿಸಿದ್ದಾರೆ. 'ಸ್ನೇಹರ್ಷಿ' ಸಿನಿಮಾದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಸಂಜನಾ ಬುರ್ಲಿ ತದ ನಂತರ 'ವೀಕೆಂಡ್', 'ರಾಧಾ ಮಿಸ್ಸಿಂಗು ರಮಣ ಸರ್ಚಿಂಗು' ಸಿನಿಮಾಗಳಲ್ಲಿ ಬಣ್ಣ ಹಚ್ಚಿ ಸೈ ಎನಿಸಿಕೊಂಡಿದ್ದಾರೆ.


Click it and Unblock the Notifications











